logo
ಕನ್ನಡ ಸುದ್ದಿ  /  ಕರ್ನಾಟಕ  /  Forest News: ನಾಗರಹೊಳೆಯಲ್ಲಿ ಬೇಟೆಗಾರರ ಗುಂಡೇಟಿಗೆ ಕಾಡುಕೋಣ ಬಲಿ

Forest News: ನಾಗರಹೊಳೆಯಲ್ಲಿ ಬೇಟೆಗಾರರ ಗುಂಡೇಟಿಗೆ ಕಾಡುಕೋಣ ಬಲಿ

Umesha Bhatta P H HT Kannada

Mar 25, 2024 02:21 PM IST

ಬೇಟೆಗಾರರ ದಾಳಿಗೆ ಬಲಿಯಾದ ಕಾಡುಕೋಣ.

    • ಹಬ್ಬಗಳು ಬರುತ್ತಿರುವಂತೆಯೇ ಬೇಟೆಗಾರರು ಮಾಂಸಕ್ಕಾಗಿ ಪ್ರಾಣಿ ಬೇಟೆಗೆ ಮುಂದಾಗಿದ್ದು. ನಾಗರಹೊಳೆಯಲ್ಲಿ ಕಾಡುಕೋಣವನ್ನು ಕೊಂದು ಹಾಕಲಾಗಿದೆ. 
ಬೇಟೆಗಾರರ ದಾಳಿಗೆ ಬಲಿಯಾದ ಕಾಡುಕೋಣ.
ಬೇಟೆಗಾರರ ದಾಳಿಗೆ ಬಲಿಯಾದ ಕಾಡುಕೋಣ.

ಮೈಸೂರು: ಬಿರುಬೇಸಿಗೆ ನಡುವೆ ನೀರಿಗಾಗಿ ಪ್ರಾಣಿಗಳು ಪರಿತಪಿಸುತ್ತಿರುವಾಗ ನಾಗರಹೊಳೆ ರಾಷ್ಟ್ರಿಯ ಉದ್ಯಾನದಲ್ಲಿ ಬೇಟೆಗಾರರು ಚುರುಕಾಗಿದ್ಧಾರೆ. ಭಾನುವಾರ ಮಧ್ಯರಾತ್ರಿ ನಾಗರಹೊಳೆ ಕಾಡಿನೊಳಗೆ ನುಗ್ಗಿದ ಬೇಟೆಗಾರರ ಗುಂಪು ಗುಂಡು ಹಾರಿಸಿ ಭಾರೀ ಗಾತ್ರದ ಕಾಡುಕೋಣವನ್ನು ಕೊಂದು ಹಾಕಿದೆ. ಗುಂಡೇಟಿನ ಶಬ್ದವನ್ನು ಕೇಳಿ ಸಿಬ್ಬಂದಿ ಕೂಡಲೇ ಧಾವಿಸಿದ್ದರಿಂದ ಬೇಟೆಗಾರರು ಕಾಡುಕೋಣದ ದೇಹವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Hassan Scandal: 100 ಕೋಟಿ ರೂ. ಆಫರ್ ವಿಚಾರವನ್ನು ಎಸ್‌ಐಟಿ ನೋಡಿಕೊಳ್ಳುತ್ತೆ, ದೇವರಾಜೇಗೌಡ ಜೈಲಲ್ಲೇ ಇರ್ತಾರೆ: ಗೃಹ ಸಚಿವ

Hassan Scandal : ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ

Wildlife News: ಹುಲಿ ಉಗುರು ಪ್ರಕರಣ, ವನ್ಯಜೀವಿಗಳ ಅಂಗಾಂಗ ಹಸ್ತಾಂತರ ಇನ್ನಷ್ಟು ವಿಳಂಬ ಸಾಧ್ಯತೆ

Hubli News:ಅಂಜಲಿ ಅಂಬಿಗೇರ ಹತ್ಯೆ, ಹುಬ್ಬಳ್ಳಿ ಐಪಿಎಸ್‌ ಅಧಿಕಾರಿ ರಾಜೀವ್‌ ಸಸ್ಪೆಂಡ್‌, ಪೊಲೀಸ್‌ ಆಯುಕ್ತರ ತಲೆದಂಡ ಸಾಧ್ಯತೆ

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕೊಡಗು ಹಾಗೂ ಮೈಸೂರು ಜಿಲ್ಲೆಯ ಗಡಿ ಭಾಗದಲ್ಲಿ ಈ ಘಟನೆ ನಡೆದಿದೆ. ಪಿರಿಯಾಪಟ್ಟಣ ತಾಲ್ಲೂಕಿನ ಆನೆಚೌಕೂರು ವಲಯದ ಬಫರ್‌ ಪ್ರದೇಶ ವ್ಯಾಪ್ತಿಯ ಚನ್ನಂಗಿ ಶಾಖೆಯ ದೇವ ಮಚ್ಚಿ ಮೀಸಲು ಅರಣ್ಯ ಪ್ರದೇಶದಲ್ಲಿ ಬೇಟೆಗಾರರ ಗುಂಡಿಗೆ ಕಾಡುಕೋಣ ಉರುಳಿ ಬಿದ್ದಿದೆ. ದೇಹಕ್ಕೆ ಎರಡು ಗುಂಡುಗಳು ಬಿದ್ದಿದ್ದು, ಇದರಿಂದ ಸ್ಥಳದಲ್ಲಿಯೇ ಮೃತಪಟ್ಟಿದೆ ಎಂದು ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಹರ್ಷಕುಮಾರ ಚಿಕ್ಕನರಗುಂದ ಖಚಿತಪಡಿಸಿದ್ದಾರೆ.

ಕುಶಾಲನಗರ ಪಟ್ಟಣಕ್ಕೆ ಸಮೀಪವೇ ಇರುವ ದೇವಮಚ್ಚಿ ಮೀಸಲು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ಪ್ರದೇಶದಲ್ಲಿ ಭಾರೀ ಗಾತ್ರದಲ್ಲಿ ಗುಂಡಿನ ಶಬ್ದ ಕೇಳಿ ಬಂದಿದೆ. ಪಿರಿಯಾಪಟ್ಟಣ ಮುಖ್ಯರಸ್ತೆಯಿಂದ ಪಾರದಕಟ್ಟೆ ಕಳ್ಳಬೇಟೆ ತಡೆ ಶಿಬಿರಕ್ಕೆ ಹೋಗುವ ಮೈಸೂರು-ಕೊಡಗು ಚೈನ್‌ಗೇಟ್ ರಸ್ತೆಯ ಅರಣ್ಯ ಪ್ರದೇಶದ ಅಣ್ಣಿಕೆರೆ ಬಳಿ ಗಸ್ತಿನಲ್ಲಿದ್ದಾಗ ಸಿಬ್ಬಂದಿಗಳು ಕೂಡಲೇ ಎಚ್ಚೆತ್ತು ಸ್ಥಳಕ್ಕೆ ಧಾವಿಸಿದ್ದಾರೆ. ಈ ಹೊತ್ತಿಗೆ ಬೇಟೆಗಾರರು ಅಲ್ಲಿಂದ ಪರಾರಿಯಾಗಿರುವುದು ಕಂಡು ಬಂದಿದೆ. ಆನೆ ಚೌಕೂರು ಉಪ ವಲಯ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿಗಳು ಸುತ್ತಮುತ್ತಲ ಪ್ರದೇಶದಲ್ಲಿ ಹುಡುಕಾಟ ನಡೆಸಿದಾಗ ಬೇಟೆಗಾರರ ಕುರುಹು ಸಿಕ್ಕಿಲ್ಲ.

10-12 ವರ್ಷ ವಯಸ್ಸಿನ ಕಾಡುಕೋಣ ಬೇಟೆಗಾರರ ದಾಳಿಯಿಂದ ಮೃತಪಟ್ಟಿದೆ. ಈ ಸಂಬಂಧ ಈಗಾಗಲೇ ಅರಣ್ಯ ಇಲಾಖೆ ತಂಡವನ್ನು ರಚಿಸಲಾಗಿದೆ. ಪ್ರಕರಣವನ್ನೂ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದೇವೆ. ಇಬ್ಬರ ಬಗ್ಗೆ ಮಾಹಿತಿಯಿದ್ದು, ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸುತ್ತೇವೆ ಎಂದು ಚಿಕ್ಕನರಗುಂದ ತಿಳಿಸಿದ್ದಾರೆ.

ಹಬ್ಬದ ಸಂದರ್ಭಗಳಲ್ಲಿ ಬೇಟೆಗಾರರು ಮಾಂಸಕ್ಕಾಗಿ ಈ ರೀತಿ ವನ್ಯಪ್ರಾಣಿಗಳನ್ನು ಬೇಟೆಯಾಡುವುದು ನಡೆದಿದೆ. ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿ ಮೊಕದ್ದಮೆ ದಾಖಲಿಸಿ ಈ ಹಿಂದೆ ಕೆಲವರನ್ನು ಬಂಧಿಸಲಾಗಿದೆ. ಈಗಲೂ ಹಬ್ಬಕ್ಕೆಂದೇ ಪ್ರಾಣಿ ಬೇಟೆ ಮಾಡಲು ಯತ್ನಿಸಿರುವುದು ಗಮನಕ್ಕೆ ಬಂದಿದೆ. ಸಿಬ್ಬಂದಿ ಎಚ್ಚರದಿಂದ ಕೆಲಸ ಮಾಡುವಂತೆಯೂ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಉದ್ಯಾನದ ಮುಖ್ಯ ಪಶುವೈದ್ಯಾಧಿಕಾರಿ ಡಾ.ರಮೇಶ್ ಹಾಗೂ ತಂಡದವರು ಮರಣೋತ್ತರ ಪರೀಕ್ಷೆ ನಡೆಸಿದರು. ಗುಂಡುಗಳು ದೇಹದ ಭಾಗದಲ್ಲಿ ಪತ್ತೆಯಾಗಿವೆ. ಆನಂತರ ನಿಯಮದ ಪ್ರಕಾರ ಕಾಡೆಮ್ಮೆಯ ಅಂತ್ಯಕ್ರಿಯೆ ನಡೆಸಲಾಯಿತು.

ಕಳೆದ ವರ್ಷವೂ ಇದೇ ರೀತಿ ಆನೆಚೌಕೂರು ವಲಯ ವ್ಯಾಪ್ತಿಯಲ್ಲಿ ಕಾಡುಕೋಣವನ್ನು ಬೇಟೆಯಾಡಲಾಗಿತ್ತು. ಆಗಲೂ ಹಲವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆರೋಪಿಗಳು ಜೈಲಿಗೂ ಹೋಗಿದ್ದರು. ಈಗ ಮತ್ತೆ ಇಂತಹದೇ ಪ್ರಯತ್ನಗಳು ನಾಗರಹೊಳೆಯಲ್ಲಿ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ