logo
ಕನ್ನಡ ಸುದ್ದಿ  /  ಕರ್ನಾಟಕ  /  Siddaramiah Dress Code: ಸಿದ್ದರಾಮಯ್ಯ ಡ್ರೆಸ್ ಕೋಡ್ ಹೇಗಿರುತ್ತೆ; ಸಿಎಂ ಪ್ರಮಾಣವಚನದ ಎರಡು ಬಾರಿಯೂ ರೇಷ್ಮೆ ಬಟ್ಟೆಯಲ್ಲಿ ಮಿಂಚಿದ ನಾಯಕ

Siddaramiah Dress Code: ಸಿದ್ದರಾಮಯ್ಯ ಡ್ರೆಸ್ ಕೋಡ್ ಹೇಗಿರುತ್ತೆ; ಸಿಎಂ ಪ್ರಮಾಣವಚನದ ಎರಡು ಬಾರಿಯೂ ರೇಷ್ಮೆ ಬಟ್ಟೆಯಲ್ಲಿ ಮಿಂಚಿದ ನಾಯಕ

HT Kannada Desk HT Kannada

May 20, 2023 06:11 PM IST

google News

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರೇಷ್ಮೆ ಬಟ್ಟೆಯಲ್ಲಿ ಮಿಂಚಿದ್ದಾರೆ.

  • ಈ ಹಿಂದೆ ಅಂದರೆ 2013ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗಲೂ ಸಿದ್ದರಾಮಯ್ಯ ಅವರು ರೇಷ್ಮೆ ಬಟ್ಟೆಯಲ್ಲಿ ಮಿಂಚಿದ್ದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರೇಷ್ಮೆ ಬಟ್ಟೆಯಲ್ಲಿ ಮಿಂಚಿದ್ದಾರೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರೇಷ್ಮೆ ಬಟ್ಟೆಯಲ್ಲಿ ಮಿಂಚಿದ್ದಾರೆ.

ಬೆಂಗಳೂರು: ಕೆಲ ರಾಜಕೀಯ ನೇತಾರರು ತಮ್ಮ ಡ್ರೆಸ್ ಕೋಡ್‌ನಿಂದಲೇ (Dress Code) ಗಮನ ಸೆಳೆಯುತ್ತಾರೆ. ಅದರಲ್ಲಿ ಕರ್ನಾಟಕದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ (Karnataka New CM Siddaramaiah) ಕೂಡ ತಮ್ಮ ವಿಶೇಷ ಡ್ರೆಸ್ ಸೆನ್ಸ್‌ನಿಂದಲೇ ಆಕರ್ಷಕರಾಗಿ ಕಾಣುತ್ತಾರೆ.

ಇಂದು (ಮೇ 20, ಶನಿವಾರ) ಮುಖ್ಯಮಂತ್ರಿಯಾಗಿ 2ನೇ ಬಾರಿ ಅಧಿಕಾರ ವಹಿಸಿಕೊಂಡ ಸಿದ್ದರಾಮಯ್ಯ ಅವರು ರೇಷ್ಮೆ ಅಂಗಿ, ಪಂಚೆ ಹಾಗೂ ಶಲ್ಯ ಧರಿಸಿದ್ದರು. ದಶಕದ ಹಿಂದೆ ಮೊದಲ ಬಾರಿ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವಾಗಲೂ ಇದೇ ಶೈಲಿ, ಬಣ್ಣದ ಡ್ರೆಸ್ ಅನ್ನು ಸಿದ್ದರಾಮಯ್ಯ ಧರಿಸಿದ್ದು ವಿಶೇಷ.

ಸಿದ್ದರಾಮಯ್ಯ ಅವರು ಮೂರು ದಶಕಕ್ಕೂ ಹೆಚ್ಚು ಕಾಲದಿಂದ ಬಳಸುತ್ತಿರುವುದು ಪಂಚೆ ಹಾಗೂ ಬಿಳಿ ಧೋತಿಯನ್ನೇ. ಅದರ ಮೇಲೊಂದು ಶಲ್ಯ ಇದ್ದರೆ ಅದು ಸಿದ್ದರಾಮಯ್ಯ ಎನ್ನುವಷ್ಟರ ಮಟ್ಟಿಗೆ ಜನಪ್ರಿಯವೂ ಆಗಿದೆ. ಗರಿ ಗರಿ ಪಂಚೆ ಹಾಗೂ ಅಂಗಿಯಿಂದ ಸದಾ ಗಮನ ಸೆಳೆಯುವ ಸಿದ್ದರಾಮಯ್ಯ ಅವರ ಡ್ರೆಸ್‌ನ ಗುಟ್ಟೇನು ಎನ್ನುವುದೂ ಕುತೂಹಲವೇ.

ಮೈಸೂರಿನಲ್ಲಿ ಕಾಲೇಜು ದಿನಗಳು, ನಂತರ ವಕೀಲಿರಾಗಿ ವೃತ್ತಿ ಜೀವನ ಮುಂದುವರೆಸಿದ್ದಾಲೂ ಸಿದ್ದರಾಮಯ್ಯ ಪ್ಯಾಂಟ್ ಹಾಗೂ ಅಂಗಿ ಧರಿಸುತ್ತಿದ್ದರು. ಆನಂತರ ರಾಜಕೀಯಕ್ಕೆ ಬಂದ ನಂತರ ಬಿಳಿ ಅಂಗಿಯೊಂದಿಗೆ ಪ್ಯಾಂಟ್ ಇರುತ್ತಿತ್ತು. ಶಾಸಕ, ಸಚಿವರಾದ ನಂತರ ಇದೇ ಡ್ರೆಸ್ ಕೋಡ್ ಮುಂದುವರೆದಿತ್ತು.

ಬಜೆಟ್ ಮಂಡಿಸುವಾಗ ವಿಶೇಷ ಸೂಟ್‌ನಲ್ಲೂ ಆಗಮಿಸಿದ್ದೂ ಇದೆ. 90ರ ದಶಕದ ಕೊನೆಯಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಚರ್ಮ ಸಂಬಂಧಿ ಸಮಸ್ಯೆಯಿಂದ ಪಂಚೆ ಹಾಗೂ ಜುಬ್ಬಾಕ್ಕೆ ತಮ್ಮ ಉಡುಪಿನ ಶೈಲಿಯನ್ನು ಬದಲಿಸಿಕೊಂಡರು. ಇದಕ್ಕೆ ವೈದ್ಯರು ನೀಡಿದ ಸಲಹೆಯೂ ಕಾರಣವಾಗಿತ್ತು.

ಆನಂತರ 2ನೇ ಬಾರಿ ಉಪ ಮುಖ್ಯಮಂತ್ರಿಯಾಗಿ, ಪ್ರತಿಪಕ್ಷ ನಾಯಕರಾಗಿದ್ದಲೂ ಇದೇ ಡ್ರೆಸ್ ಕೋಡ್ ಮುಂದುವರೆಯಿತು. ಮೊದಲ ಬಾರಿ ಸಿಎಂ ಆಗಿದ್ದ ಅಂದರೆ 2015ರಲ್ಲಿ ಒಂದೆರಡು ಬಾರಿ ವಿದೇಶ ಪ್ರವಾಸ ಹೋಗಿದ್ದಾಗ ಸೂಟ್ ಧರಿಸಿ ಸಮಾರಂಭದಲ್ಲಿ ಸಿದ್ದರಾಮಯ್ಯ ಪಾಲ್ಗೊಂಡಿದ್ದೂ ಇದೆ.

ವಾರಾಂತ್ಯದಲ್ಲಿ ಮೈಸೂರಿಗೆ ಬಂದಾಗ ಇಲ್ಲಿ ಬೆಳಗಿನ ವಾಯುವಿಹಾರ ಮಾಡುವುದು ಅವರ ವಾಡಿಕೆ. ಆಗ ಟ್ರಾಕ್ ಸೂಟ್, ಟಿ ಶರ್ಟ್ ಧರಿಸಿದ್ದೂ ಇದೆ. ಹಾಗೆಂದು ಸಾರ್ವಜನಿಕವಾಗಿ ಸಭೆ, ಸಮಾರಂಭಗಳಲ್ಲಿ ಅವರ ಡ್ರೆಸ್ ಬದಲಾಗುವುದಿಲ್ಲ ಎಂದು ಅವರ ಆಪ್ತರೊಬ್ಬರು ವಿವರಿಸಿದ್ದಾರೆ.

ಅಂದಹಾಗೆ ಸಿದ್ದರಾಮಯ್ಯ ಅವರು ಬೆಂಗಳೂರಿನ ಖಾದಿ ಗ್ರಾಮೋದ್ಯೋಗ ಭಂಡಾರದಲ್ಲಿಯೇ ಪಂಚೆ, ಅಂಗಿ ಮಾದರಿಯನ್ನು ಜುಬ್ಬಾ ಖರೀದಿಸುವುದು. 2ನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭಕ್ಕೆ ಇಲ್ಲಿಂದಲೇ ಡ್ರೆಸ್ ಖರೀದಿಸಿದ್ದು. ಇನ್ನು ಆಲಂಕಾರಕ್ಕೆ ಸಿದ್ದರಾಮಯ್ಯ ಒತ್ತು ನೀಡುವುದಿಲ್ಲ. ಸಹಜವಾಗಿಯೇ ಇದ್ದು ಒಂದು ನಗುವಿನೊಂದಿಗೆ ಜತೆಯಲ್ಲಿದ್ದವರಲ್ಲಿ ಚೈತನ್ಯ ತುಂಬುತ್ತಾರೆ ಸಿದ್ದರಾಮಯ್ಯ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ