ಆನ್‌ಲೈನ್‌ನಲ್ಲಿ ಜನನ ಪ್ರಮಾಣ ಪತ್ರ ಪಡೆಯುವುದು ಹೇಗೆ? ಕರ್ನಾಟಕ ಸೇವಾ ಸಿಂಧು ಪೋರ್ಟಲ್‌ನಲ್ಲಿ ಹೀಗೆ ಅರ್ಜಿ ಸಲ್ಲಿಸಿ
Nov 09, 2024 03:29 PM IST
ಕರ್ನಾಟಕದಲ್ಲಿ ಆನ್‌ಲೈನ್‌ನಲ್ಲಿ ಜನ್ಮ ದೃಢೀಕರಣ ಪ್ರಮಾಣ ಪತ್ರ ಪಡೆಯುವುದು ಹೇಗೆ? ಹಂತಹಂತದ ಮಾರ್ಗದರ್ಶಿ
- ಕರ್ನಾಟಕದ ಸೇವಾ ಸಿಂಧು ಪೋರ್ಟಲ್‌ನಲ್ಲಿ (Karnataka Seva Sindhu Portal) ಅತ್ಯಂತ ಸುಲಭವಾಗಿ ಜನ್ಮ ದೃಢೀಕರಣ ಪ್ರಮಾಣ ಪತ್ರಕ್ಕೆ (birth certificate online) ಅರ್ಜಿ ಸಲ್ಲಿಸಬಹುದು. ಇಲ್ಲಿ ಈ ಕುರಿತು ಹಂತಹಂತದ ಮಾರ್ಗದರ್ಶಿ ನೀಡಲಾಗಿದೆ.
ಮಗು ಹುಟ್ಟಿದ ತಕ್ಷಣ ಜನ್ಮ ದೃಢೀಕರಣ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಬೇಕು. ಸಾಕಷ್ಟು ಜನರು ತಮ್ಮ ಊರಿನಲ್ಲಿರುವ ಸಕಾಲ ಅಥವಾ ಇತರೆ ಸರಕಾರಿ ವಿಭಾಗಗಳ ಮೂಲಕ ಜನ್ಮ ದೃಢೀಕರಣ ಪ್ರಮಾಣ ಪತ್ರ ಪಡೆಯಬಹುದು. ಇದಕ್ಕಿಂತ ಸುಲಭವಾಗಿ ಆನ್‌ಲೈನ್ ಮೂಲಕವೇ ಜನ್ಮ ದೃಢೀಕರಣ ಪ್ರಮಾಣ ಪತ್ರ ಪಡೆಯಬಹುದು. ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಕರ್ನಾಟಕದ ಸೇವಾ ಸಿಂಧು ಪೋರ್ಟಲ್‌ನಲ್ಲಿ (Karnataka Seva Sindhu Portal) ಅತ್ಯಂತ ಸುಲಭವಾಗಿ ಜನ್ಮ ದೃಢೀಕರಣ ಪ್ರಮಾಣ ಪತ್ರಕ್ಕೆ (birth certificate online) ಅರ್ಜಿ ಸಲ್ಲಿಸಬಹುದು. ಕರ್ನಾಟಕದಲ್ಲಿ ಆನ್‌ಲೈನ್‌ನಲ್ಲಿ ಜನ್ಮ ದೃಢೀಕರಣ ಪ್ರಮಾಣ ಪತ್ರ ಪಡೆಯುವುದು ಹೇಗೆಂಬ ಹಂತಹಂತದ ಮಾರ್ಗದರ್ಶಿಯನ್ನು ಇಲ್ಲಿ ನೀಡಲಾಗಿದೆ.
ಜನ್ಮ ದೃಢೀಕರಣ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲಿಗೆ sevasindhu.karnataka.gov.in ವೆಬ್‌ಸೈಟ್‌ಗೆ ಹೋಗಿ. ಆ ವೆಬ್‌ಸೈಟ್‌ನ ಮುಖಪುಟದಲ್ಲಿರುವ ಡಿಪಾರ್ಟ್‌ಮೆಂಟ್ ಮತ್ತು ಸರ್ವೀಸ್ ಕ್ಲಿಕ್ ಮಾಡಿ.
- ಅಲ್ಲಿ ಪ್ಲ್ಯಾನಿಂಗ್ ಪ್ರೋಗ್ರಾಂ ಮಾನಿಟರಿಂಗ್ ಆಂಡ್ ಸ್ಟಟಿಸ್ಟಿಕ್ಸ್ ಡಿಪಾರ್ಟ್‌ಮೆಂಟ್ ಅನ್ನು ಕ್ಲಿಕ್ ಮಾಡಿ. ಅಲ್ಲಿ ಬರ್ತ್ ಸರ್ಟಿಫಿಕೇಟ್ ಕ್ಲಿಕ್ ಮಾಡಿ. ಇದರ ಬದಲು ಅಲ್ಲೇ ಮೇಲೆ ಇರುವ ಸರ್ಚ್ ಆಯ್ಕೆಯಲ್ಲಿ ಬರ್ತ್ ಸರ್ಟಿಫಿಕೇಟ್ ಎಂದೂ ಹುಡುಕಾಟ ನಡೆಸಬಹುದು.
- ಅಪ್ಲೈ ಆನ್‌ಲೈನ್/ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಆಯ್ಕೆಯನ್ನು ಕ್ಲಿಕ್ ಮಾಡಿ.
- ಈ ವೆಬ್‌ಸೈಟ್‌ನಲ್ಲಿ ನಿಮ್ಮ ಖಾತೆ ತೆರೆಯಿರಿ. ಯೂಸರ್ನೇಮ್, ಪಾಸ್ವರ್ಡ್/ಓಟಿಪಿ, ಕ್ಯಾಪ್ಚಾ ನಮೂದಿಸಿ. ಲಾಗ್ ಇನ್ ಬಟನ್ ಕ್ಲಿಕ್ ಮಾಡಿ.
- ನೀವು ಈಗಾಗಲೇ ನೋಂದಣಿ ಸಂಖ್ಯೆ ಪಡೆದಿದ್ದರೆ ಆ ಸಂಖ್ಯೆ ನೀಡಿ ಸರ್ಟಿಫಿಕೇಟ್ ಪಡೆಯಬಹುದು.
- ಈ ಹಿಂದೆ ನೋಂದಣಿ ಸಂಖ್ಯೆ ಪಡೆಯದೆ ಇದ್ದರೆ ಇದೇ ಡೈಲಾಗ್ ಆಯ್ಕೆ ಮುಂದೆ ನೋ ಕ್ಲಿಕ್ ಮಾಡಿ. ಇದಾದ ಬಳಿಕ ಜನ್ಮ ದಿನಾಂಕ, ಮಗುವಿನ ಹೆಸರು, ತಂದೆಯ ಹೆಸರು, ತಾಯಿಯ ಹೆಸರು ನೀಡಿ. ಸರ್ಚ್ ಕ್ಲಿಕ್ ಮಾಡಿ. ವಿವರ ದೊರಕುತ್ತದೆ.
- ಅಲ್ಲಿ ನೀಡಲಾದ ವಿವರಗಳನ್ನು ದೃಢೀಕರಿಸಿ. ವಿವರಗಳು ಸರಿಯಿದ್ದರೆ ಯೆಸ್ ಕ್ಲಿಕ್ ಮಾಡಿ. ಸರಿ ಇಲ್ಲದೆ ಇದ್ದರೆ ನೋ ಕ್ಲಿಕ್ ಮಾಡಿ. ಇದಾದ ಬಳಿಕ ಎಷ್ಟು ಪ್ರಿಂಟ್ ಬೇಕು ಎನ್ನುವುದನ್ನು ಆಯ್ಕೆ ಮಾಡಿ. ಕ್ಯಾಪ್ಚಾ ನಮೂದಿಸಿ ಬಟನ್ ಕ್ಲಿಕ್ ಮಾಡಿ.
- ಎಲ್ಲಾ ವಿವರಗಳನ್ನೂ ದೃಢೀಕರಿಸಿದ ಬಳಿಕ ಪೇಮೆಂಟ್ ಆಯ್ಕೆ ಕ್ಲಿಕ್ ಮಾಡಿ. ಆನ್‌ಲೈನ್ ಪಾವತಿ ವಿಧಾನಗಳ ಮೂಲಕ ಶುಲ್ಕ ಪಾವತಿ ಮಾಡಿ.
- ಪಾವತಿ ಯಶಸ್ವಿಯಾದ ನಂತರ ಅಕ್ನಾಲಜ್ಮೆಂಟ್ ದೊರಕುತ್ತದೆ. ಅದನ್ನು ಡೌನ್‌ಲೋಡ್ ಮಾಡಿಕೊಳ್ಳಿ.
ಆನ್‌ಲೈನ್‌ನಲ್ಲಿ ಜನ್ಮ ದೃಢೀಕರಣ ಪ್ರಮಾಣ ಪತ್ರ ಡೌನ್‌ಲೋಡ್ ಮಾಡುವುದು ಹೇಗೆ?
- sevasindhu.karnataka.gov.in ವೆಬ್‌ಸೈಟ್‌ಗೆ ಹೋಗಿ.
- ಯೂಸರ್ ನೇಮ್ ಮತ್ತು ಪಾಸ್ವರ್ಡ್ ನೀಡಿ ಲಾಗಿನ್ ಆಗಿ. ಅರ್ಜಿ ಸಲ್ಲಿಸಿದಾಗ ನೀಡಿದ ಲಾಗಿನ್ ವಿವರ ನಮೂದಿಸಿ.
- ಅಲ್ಲಿ View Status of Application ಕ್ಲಿಕ್ ಮಾಡಿ. ಇದಾದ ಬಳಿಕ Track application status ಕ್ಲಿಕ್ ಮಾಡಿ. ಅಲ್ಲಿ ಅರ್ಜಿ ರೆಫರೆನ್ಸ್ ನಂಬರ್ ಡೌನ್‌ಲೋಡ್ ಮಾಡಿ. ಈ ಸಂಕ್ಯೆಯು ಅಕ್ನಾಲಜ್‌ಮೆಂಟ್‌ನಲ್ಲಿ ಅಥವಾ ಎಸ್‌ಎಂಎಸ್ ರೂಪದಲ್ಲಿ ನಿಮಗೆ ತಲುಪಿರುತ್ತದೆ.
- ಜನ್ಮ ದೃಢೀಕರಣ ಪ್ರಮಾಣ ಪತ್ರ ರೆಡಿಯಾಗಿದ್ದರೆ ಅಲ್ಲಿ"ಡೆಲಿವರ್ಡ್" ಎಂದು ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿದರೆ ಡೌನ್‌ಲೋಡ್ ಆಯ್ಕೆ ಕಾಣುತ್ತದೆ. ಡೌನ್‌ಲೋಡ್ ಮಾಡಿಕೊಳ್ಳಿ.
ಜನನ ಪ್ರಮಾಣ ಪತ್ರ PDF
ಜನನ ಪ್ರಮಾಣ ಪತ್ರಕ್ಕೆ ಆನ್‌ಲೈನ್ ಮೂಲಕ ಹೇಗೆ ಅರ್ಜಿ ಸಲ್ಲಿಸುವುದು ಎಂದು ಹಂತಹಂತದ ಮಾರ್ಗದರ್ಶಿಯನ್ನು ಈ ಕೆಳಗೆ ಪಿಡಿಎಫ್‌ನಲ್ಲಿ ನೀಡಲಾಗಿದೆ. ಡೌನ್‌ಲೋಡ್ ಮಾಡಿಕೊಳ್ಳಿ.
ಜನನ ಪ್ರಮಾಣ ಪತ್ರವು ಅತ್ಯಂತ ಅಗತ್ಯ ದಾಖಲೆಯಾಗಿದ್ದು, ಮಗು ಜನಿಸಿದ ನಿರ್ದಿಷ್ಟ ದಿನಗಳೊಳಗೆ ಜಿಲ್ಲೆಯ ಸಂಖ್ಯಾಶಾಸ್ತ್ರದ ಅಧಿಕಾರಿಗಳನ್ನು ನೀವು ಭೇಟಿ ಮಾಡಬೇಕಾಗುತ್ತದೆ ಮತ್ತು ನಿಮ್ಮ ನೋಂದಣಿ ವಿವರಗಳ ವಿವರಗಳನ್ನು ಪರಿಶೀಲಿಸಿ ಆದ್ದರಿಂದ ನೀವು ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಬಹುದು. ಪ್ರಮಾಣಪತ್ರದ ನಕಲುಗಾಗಿ ಸಂಖ್ಯಾಶಾಸ್ತ್ರದ ಕಚೇರಿಯಲ್ಲಿ ನೀವು 5 ರೂಪಾಯಿ ಶುಲ್ಕ (ಶುಲ್ಕ ಕಾಲಕಾಲಕ್ಕೆ ಬದಲಾಗುತ್ತದೆ, ಇದು ಮಾಹಿತಿಯಷ್ಟೇ) ಪಾವತಿಸಬೇಕಾಗುತ್ತದೆ. ಅವರು ದಾಖಲೆಗಳಲ್ಲಿ ಎಲ್ಲಾ ವಿವರಗಳನ್ನು ಪರೀಕ್ಷಿಸುತ್ತಿದ್ದಾರೆ ಮತ್ತು ಅದಕ್ಕೆ ತಕ್ಕಂತೆ ಅವರು ಪ್ರಮಾಣಪತ್ರವನ್ನು ತಯಾರು ಮಾಡುತ್ತಾರೆ. ಪ್ರಮಾಣಪತ್ರವನ್ನು ನೀಡುವ ಮೊದಲು ನೀವು ಕೆಲವು ದಾಖಲೆಗಳನ್ನು ಪುರಾವೆಯಾಗಿ ಕೊಂಡೊಯ್ಯಬೇಕಾಗುತ್ತದೆ. ಈಗಿನ ಆನ್‌ಲೈನ್ ಕಾಲದಲ್ಲಿ ಆನ್‌ಲೈನ್ ಮೂಲಕ ಜನನ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವುದು ಅತ್ಯಂತ ಸುಲಭವಾಗಿದೆ. ಇದಕ್ಕಾಗಿ ಈ ಮೇಲೆ ನೀಡಲಾದ ಮಾರ್ಗದರ್ಶಿಯಂತೆ ಅರ್ಜಿ ಸಲ್ಲಿಸಿ.