logo
ಕನ್ನಡ ಸುದ್ದಿ  /  ಕರ್ನಾಟಕ  /  Kalaburagi Weather: ಬಿಸಿಲುನಾಡು ಕಲಬುರಗಿಯಲ್ಲಿ ಬಿಸಿಲ ಝಳಕ್ಕೆ ತತ್ತರಿಸಿದ ಜನರು, ಮುಂದಿನ ಮೂರು ದಿನವೂ ಧಗಧಗ ಮುನ್ಸೂಚನೆ

Kalaburagi Weather: ಬಿಸಿಲುನಾಡು ಕಲಬುರಗಿಯಲ್ಲಿ ಬಿಸಿಲ ಝಳಕ್ಕೆ ತತ್ತರಿಸಿದ ಜನರು, ಮುಂದಿನ ಮೂರು ದಿನವೂ ಧಗಧಗ ಮುನ್ಸೂಚನೆ

HT Kannada Desk HT Kannada

May 17, 2023 08:00 AM IST

Kalaburagi Weather: ಬಿಸಿಲುನಾಡು ಕಲಬುರಗಿಯಲ್ಲಿ ಬಿಸಿಲ ಛಳಕ್ಕೆ ತತ್ತರಿಸಿದ ಜನರು, ಮುಂದಿನ ಮೂರು ದಿನವೂ ಧಗಧಗ ಮುನ್ಸೂಚನೆ

    • Kalaburagi Weather Updates: ಬಿಸಿಲನಾಡು ಕಲಬುರಗಿಯಲ್ಲಿ ಬಿಸಿಲಿನ ಛಳಕ್ಕೆ ಜನರು ತತ್ತರಿಸಿದ್ದಾರೆ. ಇದೇ ಸಮಯದಲ್ಲಿ ಮುಂದಿನ ಮೂರು ದಿನ ಇದೇ ರೀತಿ ಬಿಸಿಲು, ಬಿಸಿಗಾಳಿ ಇರುವ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ. ಬಿಸಿಲಕಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು? ಏನು ಮಾಡಬಾರದು? ಎಂಬ ಸಲಹೆಯೂ ಇಲ್ಲಿದೆ.
Kalaburagi Weather: ಬಿಸಿಲುನಾಡು ಕಲಬುರಗಿಯಲ್ಲಿ ಬಿಸಿಲ ಛಳಕ್ಕೆ ತತ್ತರಿಸಿದ ಜನರು, ಮುಂದಿನ ಮೂರು ದಿನವೂ ಧಗಧಗ ಮುನ್ಸೂಚನೆ
Kalaburagi Weather: ಬಿಸಿಲುನಾಡು ಕಲಬುರಗಿಯಲ್ಲಿ ಬಿಸಿಲ ಛಳಕ್ಕೆ ತತ್ತರಿಸಿದ ಜನರು, ಮುಂದಿನ ಮೂರು ದಿನವೂ ಧಗಧಗ ಮುನ್ಸೂಚನೆ

ಕಲಬುರಗಿ: ಬಿಸಿಲು ನಾಡೆಂದು ಕರೆಯಲ್ಪಡುವ ಕಲಬುರಗಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗ ತೊಡಗಿದ್ದು, ಜನ ಬಿಸಿಲಿನ ಝಳಕ್ಕೆ ತತ್ತರಿಸಿ ಹೋಗಿದ್ದಾರೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

Prajwal Revanna Scandal: ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ; ಶೀಘ್ರದಲ್ಲೇ ಹಾಸನ ಸಂಸದ ಇರುವ ಸ್ಥಳ ಪತ್ತೆ

Bangalore News:ಮುಂಗಾರಿಗೆ ಅಣಿಯಾಗುತ್ತಿದೆ ಬೆಂಗಳೂರು, ಬಿಬಿಎಂಪಿಯಿಂದ ಸ್ವಚ್ಛ ಕಾರ್ಯ ಚುರುಕು

Summer Effect: ಬಿಸಿಲಿಗೆ ತತ್ತರಿಸಿದ ಕುಕ್ಕುಟೋದ್ಯಮ, ಕೋಳಿ ಉಳಿಸಿಕೊಳ್ಳಲು ಕೂಲರ್‌ ಮೊರೆ, ಚಿಕನ್‌ ಬೆಲೆಯಲ್ಲಿ ಏರಿಕೆ

ಸಿಇಟಿ, ನೀಟ್ ಕುರಿತು ಆಟೊ ಚಾಲಕನೊಂದಿಗೆ ಮಹಿಳೆ ಚರ್ಚೆ; ಪ್ರಯಾಣದಲ್ಲಿನ ಸಂಭಾಷಣೆ ಪೋಸ್ಟ್‌ ವೈರಲ್, ಭಾರಿ ಮೆಚ್ಚುಗೆ

ಬಿಸಿಲಿರಲಿ, ಚಳಿ ಇರಲಿ, ಮಳೆ ಇರಲಿ ಏನೇ ಆದರೂ ಹೊಟ್ಟೆ ತುಂಬಿಸಿಕೊಳ್ಳಲು ಆಚೆ ಹೋಗಲೇ ಬೇಕು. ಕೆಲಸ ಮಾಡಲೇಬೇಕು. ಹೀಗಾಗಿ ಜನ ರಣ ಬಿಸಿಲಿನಲ್ಲಿಯೂ ಕೂಲಿ ಕಾರ್ಮಿಕರು, ನೌಕರರು ಕೆಲಸಕ್ಕೆ ಹೋಗುವುದು ಅನಿವಾರ್ಯ. ಕೊಡೆ ಹಿಡಿದುಕೊಂಡು, ಟೊಪ್ಪಿಗೆ ಧರಿಸಿಕೊಂಡು ಹೋಗುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ.

ಹವಾಮಾನ ಇಲಾಖೆಯ ವರದಿಯಂತೆ ಕಲಬುರಗಿ ಜಿಲ್ಲೆಯಲ್ಲಿ ಮುಂದಿನ 3 ದಿನಗಳಲ್ಲಿ ಗರಿಷ್ಠ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು (ತಾಪಮಾನ) ಬಿಸಿಲು ಮತ್ತು ಬಿಸಿ ಗಾಳಿ ಇರುವುದಾಗಿ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಆದ್ದರಿಂದ ಜಿಲ್ಲೆಯ ಸಾರ್ವಜನಿಕರು ಬಿಸಿಲಿನ ಶಾಖದಿಂದ ತಪ್ಪಿಸಿಕೊಳ್ಳಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಕಲಬುರಗಿ ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ತಿಳಿಸಿದ್ದಾರೆ.

ಏನು ಮಾಡಬೇಕು?

ಸಾರ್ವಜನಿಕರು ರೇಡಿಯೋ, ಟಿ.ವಿ. ಹಾಗೂ ದಿನಪತ್ರಿಕೆಗಳಲ್ಲಿ ಬರುವ ಅತಿಯಾದ ಬಿಸಿಲಿನ ಕುರಿತು ಮುನ್ಸೂಚನೆ ಪಡೆದುಕೊಳ್ಳಬೇಕು. ಬಾಯಾರಿಕೆಯಿಲ್ಲದಿದ್ದರೂ ಸಹ ಸಾಕಷ್ಟು ಮತ್ತು ಸಾಧ್ಯವಾದಷ್ಟು ಹೆಚ್ಚಾಗಿ ನೀರು ಕುಡಿಯಬೇಕು. ಹಗುರವಾದ ತಿಳಿ-ಬಣ್ಣದ, ಸಡಿಲವಾದ ಮತ್ತು ರಂದ್ರವುಳ್ಳ ಹತ್ತಿ ಬಟ್ಟೆಗಳನ್ನು ಧರಿಸಬೇಕು.

ಬಿಸಿಲಿನಲ್ಲಿ ಹೊರಗೆ ಹೋಗುವಾಗ ರಕ್ಷಣಾತ್ಮಕ ಕನ್ನಡಕ, ಟೋಪಿ, ಬೂಟುಗಳು ಅಥವಾ ಚಪ್ಪಲಗಳನ್ನು ಧರಿಸಬೇಕು. ಬಸ್ಸಿನಲ್ಲಿ ದೂರದ ಪ್ರಯಾಣವನ್ನು ರಾತ್ರಿ ವೇಳೆಯಲ್ಲಿ ಮಾಡುವುದು ಉತ್ತಮ. ಒಂದು ವೇಳೆ ಪ್ರಮಾಣ ಮಾಡಿದ್ದಲ್ಲಿ ಈ ಸಂದರ್ಭದಲ್ಲಿ ಕುಡಿಯುವ ನೀರನ್ನು ತಪ್ಪದೇ ಒಯ್ಯಬೇಕು.

ಹೊರಗಡೆ ಕೆಲಸ ಮಾಡುತ್ತಿದ್ದಲ್ಲಿ ಟೋಪಿ ಅಥವಾ (ಕೊಡೆ) ಛತ್ರಿಯನ್ನು ಬಳಸುವದರ ಜೊತೆಗೆ ತಲೆ, ಕುತ್ತಿಗೆ, ಮುಖ ಮತ್ತು ಕೈಕಾಲುಗಳ ಮೇಲೆ ಒದ್ದೆಯಾದ ಬಟ್ಟೆಯನ್ನು ಬಳಸಬೇಕು. ಓ.ಆರ್.ಎಸ್., ಮನೆಯಲ್ಲಿ ತಯಾರಿಸಿದ ಲಸ್ಸಿ, ಶರಬತ್, ನಿಂಬೆ ನೀರು, ಮಜ್ಜಿಗೆಗಳನ್ನು ಬಳಸಬೇಕು. ಮನೆಯನ್ನು ತಂಪಾಗಿರಿಕೊಳ್ಳಬೇಕು. ಒದ್ದೆಯಾದ ಬಟ್ಟೆಗಳನ್ನು ಮತ್ತು ಆಗಾಗ್ಗೆ ತಣ್ಣೀರಿನಲ್ಲಿ ಸ್ನಾನ ಮಾಡಬೇಕು. ತಂಪಾದ ಸಮಯದಲ್ಲಿ ಕೆಲಸ ಮಾಡಬೇಕು. ಕೆಲಸ ನಿರ್ವಹಿಸುತ್ತಿರುವ ಗರ್ಭಿಣಿ ಮಹಿಳೆಯರಿಗೆ ಮತ್ತು ಅನಾರೋಗ್ಯದಿಂದಿರುವ ಕಾರ್ಮಿಕರಿಗೆ ಹೆಚ್ಚಿನ ಗಮನ ಹರಿಸಬೇಕು.

ಏನು ಮಾಡಬಾರದು?

ಮಕ್ಕಳು ಮತ್ತು ಸಾಕುಪ್ರಾಣಿಗಳನ್ನು ಬಿಸಿಲಿನಲ್ಲಿ ನಿಲ್ಲಿಸಿದ ವಾಹನಗಳ ಹತ್ತಿರ ಬಿಡಬಾರದು. ವಿಶೇಷವಾಗಿ ಮಧ್ಯಾಹ್ನ 12 ಗಂಟೆಯಿAದ ಮಧ್ಯಾಹ್ನ 3ರ ನಡುವೆ ಬಿಸಿಲಿನಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಬೇಕು. ಕಪ್ಪು ಬಟ್ಟೆ ಅಥವಾ ಬಿಗಿಯಾದ ಬಟ್ಟೆಗಳನ್ನು ಧರಿಸಬಾರದು. ಹೊರಗಿನ ತಾಪಮಾನ ಹೆಚ್ಚಾದಾಗ ಶ್ರಮದಾಯಕ ಚಟ್ಟುವಟಿಕೆಗಳನ್ನು ತಪ್ಪಿಸಿ, ಮಧ್ಯಾಹ್ನ 12 ರಿಂದ ಮಧ್ಯಾಹ್ನ 3ರವರೆಗೆ ಹೊರಗಡೆ ಹೋಗಬಾರದು. ಅಡುಗೆ ಪ್ರದೇಶವನ್ನು ಸಮರ್ಪಕವಾಗಿ ಗಾಳಿಯಾಡಲು ಬಾಗಿಲು ಮತ್ತು ಕಿಟಕಿಗಳನ್ನು ತೆರೆಯಬೇಕು. ದೇಹವನ್ನು ನಿರ್ಜಲೀಕರಣಗೊಳಿಸುವ ಅಲ್ಕೋಹಾಲ, ಚಹಾ, ಕಾಫಿ ಮತ್ತು ಹಾನಿಕಾರಕ ತಂಪು ಪಾನೀಯ, ಆಹಾರ ಹಾಗೂ ಹಳಸಿದ ಆಹಾರವನ್ನು ಸೇವಿಸಬಾರದೆಂದು ತಿಳಿಸಿದ್ದಾರೆ.

(ವರದಿ: ಎಸ್.ಬಿ.ರೆಡ್ಡಿ)

    ಹಂಚಿಕೊಳ್ಳಲು ಲೇಖನಗಳು