logo
ಕನ್ನಡ ಸುದ್ದಿ  /  ಕರ್ನಾಟಕ  /  Hassan Result: ಹಾಸನದಲ್ಲಿ ವಿವಾದಗಳ ನಡುವೆಯೂ ಪ್ರಜ್ವಲ್‌ ರೇವಣ್ಣ ವಿರುದ್ದ ಶ್ರೇಯಸ್‌ ಪಟೇಲ್‌ ವಿಜಯದ ನಗೆ, ಸಡಿಲಿಸಿದ ಗೌಡರ ಕುಟುಂಬದ ಹಿಡಿತ

Hassan Result: ಹಾಸನದಲ್ಲಿ ವಿವಾದಗಳ ನಡುವೆಯೂ ಪ್ರಜ್ವಲ್‌ ರೇವಣ್ಣ ವಿರುದ್ದ ಶ್ರೇಯಸ್‌ ಪಟೇಲ್‌ ವಿಜಯದ ನಗೆ, ಸಡಿಲಿಸಿದ ಗೌಡರ ಕುಟುಂಬದ ಹಿಡಿತ

Umesha Bhatta P H HT Kannada

Jun 04, 2024 06:29 PM IST

google News

ಹಾಸನದಲ್ಲಿ ಪ್ರಜ್ವಲ್‌ ರೇವಣ್ಣಗೆ ಸೋಲು ಆಗಿದೆ

    • ಹಾಸನ ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ 2024: ಜೆಡಿಎಸ್‌ ಪಾಲಿಗೆ ಭಾರೀ ಪ್ರತಿಷ್ಠೆ ಎನಿಸಿದ್ದ ಹಾಸನ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಹೊರ ಬಿದ್ದಿದೆ. ಜೆಡಿಎಸ್‌ ಹಾಗೂ ಬಿಜೆಪಿ ಸಮ್ಮಿಶ್ರ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಸೋಲು ಅನುಭವಿಸಿದ್ದಾರೆ. ಕಾಂಗ್ರೆಸ್‌ನ ಅಭ್ಯರ್ಥಿ ಶ್ರೇಯಸ್‌ ಪಟೇಲ್‌  42649 ಮತಗಳ ಅಂತರದಿಂದ ಗೆದ್ದಿದ್ದಾರೆ.
ಹಾಸನದಲ್ಲಿ ಪ್ರಜ್ವಲ್‌ ರೇವಣ್ಣಗೆ ಸೋಲು ಆಗಿದೆ
ಹಾಸನದಲ್ಲಿ ಪ್ರಜ್ವಲ್‌ ರೇವಣ್ಣಗೆ ಸೋಲು ಆಗಿದೆ

ಹಾಸನ: ಈ ಬಾರಿ ಲೋಕಸಭೆ ಚುನಾವಣೆ ಮುಗಿದ ನಂತರ ಭಾರೀ ಗಮನ ಸೆಳೆದದ್ದು ಹಾಸನ ಲೋಕಸಭಾ ಕ್ಷೇತ್ರ. ಮತದಾನ ಮುಗಿದ ಮರು ದಿನವೇ ಇಲ್ಲಿನ ಸಂಸದ ಪ್ರಜ್ವಲ್‌ ರೇವಣ್ಣ ವಿದೇಶಕ್ಕೆ ಹೋದರೆ, ಅದರ ಮರು ದಿನ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಯಿತು. ಆನಂತರ ಒಂದು ತಿಂಗಳು ಸತತ ವಿಚಾರಣೆ, ಬಂಧನ, ಪ್ರತಿಭಟನೆ, ರಾಜಕೀಯ ಜಟಾಪಟಿಗೆ ವೇದಿಕೆಯಾಗಿದ್ದ ಕ್ಷೇತ್ರವಿದು. ಈ ಕಾರಣದಿಂದ ಇಲ್ಲಿನ ಫಲಿತಾಂಶ ಇಡೀ ದೇಶದ ಮೇಲೆ ಗಮನ ನೆಟ್ಟಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರ ಮಾಡಿ ಹೋಗಿದ್ದು. ಆನಂತರ ರಾಹುಲ್‌ಗಾಂಧಿ ಅವರು ಮಾಸ್‌ ರೆಪಿಸ್ಟ್‌ ಎಂದು ಬರೆದಿದ್ದು ಚುನಾವಣೆ ವೇಳೆ ಭಾರೀ ಸದ್ದು ಮಾಡಿತ್ತು. ಇಂತಹ ಸನ್ನಿವೇಶದಲ್ಲಿ ಇಲ್ಲಿಂದ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜೆಡಿಎಸ್‌ನ ಪ್ರಜ್ವಲ್‌ ರೇವಣ್ಣ ಸೋಲು ಅನುಭವಿಸಿದ್ದಾರೆ. ಈ ಮೂಲಕ ಇದು ಜೆಡಿಎಸ್‌ ಭದ್ರಕೋಟೆ, ದೇವೇಗೌಡರ ಕುಟುಂಬದ ನೆಲೆಯಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.

ಸರಿಯಾಗಿ ಮೂರೂವರೆ ದಶಕದ ಹಿಂದೆ ತಾತಂದಿರ ಸ್ಪರ್ಧಾ ಕಣವಾಗಿದ್ದ ಇಲ್ಲಿ ಆಗ ದೇವೇಗೌಡರನ್ನು ಮಣಿಸಿದವರು ಪುಟ್ಟಸ್ವಾಮಿಗೌಡರು. ಈ ಬಾರಿ ದೇವೇಗೌಡರ ಮೊಮ್ಮಗ ಹಾಗೂ ಪುಟ್ಟಸ್ವಾಮಿಗೌಡರ ಮೊಮ್ಮಗ ಶ್ರೇಯಸ್‌ ಪಟೇಲ್‌ ಚುನಾವಣಾ ಅಖಾಡದಲ್ಲಿ ಮುಖಾಮುಖಿಯಾದರು. ಇದರಲ್ಲಿ ಪ್ರಜ್ವಲ್‌ ರೇವಣ್ಣ ಸೋತು ಶ್ರೇಯಸ್‌ ಹೊಸ ಇತಿಹಾಸವನ್ನು ಮೂರೂವರೆ ದಶಕದ ಬಳಿಕ ಬರೆದಿದ್ದಾರೆ.

ಮತದಾನಕ್ಕೂ ಮುನ್ನ ಪ್ರಜ್ವಲ್‌ ಪೆನ್‌ಡ್ರೈವ್‌ ಪ್ರಕರಣ ಮುನ್ನಲೆಗೆ ಬರಬಹುದು ಎಂದುಕೊಂಡಿದ್ದರೂ ದೂರು ನೀಡಿದ್ದರಿಂದ ಅಷ್ಟಾಗಿ ಸದ್ದಾಗಲಿಲ್ಲ. ಈ ಕಾರಣದಿಂದ ಪೆನ್‌ಡ್ರೈವ್‌ ಮತದಾನದ ಮೇಲೆ ಪರಿಣಾಮ ಬೀರಿದೆ ಎನ್ನುವುದನ್ನು ಫಲಿತಾಂಶ ತೋರಿಸಿದೆ. ಹಾಸನ ಕ್ಷೇತ್ರದಲ್ಲಿ ದೇವೇಗೌಡರ ಕುಟುಂಬದ ಹಿಡಿತ ಜೋರೇ ಇದೆ. ಅಲ್ಲದೇ ಇಡೀ ಜಿಲ್ಲೆಯಲ್ಲಿ ಜೆಡಿಎಸ್‌ ಶಾಸಕರ ಸಂಖ್ಯೆ ಹೆಚ್ಚಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಜೆಡಿಎಸ್‌ ಗೆದ್ದಿದೆ. ಕಾಂಗ್ರೆಸ್‌ ಎರಡು ಕಡೆ ಇದರೆ, ಇನ್ನೆರಡು ಕಡೆ ಬಿಜೆಪಿ ಗೆದ್ದಿದೆ. ಇಲ್ಲಿ ಎನ್‌ಡಿಎ ಬಲವೇ ಹೆಚ್ಚು.ಆದರೂ ಕೂಡ ಪ್ರಜ್ವಲ್‌ ರೇವಣ್ಣ ಇಲ್ಲಿ ಸೋತಿದ್ದಾರೆ. ಶ್ರೇಯಸ್‌ ಗೆಲುವು ಸಾಧಿಸಿದ್ದಾರೆ.

ಹಾಸನ ಲೋಕಸಭೆ ಎಲೆಕ್ಷನ್ ಕ್ವಿಕ್‌ ಲುಕ್‌

ಲೋಕಸಭಾ ಕ್ಷೇತ್ರದ ಹೆಸರು: ಹಾಸನ

ಅಭ್ಯರ್ಥಿಯ ಹೆಸರು ಮತ್ತು ಪಡೆದ ಮತಗಳು

ಶ್ರೇಯಸ್‌ ಪಟೇಲ್‌ (ಕಾಂಗ್ರೆಸ್‌):672988ಮತಗಳು

ಪ್ರಜ್ವಲ್‌ ರೇವಣ್ಣ (ಜೆಡಿಎಸ್): 630339 ( ಮತಗಳು

ಹಾಸನ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಪಡೆದ ಶ್ರೇಯಸ್‌ ಪಟೇಲ್‌ ಪರಿಚಯ

ಶ್ರೇಯಸ್‌ ಪಟೇಲ್‌ ಅವರು ಹಾಸನ ಜಿಲ್ಲೆಯ ಹೊಳೆ ನರಸೀಪುರದವರು. ಮಾಜಿ ಸಂಸದ, ಮಾಜಿ ಸಚಿವ ಪುಟ್ಟಸ್ವಾಮಿಗೌಡರ ಮೊಮ್ಮಗ. ಅನುಪಮಾ ಮಹೇಶ್‌ ಅವರ ಮಗ. 36 ವರ್ಷದ ಶ್ರೇಯಸ್‌ ಪದವೀಧರ. ದಶಕದಿಂದ ರಾಜಕೀಯದಲ್ಲಿ ದ್ದಾರೆ. ಕಳೆದ ಬಾರಿ ರೇವಣ್ಣ ವಿರುದ್ದ ಹೊಳೆನರಸೀಪುರದಲ್ಲಿ ಕಡಿಮೆ ಅಂತರದಲ್ಲಿ ಸೋತಿದ್ದರು.

ಚುನಾವಣಾ ಕಣ: ಹಾಸನ ಲೋಕಸಭಾ ಕ್ಷೇತ್ರ

ಹಾಸನ ಲೋಕಸಭಾ ಚುನಾವಣೆ ಹಾಗೂ ದೇವೇಗೌಡರು ಹಾಗೂ ಕುಟುಂಬದವವರಿಗೆ ಬಿಡಿಸಲಾರದು ನಂಟು. ದೇವೇಗೌಡರು ಇದೇ ಕ್ಷೇತ್ರದಿಂದ ಐದು ಬಾರಿ ಸಂಸದರಾಗಿದ್ದಾರೆ. ಸೋತಿದ್ದಾರೆ ಕೂಡ. ಕಾಂಗ್ರೆಸ್‌ ಕೂಡ ಇಲ್ಲಿ ಗೆಲುವು ಸಾಧಿಸಿದೆ. ದೇವೇಗೌಡರೊಂದಿಗೆ ರಾಜಕೀಯ ವಿರೋಧ ಹೊಂದಿದ್ದ ಪುಟ್ಟಸ್ವಾಮಿಗೌಡ ಹಾಗೂ ಎಚ್‌.ಸಿ.ಶ್ರೀಕಂಠಯ್ಯ ಕೂಡ ಸಂಸದರಾಗಿದ್ದಾರೆ. ಆದರೆ ದೇವೇಗೌಡರು ಹೆಚ್ಚು ಬಾರಿ ಹಾಗೂ ಜನತಾದಳವೇ ಅನೇಕ ಬಾರಿ ಇಲ್ಲಿ ಗೆದ್ದಿದೆ. ಈಗ ಪ್ರಜ್ವಲ್‌ ರೇವಣ್ಣ ಇಲ್ಲಿನ ಸಂಸದ. ಕಳೆದ ಬಾರಿ ಹಾಲಿ ಶಾಸಕ, ಬಿಜೆಪಿಯಿಂದ ಸ್ಪರ್ಧಿಸಿದ್ದ ಎ ಮಂಜು ವಿರುದ್ದ ಇಲ್ಲಿ 676,606 ಮತ ಪಡೆದು ಗೆದ್ದಿದ್ದರು ಪ್ರಜ್ವಲ್‌. ಗೆಲುವಿನ ಅಂತರವೇ 1,41,224 ರಷ್ಟಿತ್ತು.

(Disclaimer: ಗಮನಿಸಿ; ಇದು ಮತ ಎಣಿಕೆ ಕೇಂದ್ರಗಳಲ್ಲಿ ಲಭ್ಯವಿರುವ ಮಾಹಿತಿ ಆಧರಿಸಿ ಪ್ರಕಟಿಸಿದ ಬರಹ. ಚುನಾವಣಾ ಆಯೋಗವು ಅಧಿಕೃತವಾಗಿ ಅಂಕಿಅಂಶಗಳನ್ನು ಪ್ರಕಟಿಸಿದ ನಂತರ ಮತಗಳ ಸಂಖ್ಯೆ ಏರುಪೇರಾಗಬಹುದು. ಅಂತಿಮ ಫಲಿತಾಂಶದ ವಿವರವನ್ನು ಇದೇ ಬರಹದಲ್ಲಿ ಅಪ್‌ಡೇಟ್ ಮಾಡಲಾಗುವುದು.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ