logo
ಕನ್ನಡ ಸುದ್ದಿ  /  ಕರ್ನಾಟಕ  /  Indian Railways: ಬೆಂಗಳೂರಿನಿಂದ ತುಮಕೂರು, ಚಿಕ್ಕಮಗಳೂರು ರೈಲುಗಳ ಸಂಚಾರದಲ್ಲಿ 3 ದಿನ ವ್ಯತ್ಯಯ: ಯಾವ ರೈಲು ರದ್ದು

Indian Railways: ಬೆಂಗಳೂರಿನಿಂದ ತುಮಕೂರು, ಚಿಕ್ಕಮಗಳೂರು ರೈಲುಗಳ ಸಂಚಾರದಲ್ಲಿ 3 ದಿನ ವ್ಯತ್ಯಯ: ಯಾವ ರೈಲು ರದ್ದು

Umesha Bhatta P H HT Kannada

Nov 19, 2024 07:53 PM IST

google News

ಬೆಂಗಳೂರಿನ ಹೊರ ವಲಯದ ನಿಡುವಂದ ರೈಲ್ವೆ ಯಾರ್ಡ್‌ ಕಾಮಗಾರಿ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.

    • Indian Railways ಬೆಂಗಳೂರು ಹೊರವಲಯದ ನಿಡವಂದ  ರೈಲ್ವೆ ಯಾರ್ಡ್‌ನ ಸುರಕ್ಷತಾ ಚಟುವಟಿಕೆ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.
ಬೆಂಗಳೂರಿನ ಹೊರ ವಲಯದ ನಿಡುವಂದ ರೈಲ್ವೆ ಯಾರ್ಡ್‌ ಕಾಮಗಾರಿ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.
ಬೆಂಗಳೂರಿನ ಹೊರ ವಲಯದ ನಿಡುವಂದ ರೈಲ್ವೆ ಯಾರ್ಡ್‌ ಕಾಮಗಾರಿ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.

ಬೆಂಗಳೂರು: ಬೆಂಗಳೂರಿನ ಹೊರ ವಲಯದ ನಿಡವಂದ ಯಾರ್ಡ್ ನಲ್ಲಿ ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿ ಸಲುವಾಗಿ, ಕೆಲವು ರೈಲುಗಳ ಸೇವೆಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ .ಅದರಲ್ಲೂ ಬೆಂಗಳೂರಿನಿಂದ ಹೊರಡುವ ತುಮಕೂರು, ಚಿಕ್ಕಮಗಳೂರು ನಗರಗಳಿಗೆ ಹೋಗುವ ಕೆಲವು ರೈಲುಗಳು, ಮೆಮು ರೈಲುಗಳ ಸಂಚಾರದಲ್ಲಿ 2024ರ ನವೆಂಬರ್‌ 22ರಿಂದ ಮೂರು ದಿನಗಳ ಕಾಲ ಬದಲಾವಣೆ ಆಗಲಿದೆ. ಆನಂತರ ಎಂದಿನಂತೆ ರೈಲುಗಳ ಸಂಚಾರ ಇರಲಿದೆ ಎಂದು ಹುಬ್ಬಳ್ಳಿ ಕೇಂದ್ರಿತ ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ ಕನಮಡಿ ಮಾಹಿತಿ ನೀಡಿದ್ದಾರೆ.

ರೈಲು ಸಂಚಾರ ರದ್ದು

ನವೆಂಬರ್ 23 ರಂದು ತುಮಕೂರು-ಬಾಣಸವಾಡಿ ಮೆಮು ವಿಶೇಷ ರೈಲು (ರೈಲು ಸಂಖ್ಯೆ 06512), ಚಿಕ್ಕಮಗಳೂರು-ಯಶವಂತಪುರ ಡೈಲಿ ಎಕ್ಸ್ ಪ್ರೆಸ್ ರೈಲು (ರೈ.ಸಂ. 16239) ಮತ್ತು ಯಶವಂತಪುರ-ಚಿಕ್ಕಮಗಳೂರು ಡೈಲಿ ಎಕ್ಸ್ ಪ್ರೆಸ್ (ರೈ.ಸಂ.16240) ರೈಲುಗಳ ಸಂಚಾರವನ್ನು ರದ್ದು ಮಾಡಲಾಗುತ್ತಿದೆ.

ರೈಲು ಸಂಚಾರ ಭಾಗಶಃ ರದ್ದು

ನವೆಂಬರ್ 23 ಮತ್ತು 24 ರಂದು ಕೆಎಸ್ಆರ್ ಬೆಂಗಳೂರು-ತುಮಕೂರು ಮೆಮು ವಿಶೇಷ (06571) ರೈಲು ಸೇವೆಯನ್ನು ದೊಡ್ಡಬೆಲೆ-ತುಮಕೂರು ನಡುವೆ ಮತ್ತು ತುಮಕೂರು-ಕೆಎಸ್ಆರ್ ಬೆಂಗಳೂರು ಮೆಮು ವಿಶೇಷ (06576) ರೈಲು ಸೇವೆಯನ್ನು ತುಮಕೂರು-ದೊಡ್ಡಬೆಲೆ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು.

ನವೆಂಬರ್ 23 ರಂದು ಕೆಎಸ್ಆರ್ ಬೆಂಗಳೂರು-ತುಮಕೂರು ಮೆಮು ವಿಶೇಷ (ರೈಲು ಸಂಖ್ಯೆ 06575) ರೈಲು ದೊಡ್ಡಬೆಲೆ-ತುಮಕೂರು ನಡುವೆ ಮತ್ತು ತುಮಕೂರು-ಕೆಎಸ್ಆರ್ ಬೆಂಗಳೂರು ಮೆಮು ವಿಶೇಷ (06572) ರೈಲು ಸೇವೆಯನ್ನು ತುಮಕೂರು-ದೊಡ್ಡಬೆಲೆ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು.

ರೈಲುಗಳ ನಿಯಂತ್ರಣ

ನವೆಂಬರ್ 22 ರಂದು ಹೊರಡುವ ರೈಲು ಸಂಖ್ಯೆ 17392 ಎಸ್ಎಸ್ಎಸ್ ಹುಬ್ಬಳ್ಳಿ-ಕೆಎಸ್ಆರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗದಲ್ಲಿ 20 ನಿಮಿಷ, ನವೆಂಬರ್ 24 ರಂದು ಹೊರಡುವ ರೈಲು ಸಂಖ್ಯೆ 20652 ತಾಳಗುಪ್ಪ-ಕೆಎಸ್‌ಆರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗದಲ್ಲಿ 30 ನಿಮಿಷ ಮತ್ತು ರೈಲು ಸಂಖ್ಯೆ 17326 ಮೈಸೂರು-ಬೆಳಗಾವಿ ವಿಶ್ವಮಾನವ ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗದಲ್ಲಿ 120 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.

ತಡವಾಗಿ ಆರಂಭ

ನವೆಂಬರ್ 24 ರಂದು ಪ್ರಾರಂಭವಾಗುವ ಕೆಎಸ್ಆರ್ ಬೆಂಗಳೂರು-ಧಾರವಾಡ ಸಿದ್ಧಗಂಗಾ ಡೈಲಿ ಎಕ್ಸ್ ಪ್ರೆಸ್ (12725) ರೈಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ನಿಲ್ದಾಣದಿಂದ 30 ನಿಮಿಷ ಮತ್ತು ಯಶವಂತಪುರ-ಶಿವಮೊಗ್ಗ ಟೌನ್ ಇಂಟರ್ ಸಿಟಿ ಡೈಲಿ ಎಕ್ಸ ಪ್ರೆಸ್ (16579) ರೈಲು ಯಶವಂತಪುರದಿಂದ 90 ನಿಮಿಷಗಳ ಕಾಲ ತಡವಾಗಿ ಹೊರಡಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ