logo
ಕನ್ನಡ ಸುದ್ದಿ  /  ಕರ್ನಾಟಕ  /  Indian Railways: ಬೆಂಗಳೂರು ಮೈಸೂರು ಪ್ಯಾಸೆಂಜರ್‌ ವಿಶೇಷ ರೈಲು ಡಿಸೆಂಬರ್‌ನಲ್ಲಿ 4 ದಿನ ಸಂಚಾರ ಒಂದು ಗಂಟೆ ಕಾಲ ವಿಳಂಬ

Indian Railways: ಬೆಂಗಳೂರು ಮೈಸೂರು ಪ್ಯಾಸೆಂಜರ್‌ ವಿಶೇಷ ರೈಲು ಡಿಸೆಂಬರ್‌ನಲ್ಲಿ 4 ದಿನ ಸಂಚಾರ ಒಂದು ಗಂಟೆ ಕಾಲ ವಿಳಂಬ

Umesha Bhatta P H HT Kannada

Dec 04, 2024 06:43 PM IST

google News

ಬೆಂಗಳೂರು ಮೈಸೂರು ನಡುವಿನ ಪ್ಯಾಸೆಂಜರ್‌ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ.

    • Indian Railways: ಬೆಂಗಳೂರು ಹಾಗೂ ಮೈಸೂರು ನಗರಗಳ ನಡುವೆ ಸಂಚರಿಸುವ ವಿಶೇಷ ಪ್ಯಾಸೆಂಜರ್‌ ರೈಲು ಡಿಸೆಂಬರ್‌ನಲ್ಲಿ ನಾಲ್ಕು ದಿನ ವಿಳಂಬವಾಗಿ ಹೊರಡಲಿದೆ.
ಬೆಂಗಳೂರು ಮೈಸೂರು ನಡುವಿನ ಪ್ಯಾಸೆಂಜರ್‌ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ.
ಬೆಂಗಳೂರು ಮೈಸೂರು ನಡುವಿನ ಪ್ಯಾಸೆಂಜರ್‌ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ.

ಬೆಂಗಳೂರು: ಬೆಂಗಳೂರು ಹಾಗೂ ಮೈಸೂರು ನಡುವೆ ನಿತ್ಯ ಸಂಚರಿಸುವ ವಿಶೇಷ ಪ್ಯಾಸೆಂಜರ್‌ ರೈಲು ಸಂಚಾರದಲ್ಲಿ ಮೂರು ದಿನ ವ್ಯತ್ಯಯವಾಗಲಿದೆ. ರೈಲು ಬೆಂಗಳೂರಿನಿಂದಲೇ ಒಂದು ಗಂಟೆ ಕಾಲ ವಿಳಂಬವಾಗಿ ಸಂಚಾರ ಆರಂಭಿಸಲಿದೆ. ಮೈಸೂರಿನಿಂದಲೂ ಈ ರೈಲು ಒಂದು ದಿನ ವಿಳಂಬವಾಗಿಯೇ ಹೊರಡಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ. ನಾಯಂಡಹಳ್ಳಿ ಮತ್ತು ಕೆಂಗೇರಿ ನಿಲ್ದಾಣಗಳಲ್ಲಿ ಅಗತ್ಯ ಸುರಕ್ಷತೆ ಮತ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಸಲುವಾಗಿ, ರೈಲು ಸಂಖ್ಯೆ 06270 ಎಸ್ಎಂವಿಟಿ ಬೆಂಗಳೂರು-ಮೈಸೂರು ಡೈಲಿ ಪ್ಯಾಸೆಂಜರ್ ವಿಶೇಷ ರೈಲು 2024ರ ಡಿಸೆಂಬರ್ 6, 8 ಮತ್ತು 10, ರಂದು ತನ್ನ ನಿಗದಿತ ಸಮಯಕ್ಕಿಂತ 60 ನಿಮಿಷ ತಡವಾಗಿ ಎಸ್ಎಂವಿಟಿ ಬೆಂಗಳೂರು ನಿಲ್ದಾಣದಿಂದ ಹೊರಡಲಿದೆ.

ಇದೇ ರೈಲು (06270) 2024ರ ಡಿಸೆಂಬರ್ 15, ರಂದು ತನ್ನ ಮೂಲ ನಿಲ್ದಾಣದಿಂದ 50 ನಿಮಿಷ ತಡವಾಗಿ ಹೊರಡಲಿದೆ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ, ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ತಿಳಿಸಿದ್ದಾರೆ.

ಬೆಂಗಳೂರು ಹಾಗೂ ಮೈಸೂರು ನಡುವೆ ನಿತ್ಯ 20ಕ್ಕೂ ಹೆಚ್ಚು ರೈಲುಗಳು ಸಂಚರಿಸುತ್ತಿವೆ. ಪ್ಯಾಸೆಂಜರ್‌ ರೈಲುಗಳು ಕೂಡ ಸಂಚರಿಸುತ್ತವೆ. ಈ ಭಾಗದಲ್ಲಿ ನಿರ್ವಹಣಾ ಕಾಮಗಾರಿಗಳು ನಡೆಯುತ್ತಿವೆ.

ಈ ಕಾರಣದಿಂದ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗುತ್ತಲೇ ಇರುತ್ತವೆ. ಈಗ ನಾಯಂಡಹಳ್ಳಿ ಮತ್ತು ಕೆಂಗೇರಿ ನಿಲ್ದಾಣಗಳಲ್ಲಿ ಕೆಲಸ ನಡೆಯುತ್ತಿರುವುದರಿಂದ ಬೆಂಗಳೂರು-ಮೈಸೂರು ಡೈಲಿ ಪ್ಯಾಸೆಂಜರ್ ವಿಶೇಷ ರೈಲು ಸೇವೆಯಲ್ಲಿ ವ್ಯತ್ಯಯವಾಗಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ