logo
ಕನ್ನಡ ಸುದ್ದಿ  /  ಕರ್ನಾಟಕ  /  Kalaburagi News: ಪೊಲೀಸ್ ಕಾನ್ಸಟೇಬಲ್ ಪರೀಕ್ಷೆ ಮುಂದೂಡಿಕೆ; ನವೆಂಬರ್ 5 ರಂದು ನಡೆಯಬೇಕಾಗಿದ್ದ ಪರೀಕ್ಷೆ ನವೆಂಬರ್‌ 19ಕ್ಕೆ ನಿಗದಿ

Kalaburagi News: ಪೊಲೀಸ್ ಕಾನ್ಸಟೇಬಲ್ ಪರೀಕ್ಷೆ ಮುಂದೂಡಿಕೆ; ನವೆಂಬರ್ 5 ರಂದು ನಡೆಯಬೇಕಾಗಿದ್ದ ಪರೀಕ್ಷೆ ನವೆಂಬರ್‌ 19ಕ್ಕೆ ನಿಗದಿ

HT Kannada Desk HT Kannada

Oct 28, 2023 12:47 PM IST

google News

ಪೊಲೀಸ್ ಕಾನ್ಸಟೇಬಲ್ ಪರೀಕ್ಷೆ ಮುಂದೂಡಿಕೆ; ನವೆಂಬರ್ 5 ರಂದು ನಡೆಯಬೇಕಾಗಿದ್ದ ಪರೀಕ್ಷೆ ನವೆಂಬರ್‌ 19ಕ್ಕೆ ನಿಗದಿ

    • ರಾಜ್ಯ ಲೋಕಸೇವಾ ಆಯೋಗವು ಲೆಕ್ಕ ಪರಿಶೋಧನಾ ಮತ್ತು ಲೆಕ್ಕ ಸಹಾಯಕರ ಹುದ್ದೆಗಳಿಗೆ ಹಾಗೂ ರಾಜ್ಯ ಪೊಲೀಸ್‌ ಇಲಾಖೆಯು ಖಾಲಿ ಇರುವ ಸಿವಿಲ್ ಕಾನ್‌ಸ್ಟೇಬಲ್‌ ಹುದ್ದೆಗಳಿಗೆ ನೇಮಕಾತಿ ನಡೆಸಲು ಲಿಖಿತ ಪರೀಕ್ಷೆಯನ್ನು ನವೆಂಬರ್ 5, 2023ರಂದು ನಿಗದಿಪಡಿಸಿತ್ತು.
ಪೊಲೀಸ್ ಕಾನ್ಸಟೇಬಲ್ ಪರೀಕ್ಷೆ ಮುಂದೂಡಿಕೆ; ನವೆಂಬರ್ 5 ರಂದು ನಡೆಯಬೇಕಾಗಿದ್ದ ಪರೀಕ್ಷೆ ನವೆಂಬರ್‌ 19ಕ್ಕೆ ನಿಗದಿ
ಪೊಲೀಸ್ ಕಾನ್ಸಟೇಬಲ್ ಪರೀಕ್ಷೆ ಮುಂದೂಡಿಕೆ; ನವೆಂಬರ್ 5 ರಂದು ನಡೆಯಬೇಕಾಗಿದ್ದ ಪರೀಕ್ಷೆ ನವೆಂಬರ್‌ 19ಕ್ಕೆ ನಿಗದಿ

ಕಲಬುರಗಿ: ನವೆಂಬರ್ 05 ರಂದು ಪೊಲೀಸ್ ಇಲಾಖೆ ನಡೆಸಲು ಉದ್ದೇಶಿಸಿದ್ದ ಕಾನ್ಸಟೇಬಲ್ ಪರೀಕ್ಷೆಯನ್ನು ಮುಂದೂಡಿದ್ದು ಸ್ವಾಗತಾರ್ಹ ನಿರ್ಧಾರ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ರಾಜ್ಯ ಲೋಕಸೇವಾ ಆಯೋಗವು ಲೆಕ್ಕ ಪರಿಶೋಧನಾ ಮತ್ತು ಲೆಕ್ಕ ಸಹಾಯಕರ ಹುದ್ದೆಗಳಿಗೆ ಹಾಗೂ ರಾಜ್ಯ ಪೊಲೀಸ್‌ ಇಲಾಖೆಯು ಖಾಲಿ ಇರುವ ಸಿವಿಲ್ ಕಾನ್‌ಸ್ಟೇಬಲ್‌ ಹುದ್ದೆಗಳಿಗೆ ನೇಮಕಾತಿ ನಡೆಸಲು ಲಿಖಿತ ಪರೀಕ್ಷೆಯನ್ನು ನವೆಂಬರ್ 5, 2023ರಂದು ನಿಗದಿಪಡಿಸಿತ್ತು.

ಒಂದೇ ದಿನ ಮೂರು ಪರೀಕ್ಷೆಗಳನ್ನು ನಡೆಸುವುದರಿಂದ ಸಾವಿರಾರು ಅರ್ಹ ಅಭ್ಯರ್ಥಿಗಳಿಗೆ ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದ ಯುವಕರಿಗೆ ಹೆಚ್ಚಿನ ಅನಾನುಕೂಲವಾಗುತ್ತಿತ್ತು. ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಪರೀಕ್ಷೆಯ ದಿನಾಂಕವನ್ನು ಬದಲಾಯಿಸುವಂತೆ ಸಚಿವರು ಮನವಿ ಮಾಡಿದ್ದರು.

ಜೊತೆಗೆ IPS ಹಾಗೂ ನೇಮಕಾತಿ ಸಮನ್ವಯ ಅಧಿಕಾರಿಗಳಾದ ಯಡಾ ಮಾರ್ಟನ್ ಮಾರ್ಬನ್ಯಾಂಗ್ ಹಾಗೂ ಡಿಜಿಪಿ ಕಮಲ್ ಪಂತ್ ಅವರನ್ನು ಕಚೇರಿಗೆ ಕರೆದು ಸಭೆ ನಡೆಸಿ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದರು. ಇದರಿಂದಾಗಿ ರಾಜ್ಯ ಪೊಲೀಸ್ ಇಲಾಖೆಯು ತನ್ನ ಕಾನ್ಸ್ ಟೆಬಲ್ ಪರೀಕ್ಷೆಯ ದಿನಾಂಕವನ್ನು 19 ನವೆಂಬರ್ 2023 ಮುಂದೂಡಿ ಆದೇಶ ಹೊರಡಿಸಿದೆ. ಈ ನಿರ್ಧಾರ ಸ್ವಾಗತಾರ್ಹ ಎಂದು‌ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

" ನಮ್ಮ ಕಲ್ಯಾಣ ಕರ್ನಾಟಕ ಭಾಗದ ಯುವಕರಿಗೆ ಅನ್ಯಾಯವಾಗದಂತೆ ಪರೀಕ್ಷೆ ಬರೆಯಲು ಅವಕಾಶ ನೀಡಿದ ಗೃಹ ಇಲಾಖೆಗೆ ಈ ಮೂಲಕ ಧನ್ಯವಾದಗಳನ್ನು ತಿಳಿಸುತ್ತೇನೆ. ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ತಮ್ಮ ಉಜ್ವಲ ಭವಿಷ್ಯ ಕಟ್ಟಿಕೊಳ್ಳಲು ನಮ್ಮ ಯುವ ಜನತೆ ಮುಂದಾಗಬೇಕು ಎಂದೂ ಈ ಮೂಲಕ ತಿಳಿಸಲು ಇಚ್ಛಿಸುತ್ತೇನೆ" ಎಂದು ಸಚಿವರು ಕರೆ ನೀಡಿದ್ದಾರೆ.

(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ