logo
ಕನ್ನಡ ಸುದ್ದಿ  /  ಕರ್ನಾಟಕ  /  Gavisiddeshwara Maharathotsava: ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ ಕೊಪ್ಪಳದ ಗವಿಸಿದ್ದೇಶ್ವರ ಮಹಾ ರಥೋತ್ಸವದಲ್ಲಿ ಭಕ್ತಸಾಗರ

Gavisiddeshwara Maharathotsava: ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ ಕೊಪ್ಪಳದ ಗವಿಸಿದ್ದೇಶ್ವರ ಮಹಾ ರಥೋತ್ಸವದಲ್ಲಿ ಭಕ್ತಸಾಗರ

HT Kannada Desk HT Kannada

Jan 09, 2023 10:19 AM IST

google News

Gavisiddeshwara Maharathotsava: ಕೊಪ್ಪಳದ ಗವಿಸಿದ್ದೇಶ್ವರ ಮಹಾ ರಥೋತ್ಸವದಲ್ಲಿ ಭಕ್ತಸಾಗರ

    • ಕಳೆದೆರಡು ಮೂರು ವರ್ಷಗಳಿಂದ ಕೊರೊನಾ ಕಾರಣದಿಂದ ಜನದಟ್ಟಣೆಯಿಲ್ಲದೆ ನಡೆದ ಕೊಪ್ಪಳ ಜಿಲ್ಲೆಯ ಗವಿಸಿದ್ದೇಶ್ವರ ಮಹಾ ರಥೋತ್ಸವ ಈ ಬಾರಿ ಹೊಸ ದಾಖಲೆಯನ್ನೇ ಸೃಷ್ಟಿಸಿದೆ. ನಿನ್ನೆ ನಡೆದ ರಥೋತ್ಸವದ ಸಂದರ್ಭದಲ್ಲಿ 5-6 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದು, ಹೊಸ ದಾಖಲೆ ಎನ್ನಲಾಗುತ್ತಿದೆ.
Gavisiddeshwara Maharathotsava: ಕೊಪ್ಪಳದ ಗವಿಸಿದ್ದೇಶ್ವರ ಮಹಾ ರಥೋತ್ಸವದಲ್ಲಿ ಭಕ್ತಸಾಗರ
Gavisiddeshwara Maharathotsava: ಕೊಪ್ಪಳದ ಗವಿಸಿದ್ದೇಶ್ವರ ಮಹಾ ರಥೋತ್ಸವದಲ್ಲಿ ಭಕ್ತಸಾಗರ

ಕೊಪ್ಪಳ: ಕಳೆದೆರಡು ಮೂರು ವರ್ಷಗಳಿಂದ ಕೊರೊನಾ ಕಾರಣದಿಂದ ಜನದಟ್ಟಣೆಯಿಲ್ಲದೆ ನಡೆದ ಕೊಪ್ಪಳ ಜಿಲ್ಲೆಯ ಗವಿಸಿದ್ದೇಶ್ವರ ಮಹಾ ರಥೋತ್ಸವ ಈ ಬಾರಿ ಹೊಸ ದಾಖಲೆಯನ್ನೇ ಸೃಷ್ಟಿಸಿದೆ. ನಿನ್ನೆ ನಡೆದ ರಥೋತ್ಸವದ ಸಂದರ್ಭದಲ್ಲಿ 5-6 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದು, ಹೊಸ ದಾಖಲೆ ಎನ್ನಲಾಗುತ್ತಿದೆ.

ರಥೋತ್ಸವದ ಸಂದರ್ಭದಲ್ಲಿ ವಿಶಾಲ ಗವಿಮಠದ ಬಯಲಿಗೆ ಚುಕ್ಕಿಗಳಿಟ್ಟಂತೆ ಎಲ್ಲೆಲ್ಲಿ ನೋಡಿದರೂ ಜನಸಾಗರವೇ ಕಂಡುಬರುತ್ತಿತ್ತು. ಗವಿಸಿದ್ದೇಶ್ವರ ಮಠದ ಆವರಣ, ಶಾಲಾ ಕಾಲೇಜುಗಳ ಕಟ್ಟಡ, ರಸ್ತೆಗಳಲ್ಲಿ ಜನಸ್ತೋಮವೇ ನೆರೆದಿತ್ತು.

ನಿನ್ನೆ ಸಂಜೆ 5.30 ಗಂಟೆಗೆ ನಡೆದ ಮಹಾರಥೋತ್ಸವಕ್ಕೆ ಈಶಾ ಫೌಂಡೇಷನ್‌ನ ಸದ್ಗುರು ಜಗ್ಗಿ ವಾಸುದೇವ್‌ ಚಾಲನೆ ನೀಡಿದ್ದಾರೆ. ಹಲವು ಲಕ್ಷ ಜನರ ಸಮ್ಮುಖದಲ್ಲಿ ಸಾಗಿದ ರಥೋತ್ಸವ ಜನರಲ್ಲಿ ಹೊಸ ಭಕ್ತಿಭಾವವನ್ನೇ ಉಕ್ಕಿಸಿದೆ.

ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಕಣ್ಣು ಹಾಯಿಸಿದಷ್ಟು ಜನಸಾಗರವೇ ಕಾಣಿಸುತ್ತಿತ್ತು. ಹುಚ್ಚು ಬಿಡಿಸುವಂತೆ ಜಾತ್ರೆ ನಡೆಸಬೇಕು ಎಂದು ಮಠದ ಶ್ರೀಗಳು ನೀಡಿದ ಕರೆಗೆ ಓಗೊಟ್ಟಂತೆ ಹಲವು ಲಕ್ಷ ಜನರು ಆಗಮಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ರಥೋತ್ಸವಕ್ಕೆ ಚಾಲನೆ ನೀಡುವ ಮೊದಲು ಗವಿಸಿದ್ದೇಶ್ವರ ಶ್ರೀಗಳು ಭಕ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಅವರು ಲಿಂಗೈಕರಾದ ಸಿದ್ದೇಶ್ವರ ಶ್ರೀಗಳಿಗೆ ಭಕ್ತಿಯ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಇಡೀ ಜನಸಮೂಹವೇ ಒಂದು ನಿಮಿಷಗಳ ಕಾಲ ಮೌನಾಚರಣೆ ಆಚರಿಸಿ ಸಿದ್ದೇಶ್ವರ ಸ್ವಾಮೀಜಿಗೆ ಶ್ರದ್ಧಾಂಜಲಿ ಅರ್ಪಿಸಿದೆ.

ಬಳಿಕ ಜಗ್ಗಿ ವಾಸುದೇವ್‌ ಅವರು ರಥೋತ್ಸವಕ್ಕೆ ಚಾಲನೆ ನೀಡಿದ್ದಾರೆ. ಹಲವು ಲಕ್ಷ ಭಕ್ತರ ಸಮ್ಮುಖದಲ್ಲಿ ರಥೋತ್ಸವ ವೈಭವದಲ್ಲಿ ನಡೆದಿದೆ. ಕೆಲವು ವರದಿಗಳ ಪ್ರಕಾರ 5-6 ಲಕ್ಷ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಇನ್ನು ಕೆಲವು ವರದಿಗಳ ಪ್ರಕಾರ ಭಕ್ತರ ಸಂಖ್ಯೆ 8 ಲಕ್ಕೂ ಹೆಚ್ಚು ಇತ್ತು ಎನ್ನಲಾಗುತ್ತಿದೆ.

ಹಲವು ಲಕ್ಷ ಭಕ್ತರ ಸಮ್ಮುಖದಲ್ಲಿ ‘ಗವಿಸಿದ್ದೇಶ್ವರ ಮಹಾರಾಜಕೀ ಜೈ’ ಎಂಬ ಜಯಘೋಷಗಳ ನಡುವೆ ರಥ ಸಾಗಿದೆ. ಈ ರಥವು 51 ಅಡಿ ಎತ್ತರವಿದೆ. ನಂದಿಕೋಲು ಕುಣಿತ, ಪಲ್ಲಕ್ಕಿ ಮೆರವಣಿಗೆ, ಇಲಾಯಿ, ಮಜಲುಗಳ ಮೇಳಗಳ ನಡುವೆ ರಥೋತ್ಸವ ವೈಭವದಿಂದ ನಡೆದಿದೆ. ರಥೋತ್ಸವ ಪೂರ್ಣಗೊಂಡ ಬಳಿಕ ಭಕ್ತರೆಲ್ಲ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ಸುಮಾರು ಹದಿನೈದು ದಿನಗಳ ಕಾಲ ಹಲವು ಲಕ್ಷ ಭಕ್ತರು ಈ ಜಾತ್ರೆಗೆ ಭೇಟಿ ನೀಡಿದ್ದಾರೆ. ಕಳೆದ ಹಲವು ದಿನಗಳಿಂದ ಮಠದ ಸುತ್ತಮುತ್ತ ಜನಜಾತ್ರೆಯೇ ನೆರೆದಿತ್ತು. 22 ಲಕ್ಷ ಕ್ಕೂ ಹೆಚ್ಚು ಜೋಳದ ರೊಟ್ಟಿಗಳನ್ನು ಸಿದ್ಧಪಡಿಸಲಾಗಿತ್ತು. ಜೋಳದ ರೊಟ್ಟಿ ಜತೆಗೆ ‘ಮಾಲೆಡಿ’ ಅಥವಾ ‘ಮಾಡ್ಲಿ’ ಎಂಬ ಸಿಹಿ ಖಾದ್ಯವನ್ನು ಭಕ್ತರಿಗೆ ನೀಡಲಾಗಿದೆ.

ಹಲವು ವರ್ಷಗಳ ಹಿಂದೆಯೂ ಅಪಾರ ಪ್ರಮಾಣದ ಜನಸ್ತೋಮ ಕೊಪ್ಪಳ ಜಾತ್ರೆಯಲ್ಲಿ ಸಾಮಾನ್ಯವಾಗಿತ್ತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ