logo
ಕನ್ನಡ ಸುದ್ದಿ  /  Karnataka  /  Ips Officer D Roopa Shared Private Photos Of Ias Officer Rohini Sindhuri On Facebook

IAS vs IPS: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಖಾಸಗಿ ಫೋಟೋಸ್ ಜಾಲತಾಣದಲ್ಲಿ ಹರಿಬಿಟ್ಟ ಐಪಿಎಸ್ ಅಧಿಕಾರಿ ಡಿ ರೂಪಾ

Raghavendra M Y HT Kannada

Feb 19, 2023 04:13 PM IST

ಐಪಿಎಸ್ ಅಧಿಕಾರಿ ಡಿ ರೂಪಾ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ

    • ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಖಾಸಗಿ ಫೋಟೋಗಳನ್ನು ಐಪಿಎಸ್ ಅಧಿಕಾರಿ ಡಿ ರೂಪಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. 
ಐಪಿಎಸ್ ಅಧಿಕಾರಿ ಡಿ ರೂಪಾ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ
ಐಪಿಎಸ್ ಅಧಿಕಾರಿ ಡಿ ರೂಪಾ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ

ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಆರೋಪಗಳ ಪಟ್ಟಿ ಪೋಸ್ಟ್ ಮಾಡಿದ್ದ ಐಪಿಎಸ್ ಅಧಿಕಾರಿ ಡಿ ರೂಪಾ ಅವರು ಈಗ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Bangalore News: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಎನ್‌ಐಎ ನ್ಯಾಯಾಲಯ

Indian Railway: ಹುಬ್ಬಳ್ಳಿ ಗುಂತಕಲ್‌ ರೈಲು ಮಾರ್ಗದಲ್ಲಿ ಸಂಚಾರ ವ್ಯತ್ಯಯ, ಮೇ ನಲ್ಲಿ ಕೆಲ ರೈಲು ನಿಯಂತ್ರಣ

Hassan Sex Scandal: ಸಂತ್ರಸ್ತ ಮಹಿಳೆಯರ ಭಾವನೆಗಳ ಜತೆ ನಾವೆಲ್ಲ ನಿಲ್ಲಬೇಕು; ರಹಮತ್ ತರೀಕೆರೆ ಸೇರಿ ಕನ್ನಡ ಚಿಂತಕರ ಅಭಿಮತದ ಸಂಗ್ರಹ ಇದು

Forest Tales: ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆ ಜಾಗೃತಿಗೆ ಮೈಸೂರಿನ ರಂಗಾಯಣದಲ್ಲಿ ವೃಕ್ಷರಾಜನ ರಂಗರೂಪ

ಅಧಿಕಾರಿ ರೂಪಾ ಅವರು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ರೋಹಿಣಿ ಸಿಂಧೂರಿ ಅವರ ಕೆಲವು ಖಾಸಗಿ ಫೋಟೋಗಳನ್ನು ಹಂಚಿಕೊಂಡು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಅದರ ಡೀಟೆಲ್ಸ್ ಇಲ್ಲಿದೆ.

ಈ ರೀತಿಯ ಪಿಕ್ಚರ್ಸ್ normal ಅನ್ನಿಸಬಹುದು. ಆದರೆ, ಒಬ್ಬ ಮಹಿಳಾ ಐಎಎಸ್ ಅಧಿಕಾರಿ ಒಂದಲ್ಲ, ಎರಡಲ್ಲ ಮೂರು ಐಎಎಸ್ ಪುರುಷ ಅಧಿಕಾರಿಗಳಿಗೆ ಆಗಾಗ ಇವುಗಳನ್ನು ಹಾಗೂ ಈ ರೀತಿಯ ಅನೇಕ ಪಿಕ್ಸ್ ಗಳ one to one ಕಳಿಸ್ತಾರೆ ಅಂದ್ರೆ ಅದಕ್ಕೆ ಏನರ್ಥ? ಎಂದು ಪ್ರಶ್ನಿಸಿದ್ದಾರೆ.

ಇದು ಆಕೆಯ private matter ಆಗುವುದಿಲ್ಲ ಐಎಎಸ್ SERVICE CONDUCT RULES ಪ್ರಕಾರ ಅಪರಾಧ. ಈ ಪಿಕ್ಸ್ ಗಳ ನೈಜತೆ ಬಗ್ಗೆ ಯಾವುದೇ ತನಿಖಾ ಸಂಸ್ಥೆ ಕೂಡಾ investigate ಮಾಡಬಹುದು. ಸಲೂನ್ haircut chitra, ತಲೆದಿಂಬು ಇತ್ತು ಮಲಗಿ ತೆಗೆದಿರುವ ಚಿತ್ರ. Normal ಅನ್ನಿಸಬಹುದು ಕೆಲವರಿಗೆ. ಕಳಿಸಿರುವ ಸನ್ನಿವೇಶ speaks otherwise ಎಂದು ಡಿ ರೂಪಾ ಅವರು ಫೇಸ್ ಬುಕ್ ನಲ್ಲಿ ಫೋಟೋಗಳನ್ನು ಷೇರ್ ಮಾಡಿ ಮೇಲಿನಂತೆ ಬರೆದುಕೊಂಡಿದ್ದಾರೆ.

ಐಪಿಎಸ್ ಅಧಿಕಾರಿ ಡಿ ರೂಪಾ ಅವರು ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಫೋಟೋಗಳ ಬಗ್ಗೆ ಪರ ವಿರೋಧಗಳು ಶುರುವಾಗಿದ್ದು, ಈ ಬಗ್ಗೆ ಟ್ವೀಟ್ ಮಾಡಿರುವ ಕೃಷ್ಣ ಸಿಕೆ ಎಂಬುವರು, D_Roopa_IPSಅವರೇ ನಿಮಗೆ ರೋಹಿಣಿ ಅವರ ಮೇಲೆ ಆಪಾದನೆ ಮಾಡುವ ಹಾಗಿದ್ರೆ cheif secretary ಗೆ ಪತ್ರ ಬರೆದು ಶಿಷ್ಟಾಚಾರ ಪಾಲಿಸಿ. ಹೀಗೆ social media ದಲ್ಲಿ ತೇಜೋವಧೆ ಮಾಡುವ ಹಕ್ಕು ನಿಮಗಿಲ್ಲ ಎಂದಿದ್ದಾರೆ.

ಕೃಷ್ಣ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಡಿ ರೂಪಾ ಅವರು, ಸರ್ಕಾರದ ಗಮನಕ್ಕೆ ತಂದಿಲ್ಲ ಅಂತ ನೀವು ಯಾಕೆ ಅಂದುಕೊಳ್ಳುತ್ತೀರಿ. ಗಮನಕ್ಕೆ ತಂದಿದ್ದೇನೆ. ತೇಜೋವಧೆ ಅಲ್ಲ. ಅನೇಕರ ಸಂಸಾರ ಮುರಿದಿರುವ ಬಗ್ಗೆ ನಿಮಗೂ sympathy ಇರಲಿ ಎಂದು ತಿರುಗೇಟು ನೀಡಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು