Heart Attack to Minister Umesh Katti- ಸಚಿವ ಉಮೇಶ್ ಕತ್ತಿಗೆ ಹೃದಯಾಘಾತ; ಆಸ್ಪತ್ರೆಗೆ
Sep 06, 2022 11:44 PM IST
ಕರ್ನಾಟಕ ಅರಣ್ಯ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ (HT)
- Minister Umesh Katti: ಕರ್ನಾಟಕ ಅರಣ್ಯ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ ಅವರಿಗೆ ಹೃದಯಾಘಾತವಾಗಿದ್ದು, ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಬೆಂಗಳೂರು: ಸಚಿವ ಉಮೇಶ್ ಕತ್ತಿ (61) ಅವರಿಗೆ ಹೃದಯಾಘಾತ ಆಗಿದ್ದು, ಅವರನ್ನು ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಡಾಲರ್ಸ್ ಕಾಲನಿಯ ನಿವಾಸದಲ್ಲಿದ್ದಾಗ ಹೃದಯಾಘಾತ ಸಂಭವಿಸಿದೆ. ರಾತ್ರಿ ಹತ್ತು ಗಂಟೆಗೆ ಎದೆನೋವು ಕಾಣಿಸಿಕೊಂಡು, ಹೃದಯಾಘಾತ ಆಗಿತ್ತು. ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಈ ರೀತಿ ಆಗಿತ್ತು. ಕೂಡಲೇ ಅವರನ್ನು ಸಮೀಪದ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವ ಉಮೇಶ್ ಕತ್ತಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಬೆಂಗಳೂರು ಮಳೆಹಾನಿ ಪ್ರದೇಶಗಳ ಪರಿಶೀಲನೆ ಮುಗಿಸಿದ ಬಳಿಕ ಸಿಎಂ ಬೊಮ್ಮಾಯಿ, ರಾಮಯ್ಯ ಆಸ್ಪತ್ರೆಗೆ ತೆರಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಎಂಎಸ್ ರಾಮಯ್ಯ ಆಸ್ಪತ್ರೆಯ ಹೆಲ್ತ್ ಬುಲೆಟಿನ್‌ಗಾಗಿ ಎಲ್ಲರೂ ಕಾಯುತ್ತಿದ್ದಾರೆ.
ಏನಾಗಿತ್ತು ಮನೆಯಲ್ಲಿ…
ನಿನ್ನೆ ಹುಕ್ಕೇರಿಯಿಂದ ಬಂದಿದ್ದ ಉಮೇಶ್ ಕತ್ತಿ ಅವರು, ಇಂದು ಇಲಾಖೆಯ ವಿವಿಧ ಸಭೆಗಳನ್ನು ಅಟೆಂಡ್ ಮಾಡಿದ್ದರು. ಊಟದ ಬಳಿಕ ಮನೆಯಲ್ಲಿ ಬಾತ್‌ರೂಮ್‌ಗೆ ಹೋಗಿದ್ದ ಉಮೇಶ್ ಕತ್ತಿ ಅವರು ಕೆಲ ಹೊತ್ತಾದರೂ ವಾಪಸ್ ಬಂದಿರಲಿಲ್ಲ. ಸಂದೇಹ ಗೊಂಡು ಬಾತ್ ರೂಮ್ ಪರಿಶೀಲಿಸಿದಾಗ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಕಂಡುಬಂದಿತ್ತು. ಕುಸಿದು ಬಿದ್ದ ಸ್ಥಿತಿಯಲ್ಲಿದ್ದ ಅವರನ್ನು ಕೂಡಲೇ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ. ಈಗಾಗಲೇ ಎರಡು ಬಾರಿ ಅವರಿಗೆ ಹೃದಯಾಘಾತವಾಗಿದ್ದು, ಸ್ಟಂಟ್ ಅಳವಡಿಸಲಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಮೇಶ್ ಕತ್ತಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಆರೋಗ್ಯದ ಬಗ್ಗೆ ಕಾಳಜಿವಹಿಸುವಂತೆ ಈ ಹಿಂದೆಯೇ ಡಾಕ್ಟರ್‌ಗಳು ಉಮೇಶ್ ಕತ್ತಿ ಅವರಿಗೆ ಎಚ್ಚರಿಕೆ ನೀಡಿದ್ದರು. ಸಚಿವ ಉಮೇಶ್ ಕತ್ತಿಗೆ ಹೃದಯಾಘಾತ ಹಿನ್ನೆಲೆ ಸುದ್ದಿ ತಿಳಿಯುತ್ತಿದ್ದಂತೆ ಉಮೇಶ್ ಕತ್ತಿ ಕುಟುಂಬಸ್ಥರು ಹುಕ್ಕೇರಿಯಿಂದ ಬೆಂಗಳೂರಿಗೆ ಪ್ರಯಾಣಿಸಿದ್ದಾರೆ. ಸಹೋದರ ಮಾಜಿ ಸಂಸದ ರಮೇಶ್ ಕತ್ತಿ, ಮತ್ತು ಕುಟುಂಬಸ್ಥರ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಹೃದಯಾಘಾತ ಸಂಬಂಧಿತ ಕೆಲವು ಸುದ್ದಿಗಳು
1) Causes of sudden heart attack: ಹೃದಯಾಘಾತದ ಸಮಸ್ಯೆ 30 ರಿಂದ 50 ವರ್ಷ ವಯಸ್ಸಿನವರಲ್ಲಿ ಇತ್ತೀಚೆಗೆ ಸಾಮಾನ್ಯವಾಗಿ ಕಂಡುಬರುತ್ತಿದೆ. ಅನೇಕ ಬಾರಿ ಒಂಟಿತನ, ಒತ್ತಡ, ಭಾವನಾತ್ಮಕ ಯಾತನೆ, ಮದ್ಯಪಾನ, ಧೂಮಪಾನ, ಸರಿಯಾದ ವ್ಯಾಯಾಮದ ಕೊರತೆ, ಸರಿಯಾದ ಆಹಾರದ ಕೊರತೆ ಹೃದಯಾಘಾತಕ್ಕೆ ಕಾರಣ ಎನ್ನುತ್ತಾರೆ ವೈದ್ಯಕೀಯ ಪರಿಣತರು. - What is Sudden Heart Attack: ಹಠಾತ್ ಹೃದಯಾಘಾತಕ್ಕೇನು ಕಾರಣ? ಡಾಕ್ಟರ್ಸ್ ಹೇಳೋದೇನು?
2) ಧೂಮಪಾನ ಮಾಡಲ್ಲ. ಚೆನ್ನಾಗೇ ಇದ್ದರು. ಆರೋಗ್ಯವೂ ಚೆನ್ನಾಗೇ ಇತ್ತು. ಆದರೂ ಅವರಿಗೇಕೆ ಹೃದಯಾಘಾತವಾಯಿತು? (Why do non-smokers get heart attacks?). ಅನೇಕ ಸಂದರ್ಭಗಳಲ್ಲಿ ಹೀಗಾಗವುದಿದೆ. ಈ ಪ್ರಶ್ನೆಗಳು ಸಹಜವಾಗಿಯೇ ಕಾಡಿದ್ದಿದೆ. ಸಂಶೋಧಕರು ಇದಕ್ಕೆ ಉತ್ತರ ಕಂಡುಕೊಂಡು, ಅಧ್ಯಯನ ವರದಿಯಲ್ಲಿ ಅದನ್ನು ಪ್ರಕಟಿಸಿದ್ದಾರೆ ಕೂಡ. ಆ ವರದಿಯ ವಿವರ ಇಲ್ಲಿದೆ. Smoking and Health Disease : ಧೂಮಪಾನಿ ಅಲ್ದಿದ್ರೂ heart attack ಆಗುವುದೇಕೆ?