Congress Candidates 6th List: ಕಾಂಗ್ರೆಸ್ ಅಭ್ಯರ್ಥಿಗಳ 6ನೇ ಪಟ್ಟಿ ಬಿಡುಗಡೆ; ಈ 5 ಕ್ಷೇತ್ರಗಳಲ್ಲಿ ಸ್ಪರ್ಧಿಸುವವರು ಇವರೇ ನೋಡಿ
Apr 20, 2023 09:04 AM IST
ಸಾಂದರ್ಭಿಕ ಚಿತ್ರ
- ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ 6ನೇ ಪಟ್ಟಿ ಬಿಡುಗಡೆ ಮಾಡಿದ್ದು, ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಕಾಂಗ್ರೆಸ್ ತನ್ನ ಅಭ್ಯರ್ಥಿಗಳ 6ನೇ ಪಟ್ಟಿ(Karnataka Congress Candidates 6th List) ಬಿಡುಗಡೆ ಮಾಡಿದೆ. ತಡರಾತ್ರಿ ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ.
ಕ್ಷೇತ್ರಗಳು ಹಾಗೂ ಅಭ್ಯರ್ಥಿಗಳ ಹೆಸರು ಇಲ್ಲಿದೆ
ರಾಯಚೂರು ನಗರ - ಮೊಹಮ್ಮದ್ ಶಲಾಂ
ಶಿಡ್ಲಘಟ್ಟ - ಬಿ ವಿ ರಾಜೀವ್ ಗೌಡ
ಸಿ ವಿ ರಾಮನ್ ನಗರ (ಎಸ್‌ಸಿ ) - ಎಸ್. ಆನಂದ್ ಕುಮಾರ್
ಅರಕಲಗೂಡು - ಎಚ್.ಪಿ ಶ್ರೀಧರ್ ಗೌಡ
ಮಂಗಳೂರು ನಗರ ಉತ್ತರ - ಇನಾಯತ್ ಅಲಿ
ಶಿಗ್ಗಾಂವಿ ಕ್ಷೇತ್ರದ ಅಭ್ಯರ್ಥಿ ಬದಲಾವಣೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪರ್ಧಿಸುತ್ತಿರುವ ಶಿಗ್ಗಾಂವಿ ಕ್ಷೇತ್ರದಲ್ಲಿ ಯೂಸುಫ್ ಸವಣೂರ ಎಂಬುವರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು. ಆದರೆ ತಡರಾತ್ರಿ ಅವರನ್ನು ಇದ್ದಕ್ಕಿದ್ದಂತೆ ಬದಲಿಸಿದ್ದು, ಯಾಸಿರ್ ಅಹ್ಮದ್ ಖಾನ್ ಪಠಾಣ್ ಎಂಬವರಿಗೆ ಟಿಕೆಟ್ ನೀಡಿದೆ.
ಮಾಜಿ ಎಂಎಲ್ಸಿ ಎನ್.ಎಸ್. ಬೋಸರಾಜು ಹಾಗೂ ಅವರ ಪುತ್ರ ರವಿ ಅವರು ರಾಯಚೂರು ನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂಬ ಕೂಗು ಅಲ್ಪಸಂಖ್ಯಾತ ಸಮುದಾಯದಿಂದ ಕೇಳಿಬಂದಿತ್ತು. ಹೀಗಾಗಿ ಮೊಹಮ್ಮದ್ ಶಲಾಂ ಅವರಿಗೆ ಕಾಂಗ್ರೆಸ್ ಮಣೆಹಾಕಿದೆ.
ನಿನ್ನೆ 5ನೇ ಪಟ್ಟಿ ಬಿಡುಗಡೆ ಮಾಡಿದ್ದ ಕಾಂಗ್ರೆಸ್
ನಿನ್ನೆ (ಏ.19) ಕಾಂಗ್ರೆಸ್ ನಾಲ್ಕು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಶಿಗ್ಗಾಂವಿ ಕ್ಷೇತ್ರಕ್ಕೆ ಯಾಸಿರ್ ಅಹ್ಮದ್ ಪಠಾಣ್, ಮುಳಬಾಗಿಲು ಕ್ಷೇತ್ರಕ್ಕೆ ಎಸ್‌ಸಿ- ಡಾ. ಬಿ.ಸಿ. ಮುದ್ದುಗಂಗಾಧರ, ಕೆಆರ್ ಪುರಕ್ಕೆ ಡಿ.ಕೆ. ಮೋಹನ್ ಹಾಗೂ ಪುಲಕೇಶಿನಗರಕ್ಕೆ (ಎಸ್‌ಸಿ) ಎ.ಸಿ. ಶ್ರೀನಿವಾಸ ಅವರ ಹೆಸರು ಘೋಷಿಸಿದೆ.
ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನ
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಮೇ 10ರಂದು ಮತದಾನ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ. ಹೀಗಾಗಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಲಿದ್ದಾರೆ.
ಮುಂದುವರೆದಿದೆ ಕೋಲಾರ ಅಭ್ಯರ್ಥಿ ಯಾರೆಂಬ ಸಸ್ಪೆನ್ಸ್
ಈವರೆಗೆ ತನ್ನ ಅಭ್ಯರ್ಥಿಗಳ ಆರು ಪಟ್ಟಿಗಳನ್ನು ಕಾಂಗ್ರೆಸ್ ಬಿಡುಗಡೆ ಮಾಡಿದ್ದರೂ ಕೂಡ, ಇಡೀ ರಾಜ್ಯ ಕಾತರದಿಂದ ಕಾಯುತ್ತಿರುವ ಕೋಲಾರ ವಿಧಾನಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿಯನ್ನುಇನ್ನೂ ಘೋಷಿಸಿಲ್ಲ. ಕೋಲಾರ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡುವುದು, ಕಾಂಗ್ರೆಸ್‌ಗೆ ಕಗ್ಗಂಟಾಗಿ ಪರಿಣಮಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಇದು ಪಕ್ಷದ ಚುನಾವಣಾ ರಣತಂತ್ರವೂ ಇರಬಹುದು ಎಂದು ಕೆಲವು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ