Employment news: ಯಾದಗಿರಿ ನ್ಯಾಯಾಲಯ, ಬೀದರ್ ಶಿಶು ಅಭಿವೃದ್ದಿ ಯೋಜನೆಯಲ್ಲಿ ಉದ್ಯೋಗಾವಕಾಶ
Jan 10, 2024 04:28 PM IST
ಯಾದಗಿರಿ ಹಾಗೂ ಬೀದರ್ ಜಿಲ್ಲೆಯಲ್ಲಿ ವಿವಿಧ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
- Employment updates ಉತ್ತರ ಕರ್ನಾಟಕದ ಯಾದಗಿರಿ ಜಿಲ್ಲೆಯ ನ್ಯಾಯಾಲಯ ಹಾಗೂ ಬೀದರ್ ಜಿಲ್ಲೆಯ ಶಿಶು ಅಭಿವೃದ್ದಿ ಯೋಜನೆಯಡಿ ಹಲವು ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಇದರ ವಿವರ ಇಲ್ಲಿದೆ.
ಯಾದಗಿರಿ/ ಬೀದರ್: ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಸರ್ಕಾರಿ ಉದ್ಯೋಗಗಳಿಗೆ ಸಂಬಂಧಿಸಿದಂತೆ ಅರ್ಜಿ ಆಹ್ವಾನಿಸಲಾಗಿದೆ. ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳು ಹಾಗೂ ಬೀದರ್ ಜಿಲ್ಲೆಯ ಶಿಶು ಅಭಿವೃದ್ದಿ ಯೋಜನೆಯಡಿ ಉದ್ಯೋಗದ ಅವಕಾಶಗಳಿವೆ. ಯಾದಗಿರಿ ಜಿಲ್ಲೆಯ ಜಿಲ್ಲಾ ನ್ಯಾಯಾಲಯದಲ್ಲಿ ಕಲ್ಯಾಣ ಕರ್ನಾಟಕ (ಸ್ಥಳೀಯ ವೃಂದ)ದಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರು ಗ್ರೇಡ್-III ಹುದ್ದೆಯ ನೇರ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಫೆಬ್ರವರಿ 16ರೊಳಗೆ ಅರ್ಜಿ ಸಲ್ಲಿಸಬಹುದು.ಶು ಅಭಿವೃದ್ಧಿ ಯೋಜನೆ ಬೀದರ ವ್ಯಾಪ್ತಿಯಲ್ಲಿ ಖಾಲಿ ಇರುವ 31 ಅಂಗನವಾಡಿ ಕಾರ್ಯಕರ್ತೆಯರ ಪೈಕಿ ಪ.ಜಾ-04, ಪ.ಪಂ-02 ಹಾಗೂ ಇತರೆ-25 ಮತ್ತು 65 ಅಂಗನವಾಡಿ ಸಹಾಯಕಿಯರ ಪೈಕಿ ಪ.ಜಾ-06, ಪ.ಪಂ-07 ಹಾಗೂ ಇತರೆ-52 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಯಾದಗರಿಯಲ್ಲಿ ನೇಮಕ
ಯಾದಗಿರಿ ಜಿಲ್ಲೆಯ ಜಿಲ್ಲಾ ನ್ಯಾಯಾಲಯದಲ್ಲಿ ಕಲ್ಯಾಣ ಕರ್ನಾಟಕ (ಸ್ಥಳೀಯ ವೃಂದ) ದಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರು ಗ್ರೇಡ್-III ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮುಖಾಂತರ ಅರ್ಜಿ ಆಹ್ವಾನಿಸಿದೆ.
ಶೀಘ್ರಲಿಪಿಗಾರರು ಗ್ರೇಡ್-III ಒಟ್ಟು ಹುದ್ದೆ-1 ವೇತನ ಶ್ರೇಣಿ 27650-650-29600-750-32600-850-36000-950-39800-1100-46400-1250-52650 ಹಾಗೂ ವಿಶೇಷ ಭತ್ಯೆ. ಮೀಸಲಾತಿ ವರ್ಗ ಪ್ರವರ್ಗ-2ಎ ಸಮಾನ್ಯ -1 ಒಟ್ಟು-1 ಹುದ್ದೆ ಇದ್ದು, ಉಳಿಕೆ ಮೂಲ ವೃಂದದಲ್ಲಿ ಯಾವುದೇ ಹುದ್ದೆಗಳು ಖಾಲಿ ಇರುವುದಿಲ್ಲ.
ಶೀಘ್ರಲಿಪಿಗಾರರು ಗ್ರೇಡ್-III ಹುದ್ದೆಯ ವಿದ್ಯಾರ್ಹತೆ ಅರ್ಜಿಸಲ್ಲಿಸಲು ನಿಗದಿಪಡಿಸಿದ ಕಡೆಯ ದಿನಾಂಕದ ಒಳಗಾಗಿ ಅಭ್ಯರ್ಥಿಗಳು ದ್ವಿತೀಯ ಪಿ.ಯು.ಸಿ ಅಥವಾ ಮೂರು ವರ್ಷದ ಡಿಪ್ಲೋಮ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು ಮತ್ತು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಕನ್ನಡ ಮತ್ತು ಇಂಗ್ಲೀಷ್ ಎರಡೂ ತತ್ಸಮಾನ ಪರೀಕ್ಷೆಯಲ್ಲಿ, ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿರುವ ಕಡೆಯ ದಿನಾಂಕದೊಳಗೆ ಉತ್ತೀರ್ಣರಾರಿರಬೇಕು.
ಶೀಘ್ರಲಿಪಿಗಾರರು ಗ್ರೇಡ್-III ಹುದ್ದೆಯ ಆಯ್ಕೆ ವಿಧಾನ ಕರ್ನಾಟಕ ಅಧೀನ ನ್ಯಾಯಾಲಯಗಳು (ಮಿನಿಸ್ಟೇರಿಯಲ್ ಮತ್ತು ಇತರೆ ಹುದ್ದೆಗಳು) (ನೇಮಕಾತಿ) ನಿಯಮಗಳು 1982 ಮತ್ತು (ತಿದ್ದುಪಡಿ) ನಿಯಮಗಳು 2007 ರನ್ವಯ ಅಭ್ಯರ್ಥಿಗಳಿಗೆ ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಪ್ರತಿ ನಿಮಿಷಕ್ಕೆ 120 ಪದಗಳ ವೇಗದಂತೆ 5 ನಿಮಿಷಗಳ ಉಕ್ತಲೇಖನ ನೀಡಿ ನಂತರ 45 ನಿಮಿಷಗಳ ಅವಧಿಯಲ್ಲಿ ಬೆರಳಚ್ಚುಯಂತ್ರದ ಮೇಲೆ ಲಿಪ್ಯಂತರ ಮಾಡಲು ಹೇಳಲಾಗುವುದು.
ಸಾಮರ್ಥ್ಯ ಪರೀಕ್ಷೆಯು ಕನ್ನಡ ಹಾಗೂ ಇಂಗ್ಲೀಷ್ ಎರಡರಲ್ಲಿಯೂ ಗರಿಷ್ಠ 100 ಅಂಕಗಳನ್ನು ಒಳಗೊಂಡಿದ್ದು, ಅದರಲ್ಲಿ ತೆರ್ಗಡೆಯಾಗಲು ಕನಿಷ್ಠ 50 ಅಂಕಗಳನ್ನು ಎರಡರಲ್ಲಿಯೂ ಪಡೆಯಬೇಕು ಮತ್ತು ಸಂದರ್ಶನವು 10 ಅಂಕಗಳನ್ನೊಳಗೊಂಡಿರುತ್ತದೆ. ವಯೋಮಿತಿ ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದAದು ಅಭ್ಯರ್ಥಿಯು ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು.
ಅಭ್ಯರ್ಥಿಗಳು ಅರ್ಜಿಯನ್ನು ಯಾದಗಿರಿ ಜಿಲ್ಲಾ ನ್ಯಾಯಾಲಯದ ಅಧಿಕೃತ ಜಾಲ ತಾಣವಾದ https://yadgir.dcourts.gov.in/notice-category/recruitments ನಲ್ಲಿ ನೀಡಲಾದ ಲಿಂಕ್ ಮೂಲಕ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಆರಂಭ ಜನವರಿ 16 ರಿಂದ ಫೆಬ್ರವರಿ 15 ರಂದು ರಾತ್ರಿ 11.59 ಗಂಟೆಯ ಒಳಗೆ ಅರ್ಜಿಸಲ್ಲಿಸಬೇಕು, ಶುಲ್ಕವನ್ನು 2024ರ ಫೆಬ್ರವರಿ 16ಒಳಗೆ ಪಾವತಿಸಬೇಕು. ಆನ್‌ಲೈನ್ ಹೊರತುಪಡಿಸಿ ಖುದ್ದಾಗಿ, ಅಂಚೆ ಮೂಲಕ ಅಥವಾ ಇನ್ಯಾವುದೇ ರೀತಿಯಲ್ಲಿ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾದಗಿರಿ ಮುಖ್ಯ ಆಡಳಿತಧಿಕಾರಿಗಳು, ಜಿಲ್ಲಾ ಪ್ರಧಾನ ಹಾಗೂ ಜಿಲ್ಲಾ ಸತ್ರ ನ್ಯಾಯಾಲಯ, ಯಾದಗಿರಿ ಅಥವಾ ವೆಬ್‌ಸೈಟ್‌ನಲ್ಲಿ ಸಂಪರ್ಕಿಸಬಹುದು ಎಂದು ಎಂದು ಯಾದಗಿರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್. ರೇಖಾ ಅವರು ತಿಳಿಸಿದ್ದಾರೆ.
ಬೀದರ್ ನೇಮಕ
ಬೀದರ್ ಶಿಶು ಅಭಿವೃದ್ಧಿ ಯೋಜನೆ ಬೀದರ ವ್ಯಾಪ್ತಿಯಲ್ಲಿ ಖಾಲಿ ಇರುವ 83ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಫೆಬ್ರವರಿ 5ರ ಸಂಜೆ 5ರೊಳಗಾಗಿ ವೆಬ್‌ಸೈಟ್ https://karnemakaone.kar.nic.in/abcd//ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಬೀದರ ಬ್ಯಾಂಕ್ ಕಾಲೋನಿ ರಸ್ತೆ, ರಾಂಪೂರೆ ಕಾಲೋನಿ, ಬೀದರ-08482-233115 ಇವರನ್ನು ಕಛೇರಿ ಸಮಯದಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಬೀದರ ತಾಲೂಕು ಅಂ.ಕಾ.ಕ ಮತ್ತು ಅಂ.ಸ ಆಯ್ಕೆ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.