logo
ಕನ್ನಡ ಸುದ್ದಿ  /  ಕರ್ನಾಟಕ  /  Ragi Rava Food: ರಾಗಿ ರವೆಯಿಂದ ಉಪ್ಪಿಟ್ಟು ಇಡ್ಲಿ, ಹಲ್ವಾ; ಮೈಸೂರು ಸಿಎಫ್‌ಟಿಆರ್‌ಐನಿಂದ ರೆಡಿ ಟು ಈಟ್‌ ಹೊಸ ಉತ್ಪನ್ನ ಬಿಡುಗಡೆ

Ragi Rava Food: ರಾಗಿ ರವೆಯಿಂದ ಉಪ್ಪಿಟ್ಟು ಇಡ್ಲಿ, ಹಲ್ವಾ; ಮೈಸೂರು ಸಿಎಫ್‌ಟಿಆರ್‌ಐನಿಂದ ರೆಡಿ ಟು ಈಟ್‌ ಹೊಸ ಉತ್ಪನ್ನ ಬಿಡುಗಡೆ

Umesha Bhatta P H HT Kannada

Jul 06, 2023 02:07 PM IST

google News

ಮೈಸೂರಿನ ಸಿಎಫ್‌ಟಿಆರ್‌ ಐ ರಾಗಿ ರವೆಯಿಂದ ರೆಡಿ ಟು ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ

    • ಆಹಾರ ಸಂಶೋಧನೆ ಹಾಗೂ ಗುಣಮಟ್ಟ ಪರೀಶೀಲನೆ, ಅನುಮತಿ ನೀಡುವಲ್ಲಿ ಶ್ರೇಷ್ಠತೆಯನ್ನು ಉಳಿಸಿಕೊಂಡಿರುವ ಮೈಸೂರಿನ ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ(CFTRI) ಸಿರಿಧಾನ್ಯ ರಾಗಿ ಬಳಸಿ ರವೆ ತಯಾರಿಸಿ ಅದರಿಂದ ರೆಡಿ ಟು ಈಟ್‌( Ready to Eat) ಉತ್ನನ್ನಗಳು ಸಂಶೋಧಿಸಿದೆ. ಈ ಉತ್ಪನ್ನಗಳು ಯಾವು, ತಯಾರಿ, ಬಳಕೆ ಹೇಗೆ ಎನ್ನುವ ವಿವರ ಇಲ್ಲಿದೆ.
ಮೈಸೂರಿನ ಸಿಎಫ್‌ಟಿಆರ್‌ ಐ ರಾಗಿ ರವೆಯಿಂದ ರೆಡಿ ಟು ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ
ಮೈಸೂರಿನ ಸಿಎಫ್‌ಟಿಆರ್‌ ಐ ರಾಗಿ ರವೆಯಿಂದ ರೆಡಿ ಟು ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ

ಮೈಸೂರು: ರಾಗಿ ಎಂದರೆ ಬರೀ ಮುದ್ದೆಯಲ್ಲ. ರಾಗಿಯನ್ನು ರವೆಯಾಗಿ ಪರಿವರ್ತಿಸಿ ಉಪ್ಪಿಟ್ಟನ್ನೂ ಮಾಡಬಹುದು. ಕೇಸರಿಬಾತ್‌, ಇಡ್ಲಿಯನ್ನೂ ತಯಾರಿಸಬಹುದು. ಕಿಚಡಿಯನ್ನು ಮಾಡಿಕೊಂಡು ಊಟ ಮಾಡಬಹುದು.

ಹೊಸ ಆಹಾರ ಉತ್ಪನ್ನಗಳ ಸಂಶೋಧನೆ ಹಾಗೂ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮೈಸೂರಿನ ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ( CFTRI) ರಾಗಿಯಿಂದ ತಯಾರಿಸಬಹುದಾದ ಬಗೆ ಬಗೆಯ ಆಹಾರೋತ್ಪನ್ನಗಳನ್ನು ಬಿಡುಗಡೆ ಮಾಡಿದೆ.

ಸಿಎಫ್‌ಟಿಆರ್‌ಐ ಒಂದು ವಾರ, ಒಂದು ಪ್ರಯೋಗಾಲಯ ಎನ್ನುವ ವಿಭಿನ್ನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರ ಭಾಗವಾಗಿ ಗುರುವಾರ ರಾಗಿಯಿಂದ ತಯಾರಿಸಬಹುದಾದ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು. ಹೊಸ ಉತ್ಪನ್ನಗಳ ಪ್ರಾತ್ಯಕ್ಷಿಕೆಯನ್ನೂ ಏರ್ಪಡಿಸಲಾಗಿತ್ತು. ಕಳೆದ ಒಂದು ವಾರದಿಂದ ಸಿಎಫ್‌ಟಿಆರ್‌ನಲ್ಲಿ ಆಹಾರ ಸಂಶೋಧನೆಗೆ ಸಂಬಂಧಿಸಿ ನಿರಂತರ ವಿಚಾರ ಸಂಕಿರಣ, ಹೊಸ ಉತ್ಪನ್ನಗಳ ಸಂಶೋಧನಾ ಪ್ರಾತ್ಯಕ್ಷಿಕೆಗಳು ನಡೆಯುತ್ತಿವೆ. ಭಾರತ ಮಾತ್ರವಲ್ಲದೇ ವಿಶ್ವದ ಬೇರೆ ಭಾಗದಿಂದಲೂ ಆಹಾರ ತಜ್ಞರು, ವಿಜ್ಞಾನಿಗಳು, ಉದ್ಯಮ ವಲಯದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.

ಹೀಗಿರಲಿವೆ ರಾಗಿ ರವೆ ಉತ್ಪನ್ನಗಳು

ರಾಗಿಯನ್ನು ಸಿರಿಧಾನ್ಯವಾಗಿಯೂ ನೋಡಲಾಗುತ್ತದೆ. ಆದರೆ ರಾಗಿಯನ್ನು ರವೆಯಾಗಿ ಹೇಗೆ ಬದಲಾಯಿಸಬೇಕು ಎನ್ನುವ ಆತಂಕ ಇತ್ತು. ಈ ಕುರಿತು ಸಿಎಫ್‌ಟಿಆರ್‌ಐನಲ್ಲಿ ನಿರಂತರ ಸಂಶೋಧನೆ ನಡೆದಿತ್ತು. ರಾಗಿಯನ್ನು ನಿಗದಿತ ಬಿಸಿಯೊಳಗೆ ಹುರಿದು ಆನಂತರ ಪುಡಿ ಮಾಡಬೇಕು. ಇದು ಕೌಶಲ್ಯವನ್ನು ಬೇಡಲಿದೆ. ಇದಕ್ಕಾಗಿ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸಲಾಗಿದೆ. ಇದರಡಿ ರಾಗಿಯನ್ನು ರವೆಯಾಗಿ ಪರಿವರ್ತಿಸಬಹುದು. ರಾಗಿ ಅತಿ ಸಣ್ಣ ಸಿರಿಧಾನ್ಯವಾಗಿರುವುದರಿಂದ ಅದನ್ನು ಹೇಗೆ ಪುಡಿಯಾಗಿಸುವುದು ಎನ್ನುವ ಅನುವಾನ ಇದ್ದೇ ಇರುತ್ತದೆ. ಇದನ್ನು ಸವಾಲಾಗಿ ಸ್ವೀಕರಿಸಿ ಸಿದ್ದಪಡಿಸಲಾಗಿದೆ. ಇದರಿಂದ ಶೇ. 90ರಷ್ಟುರವೆ ಪಡೆಯಬಹುದು ಎನ್ನುವ ವಿವರಣೆಯನ್ನು ನೀಡಲಾಯಿತು.

ರಾಗಿ ರವಾದ ಮಿಶ್ರಣದಲ್ಲಿ ಉಪ್ಪಿಟ್ಟು., ಇಡ್ಲಿ. ಕೇಸರಿ ಬಾತ್‌, ಹಲ್ವಾ. ಕಿಚಡಿ ಸಹಿತ ಮಾಡಬಹುದು. ಅವುಗಳ ರೆಡಿ ಟು ಈಟ್‌ ಮಿಶ್ರಣವನ್ನು ತಯಾರಿಸಿದರೆ ತತ್‌ ಕ್ಷಣವೇ ಉಪಹಾರಕ್ಕೆ ಬಳಸಬಹುದು. ಇದು ಬರೀ ರುಚಿಕರ ಮಾತ್ರವಲ್ಲ. ಆರೋಗ್ಯದ ದೃಷ್ಟಿಯಿಂದಲೂ ಅತ್ಯುತ್ತಮ. ರುಚಿಯನ್ನು ರಾಜೀ ಮಾಡಿಕೊಳ್ಳದೇ ರಾಗಿ ರವಾದ ಈ ಉತ್ಪನ್ನಗಳನ್ನು ಬಳಸಬಹುದು. ಆಹಾರ ಉತ್ಪನ್ನಗಳನ್ನು ತಯಾರಿಸಬಹುದು. ಆದರೆ ಎಲ್ಲಾ ವಯೋಮಾನದವರ ಆರೋಗ್ಯವನ್ನೂ ಗಮನದಲ್ಲಿಟ್ಟುಕೊಂಡು ಉತ್ತಮವಾದ ಉತ್ಪನ್ನಗಳನ್ನು ನೀಡುವುದು ಸವಾಲು. ಇದನ್ನೇ ಸಿಎಫ್‌ಟಿಆರ್‌ಐ ಮಾಡಿದೆ ಎನ್ನುವ ಅಂಶವನ್ನು ತಿಳಿಸಲಾಯಿತು.

ರಾಗಿ ಪೌಷ್ಠಿಕಾಂಶ ಭರಿತ ಆಹಾರ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್‌, ಫೈಬರ್‌ ಅಂಶವಿದೆ. ದೇಹಕ್ಕೆ ಬೇಕಾದ ಖನಿಜಾಂಶವೂ ಹೆಚ್ಚಿನ ಪ್ರಮಾಣ ಇರುವುದಿರಿಂದ ರಾಗಿ ಬೇಡಿಕೆ ಇದ್ದೇ ಇದೆ. ರಾಗಿ ರವೆಯಿಂದ ತಯಾರಿಸಬಹುದಾದ ಬಹು ಬಗೆಯ ಉಪಹಾರ ಉತ್ಪನ್ನಗಳು ದೇಶೀಯವಾಗಿ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲೂ ಬೇಡಿಕೆ ಪಡೆಯಲಿವೆ. ರಾಗಿ ಬಳಸಿ ರವೆ ಉತ್ಪನ್ನಗಳ ಉತ್ಪಾದನೆಗೆ ಬೇಕಾದ ತಂತ್ರಜ್ಞಾನ, ಪ್ರಾತ್ಯಕ್ಷಿಕೆ ಸಿಎಫ್‌ಟಿಆರ್‌ಐನಲ್ಲಿ ಸಿಗಲಿವೆ.

ಮೂರು ಉತ್ಪನ್ನ ಬಿಡುಗಡೆ

ಎರಡು ದಿನದ ಹಿಂದೆ ಗ್ಲುಟೇನ್‌ ಮುಕ್ತ ಕೇಕ್‌, ಫೈಬರ್‌ಯುಕ್ತ ರಸ್ಕ್‌, ಹಾಗೂ ಮಸಾಲೆ ಬ್ರೆಡ್‌ ಅನ್ನು ಸಿಎಫ್‌ಟಿಆರ್‌ಐ ಬಿಡುಗಡೆ ಮಾಡಿತ್ತು.

ಬೇಕರಿ ಉತ್ಪನ್ನಗಳ ತಯಾರಿಕಗೆ ಸುಲಭವಾಗುವಂತೆ ಗ್ಲುಟೇನ್‌ ಮುಕ್ತ ಕೇಕ್‌ ಮಿಶ್ರಣವನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಗೋಧಿಹಿಟ್ಟು, ಸಕ್ಕರೆವಿರುವ ಮಿಶ್ರಣ ಇದೆ. ಇದಕ್ಕೆ ನೀರು ಇಲ್ಲವೇ ಹಾಲು, ಮೊಟ್ಟೆ ಅಥವಾ ಅಡುಗೆ ಎಣ್ಣೆ ಮಿಶ್ರಣ ಮಾಡಿಕೊಂಡು ಕೇಕ್‌ ಸೇವಿಸಬಹುದು.

ಅದೇ ರೀತಿ ಹೆಚ್ಚಿನ ಫೈಬರ್‌ ಅಂಶವುಳ್ಳ ಪ್ರೊಟೀನ್‌ ಹೆಚ್ಚಿರುವ ರಸ್ಕ್‌, ಗೋಧಿಯಿಂದ ತಯಾರಿಸಿದ ಮಸಾಲೆ ಮಿಶ್ರಿತ ಬ್ರೆಡ್‌ ಕೂಡ ಬಳಕೆಗೆ ಲಭ್ಯವಿದೆ. ಜ್ವರ ಅಥವಾ ರೋಗದಿಂದ ಬಳಲುತ್ತಿರುವರಿಗೆ ಮಸಾಲೆ ಬ್ರೆಡ್‌ ಶಕ್ತಿ ನೀಡಬಲ್ಲ ಆಹಾರ.

ಎರಡು ದಿನ ಮುಕ್ತ ಪ್ರವೇಶ

ಎರಡು ದಿನ ಸಿಎಫ್‌ಟಿಆರ್‌ಐಗೆ ಮುಕ್ತ ಪ್ರವೇಶವನ್ನೂ ನೀಡಲಾಗಿದೆ. ಆಸಕ್ತರು, ಸಾರ್ವಜನಿಕರು ಸಿಎಫ್‌ಟಿಆರ್‌ಐಗೆ ಗುರುವಾರ ಹಾಗೂ ಶುಕ್ರವಾರ ಬೆಳಿಗ್ಗೆ 10ರಿಂದ ಸಂಜೆ 4 ರವರೆಗೆ ಸಿಎಫ್‌ಟಿಆರ್‌ಐಗೆ ಭೇಟಿ ನೀಡಿ ಹೊಸ ಸಂಶೋಧನೆಗಳು, ಉತ್ಪನ್ನಗಳು. ತಂತ್ರಜ್ಞಾನಗಳನ್ನು ವೀಕ್ಷಿಸಿ ಮಾಹಿತಿ ಪಡೆಯಬಹುದು. ಹೊಸದಾಗಿ ಆಹಾರ ಉದ್ಯಮವನ್ನು ಆರಂಭಿಸುವವರಿಗೂ ಇಲ್ಲಿ ಸೂಕ್ತ ಮಾರ್ಗದರ್ಶನ ನೀಡಲಾಗುತ್ತದೆ. ನವೋದ್ಯಮಿಗಳಿಗೆ ಆಹಾರ ತಯಾರಿಕಾ ಘಟಕ, ಉತ್ಪನ್ನಗಳು, ಆಹಾರ ಪ್ರದರ್ಶನಗಳೂ ಇರಲಿವೆ. ಮೊದಲ ದಿನವೇ ಶಾಲಾ, ಕಾಲೇಜುಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಆಹಾರ ಸುರಕ್ಷತೆ ಹಾಗೂ ತಂತ್ರಜ್ಞಾನದ ಮಾಹಿತಿ ಪಡೆದುಕೊಂಡರು.

ಹೊಸ ತಂತ್ರಜ್ಞಾನ, ನವೋದ್ಯಮ ಕುರಿತು ಮಾಹಿತಿಗಾಗಿ ಇಲ್ಲಿ ಸಂಪರ್ಕಿಸಿ

0821 2514534(ಸಿಎಫ್‌ಟಿಆರ್‌ಐ ಮೈಸೂರು)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ