logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Budget: ಕರ್ನಾಟಕದಲ್ಲಿ ಅತಿ ಹೆಚ್ಚು ಹಾಗೂ ಅತಿ ಕಡಿಮೆ ಬಾರಿ ಬಜೆಟ್‌ ಮಂಡಿಸಿದ ಸಿಎಂ ಯಾರು? ಇಲ್ಲಿದೆ ಮಾಹಿತಿ

Karnataka Budget: ಕರ್ನಾಟಕದಲ್ಲಿ ಅತಿ ಹೆಚ್ಚು ಹಾಗೂ ಅತಿ ಕಡಿಮೆ ಬಾರಿ ಬಜೆಟ್‌ ಮಂಡಿಸಿದ ಸಿಎಂ ಯಾರು? ಇಲ್ಲಿದೆ ಮಾಹಿತಿ

Meghana B HT Kannada

Jul 05, 2023 06:44 PM IST

google News

ವಿಧಾನಸೌಧ -ಕರ್ನಾಟಕ ಬಜೆಟ್​ (ಸಂಗ್ರಹ ಚಿತ್ರ)

    • Karnataka budget: ಈಗಾಗಲೇ ಪಂಚ ಗ್ಯಾರಂಟಿಗಳನ್ನು ಘೋಷಿಸಿ, ಜಾರಿಗೆ ಮುಂದಾಗಿರುವ ಕಾಂಗ್ರೆಸ್​ಗೆ ಇದು ಬಹು ಮಹತ್ವದ ಬಜೆಟ್​ ಆಗಿದೆ. ಅಲ್ಲದೇ ಈ ಬಜೆಟ್​​ ಮೂಲಕ ಸಿದ್ದರಾಮಯ್ಯ ಇತಿಹಾಸ ಬರೆಯಲಿದ್ದಾರೆ. ಏನದು? ಕರ್ನಾಟಕದಲ್ಲಿ ಅತಿ ಹೆಚ್ಚು ಬಾರಿ ಬಜೆಟ್​ ಮಂಡಿಸಿದ ಸಿಎಂ ಯಾರು? ಅತಿ ಕಡಿಮೆ ಬಾರಿ ಬಜೆಟ್‌ ಮಂಡಿಸಿದ ಮುಖ್ಯಮಂತ್ರಿ ಯಾರು? ಇಲ್ಲಿದೆ ಮಾಹಿತಿ..
ವಿಧಾನಸೌಧ -ಕರ್ನಾಟಕ ಬಜೆಟ್​ (ಸಂಗ್ರಹ ಚಿತ್ರ)
ವಿಧಾನಸೌಧ -ಕರ್ನಾಟಕ ಬಜೆಟ್​ (ಸಂಗ್ರಹ ಚಿತ್ರ)

ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 7 ರಂದು ಬಜೆಟ್​ ಮಂಡಿಸಲು ಸಜ್ಜಾಗುತ್ತಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬೀಗಿದ ಕಾಂಗ್ರೆಸ್​ ಸರ್ಕಾರ ರಚಿಸಿದ ಬಳಿಕ ಮಂಡಿಸುತ್ತಿರುವ ಮೊದಲ ಬಜೆಟ್​ ಇದಾಗಿದೆ. ಈಗಾಗಲೇ ಪಂಚ ಗ್ಯಾರಂಟಿಗಳನ್ನು ಘೋಷಿಸಿ, ಜಾರಿಗೆ ಮುಂದಾಗಿರುವ ಕಾಂಗ್ರೆಸ್​ಗೆ ಇದು ಬಹು ಮಹತ್ವದ ಬಜೆಟ್​ ಆಗಿದೆ. ಅಲ್ಲದೇ ಈ ಬಜೆಟ್​​ ಮೂಲಕ ಸಿದ್ದರಾಮಯ್ಯ ಇತಿಹಾಸ ಬರೆಯಲಿದ್ದಾರೆ. ಏನದು? ಕರ್ನಾಟಕದಲ್ಲಿ ಅತಿ ಹೆಚ್ಚು ಬಾರಿ ಬಜೆಟ್​ ಮಂಡಿಸಿದ ಸಿಎಂ ಯಾರು? ಅತಿ ಕಡಿಮೆ ಬಾರಿ ಬಜೆಟ್‌ ಮಂಡಿಸಿದ ಮುಖ್ಯಮಂತ್ರಿ ಯಾರು? ಇಲ್ಲಿದೆ ಮಾಹಿತಿ..

ಇಲ್ಲಿಯವರೆಗಿನ ಬಜೆಟ್​ ಮಂಡಿಸಿದ ಮುಖ್ಯಮಂತ್ರಿಗಳ ಪಟ್ಟಿ ನೋಡುವುದಾದರೆ, ಕೆಂಗಲ್​ ಹನುಮಂತಯ್ಯ ಅವರು 1952-53ನೇ ಸಾಲಿನಲ್ಲಿ ಬಜೆಟ್​ ಮಂಡಿಸಿದ್ದರು. ಎಸ್.ಆರ್. ಕಂಠಿ ಅವರು 1962-63ನೇ ಸಾಲಿನ ಬಜೆಟ್​ ಮಂಡಿಸಿದ್ದರು. ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲ್ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ರಾಮಕೃಷ್ಣ ಹೆಗಡೆ ಅವರು 1966-67 ರಿಂದ 1971-72 ರ ವರೆಗೆ 6 ಬಾರಿ ಬಜೆಟ್​ ಮಂಡಿಸಿದ್ದರು. ಬಳಿಕ ಹಣಕಾಸು ಖಾತೆಯೊಂದಿಗೆ ಮುಖ್ಯಮಂತ್ರಿಯಾಗಿದ್ದ ಅವರು 1983-84ರಿಂದ 1988-89 ರ ವರೆಗೆ 7 ಆಯವ್ಯಯ ಮಂಡಿಸುವ ಮೂಲಕ ಒಟ್ಟು 13 ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ.

ಇವರ ನಂತರ ಅತಿ ಹೆಚ್ಚು ಬಾರಿ ಬಜೆಟ್​ ಮಂಡಿಸಿದವರೆಂದರೆ ಯಡಿಯೂರಪ್ಪನವರು. ಬಿಎಸ್​ವೈ ಒಟ್ಟು 8 ಬಾರಿ ಬಜೆಟ್‌ ಮಂಡಿಸಿದ್ದಾರೆ. ಇವರ ನಂತರ ಹೆಚ್ಚು ಬಜೆಟ್​ ಮಂಡಿಸಿದ ಕೀರ್ತಿ ಎಂ.ವೈ. ಘೋರ್ಪಡೆ ಅವರಿಗೆ ಸೇರುತ್ತದೆ. ಆದರೆ ಘೋರ್ಪಡೆ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿರಲಿಲ್ಲ. ರಾಜ್ಯ ವಿತ್ತ ಸಚಿವರಾಗಿದ್ದ ಅವಧಿಯಲ್ಲಿ 7 ಬಾರಿ ಬಜೆಟ್​ ಮಂಡಿಸಿದ್ದಾರೆ. ಟಿ. ಮರಿಯಪ್ಪ ಅವರೂ ಸಹ ಹಣಕಾಸು ಸಚಿವರಾಗಿ 6 ಬಾರಿ ಆಯವ್ಯಯ ನೀಡಿದ್ದಾರೆ.

ವೀರಪ್ಪ ಮೊಯ್ಲಿ ಅವರು ಸಿಎಂ ಹಾಗೂ ವಿತ್ತ ಸಚಿವರಾಗಿ 5 ಬಾರಿ ಬಜೆಟ್​ ಮಂಡಿಸಿದ್ದಾರೆ. ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರು 5 ಬಾರಿ ಬಜೆಟ್ ಮಂಡಿಸಿದ ದಾಖಲೆ ಹೊಂದಿದ್ದಾರೆ. ಎಸ್. ಬಂಗಾರಪ್ಪ ಅವರು ಸಿಎಂ ಆಗಿ 1992-93ನೇ ಸಾಲಿನ ಬಜೆಟ್​ ಮಂಡಿಸಿದ್ದಾರೆ. ಡಿ.ವಿ. ಸದಾನಂದಗೌಡ ಅವರು 2012-13ನೇ ಸಾಲಿನ ಆಯವ್ಯಯ ನೀಡಿದ್ದರು. ಹೆಚ್​ ಡಿ ಕುಮಾರಸ್ವಾಮಿ ಅವರು 2019-20ನೇ ಸಾಲಿನ ಬಜೆಟ್​ ಮಂಡಿಸಿದ್ದರು.

ಇತಿಹಾಸ ಬರೆಯಲಿದ್ದಾರೆ ಸಿದ್ದರಾಮಯ್ಯ

ಸಿದ್ದರಾಮಯ್ಯ ಈವರೆಗೆ 13 ಬಾರಿ ಬಜೆಟ್​ ಮಂಡಿಸಿ, ರಾಮಕೃಷ್ಟ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. 2013 ರಿಂದ 2018ರ ವರೆಗೆ ಪೂರ್ಣಾವಧಿಯ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು 6 ಬಾರಿ ಬಜೆಟ್​ ಮಂಡಿಸಿದ್ದರು. ಉಪ ಮುಖ್ಯಮಂತ್ರಿಯಾಗಿ 7 ಬಾರಿ ಬಜೆಟ್​ ಮಂಡಿಸಿದ್ದಾರೆ. 2018ರ ಫೆಬ್ರವರಿ 16 ರಂದು ಮಂಡಿಸಿದ ಬಜೆಟ್​ ಪೂರ್ಣ ಪ್ರಮಾಣದ ಬಜೆಟ್‌ ಅಲ್ಲವಾದರೂ ಇವರ ಲೆಕ್ಕಕ್ಕೆ ಸೇರುತ್ತದೆ. ಇದು 2018ರ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಂಡಿಸಿದ್ದ ಆಯವ್ಯಯವಾಗಿತ್ತು.

ಇದೀಗ 2023ನೇ ಸಾಲಿನ ಬಜೆಟ್​ ಮಂಡಿಸಿದರೆ ಸಿದ್ದರಾಮಯ್ಯ ಒಟ್ಟು 14 ಬಾರಿ ಆಯವ್ಯಯ ನೀಡಿದಂತಾಗುತ್ತದೆ. ಈ ಮೂಲಕ 13 ಬಾರಿ ಬಜೆಟ್​ ಮಂಡಿಸಿದ್ದ ರಾಮಕೃಷ್ಣ ಹೆಗಡೆ ಅವರ ದಾಖಲೆ ಮುರಿಯಲಿದ್ದಾರೆ. ಕರ್ನಾಟಕ ರಾಜ್ಯದ ಇತಿಹಾಸದಲ್ಲಿಯೇ ಅತ್ಯಧಿಕ ಬಜೆಟ್‌ ಮಂಡನೆ ಮಾಡಿರುವ ಕೀರ್ತಿಗೆ ಸಿಎಂ ಸಿದ್ದರಾಮಯ್ಯ ಪಾತ್ರರಾಗಲಿದ್ದಾರೆ.

ಕಡಿಮೆ ಬಜೆಟ್​ ಮಂಡನೆ ಮಾಡಿದ ಸಿಎಂ

ಹಾಗೆಯೇ ಅತಿ ಕಡಿಮೆ ಬಜೆಟ್​ ಮಂಡಿಸಿದ ಮುಖ್ಯಮಂತ್ರಿಗಳ ಪೈಕಿ ಕೆಂಗಲ್​ ಹನುಮಂತಯ್ಯ, ಎಸ್.ಆರ್. ಕಂಠಿ, ಎಸ್. ಬಂಗಾರಪ್ಪ, ಡಿ.ವಿ. ಸದಾನಂದಗೌಡ, ಹೆಚ್​ ಡಿ ಕುಮಾರಸ್ವಾಮಿ ಹಾಗೂ ಬಸವರಾಜ ಬೊಮ್ಮಾಯಿ ಇದ್ದಾರೆ.

ಭಾರತದಲ್ಲಿ ಅತಿ ಹಚ್ಚು ಬಾರಿ ಬಜೆಟ್​ ಮಂಡಿಸಿದ ಸಿಎಂ ಯಾರು?

ಭಾರತದ ಬೇರೆ ರಾಜ್ಯಗಳಲ್ಲಿನ ದಾಖಲೆ ನೋಡುವುದಾದರೆ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ವಜುಬಾಯಿ ರುಡಾಬಾಯಿವಾಲಾ ಅವರು 18 ಬಾರಿ ಬಜೆಟ್‌ ಮಂಡಿಸಿದ್ದಾರೆ. ಈ ಮೂಲಕ ಭಾರತದಲ್ಲಿ ಅತಿ ಹಚ್ಚು ಬಾರಿ ಬಜೆಟ್​ ಮಂಡಿಸಿದ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ