logo
ಕನ್ನಡ ಸುದ್ದಿ  /  ಕರ್ನಾಟಕ  /  ಕೃಷಿ ಇಲಾಖೆಯ 945 ಗ್ರೂಪ್ ಬಿ ಹುದ್ದೆಗಳ ಭರ್ತಿಗೆ ಕೆಪಿಎಸ್​​ಸಿ ಅಧಿಸೂಚನೆ; ಈ ದಿನದಿಂದ ಅರ್ಜಿ ಶುರು, ವಿದ್ಯಾರ್ಹತೆ ವಿವರ

ಕೃಷಿ ಇಲಾಖೆಯ 945 ಗ್ರೂಪ್ ಬಿ ಹುದ್ದೆಗಳ ಭರ್ತಿಗೆ ಕೆಪಿಎಸ್​​ಸಿ ಅಧಿಸೂಚನೆ; ಈ ದಿನದಿಂದ ಅರ್ಜಿ ಶುರು, ವಿದ್ಯಾರ್ಹತೆ ವಿವರ

Prasanna Kumar P N HT Kannada

Sep 20, 2024 06:20 PM IST

google News

ಕೃಷಿ ಇಲಾಖೆಯ 945 ಗ್ರೂಪ್ ಬಿ ಹುದ್ದೆಗಳ ಭರ್ತಿಗೆ ಕೆಪಿಎಸ್​​ಸಿ ಅಧಿಸೂಚನೆ

    • ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಕ್ಕೆ ಕರ್ನಾಟಕ ಲೋಕಸೇವಾ ಆಯೋಗ ಹೊಸ ಅಧಿಸೂಚನೆ ಪ್ರಕಟಿಸಿದೆ. ಗ್ರೂಪ್‌ ಬಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ದಿನಾಂಕ ಯಾವಾಗ ಆರಂಭ, ಯಾರೆಲ್ಲಾ ಅರ್ಜಿ ಸಲ್ಲಿಸಬಹುದು, ವಯಸ್ಸು ಸೇರಿದಂತೆ ಎಲ್ಲಾ ವಿವರ ಇಲ್ಲಿದೆ.
ಕೃಷಿ ಇಲಾಖೆಯ 945 ಗ್ರೂಪ್ ಬಿ ಹುದ್ದೆಗಳ ಭರ್ತಿಗೆ ಕೆಪಿಎಸ್​​ಸಿ ಅಧಿಸೂಚನೆ
ಕೃಷಿ ಇಲಾಖೆಯ 945 ಗ್ರೂಪ್ ಬಿ ಹುದ್ದೆಗಳ ಭರ್ತಿಗೆ ಕೆಪಿಎಸ್​​ಸಿ ಅಧಿಸೂಚನೆ

ಬೆಂಗಳೂರು: ಕೃಷಿ ಇಲಾಖೆಯಲ್ಲಿ 128 ಕೃಷಿ ಅಧಿಕಾರಿ ಮತ್ತು 817 ಸಹಾಯಕ ಅಧಿಕಾರಿ ಸೇರಿದಂತೆ ಒಟ್ಟು 945 ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ ಅಧಿಸೂಚನೆ ಹೊರಡಿಸಿದೆ. ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ಅವರ ವಿಶೇಷ ಪ್ರಯತ್ನದ ಫಲಾವಾಗಿ ಈ ನೇಮಕಾತಿ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಇಲಾಖೆ ಇತಿಹಾಸದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿರಿವುದು ಇದೇ ಮೊದಲು.

ಎನ್ ಚೆಲುವರಾಯಸ್ವಾಮಿ ಕೃಷಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ದಿನದಿಂದಲೇ ಇಲಾಖಾ ಸುಧಾರಣೆಗೂ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಇಲಾಖೆಯಲ್ಲಿ ಶೇ 60 ಕ್ಕೂ ಅಧಿಕ ಹುದ್ದೆಗಳು‌ ಖಾಲಿ ಇರುವುದನ್ನು ಮನಗಂಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವೊಲಿಸಿ ಆರ್ಥಿಕ ಇಲಾಖೆ ಅನುಮತಿ ಪಡೆದು ಇಲಾಖೆ‌ ಮೂಲಕ ಕೆಪಿಎಸ್​​ಸಿಗೆ ಪ್ರಸ್ತಾವನೆ ಕಳುಹಿಸಲು ಪ್ರಮುಖ ಪಾತ್ರವಹಿಸಿದ್ದಾರೆ.

ಈ ನೇಮಕಾತಿಯಿಂದ ರಾಜ್ಯ 31 ಜಿಲ್ಲೆಗಳ ಎಲ್ಲಾ ತಾಲೂಕುಗಳಲ್ಲಿ ತಳ ಮಟ್ಟದಲ್ಲಿ ಕೆಲಸ ಮಾಡಲು ಅಧಿಕಾರಿಗಳನ್ನು ನೇಮಿಸಲು ಸಾಧ್ಯವಾಗಲಿದೆ. 2008 ರಲ್ಲಿ ಕೆಪಿಎಸ್​ಸಿ ಮೂಲಕ 410 ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು. ಇದೀಗ ಒಂದೇ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿಗಳ ನೇಮಕಾತಿ ಮಾಡಲು ಕ್ರಮ ವಹಿಸಲಾಗಿದೆ. 3 ತಿಂಗಳೊಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲ ಸೂಚಿಸಲಾಗಿದೆ.

  • ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭದ ದಿನ: 07-10-2024
  • ಆನ್‌ಲೈನ್‌ ಅರ್ಜಿ ಸಲ್ಲಿಕೆಗೆ ಕೊನೆ ದಿನ: 07-11-2024
  • ನೋಟಿಫಿಕೇಶನ್‌ ಹಾಗೂ ಹೆಚ್ಚಿನ ಮಾಹಿತಿಗೆ: https://www.kpsc.kar.nic.in/notification.html ವೆಬ್‌ಸೈಟ್‌ಗೆ ಭೇಟಿ ನೀಡಿ.

ವಿದ್ಯಾರ್ಹತೆ ಹೀಗಿರಬೇಕು

  • ಶೇ 85 ರಷ್ಟು ಹುದ್ದೆಗಳಿಗೆ - ಬಿಎಸ್ಸಿ (ಕೃಷಿ) ಅಥವಾ ಬಿಎಸ್ಸಿ (ಆನರ್ಸ್‌) ಕೃಷಿ (ಕೃಷಿ ಅಧಿಕಾರಿ / ಸಹಾಯಕ ಕೃಷಿ ಅಧಿಕಾರಿ ಎರಡು ಹುದ್ದೆಗಳಿಗೆ)

ಶೇ 15 ರಷ್ಟು ಹುದ್ದೆಗಳಿಗೆ ವಿದ್ಯಾರ್ಹತೆ ಹೀಗಿದೆ

  • ಬಿ.ಟೆಕ್ - ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ಅಥವಾ ಆಹಾರ ತಂತ್ರಜ್ಞಾನ ಅಥವಾ ಅಗ್ರಿಕಲ್ಚರ್ ಇಂಜಿನಿಯರಿಂಗ್ ಅಥವಾ ಜೈವಿಕ ತಂತ್ರಜ್ಞಾನ
  • ಬಿಎಸ್ಸಿ - ಕೃಷಿ ಮಾರುಕಟ್ಟೆ ಮತ್ತು ಸಹಕಾರ ಅಥವಾ ಅಗ್ರಿಕಲ್ಚರ್ ಇಂಜಿನಿಯರಿಂಗ್ ಅಥವಾ ಕೃಷಿ ಜೈವಿಕ ತಂತ್ರಜ್ಞಾನ
  • ಬಿಎಸ್ಸಿ ಆನರ್ಸ್- ಕೃಷಿ ಮಾರಾಟ ಮತ್ತು ಸಹಕಾರ ಅಥವಾ ಅಗ್ರಿ ಬಿಸಿನೆಸ್ ಮ್ಯಾನೇಜ್ಮೆಂಟ್

ನಿಗದಿತ ಕನಿಷ್ಠ, ಗರಿಷ್ಠ ವಯಸ್ಸಿನ ಅರ್ಹತೆ

  • ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು -18 ವರ್ಷ
  • ಅರ್ಜಿ ಸಲ್ಲಿಸಲು ಸಾಮಾನ್ಯ ಅರ್ಹತೆಯವರಿಗೆ ಗರಿಷ್ಠ ವಯಸ್ಸು- 38 ವರ್ಷ.
  • ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅರ್ಹತೆಯವರಿಗೆ ಗರಿಷ್ಠ ವಯಸ್ಸು - 41 ವರ್ಷ.
  • ಎಸ್​​ಸಿ/ಎಸ್​ಟಿ, ಪ್ರವರ್ಗ-1 ವರ್ಗದವರಿಗೆ ಗರಿಷ್ಠ ವಯಸ್ಸು - 43 ವರ್ಷ.

ಅರ್ಜಿ ಶುಲ್ಕ ವಿವರ ಹೀಗಿದೆ

  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 600 ರೂಪಾಯಿ
  • ಇತರೆ ಹಿಂದುಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 300 ರೂಪಾಯಿ
  • ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂಪಾಯಿ
  • ಎಸ್​​ಸಿ/ಎಸ್​ಟಿ, ಪ್ರವರ್ಗ-1 ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ

ನೇಮಕಾತಿ ವಿಧಾನ ಹೇಗಿರಲಿದೆ? (ಪರೀಕ್ಷಾ ವಿಧಾನ)

  • ಕನ್ನಡ ಭಾಷಾ ಪರೀಕ್ಷೆ - 150 ಅಂಕ
  • ಸಾಮಾನ್ಯ ಪತ್ರಿಕೆ : 300 ಅಂಕ - 01-30 ಗಂಟೆ
  • ನಿರ್ದಿಷ್ಟ ಪತ್ರಿಕೆ : 300 ಅಂಕ - 2 ಗಂಟೆ

ಸಿದ್ದರಾಮಯ್ಯಗೆ ಧನ್ಯವಾದ ಅರ್ಪಿಸಿದ ಕೃಷಿ ಸಚಿವ

ಕೃಷಿ ಇಲಾಖೆಯಲ್ಲಿ ಏಕಕಾಲದಲ್ಲಿ ಇಷ್ಟು ದೊಡ್ಡ ಮಟ್ಟದ ನೇಮಕಾತಿಗೆ ಅನುಮತಿ ಒದಗಿಸಿಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೃಷಿ ಸಚಿವರು ವಿಶೇಷ ಧನ್ಯವಾದ ಅರ್ಪಿಸಿದ್ದಾರೆ. ಈ‌ ನೇಮಕಾತಿಯಿಂದ ಇಲಾಖೆಯಲ್ಲಿ ಖಾಲಿ ಇದ್ದ ಮೂರನೇ ಒಂದರಷ್ಟು ಅಧಿಕಾರಿಗಳ ಹುದ್ದೆ ಭರ್ತಿಯಾದಂತಾಗಲಿದೆ. ಇದರಿಂದ ರೈತರಿಗೆ ಸೇವಾ ಸೌಲಭ್ಯ ಒದಗಿಸುವ ಪ್ರಕ್ರಿಯೆ ಸುಗಮವಾಗಲಿದೆ. ಬಾಕಿ ಉಳಿವ ಖಾಲಿ ಹುದ್ದೆಗಳ ಭರ್ತಿಗೂ ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಕೃಷಿ ಸಚಿವರು ತಿಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ