logo
ಕನ್ನಡ ಸುದ್ದಿ  /  ಕರ್ನಾಟಕ  /  Indian Railways: ದಸರಾ ಹಬ್ಬ ಜತೆಗೆ ದೀಪಾವಳಿಗೂ ಬೆಂಗಳೂರು, ಮೈಸೂರಿನಿಂದ ಬೆಳಗಾವಿ, ವಿಜಯಪುರಕ್ಕೆ ವಿಶೇಷ ರೈಲು ಸಂಚಾರ

Indian Railways: ದಸರಾ ಹಬ್ಬ ಜತೆಗೆ ದೀಪಾವಳಿಗೂ ಬೆಂಗಳೂರು, ಮೈಸೂರಿನಿಂದ ಬೆಳಗಾವಿ, ವಿಜಯಪುರಕ್ಕೆ ವಿಶೇಷ ರೈಲು ಸಂಚಾರ

Umesha Bhatta P H HT Kannada

Oct 06, 2024 06:31 PM IST

google News

ದಸರಾ ಹಾಗೂ ದೀಪಾವಳಿಗೆ ಬೆಂಗಳೂರು ಹಾಗೂ ಮೈಸೂರಿನಿಂದ ವಿಶೇಷ ರೈಲು ಸಂಚಾರ ಇರಲಿದೆ.

    • ದಸರಾ ಹಾಗೂ ದೀಪಾವಳಿ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಹುಬ್ಬಳ್ಳಿ ವಲಯವು ಬೆಂಗಳೂರು ಹಾಗೂ ಮೈಸೂರಿನಿಂದ ಬೆಳಗಾವಿ, ವಿಜಯಪುರಕ್ಕೆ ವಿಶೇಷ ರೈಲು ಓಡಿಸಲಿದೆ. ಇದರ ವಿವರ ಇಲ್ಲಿದೆ.
ದಸರಾ ಹಾಗೂ ದೀಪಾವಳಿಗೆ ಬೆಂಗಳೂರು ಹಾಗೂ ಮೈಸೂರಿನಿಂದ ವಿಶೇಷ ರೈಲು ಸಂಚಾರ ಇರಲಿದೆ.
ದಸರಾ ಹಾಗೂ ದೀಪಾವಳಿಗೆ ಬೆಂಗಳೂರು ಹಾಗೂ ಮೈಸೂರಿನಿಂದ ವಿಶೇಷ ರೈಲು ಸಂಚಾರ ಇರಲಿದೆ.

ಬೆಂಗಳೂರು: ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯವು ಕರ್ನಾಟಕದಲ್ಲಿ ಪ್ರಮುಖಉಮ ಹಬ್ಬಗಳಾದ ದಸರಾ ಹಾಗೂ ದೀಪಾವಳಿಗೆ ವಿಶೇಷ ರೈಲು ಸಂಚಾರಕ್ಕೆ ಮುಂದಾಗಿದೆ. ಬೆಂಗಳೂರಿನಿಂದ ಕಲಬುರಗಿ. ವಿಜಯಪುರ, ಬೆಳಗಾವಿ, ಚಾಮರಾಜನಗರ ಸಹಿತ ಹಲವು ಜಿಲ್ಲೆಗಳಿಗೆ ವಿಶೇಷ ರೈಲುಗಳನ್ನು ಓಡಿಸಲಾಗುತ್ತದೆ. ಪ್ರಯಾಣಿಕರ ದಟ್ಟಣೆ ತಪ್ಪಿಸುವ ಜತೆಗೆ ಹಬ್ಬಗಳಿಗೆ ಸುಸೂತ್ರವಾಗಿ ಊರಿಗೆ ತಲುಪಿ ವಾಪಾಸಾಗುವ ಉದ್ದೇಶದಿಂದ ವಿಶೇಷ ರೈಲಿನ ಸಂಚಾರದ ಯೋಜನೆ ಮಾಡಿಕೊಳ್ಳಲಾಗಿದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ ಅವರು ತಿಳಿಸಿದ್ದಾರೆ

ಈ ರೈಲುಗಳ ಮುಂಗಡ ಬುಕಿಂಗ್, ನಿಲುಗಡೆ ಮತ್ತು ವೇಳಾಪಟ್ಟಿ ಸೇರಿದಂತೆ ಯಾವುದೇ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮ್ಮ ಸಹಾಯವಾಣಿ ಸಂಖ್ಯೆ 139 ಅನ್ನು ಸಂಪರ್ಕಿಸಿ ಅಥವಾ www.enquiry.indianrail.gov.in ವೆಬ್ ಸೈಟ್ ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.

ದಸರಾ ಹಬ್ಬದ ವಿಶೇಷ ರೈಲುಗಳು

⦁ ರೈಲು ಗಾಡಿ ಸಂಖ್ಯೆ06501 SMVT ಬೆಂಗಳೂರು ಸಂಜೆ 07ಕ್ಕೆ ಹೊರಟು ವಿಜಯಪುರವನ್ನು ಬೆಳಿಗ್ಗೆ10:30 ಕ್ಕೆ ತಲುಪಲಿವೆ. 24ರ ಅಕ್ಟೊಬರ್‌ 09 ಹಾಗೂ 12ರಂದು ರೈಲು ಸಂಚಾರ ಇರಲಿದೆ. ರೈಲು ಗಾಡಿ ಸಂಖ್ಯೆ 06502 ವಿಜಯಪುರ ದಿಂದ ಸಂಜೆ 07ಕ್ಕೆ ಹೊರಟು SMVT ಬೆಂಗಳೂರು ಬೆಳಿಗ್ಗೆ 11:15ಕ್ಕೆ ತಲುಪಲಿದೆ. ಅಕ್ಟೋಬರ್ 10 ಹಾಗೂ 13ರಂದು ಈ ರೈಲು ಸಂಚರಿಸಲಿದೆ.

⦁ರೈಲು ಗಾಡಿ ಸಂಖ್ಯೆ06505 ಯಶವಂತಪುರದಿಂದ ಸಂಜೆ 06:15 ಕ್ಕೆ ಹೊರಟು ಬೆಳಗಾವಿಯನ್ನು ಬೆಳಿಗ್ಗೆ 05ಕ್ಕೆ ತಲುಪಲಿದೆ. ಅಕ್ಟೋಬರ್‌ 09ರಂದು ರೈಲು ಸಂಚರಿಸಲಿದೆ. ರೈಲು ಗಾಡಿ ಸಂಖ್ಯೆ06506 ಬೆಳಗಾವಿಯಿಂದ ಸಂಜೆ 05:30ಕ್ಕೆ ಹೊರಟು ಯಶವಂತಪುರವನ್ನು ಬೆಳಿಗ್ಗೆ04:30ಕೆಕ ತಲುಪಲಿದ್ದು. ಅಕ್ಟೋಬರ್‌ 10ರಂದು ಸಂಚಾರ ಇರಲಿದೆ.

⦁ ರೈಲು ಗಾಡಿ ಸಂಖ್ಯೆ 06507 ಯಶವಂತಪುರದಿಂದ ಸಂಜೆ 06:15ಕ್ಕೆ ಹೊರಟು ಮರು ದಿನ ಬೆಳಗಾವಿಯನ್ನು ಬೆಳಿಗ್ಗೆ05ಕ್ಕೆ ತಲುಪಲಿದೆ. ಅಕ್ಟೋಬರ್‌12ರಂದು ರೈಲು ಸಂಚರಿಸಲಿದೆ. ರೈಲು ಗಾಡಿ ಸಂಖ್ಯೆ 06508 ಬೆಳಗಾವಿಯಿಂದ ಸಂಜೆ 05:30 ಕ್ಕೆ ಹೊರಟು ಯಶವಂತಪುರವನ್ನು ಬೆಳಿಗ್ಗೆ04:30 ಕ್ಕೆ ತಲುಪಲಿದೆ. ಈ ರೈಲು ಸಂಚಾರ ಅಕ್ಟೋಬರ್‌ 13ರಂದು ಇರಲಿದೆ.

ಇದನ್ನೂ ಓದಿರಿ: RRB Recruitment: ರೈಲ್ವೆ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶ ಕೊಟ್ಟ ಆರ್‌ಆರ್‌ಬಿ, ಕೊನೆಯ ದಿನಾಂಕವೂ ಘೋಷಣೆ

⦁ ರೈಲು ಗಾಡಿ ಸಂಖ್ಯೆ 06279 ಮೈಸೂರಿನಿಂದ ರಾತ್ರಿ 11:15 ಕ್ಕೆ ಹೊರಟು KSR ಬೆಂಗಳೂರು ನಿಲ್ದಾಣವನ್ನು ಬೆಳಿಗ್ಗೆ 02:30ಕ್ಕೆ ತಲುಪಲಿದೆ. ಈ ರೈಲು ಅಕ್ಟೋಬರ್‌ 09ರಿಂದ 13ರವರೆಗೆ ಸತತ ಐದು ದಿನ ಸಂಚರಿಸಲಿದೆ.ರೈಲು ಗಾಡಿ ಸಂಖ್ಯೆ06280 KSR ಬೆಂಗಳೂರಿನಿಂದ ಬೆಳಗಿನ ಜಾವ03ಕ್ಕೆ ಕ್ಕೆ ಹೊರಟು ಮೈಸೂರನ್ನ ಬೆಳಿಗ್ಗೆ 06:15ಕ್ಕೆ ತಲುಪಲಿದೆ. ಈ ರೈಲು ಅಕ್ಟೋಬರ್ 10ರಿಂದ 14ರವರೆಗೆ ಐದು ದಿನ ಸಂಚರಿಸಲಿದೆ.

⦁ ರೈಲು ಗಾಡಿ ಸಂಖ್ಯೆ 06285 KSR ಬೆಂಗಳೂರಿನಿಂದ ರಾತ್ರಿ12:15 ಕ್ಕೆ ಹೊರಟು ಮೈಸೂರು ಅನ್ನು ಬೆಳಗಿನ ಜಾವ 03:20ಕ್ಕೆ ತಲುಪಲಿದೆ. ಈ ರೈಲು ಅಕ್ಟೋಬರ್‌ 09ರಿಂದ 13ರವರೆಗೆ ಐದು ದಿನ ಸಂಚರಿಸಲಿದೆ. ರೈಲು ಗಾಡಿ ಸಂಖ್ಯೆ 06286 ಮೈಸೂರಿನಿಂದ ಬೆಳಗಿನ ಜಾವ03:30 ಕ್ಕೆ ಹೊರಟು KSR ಬೆಂಗಳೂರು ನಿಲ್ದಾಣವನ್ನು ಬೆಳಿಗ್ಗೆ07:15ಕ್ಕೆ ತಲುಪಲಿದೆ. ಈ ರೈಲು ಅಕ್ಟೋಬರ್‌ 09ರಿಂದ 13ರವರೆಗೆ ಸಂಚರಿಸಲಿದೆ.

⦁ ರೈಲು ಗಾಡಿ ಸಂಖ್ಯೆ 06281 ಮೈಸೂರಿನಿಂದ ರಾತ್ರಿ 11:30ಕ್ಕೆ ಹೊರಟು ಚಾಮರಾಜನಗರವನ್ನು ಬೆಳಿಗ್ಗೆ 01:15ಕ್ಕೆ ತಲುಪಿಲಿದೆ. ಈ ರೈಲು ಈ ರೈಲು ಅಕ್ಟೋಬರ್‌ 09ರಿಂದ 13ರವರೆಗೆ ಸಂಚರಿಸಲಿದೆ. ರೈಲು ಗಾಡಿ ಸಂಖ್ಯೆ 06282 ಚಾಮರಾಜನಗರದಿಂದ ಬೆಳಿಗ್ಗೆ 05:00 ಕ್ಕೆ ಹೊರಟು ಮೈಸೂರನ್ನು ಬೆಳಿಗ್ಗೆ 06:50ಕ್ಕೆ ತಲುಪಲಿದೆ. ಈ ರೈಲು ಅಕ್ಟೋಬರ್ 10ರಿಂದ 14ರವರೆಗೆ ಐದು ದಿನ ಸಂಚರಿಸಲಿದೆ.

⦁ ರೈಲು ಗಾಡಿ ಸಂಖ್ಯೆ 06283 ಮೈಸೂರಿನಿಂದ ರಾತ್ರಿ 09:15 ಕ್ಕೆ ಹೊರಟು ಚಾಮರಾಜನಗರವನ್ನು ರಾತ್ರಿ 11:15 ಕ್ಕೆ ತಲಿಪಲಿದೆ. ರೈಲು ಗಾಡಿ ಸಂಖ್ಯೆ 06284 ಚಾಮರಾಜನಗರದಿಂದ ರಾತ್ರಿ11:30 ಕ್ಕೆ ಹೊರಟು ಮೈಸೂರನ್ನು ಮಧ್ಯರಾತ್ರಿ 02:30ಕ್ಕೆ ತಲುಪಲಿದೆ. ಈ ರೈಲು ಅಕ್ಟೋಬರ್‌ 12ರಂದು ಸಂಚರಿಸಲಿದೆ.

ದೀಪಾವಳಿ ಹಬ್ಬದ ವಿಶೇಷ ರೈಲುಗಳು

ರೈಲು ಸಂಖ್ಯೆ06567 ಮೈಸೂರಿನಿಂದ 2024ರ ಅಕ್ಟೋಬರ್‌ 30 ಹಾಗೂ ನವೆಂಬರ್‌02ರಂದು ಸಂಜೆ 06ಕ್ಕೆ ಹೊರಟು ವಿಜಯಪುರವನ್ನು ಮರುದಿನ ಮಧ್ಯಾಹ್ನ02:05ಕ್ಕೆ ತಲುಪಲಿದೆ.

ರೈಲು ಸಂಖ್ಯೆ 06568 ವಿಜಯಪುರ ವನ್ನು 2024ರ ಅಕ್ಟೋಬರ್‌ 31ಹಾಗೂ ನವೆಂಬರ್‌ 3ರ ಸಂಜೆ 07ಕ್ಕೆ ಹೊರಟು ಮರುದಿನ ಮೈಸೂರುಅನ್ನು ಮಧ್ಯಾಹ್ನ 02:20ಕ್ಕೆ ತಲುಪಲಿದೆ.

ರೈಲು ಸಂಖ್ಯೆ06547 ಯಶವಂತಪುರದಿಂದ 2024 ಅಕ್ಟೋಬರ್‌ 30 ರ ಸಂಜೆ 07:30 ಹೊರಟು ಮರು ದಿನ ಬೆಳಗಾವಿಯನ್ನು ಬೆಳಿಗ್ಗೆ 07:15ಕ್ಕೆ ತಲುಪಲಿದೆ.

ರೈಲು ಸಂಖ್ಯೆ06548 ಬೆಳಗಾವಿಯಿಂದ 2024ರ ಅಕ್ಟೋಬರ್‌ 31ರಂದು ಸಂಜೆ 05:30 ಕ್ಕೆ ಹೊರಟು ಮರು ದಿನ ಯಶವಂತಪುರವನ್ನು ಬೆಳಿಗ್ಗೆ04:30ಕ್ಕೆ ತಲುಪಲಿದೆ.

ರೈಲು ಸಂಖ್ಯೆ06549 ಯಶವಂತಪುರದಿಂದ 2024ರ ನವೆಂಬರ್‌1ರಂದು ಸಂಜೆ 07:30ಕ್ಕೆ ಹೊರಟು ಬೆಳಗಾವಿಯನ್ನು ಮರು ದಿನ ಬೆಳಿಗ್ಗೆ 07:15ಕ್ಕೆ ತಲುಪಲಿದೆ.

ರೈಲು ಸಂಖ್ಯೆ06550 ಬೆಳಗಾವಿಯಿಂದ 2024 ನವೆಂಬರ್‌02ರ ಸಂಜೆ 05:30ಕ್ಕೆ ಹೊರಟು ಯಶವಂತಪುರನನ್ನು ಮರು ದಿನ ಬೆಳಿಗ್ಗೆ ಗ್ಗೆ04:30ಕ್ಕೆ ತಲುಪಲಿದೆ.

 

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ