logo
ಕನ್ನಡ ಸುದ್ದಿ  /  ಕರ್ನಾಟಕ  /  ಅಳಂದ: ಮಹಾರಾಷ್ಟ್ರ ಗಡಿಯ ಕನ್ನಡ ಭಾಷಿಕ ಹಳ್ಳಿಗಳಲ್ಲಿ ಸಮಸ್ಯೆಗಳ ಮಹಾಪೂರ, -ರಾಜ್ಯೋತ್ಸವ ವಿಶೇಷ

ಅಳಂದ: ಮಹಾರಾಷ್ಟ್ರ ಗಡಿಯ ಕನ್ನಡ ಭಾಷಿಕ ಹಳ್ಳಿಗಳಲ್ಲಿ ಸಮಸ್ಯೆಗಳ ಮಹಾಪೂರ, -ರಾಜ್ಯೋತ್ಸವ ವಿಶೇಷ

HT Kannada Desk HT Kannada

Oct 30, 2023 08:01 PM IST

google News

ಮಹಾರಾಷ್ಟ್ರಕ್ಕೆ ಹೊಂದಿಕೊಂಡ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಖಜೂರಿ ಗಡಿಯಲ್ಲಿ ಸ್ವಾಗತ ಕಮಾನು ಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಈಡೇರಿಲ್ಲ.

    • ಗಡಿ ಭಾಗದ ಹಳ್ಳಿಗಳಲ್ಲಿ ಇಂದಿಗೂ ಕನ್ನಡ ಭಾಷೆ ಮತ್ತು ಶಿಕ್ಷಣದ ವಿಚಾರದಲ್ಲಿ ಹೇಳಿಕೊಳ್ಳುವಷ್ಟು ಸಾಧನೆ ಕಂಡು ಬರುತ್ತಿಲ್ಲ.
ಮಹಾರಾಷ್ಟ್ರಕ್ಕೆ ಹೊಂದಿಕೊಂಡ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಖಜೂರಿ ಗಡಿಯಲ್ಲಿ ಸ್ವಾಗತ ಕಮಾನು ಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಈಡೇರಿಲ್ಲ.
ಮಹಾರಾಷ್ಟ್ರಕ್ಕೆ ಹೊಂದಿಕೊಂಡ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಖಜೂರಿ ಗಡಿಯಲ್ಲಿ ಸ್ವಾಗತ ಕಮಾನು ಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಈಡೇರಿಲ್ಲ.

ಕಲಬುರಗಿ: ಮರಾಠಿ ಮತ್ತು ಉರ್ದು ಭಾಷೆಯ ಪ್ರಭಾವದ ನಡುವೆ ಕನ್ನಡ ಉಳಿಸಿ ಬೆಳೆಸುವ ಸಾಧನೆ ನಿರೀಕ್ಷಿತ ಪ್ರಮಾಣದಲ್ಲಿ ಅಗುತ್ತಿಲ್ಲ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಗಡಿ ಭಾಗವೂ ತನ್ನ ಕನ್ನಡದ ಅಸ್ತಿತ್ವವನ್ನೇ ಉಳಿಸಿ ಬೆಳೆಸಿಕೊಂಡು ಕನ್ನಡ ನಾಡು ನುಡಿ ಭಾಷಾಭಿಮಾನ ಹಿಂದೆಂದಿಗಿಂತಲೂ ಈಗ ಹೆಚ್ಚಿನದಾಗಿ ಝೆಂಕರಿಸಿದೆ. ಆಳಂದ ತಾಲೂಕಿನ ಗಡಿ ಭಾಗದಲ್ಲಿರುವ ಖಜೂರಿ, ಹಿರೋಳಿ, ಮಾದನಹಿಪ್ಪರಗಾ ಗಡಿ ಭಾಗದ ಹಳ್ಳಿಗಳಲ್ಲಿ ಇಂದಿಗೂ ಕನ್ನಡ ಭಾಷೆ ಮತ್ತು ಶಿಕ್ಷಣದ ವಿಚಾರದಲ್ಲಿ ಹೇಳಿಕೊಳ್ಳುವಷ್ಟು ಸಾಧನೆ ಕಂಡು ಬರುತ್ತಿಲ್ಲ. ಇದಕ್ಕಾಗಿ ಇನ್ನೂ ಕರ್ನಾಟಕ ರಾಜ್ಯ ಸರ್ಕಾರ ಮತ್ತು ಸಂಬಂಧಿತ ಜನಪ್ರತಿನಿಧಿಗಳು ಶ್ರಮಿಸಬೇಕಾಗಿದೆ.

ಇಲ್ಲಿ ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಜನಪದ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತಿಗಳು, ಬಸವಪರ ಸಂಘಟನೆಗಳು, ಕವಿ, ಕಲಾವಿದರು, ಮಠಾಧೀಶರು ಸೇರಿ ಅನೇಕರು ಕನ್ನಡ ಭಾಷೆ, ಸಾಹಿತ್ಯಕ್ಕೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಅದರ ಫಲವಾಗಿಯೇ ಇಂದು ಕನ್ನಡ ಗಟ್ಟಿಧ್ವನಿಯಾಗಿದೆ. ಅಲ್ಲಿ ಕನ್ನಡದ ಧ್ವಜ ಹಾರಾಡತೊಡಗಿವೆ.

ಆರಂಭದಲ್ಲಿ ಹೆಚ್ಚಿನ ರೀತಿ ಮರಾಠಿ, ಉರ್ದು ಶಾಲೆಗಳಿದ್ದ ಪ್ರಭಾವದಲ್ಲಿದ್ದ ಈ ಭಾಗದಲ್ಲಿ ಕರ್ನಾಟಕ ಏಕೀಕರಣವಾದ ಬಳಿಕ ಕನ್ನಡ ಶಾಲೆಗಳು ಉದಯಿಸಿದ ಫಲವಾಗಿ ತಮ್ಮ ಭಾಷೆ ಅಸ್ತಿತ್ವದ ಬಗ್ಗೆ ಅರಿವಿಗೆ ಬಂದ ಮೇಲೆ ಯುವ ಸಮುದಾಯ, ಬುದ್ದಿಜೀವಿಗಳು ಕನ್ನಡಪರ ಹೋರಾಟಗಾರರು ಟೊಂಕಕಟ್ಟಿ ನಿಂತು ಕನ್ನಡದ ರಥ ಎಳೆದಿರುವುದು ಕನ್ನಡಾಭಿಮಾನಕ್ಕೆ ಕಳೆಕಟ್ಟಿದೆ.

ಕನ್ನಡಿಗರ ಮೇಲೆ ದೌರ್ಜನ್ಯ

ಗಡಿ ಭಾಗದಲ್ಲಿ ಕನ್ನಡ ಭಾ಼ಷೆಯೇ ಬೇರೆ ಅಭಿವೃದ್ಧಿಯೇ ಬೇರೆ, ಗಡಿನಾಡು ನಿರ್ಲಕ್ಷ್ಯವಾಗಿದೆ. ಶೈಕ್ಷಣಿಕ ಸಂಸ್ಥೆಗಳು ಇನ್ನೂ ಬಹಳಷ್ಟು ಬೆಳೆಯಬೇಕಿದೆ. ಸರ್ಕಾರ ಹೆಚ್ಚಿನ ಹಣ ಒದಗಿಸಿ ಗಡಿನಾಡು ಕನ್ನಡಿಗರಿಗೆ ನ್ಯಾಯ ಕೊಡಬೇಕು. ಕಳೆದ ವರ್ಷ ಮಹಾರಾಷ್ಟ್ರದ ಜತ್ತ, ಮಿರಾಜ, ಸಾಂಗ್ಲಿಯ ಕನ್ನಡ ಮಾತಾಡವರು ಕರ್ನಾಟಕಕ್ಕೆ ಸೇರಬೇಕೆಂದು ನಿರ್ಣಯಕ್ಕೆ ಅಲ್ಲಿನ ಸರ್ಕಾರ ಅನ್ಯಾಯ ಮಾಡಿದೆ. ಕರ್ನಾಟಕಕ್ಕೆ ಸೇರುವ ನಿರ್ಣಯ ಕೈಗೊಂಡ ಮೇಲೆ ಅವರ ಮೇಲೆ ಮಹಾರಾಷ್ಟ್ರ ಸರ್ಕಾರ ಪ್ರಕರಣ ದಾಖಲಿಸಿ ದಬ್ಬಾಳಿಕೆ ಮಾಡಿದೆ. ಈ ಬಗ್ಗೆ ಇಲ್ಲಿನ ಸರ್ಕಾರ ಮತ್ತು ಸಂಘಟನೆಗಳು ಚಕಾರವೆತ್ತಿಲ್ಲ. ಅವರ ಮೇಲೆ ಸುಳ್ಳು ಕೇಸ ಹಾಕಿದ್ದರು. ಸುಳ್ಳು ಕೇಸು ಹಾಕಿ ದಬ್ಬಾಳಿಕೆ ಮಾಡಿದ್ದರು. ಹಾಕಿದ ಕೇಸ್ ವಾಪಸ್ ಪಡೆಯಬೇಕು. ಅಕ್ಕಲಕೋಟ ತಾಲ್ಲೂಕಿನ ಹಳ್ಳಿಗಳಲ್ಲೂ ಈ ರೀತಿಯಾಗಿ ಕನ್ನಡ ಭಾಷಿಕರ ಮೇಲೆ ಅನ್ಯಾಯವಾಗಿದೆ. ಇಂಥ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಮೌನವಹಿಸುವುದು ಸರಿಯಲ್ಲ ಕನ್ನಡ ಭಾಷಿಕರಿಗೆ ಬೆಂಬಲವಾಗಿ ನಿಂತು ದೈರ್ಯ ತುಂಬಬೇಕು. ಕನ್ನಡ ಭಾಷಾಭಿಮಾನ ಕನ್ನಡಿಗರಿಗೆ ನ್ಯಾಯ ದೊರೆಯಬೇಕು. ಗಡಿಯಲ್ಲಿ ಕನ್ನಡ ಭಾಷೆ ಮತ್ತು ಅಭಿವೃದ್ಧಿಗಾಗಿ ಸರ್ಕಾರದ ಗಮನಕ್ಕೆ ತಂದು ಬೇಡಿಕೆಗೆ ಸ್ಪಂದಿಸಲು ಪ್ರಯತ್ನಿಸುವೆ ಎಂದು ಆಳಂದ ಶಾಸಕ ಬಿ.ಆರ್. ಪಾಟೀಲ ಶಾಸಕರು ಹೇಳಿದ್ದಾರೆ.

ಗಡಿ ಭಾಗದಲ್ಲಿ ಶಿಕ್ಷಕರ ನಿಯೋಜನೆ ಆಗಲಿ

ಗಡಿ ಭಾಗದಲ್ಲಿ ಕನ್ನಡ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿಯಾಗಬೇಕು. ಮೂಲಸೌಕರ್ಯಗಳ ವೃದ್ಧಿಯಾಗಬೇಕು. ಗ್ರಾಮೀಣ ಭಾಗದಲ್ಲಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಅನುಮತಿ ಕೊಡಬಾರದು, ಸಾರಿಗೆ ಸಂಚಾರಕ್ಕೆ ಅನುಕೂಲವಾದರೆ ಗಡಿ ಜನರ ಮನಸ್ಸು ಪರಿವರ್ತನೆಯಾಗಲು ಸಾಧ್ಯವಿದೆ. ಗಡಿನಾಡಿನಲ್ಲಿ ಕನ್ನಡವನ್ನು ನಿರಂತರವಾಗಿ ಉಳಿಸುವ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಳ್ಳಬೇಕು.

ಇಂಥ ಕನ್ನಡಪರ ಕಾರ್ಯ ಮಾಡಬೇಕೆನ್ನುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಸರ್ಕಾರದ ಒಂದೇ ಒಂದು ಪೈಸೆ ಅನುದಾನ ಬಂದಿಲ್ಲ. ಹೀಗಾದರೆ ಕನ್ನಡ ಕೈಕರ್ಯ ಮಾಡಲು ಹೇಗೆ ಸಾಧ್ಯ. ಗಡಿ ಭಾಗವನ್ನು ಹಂಚಿಕೊಂಡ ಗ್ರಾಮಗಳಲ್ಲಿ ಕಲಾ ಭವನ ಅಥವಾ ರಂಗಭವನಗಳು ಆಗಬೇಕು. ತಾಲೂಕು ಕೇಂದ್ರದಲ್ಲಿ ಕನ್ನಡ ಭವನವೇ ಇಲ್ಲ. ಇದರ ಚುಟವಟಿಕೆ ನಡೆಸುವುದು ಹೇಗೆ ಕನ್ನಡ ಉಳಿಸಿ ಬೆಳೆಸಲು ಮೂಲಸೌಕರ್ಯಗಳನ್ನು ಕಲ್ಪಿಸಲು ಸರ್ಕಾರ ಮುಂದಾಗಬೇಕು ಎಂದು ಆಳಂದ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರ ಒತ್ತಾಸೆ.

ಗಡಿನಾಡಿಗರ ಸಮಸ್ಯೆಗೆ ಸ್ಪಂದಿಸಿ

ಮಾತೃ ಭಾಷೆಯಿಂದಲೆ ವ್ಯಕ್ತಿಗೆ ಸಮಗ್ರ ಜ್ಞಾನ ಬೆಳೆಯುತ್ತದೆ. ನಮ್ಮ ಮಾತ್ರ ಭಾಷೆ ಕನ್ನಡ ನಾಡು, ನುಡಿಯನ್ನು ಮತ್ತು ಸಾಹಿತ್ಯವನ್ನು ಕನ್ನಡ ರಾಜ್ಯೋತ್ಸವ ಆಚರಣೆಯ ಮೂಲಕ ಘನತೆ ಗೌರವವನ್ನು ಮೆರೆಯಲು ಪ್ರತಿಯೊಬ್ಬರು ಕೈಜೋಡಿಸಬೇಕು. ಸರ್ಕಾರ ಗಡಿ ಭಾಗದ ಕನ್ನಡಿಗರ ಮೂಲ ಸಮಸ್ಯೆಗಳ ಅರಿತು ಅವರ ಬೇಡಿಕೆ ಈಡೇರಿಸಿ ಅನುಕೂಲ ಮಾಡಿಕೊಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಆಳಂದ ತಾಲೂಕು ಅಧ್ಯಕ್ಷ ಈರಣ್ಣಾ ಆಳಂದ ಧಂಗಾಪೂರ ಒತ್ತಾಯಿಸಿದ್ದಾರೆ.

ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ