logo
ಕನ್ನಡ ಸುದ್ದಿ  /  ಕರ್ನಾಟಕ  /  Doddaballapura: ಶಸ್ತ್ರಚಿಕಿತ್ಸೆ ಮೂಲಕ ಮಹಿಳೆಯ ಗರ್ಭಕೋಶದಲ್ಲಿ ಬೆಳೆದಿದ್ದ ಬೃಹತ್ ಗಾತ್ರದ ಗಡ್ಡೆ ತೆಗೆದ ದೊಡ್ಡಬಳ್ಳಾಪುರ ವೈದ್ಯರು

Doddaballapura: ಶಸ್ತ್ರಚಿಕಿತ್ಸೆ ಮೂಲಕ ಮಹಿಳೆಯ ಗರ್ಭಕೋಶದಲ್ಲಿ ಬೆಳೆದಿದ್ದ ಬೃಹತ್ ಗಾತ್ರದ ಗಡ್ಡೆ ತೆಗೆದ ದೊಡ್ಡಬಳ್ಳಾಪುರ ವೈದ್ಯರು

HT Kannada Desk HT Kannada

Feb 07, 2024 12:21 PM IST

google News

ಶಸ್ತ್ರಚಿಕಿತ್ಸೆ ಮೂಲಕ ಮಹಿಳೆಯ ಗರ್ಭಕೋಶದಲ್ಲಿ ಬೆಳೆದಿದ್ದ ಬೃಹತ್ ಗಾತ್ರದ ಗಡ್ಡೆ ತೆಗೆದ ದೊಡ್ಡಬಳ್ಳಾಪುರ ವೈದ್ಯರು

  • Doddaballapura: ಮಹಿಳೆಯೊಬ್ಬರ ಗರ್ಭಕೋಶದಲ್ಲಿದ್ದ ಸುಮಾರು 4 ಕೆಜಿಯಷ್ಟು ಬೃಹತ್‌ ಗಾತ್ರದ ಗಡ್ಡೆಯನ್ನು ಹೊರ ತೆಗೆಯುವಲ್ಲಿ ದೊಡ್ಡಬಳ್ಳಾಪುರ ಸರ್ಕಾರಿ ವೈದ್ಯರು ಯಶಸ್ವಿಯಾಗಿದ್ದಾರೆ. ಮಹಿಳೆ ಈಗ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. 

ಶಸ್ತ್ರಚಿಕಿತ್ಸೆ ಮೂಲಕ ಮಹಿಳೆಯ ಗರ್ಭಕೋಶದಲ್ಲಿ ಬೆಳೆದಿದ್ದ ಬೃಹತ್ ಗಾತ್ರದ ಗಡ್ಡೆ ತೆಗೆದ ದೊಡ್ಡಬಳ್ಳಾಪುರ ವೈದ್ಯರು
ಶಸ್ತ್ರಚಿಕಿತ್ಸೆ ಮೂಲಕ ಮಹಿಳೆಯ ಗರ್ಭಕೋಶದಲ್ಲಿ ಬೆಳೆದಿದ್ದ ಬೃಹತ್ ಗಾತ್ರದ ಗಡ್ಡೆ ತೆಗೆದ ದೊಡ್ಡಬಳ್ಳಾಪುರ ವೈದ್ಯರು

ದೊಡ್ಡಬಳ್ಳಾಪುರ: ಮಹಿಳೆಯ ಗರ್ಭಕೋಶದಲ್ಲಿ ಬೆಳೆದಿದ್ದ ಬೃಹತ್ ಗಾತ್ರದ ಗಡ್ಡೆಯನ್ನು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆಯುವಲ್ಲಿ ದೊಡ್ಡಬಳ್ಳಾಪುರದ ತಾಯಿ-ಮಗು ಸರ್ಕಾರಿ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿದೆ.

ಗರ್ಭಕೋಶದಲ್ಲಿದ್ದ 4-5 ಕೆಜಿ ಯಷ್ಟು ದೊಡ್ಡ ಗಾತ್ರದ ಗಡ್ಡೆ

ಗರ್ಭಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಶಿಲ್ಪಾ (35) ಎಂಬುವರು ಮಂಗಳವಾರ ನಗರದ ಸರ್ಕಾರಿ ಆಸ್ಪತ್ರೆಗೆ ಹೊಟ್ಟೆನೋವು, ಸುಸ್ತು ಎಂದು ದಾಖಲಾಗಿದ್ದರು. ವೈದ್ಯರು ಮಹಿಳೆಯನ್ನು ಪರೀಕ್ಷಿಸಿದಾಗ ಹೊಟ್ಟೆಯಲ್ಲಿ 4-5 ಕೆಜಿ ಯಷ್ಟು ದೊಡ್ಡ ಗಾತ್ರದ ಗಡ್ಡೆ ಇರುವುದು ಪತ್ತೆಯಾಗಿದೆ. ಕೂಡಲೇ ಕಾರ್ಯ ಪ್ರವೃತ್ತರಾದ ಪ್ರಸೂತಿ ಸ್ತ್ರಿರೋಗ ತಜ್ಞರಾದ ಡಾ. ಅರ್ಚನಾ ಕೆ.ಎಲ್ ನೇತೃತ್ವದ ವೈದ್ಯರ ತಂಡ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದೆ.

ಅಪರೂಪದ ಕೇಸ್‌

ವೈದ್ಯೆ ಡಾ. ಅರ್ಚನಾ ಕೆ.ಎಲ್ ಮಾತನಾಡಿ ಸಾಮಾನ್ಯವಾಗಿ ಮಹಿಳೆಯರ ಗರ್ಭಕೋಶ, ಅಂಡಾಶಯಗಳಲ್ಲಿ ಗಡ್ಡೆಯು 100ಕ್ಕೆ 10 ಮಂದಿಯಲ್ಲಿ ಸಣ್ಣಪುಟ್ಟದಾಗಿ ಕಂಡುಬರುತ್ತದೆ. ಆದರೆ, ಅಚ್ಚರಿ ಎಂಬಂತೆ ಈ ಮಹಿಳೆಯ ಹೊಟ್ಟೆಯಲ್ಲಿ 4 ರಿಂದ 5 ಕೆಜಿ ಗಡ್ಡೆ ಪತ್ತೆಯಾಗಿದೆ. ಮಹಿಳೆ ಒಂದೆರಡು ದಿನ ತಡವಾಗಿ ಬಂದಿದ್ದರೆ ಆಕೆಯ ಜೀವಕ್ಕೆ ಹಾನಿಯಾಗುತ್ತಿತ್ತು. ಸದ್ಯ ಗರ್ಭಕೋಶದಲ್ಲಿ ಬೆಳೆದಿದ್ದ ದೊಡ್ಡ ಗಾತ್ರದ ಗಡ್ಡೆ ಹೊರ ತೆಗೆದಿದ್ದು, ಮಹಿಳೆ ಆರೋಗ್ಯವಾಗಿದ್ದಾರೆ ಎಂದು ಮಾಹಿತಿ ನೀಡಿದರು.

ವೈದ್ಯರಿಗೆ ಸವಾಲಾದ ಪ್ರಕರಣ

ಶಸ್ತ್ರಚಿಕಿತ್ಸೆ ತಂಡದ ಭಾಗವಾಗಿದ್ದ ಡಾ. ಪ್ರೇಮಲತಾ ಮಾತನಾಡಿ ಇದೊಂದು ಗಂಭೀರ ಮತ್ತು ವೈದ್ಯರಿಗೆ ಸವಾಲಾದ ಪ್ರಕರಣವಾಗಿತ್ತು. ಅನಸ್ತೇಶಿಯಾ ನೀಡುವ ಮುನ್ನ ರಕ್ತದೊತ್ತಡ, ಉಸಿರಾಟ ಸಮಸ್ಯೆ ನಿಯಂತ್ರಣಕ್ಕೆ ಪಡೆದು ಬಳಿಕ ಆಪರೇಷನ್ ಆರಂಭಿಸಿದೆವು. ರಕ್ತದ ಅಗತ್ಯತೆ ಹೆಚ್ಚು ಇದ್ದಿದ್ದರಿಂದ ಮುಂಚಿತವಾಗೇ 4 ಬಾಟಲ್‌ಗಳಷ್ಟು ರಕ್ತ ವ್ಯವಸ್ಥೆ ಮಾಡಿದ್ದೆವು. ಆದ್ದರಿಂದ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಲಾಯಿತು ಎಂದು ಮಾಹಿತಿ ನೀಡಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ