logo
ಕನ್ನಡ ಸುದ್ದಿ  /  ಕರ್ನಾಟಕ  /  Ks Eshwarappa On Aazan: ಆಜಾನ್ ಕುರಿತ ವಿವಾದಾತ್ಮಕ ಹೇಳಿಕೆಗೆ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಸ್ಪಷ್ಟನೆ ಹೀಗಿತ್ತು

KS Eshwarappa on Aazan: ಆಜಾನ್ ಕುರಿತ ವಿವಾದಾತ್ಮಕ ಹೇಳಿಕೆಗೆ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಸ್ಪಷ್ಟನೆ ಹೀಗಿತ್ತು

HT Kannada Desk HT Kannada

Mar 14, 2023 09:20 AM IST

ಮಾಜಿ ಸಚಿವ ಕೆಎಸ್ ಈಶ್ವರಪ್ಪ

  • ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಆಜಾನ್ ಕೇಳಿದಾಗ ತೊಂದರೆಯಾಗುತ್ತದೆ ಎಂದಿದ್ದು, ಯಾವುದೇ ಧರ್ಮವನ್ನು ಖಂಡಿಸುವ ಉದ್ದೇಶವಿಲ್ಲ ಎಂದು ಆಜಾನ್ ಕುರಿತ ವಿವಾದಾತ್ಮಕ ಹೇಳಿಕೆಗೆ ಸಚಿವ ಈಶ್ವರಪ್ಪ ಸ್ಪಷ್ಟನೆ ನೀಡಿದ್ದಾರೆ.

ಮಾಜಿ ಸಚಿವ ಕೆಎಸ್ ಈಶ್ವರಪ್ಪ
ಮಾಜಿ ಸಚಿವ ಕೆಎಸ್ ಈಶ್ವರಪ್ಪ

ಮಂಗಳೂರು: ಬಿಜೆಪಿಯ ಹಿರಿಯ ನಾಯಕ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಾಜಿ ಸಚಿವ ಕೆಎಸ್ ಈಶ್ವರಪ್ಪ ನಿನ್ನೆಯಷ್ಟೇ (ಮಾರ್ಚ್ 13, ಸೋಮವಾರ) ಆಜಾನ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಮತ್ತೆ ಅದನ್ನು ಸಮರ್ಥಿಸಿಕೊಂಡಿದ್ದು, ತಾವು ಸಾಮಾನ್ಯ ಜನರ ಭಾವನೆಗಳನ್ನು ವ್ಯಕ್ತಪಡಿಸಿದ್ದಾಗಿ ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕಲ್ಲುರ್ಟಿ ದೈವಸ್ಥಾನ: ಪಣೋಲಿಬೈಲ್ ಸನ್ನಿಧಿಯಲ್ಲಿ 23,000 ಕೋಲ ಸೇವೆಗೆ ಬುಕಿಂಗ್, ತಾಯಿ ಕಲ್ಲುರ್ಟಿ ಅನುಗ್ರಹಕ್ಕೆ ವರ್ಷಗಟ್ಟಲೆ ಕಾಯುವ ಭಕ್ತರು

ಕರ್ನಾಟಕದಲ್ಲಿ 2ನೇ ಹಂತದ ಲೋಕಸಭಾ ಚುನಾವಣೆ; 14 ಕ್ಷೇತ್ರಗಳ ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ಅಭ್ಯರ್ಥಿಗಳ ಅಂತಿಮ ಕಸರತ್ತು

HD Revanna: ಜೆಡಿಎಸ್ ಶಾಸಕ ಎಚ್‌ಡಿ ರೇವಣ್ಣ ಬಂಧನ; ಮಾಜಿ ಪ್ರಧಾನಿ ದೇವೇಗೌಡರ ಪುತ್ರನ ವಿರುದ್ಧ ಅಪಹರಣ ಕೇಸ್, ತಿಳಿಯಬೇಕಾದ 10 ಅಂಶಗಳಿವು

ಮಂಗಳೂರಿನಲ್ಲಿ ಶಾಖಾಘಾತ; ಚಲಿಸುತ್ತಿದ್ದ ಬಸ್ ಗಾಜು ಒಡೆದು ಮೂವರಿಗೆ ಗಾಯ; ಕರಾವಳಿಯಲ್ಲಿ ದಿಢೀರ್ ಹೃದಯಾಘಾತದಿಂದ 6 ಮಂದಿ ಸಾವು

ಮಂಗಳೂರಿನಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಆಜಾನ್ ಕೇಳಿದಾಗ ತೊಂದರೆಯಾಗುತ್ತದೆ ಎಂದಿದ್ದು, ಯಾವುದೇ ಧರ್ಮವನ್ನು ಖಂಡಿಸುವ ಉದ್ದೇಶವಿಲ್ಲ. ಆದರೆ ಯಾರಾದರೂ ಸಾಮಾನ್ಯ ಜನರ ಭಾವನೆಗಳಿಗೆ ಧ್ವನಿ ನೀಡಬೇಕು. ಇದು ಧರ್ಮವನ್ನು ಖಂಡಿಸುವುದಲ್ಲ ಅಂತ ತಿಳಿಸಿದ್ದಾರೆ.

ಮಂಗಳೂರಿನ ಕಾವೂರಿನಲ್ಲಿ ಭಾನುವಾರ ನಡೆದ ಬಿಜೆಪಿ ಸಮಾವೇಶದ ವೇಳೆ ವಿವಾದಾತ್ಮಕ ಹೇಳಿಕೆ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಮಾಜಿ ಸಚಿವರು ಈ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.

ಈಶ್ವರಪ್ಪ ಅವರು ವಿಜಯ್ ಸಂಕಲ್ಪ ಯಾತ್ರೆಯನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದಾಗ ಸಮೀಪದಲ್ಲೇ ಇದ್ದ ಮಸೀದಿಯಿಂದ ಆಜಾನ್ ಕೂಗಲಾಗಿದೆ. ಇದರಿಂದ ಸಿಟ್ಟಾದ ಅವರು, ನಾನು ಎಲ್ಲಿಗೆ ಹೋದರೂ, ಇದು (ಅಜಾನ್) ನನಗೆ ತಲೆನೋವು ತರುತ್ತದೆ ಎಂದಿದ್ದರು.

ಸುಪ್ರೀಂ ಕೋರ್ಟ್‌ನ ತೀರ್ಪು ಬಾಕಿಯಿದೆ. ಆಜಾನ್‌ ಮುಂದೊಂದು ದಿನ ಕೊನೆಗೊಳ್ಳುತ್ತದೆ. ಆಜಾನ್ ಸಮಯದಲ್ಲಿ ಧ್ವನಿವರ್ಧಕಗಳನ್ನು ಬಳಸಿದರೆ ಮಾತ್ರ ಅಲ್ಲಾಹನು ಪ್ರಾರ್ಥನೆಯನ್ನು ಕೇಳುತ್ತಾನೆಯೇ ಎಂದು ಈಶ್ವರಪ್ಪ ಪ್ರಶ್ನಿಸಿದ್ದರು. ದೇವಾಲಯಗಳಲ್ಲಿ ಮಹಿಳೆಯರು ಪ್ರಾರ್ಥನೆ ಮತ್ತು ಭಜನೆಗಳನ್ನು ಮಾಡುತ್ತಾರೆ. ನಾವು ಧಾರ್ಮಿಕರು, ಆದರೆ ನಾವು ಧ್ವನಿವರ್ಧಕಗಳನ್ನು ಬಳಸುವುದಿಲ್ಲ ಅಂತ ಹೇಳಿದ್ದಾರೆ.

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರ ಹೇಳಿಕೆ ಮುಸ್ಲಿಂ ಸಮುದಾಯದ ವಿರೋಧವನ್ನು ಕಟ್ಟಿಕೊಳ್ಳುವಂತಾಗಿದೆ.

ನನಗೆ ಮುಸ್ಲಿಂ ಮತಗಳು ಬೇಡ ಎಂದು ಈ ಹಿಂದೆ ಈಶ್ವರಪ್ಪ ಹೇಳಿದ್ರು. ಇದರ ಮುಂದುವರಿದ ಭಾಗವಾಗಿ ನನಗೆ ಎಸ್ ಡಿಪಿಐ ಸದಸ್ಯ ಮತಗಳು ಬೇಡ ಅಂತ ಹೇಳಿದ್ದಾರೆ.

ದಕ್ಷಿಣ ಭಾರದಲ್ಲಿ ಆಜಾನ್ ವಿವಾದಾತ್ಮಕ ವಿಷಯವಾಗಿ ಉಳಿದಿದೆ. ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿರ್ಬಂಧಿಸುವಂತೆ ಹಿಂದೂ ಸಂಘಟನೆಗಳು ಒತ್ತಾಯಿಸಿವೆ. ವಿಫಲವಾದರೆ ದೇವಾಲಯಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವುದಾಗಿ ಬೆದರಿಕೆ ಹಾಕಿದ್ದಾರೆ.

ಆಜಾನ್‌ನ ವಿಷಯಗಳು ಇತರ ಧರ್ಮದವರ ಭಾವನೆಗಳನ್ನು ಘಾಸಿಗೊಳಿಸುತ್ತವೆ ಎಂಬ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಮಸೀದಿಗಳಿಗೆ ಯಾವುದೇ ನಿರ್ದೇಶನಗಳನ್ನು ನೀಡಲು ನಿರಾಕರಿಸಿದಾಗ ಈ ವಿಷಯವು ಕಳೆದ ವರ್ಷ ಹೈಕೋರ್ಟ್‌ಗೆ ತಲುಪಿತ್ತು.ಅಜಾನ್‌ನ ವಿಷಯಗಳು ಇತರ ಧರ್ಮಗಳ ಜನರಿಗೆ ಖಾತರಿಪಡಿಸಿದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂಬ ವಾದವನ್ನು ಸಹ ನ್ಯಾಯಾಲಯ ತಿರಸ್ಕರಿಸಿತ್ತು.

ಕಳೆದ ವರ್ಷ ಬಿಜೆಪಿಯ ಹಿರಿಯ ನಾಯಕ, ಮಾಜಿ ಸಚಿವ ಈಶ್ವರಪ್ಪ ಕಮಿಷನ್‌ಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಸಿವಿಲ್ ಗುತ್ತಿಗೆದಾರನ ಆತ್ಮಹತ್ಯೆಗೆ ಶರಣಾಗಿದ್ದ. ಈ ಸಂಬಂಧ ಗ್ರಾಮೀಣಾಭಿವೃದ್ಧಿ ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ನೀಡಬೇಕಾಯಿತು.

ಸರ್ಕಾರಿ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್(40) 2022ರ ಆ.12ರಂದು ಉಡುಪಿಯ ಹೋಟೆಲ್‌ವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದ. ಆದರೆ ಸ್ಥಳೀಯ ಪೊಲೀಸರು ಪ್ರಕರಣದಲ್ಲಿ ಈಶ್ವರಪ್ಪಗೆ ಕ್ಲೀನ್ ಚಿಟ್ ನೀಡಿದ್ದರು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು