Engineer’s Day 2022: ರಾಜ್ಯದ ನೀರಾವರಿಗೆ ಬಲ ತುಂಬಿದ ಸರ್ ಎಂ.ವಿ. ಪ್ರಾತಃಸ್ಮರಣೀಯರು - ಅಬಕಾರಿ ಸಚಿವ ಕೆ.ಗೋಪಾಲಯ್ಯ ಬಣ್ಣನೆ
Sep 15, 2022 02:12 PM IST
ರಾಜಾಜಿನಗರದಲ್ಲಿಂದು ಹಮ್ಮಿಕೊಂಡಿದ್ದ ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನ (Sir M. Visvesvaraya Birth Anniversary) ನಿಮಿತ್ತ ಹಮ್ಮಿಕೊಂಡಿದ್ದ ಇಂಜಿನಿಯರ್ಸ್ ಡೇ ಕಾರ್ಯಕ್ರಮಕ್ಕೆ ಅಬಕಾರಿ ಸಚಿವ ಕೆ.ಗೋಪಾಲಯ್ಯ ಚಾಲನೆ ನೀಡಿದರು.
- Engineer’s Day 2022: ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯನವರು ರಾಜ್ಯದ ನೀರಾವರಿಗೆ ಬಲ ತುಂಬಿದವರು. ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆಗೆ ಕ್ರಮ ತೆಗೆದುಕೊಂಡ ಸರ್ ಎಂ.ವಿ. ಸದಾ ಪ್ರಾತಃಸ್ಮರಣೀಯರು ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಅಭಿಪ್ರಾಯಪಟ್ಟರು.
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಜನರಿಗೆ ಕುಡಿಯುವ ನೀರು ಪೂರೈಸಲು ಕ್ರಮ ತೆಗೆದುಕೊಂಡ ಸರ್ ಎಂ. ವಿಶ್ವೇಶ್ವರಯ್ಯ ಅವರು ರಾಜ್ಯದ ನೀರಾವರಿಗೆ ಬಲ ತುಂಬಿದವರು. ಹೀಗಾಗಿ ಅವರು ಸದಾ ಪ್ರಾತಃ ಸ್ಮರಣೀಯರು ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಬಣ್ಣಿಸಿದರು.
ರಾಜಾಜಿನಗರದಲ್ಲಿಂದು ಹಮ್ಮಿಕೊಂಡಿದ್ದ ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನ (Sir M. Visvesvaraya Birth Anniversary) ನಿಮಿತ್ತ ಹಮ್ಮಿಕೊಂಡಿದ್ದ ಇಂಜಿನಿಯರ್ಸ್ ಡೇ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು
102 ವರ್ಷಗಳ ಕಾಲ ತುಂಬು ಜೀವನ ನಡೆಸಿದ ಸರ್ ಎಂವಿ ಅವರು, ನಾಡಿನ ಅನೇಕ ಜ್ವಲಂತ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರ ಕಲ್ಪಿಸಿದವರು. ನಾಡು ಕಟ್ಟಿದ ವಿಚಾರದಲ್ಲಿ ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಅವರನ್ನು ಬೆಂಗಳೂರಿನ ಜನ ಸದಾ ನೆನಪಿನಲ್ಲಿ ಇಟ್ಟು ಕೊಂಡಿರಬೇಕು. ಕನ್ನಂಬಾಡಿ ಅಣೆಕಟ್ಟು ನಿರ್ಮಾಣದ ಮೂಲಕ ಇಡೀ ಬೆಂಗಳೂರು ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ ಅವರನ್ನು ನಾವು ಸದಾ ಸ್ಮರಿಸಿಕೊಳ್ಳಬೇಕಿದೆ ಎಂದು ಸಚಿವ ಗೋಪಾಲಯ್ಯ ಹೇಳಿದರು.
ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೇವಲ ರಸ್ತೆ ಚರಂಡಿ ನಿರ್ಮಾಣಕ್ಕೆ ನಾನು ತೃಪ್ತಿ ಪಡುವುದಿಲ್ಲ. ಏನಾದರೂ ಶಾಶ್ವತ ಕೆಲಸ ಮಾಡಬೇಕೆಂಬ ಹಂಬಲ ನನ್ನದು. ಈ ನಿಟ್ಟಿನಲ್ಲಿ ನಾನು ಕಾರ್ಯಪ್ರವೃತ್ತನಾಗಿದ್ದೇನೆ.
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ 40 ಕೋಟಿ ರೂಪಾಯಿ ವೆಚ್ಚದಲ್ಲಿ ದೆಹಲಿ ಮಾದರಿಯಲ್ಲಿ ಮೂರು ಸರ್ಕಾರಿ ಶಾಲೆಗಳನ್ನು ನಿರ್ಮಾಣ ಮಾಡಲಾಗಿದ್ದು, ಬರುವ ವರ್ಷ ಇಲ್ಲಿ 2500 ಮಕ್ಕಳಿಗೆ ಪ್ರವೇಶ ನೀಡಲಾಗುವುದು. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡಲು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಈ ಭಾಗದಲ್ಲಿ ವಾಹನದಟ್ಟಣೆ ನಿಯಂತ್ರಣ ಮಾಡಲು ಸಲುವಾಗಿ ಮೇಲುಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಬಿಬಿಎಂಪಿ ಮಾಜಿ ಉಪಮೇಯರ್ ಎಸ್. ಹರೀಶ್, ಮಂಡಲದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಶ್ರೀನಿವಾಸ್, ನಿವೃತ್ತ ಎಂಜಿನಿಯರ್ ಸೂಗಾರೆಡ್ಡಿ, ತಿಪ್ಪೇಸ್ವಾಮಿ, ರಾಮೇಗೌಡ,ಬಿಬಿಎಂಪಿ ಇಂಜಿನಿಯರ್ ತಿಮ್ಮರಸು ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
Sir M. Visvesvaraya Birth Anniversary: ಇಂದು ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯನವರ 161ನೇ ಜಯಂತಿ. ಈ ದಿನವನ್ನು ದೇಶದ ಇಂಜಿನಿಯರ್ ದಿನ ಎಂದು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಏನ್ ಟ್ವೀಟ್ ಮಾಡಿದ್ದಾರೆ? ಇಲ್ಲಿದೆ ವಿವರ. Engineer’s Day 2022: ಪ್ರಧಾನಿ ಮೋದಿ, ಕರ್ನಾಟಕದ ಮುಖ್ಯಮಂತ್ರಿ ಏನು ಟ್ವೀಟ್ ಮಾಡಿದ್ದಾರೆ?
ಇಂದು ಇಂಜಿನಿಯರ್‌ಗಳ ದಿನ. ಅಭಿಯಂತರರ ದಿನ ಎಂದೂ ಅಚ್ಚಕನ್ನಡದಲ್ಲಿ ಹೇಳುತ್ತಾರೆ. ಭಾರತ ರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜನ್ಮದಿನವೂ ಹೌದು. Engineers Day Quotes and Wishesಗಾಗಿ ಹುಡುಕುತ್ತಿದ್ದೀರಾ? ಇಲ್ಲಿವೆ ಡೌನ್‌ಲೋಡ್ ಮಾಡಿಕೊಳ್ಳಿ. Engineers Day Quotes and Wishes: ಇಂದು ಇಂಜಿನಿಯರ್ ದಿನ; ಸಿಂಪಲ್ ವಿಶಸ್ ಶೇರ್ ಮಾಡಬೇಕು ಅಂತಿದ್ದೀರಾ? ಇಲ್ಲೇ ಇವೆ ಡೌನ್‌ಲೋಡ್ ಮಾಡಿ
Sir M Visvesvaraya Birth Anniversary: ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರು ಭಾರತದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನಕ್ಕೆ1955ರಲ್ಲಿ ಪಾತ್ರರಾದರು. ಭಾರತ ಸರ್ಕಾರವು ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮದಿನವನ್ನು ಇಂಜಿನಿಯರ್ಸ್ ಡೇ (Engineers' Day) ಎಂದು 1968 ರಲ್ಲಿ ಘೋಷಿಸಿತು. Engineers' Day 2022: ಇಂದು ಇಂಜಿನಿಯರ್ಸ್ ಡೇ- ಇತಿಹಾಸ ಮತ್ತು ಮಹತ್ವ; ನಮ್ಮ ನಾಡಿನ ಚಿರಸ್ಮರಣೀಯ ಸರ್ ಎಂ.ವಿಶ್ವೇಶ್ವರಯ್ಯನವರ ಜಯಂತಿ