logo
ಕನ್ನಡ ಸುದ್ದಿ  /  ಕರ್ನಾಟಕ  /  2nd Puc Time Table 2025: ಕರ್ನಾಟಕ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ, ಮಾರ್ಚ್‌ 1ರಿಂದ ಪರೀಕ್ಷೆ ಆರಂಭ

2nd PUC Time Table 2025: ಕರ್ನಾಟಕ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ, ಮಾರ್ಚ್‌ 1ರಿಂದ ಪರೀಕ್ಷೆ ಆರಂಭ

Praveen Chandra B HT Kannada

Dec 02, 2024 01:28 PM IST

google News

ಕರ್ನಾಟಕದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

    • Karnataka 2nd PUC Time Table 2025: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು ದ್ವಿತೀಯ ಪಿಯುಸಿ ಪರೀಕ್ಷೆ 2025ರ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದೆ. ಮಾರ್ಚ್‌ 1ರಿಂದ ಮಾರ್ಚ್‌ 19ರವರೆಗೆ ಸೆಕೆಂಡ್‌ ಪಿಯುಸಿ ಎಕ್ಸಾಂ ನಡೆಯಲಿದೆ. 
ಕರ್ನಾಟಕದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
ಕರ್ನಾಟಕದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ (ANI)

Karnataka 2nd PUC Time Table 2025: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು ದ್ವಿತೀಯ ಪಿಯುಸಿ ಪರೀಕ್ಷೆ 2025ರ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದೆ. ಮಾರ್ಚ್‌ 1ರಿಂದ ಮಾರ್ಚ್‌ 19ರವರೆಗೆ ಸೆಕೆಂಡ್‌ ಪಿಯುಸಿ ಎಕ್ಸಾಂ ನಡೆಯಲಿದೆ. ಯಾವ ದಿನಾಂಕದಂದು ಯಾವ ವಿಷಯದ ಪರೀಕ್ಷೆ ನಡೆಯಲಿದೆ? ಪರೀಕ್ಷೆ ನಡೆಯುವ ಸಮಯ ಸೇರಿದಂತೆ ಸಂಪೂರ್ಣ ವಿವರ ಇಲ್ಲಿ ನೀಡಲಾಗಿದೆ.

ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ (ತಾತ್ಕಾಲಿಕ)

ಎಲ್ಲಾ ಪರೀಕ್ಷೆಗಳು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ತನಕ ನಡೆಯಲಿದೆ.

ಮಾರ್ಚ್‌ 1, 2025, ಶನಿವಾರ: ಕನ್ನಡ/ಅರೇಬಿಕ್‌

ಮಾರ್ಚ್‌ 3, 2025, ಸೋಮವಾರ: ಗಣಿತ/ ಶಿಕ್ಷಣ ಶಾಸ್ತ್ರ/ ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ

ಮಾರ್ಚ್‌ 4, 2025, ಮಂಗಳವಾರ: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್‌

ಮಾರ್ಚ್‌ 5, 2025, ಬುಧವಾರ: ರಾಜ್ಯಶಾಸ್ತ್ರ/ ಸಂಖ್ಯಾಶಾಸ್ತ್ರ

ಮಾರ್ಚ್‌ 6, 2025, ಗುರುವಾರ: ಪರೀಕ್ಷೆ ಇರುವುದಿಲ್ಲ.

ಮಾರ್ಚ್‌ 7, 2025: ಶುಕ್ರವಾರ: ಇತಿಹಾಸ, ಭೌತಶಾಸ್ತ್ರ

ಮಾರ್ಚ್‌ 8, 2025 ಶನಿವಾರ: ಹಿಂದಿ

ಮಾರ್ಚ್‌ 9 ಭಾನುವಾರ ರಜಾದಿನ

ಮಾರ್ಚ್‌ 10: ಐಚ್ಛಿಕ ಕನ್ನಡ/ ಲೆಕ್ಕಶಾಸ್ತ್ರ/ ಭೂರ್ಗಭಶಾಸ್ತ್ರ/ ಗೃಹ ವಿಜ್ಞಾನ

ಮಾರ್ಚ್‌ 11 ಮಂಗಳವಾರ ಪರೀಕ್ಷೆ ಇರುವುದಿಲ್ಲ.

ಮಾರ್ಚ್‌ 12, ಬುಧವಾರ: ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲ ಗಣಿತ

ಮಾರ್ಚ್‌ 13, ಗುರುವಾರ: ಅರ್ಥಶಾಸ್ತ್ರ

ಮಾರ್ಚ್‌ 14 ಶುಕ್ರವಾರ ಪರೀಕ್ಷೆ ಇರುವುದಿಲ್ಲ.

ಮಾರ್ಚ್‌15, 2025, ಶನಿವಾರ: ಇಂಗ್ಲಿಷ್‌

ಮಾರ್ಚ್‌16 ಭಾನುವಾರ ಪರೀಕ್ಷೆ ಇರುವುದಿಲ್ಲ.

ಮಾರ್ಚ್‌ 17 ಸೋಮವಾರ: ಭೂಗೋಳಶಾಸ್ತ್ರ/ ಜೀವಶಾಸ್ತ್ರ

ಮಾರ್ಚ್‌ 18, ಮಂಗಳವಾರ: ಸಮಾಜಶಾಸ್ತ್ರ/ ವಿದ್ಯುನ್ಮಾನಶಾಸ್ತ್ರ/ ಗಣಕ ವಿಜ್ಞಾನ

ಮಾರ್ಚ್‌19, ಬುಧವಾರ: ಹಿಂದೂಸ್ತಾನಿಸಂಗೀತ/ ಮಾಹಿತಿ ತಂತ್ರಜ್ಞಾನ/ ರಿಟೇಲ್‌/ ಆಟೋಮೊಬೈಲ್‌/ ಹೆಲ್ತ್‌ಕೇರ್‌/ ಬ್ಯೂಟಿ ಆಂಡ್‌ ವೆಲ್‌ನೆಸ್‌

ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪಿಡಿಎಫ್‌ ಡೌನ್‌ಲೋಡ್‌ ಮಾಡಿಕೊಳ್ಳಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ