logo
ಕನ್ನಡ ಸುದ್ದಿ  /  ಕರ್ನಾಟಕ  /  Explainer: ಏನಿದು ವಾಟರ್‌ ಮೆಟ್ರೋ? ಕೊಚ್ಚಿನ್ ನಗರದ ಜನಪ್ರಿಯ ಸೇವೆ ಮಂಗಳೂರಿನಲ್ಲೂ ಜಾರಿ ಸಾಧ್ಯತೆ; ಜಲ ಮೆಟ್ರೋ ಕುರಿತ ಸಮಗ್ರ ಮಾಹಿತಿ

Explainer: ಏನಿದು ವಾಟರ್‌ ಮೆಟ್ರೋ? ಕೊಚ್ಚಿನ್ ನಗರದ ಜನಪ್ರಿಯ ಸೇವೆ ಮಂಗಳೂರಿನಲ್ಲೂ ಜಾರಿ ಸಾಧ್ಯತೆ; ಜಲ ಮೆಟ್ರೋ ಕುರಿತ ಸಮಗ್ರ ಮಾಹಿತಿ

Umesh Kumar S HT Kannada

Feb 16, 2024 01:55 PM IST

ಮಂಗಳೂರಿನ ಗುರುಪುರ ಹಾಗೂ ನೇತ್ರಾವತಿ ನದಿಗಳಲ್ಲಿ ಜಲಮೆಟ್ರೋ ಸೇವೆ ಆರಂಭಿಸುವ ಸುಳಿವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ವೇಳೆ ನೀಡಿದ್ದಾರೆ. ಏನಿದು ವಾಟರ್‌ ಮೆಟ್ರೋ? ಕೊಚ್ಚಿನ್ ನಗರದ ಜನಪ್ರಿಯ ಸೇವೆ ಮಂಗಳೂರಿನಲ್ಲೂ ಜಾರಿ ಸಾಧ್ಯತೆ; ಜಲ ಮೆಟ್ರೋ ಕುರಿತ ಸಮಗ್ರ ಮಾಹಿತಿ.

  • Explainer: ಕರ್ನಾಟಕ ಬಜೆಟ್ 2024 ಮಂಡನೆಯಾಗಿದ್ದು,  ಮಂಗಳೂರಿನ ಗುರುಪುರ ಹಾಗೂ ನೇತ್ರಾವತಿ ನದಿಗಳಲ್ಲಿ ಜಲಮೆಟ್ರೋ ಸೇವೆ ಆರಂಭಿಸುವ ಸುಳಿವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದರು. ಏನಿದು ವಾಟರ್‌ ಮೆಟ್ರೋ? ಕೊಚ್ಚಿನ್ ನಗರದ ಜನಪ್ರಿಯ ಸೇವೆ ಮಂಗಳೂರಿನಲ್ಲೂ ಜಾರಿ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲೊಇ ಜಲ ಮೆಟ್ರೋ ಕುರಿತ ಸಮಗ್ರ ಮಾಹಿತಿ ಹೀಗಿದೆ ನೋಡಿ.

ಮಂಗಳೂರಿನ ಗುರುಪುರ ಹಾಗೂ ನೇತ್ರಾವತಿ ನದಿಗಳಲ್ಲಿ ಜಲಮೆಟ್ರೋ ಸೇವೆ ಆರಂಭಿಸುವ ಸುಳಿವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ವೇಳೆ ನೀಡಿದ್ದಾರೆ. ಏನಿದು ವಾಟರ್‌ ಮೆಟ್ರೋ? ಕೊಚ್ಚಿನ್ ನಗರದ ಜನಪ್ರಿಯ ಸೇವೆ ಮಂಗಳೂರಿನಲ್ಲೂ ಜಾರಿ ಸಾಧ್ಯತೆ; ಜಲ ಮೆಟ್ರೋ ಕುರಿತ ಸಮಗ್ರ ಮಾಹಿತಿ.
ಮಂಗಳೂರಿನ ಗುರುಪುರ ಹಾಗೂ ನೇತ್ರಾವತಿ ನದಿಗಳಲ್ಲಿ ಜಲಮೆಟ್ರೋ ಸೇವೆ ಆರಂಭಿಸುವ ಸುಳಿವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ವೇಳೆ ನೀಡಿದ್ದಾರೆ. ಏನಿದು ವಾಟರ್‌ ಮೆಟ್ರೋ? ಕೊಚ್ಚಿನ್ ನಗರದ ಜನಪ್ರಿಯ ಸೇವೆ ಮಂಗಳೂರಿನಲ್ಲೂ ಜಾರಿ ಸಾಧ್ಯತೆ; ಜಲ ಮೆಟ್ರೋ ಕುರಿತ ಸಮಗ್ರ ಮಾಹಿತಿ.

ಬೆಂಗಳೂರು: ಕೊಚ್ಚಿನ್‌, ಅಯೋಧ್ಯೆಯಲ್ಲಿರುವಂತೆ ಜಲ ಮೆಟ್ರೋ ಸೇವೆಗಳನ್ನು ಕರ್ನಾಟಕದಲ್ಲಿ ಪ್ರಾರಂಭಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಫೆ.16) ರಾಜ್ಯ ಬಜೆಟ್ (ಕರ್ನಾಟಕ ಬಜೆಟ್ 2024) ಮಂಡನೆ ವೇಳೆ ಪ್ರಸ್ತಾಪಿಸಿದರು.

ಟ್ರೆಂಡಿಂಗ್​ ಸುದ್ದಿ

Environment day: ವಿಶ್ವ ಪರಿಸರ ದಿನಕ್ಕೆ ಜಾಗತಿಕ ತಾಪಮಾನದ ಮೇಲೆ ಪ್ರಬಂಧ ಬರೆಯಿರಿ, 5000 ರೂ. ಬಹುಮಾನ ಪಡೆಯಿರಿ

Vijayapura News: ವಿಜಯಪುರ ಬಿಎಲ್‌ಡಿಇಯಲ್ಲಿ ಕೌಶಲ್ಯಗಳ ಸಂಗಮ, ತಾಂತ್ರಿಕ ಹಬ್ಬದ ಸಡಗರ

Museums Day 2024: ಬೆಂಗಳೂರು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ಮೈಸೂರು ಮ್ಯೂಸಿಯಂಗಳಿಗೆ ಹೊಸ ರೂಪ, ಏನಿದರ ವಿಶೇಷ

Bangalore Mysore Expressway: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಮೊಬೈಲ್ ನಲ್ಲಿ ಮಾತಾಡಿಕೊಂಡು ಡ್ರೈವ್ ಮಾಡಿದರೆ ದಂಡ ಗ್ಯಾರಂಟಿ

ಮೂಲಸೌಕರ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ವಿಭಾಗದ ವಿವರ ನೀಡುತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಮೂಲಸೌಕರ್ಯ ಯೋಜನೆಗಳ ಪ್ರಗತಿ ಮೇಲ್ವಿಚಾರಣೆಗೆ ಹಾಗೂ ಎದುರಾಗುವ ಅಂತರ್ ಇಲಾಖಾ ಮತ್ತು ಹಣಕಾಸಿನ ತೊಡಕುಗಳನ್ನು ಬಗೆಹರಿಸಲು ಮುಖ್ಯಮಂತ್ರಿಗಳ ಕಛೇರಿಯಲ್ಲಿ ಪ್ರತ್ಯೇಕ ಘಟಕವನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.

ಇದಲ್ಲದೆ, ಮಂಗಳೂರಿನ ಗುರುಪುರ ಹಾಗೂ ನೇತ್ರಾವತಿ ನದಿಗಳಲ್ಲಿ ಜಲಮೆಟ್ರೋ ಸೇವೆಗಳನ್ನು ಪರಿಚಯಿಸಲು ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಲಾಗುವುದು ಎಂಬ ವಿವರವನ್ನು ಸಿಎಂ ಸಿದ್ದರಾಮಯ್ಯ ನೀಡಿದರು.

ಏನಿದು ವಾಟರ್ ಮೆಟ್ರೋ?

ವಾಟರ್‌ ಮೆಟ್ರೋ ಎಂಬುದು ಬ್ಯಾಟರಿ ಚಾಲಿತ ಎಲೆಕ್ಟ್ರಿಕ್‌ ಹೈಬ್ರಿಡ್ ಬೋಟ್‌ಗಳಾಗಿದ್ದು, ನಗರ ಸಮೂಹ ಸಾರಿಗೆ ವ್ಯವಸ್ಥೆಯ ಮಾದರಿಯಲ್ಲೇ ಇದು ಕೂಡ ಕಾರ್ಯಾಚರಿಸುತ್ತದೆ. ಭಾರತದಲ್ಲಿ ಮೊದಲ ವಾಟರ್ ಮೆಟ್ರೋ ಅಥವಾ ಜಲ ಮೆಟ್ರೋ ಸೇವೆ ಕೇರಳದ ಕೊಚ್ಚಿನ್‌ನಲ್ಲಿ ಆರಂಭವಾಗಿದೆ. ಈ ಹೈಬ್ರಿಡ್ ಬೋಟ್‌ಗಳು ಕೊಚ್ಚಿನ್ ಸುತ್ತಮುತ್ತ ಇರುವ 10 ದ್ವೀಪಗಳಿಗೆ ಸಂಪರ್ಕ ಸೇವೆಯಾಗಿ ಕೆಲಸ ಮಾಡುತ್ತವೆ.

ಬ್ಯಾಟರಿ ಮತ್ತು ಡೀಸೆಲ್​ ಚಾಲಿತವಾಗಿರುವ ಈ ಬೋಟ್​ಗಳು ಹೈಬ್ರೀಡ್​ ಮೋಡ್​ನಲ್ಲಿ ಎರಡೂ ಇಂಧನಗಳನ್ನು ಬಳಸಿಕೊಂಡು ಸಂಚರಿಸಬಹುದು. ರಾತ್ರಿ ಪ್ರಯಾಣಕ್ಕೆ ಅನುಕೂಲವಾಗುವಂತೆ ನಿರ್ವಾಹಕರಿಗಾಗಿ ಥರ್ಮಲ್ ಕ್ಯಾಮೆರಾ ಅಳವಡಿಸಲಾಗಿದೆ. ಅಪಘಾತ ತಪ್ಪಿಸುವುದಕ್ಕೆ ರಾಡಾರ್​ ವ್ಯವಸ್ಥೆ ಕೂಡ ಇದೆ. ಕೇವಲ 15 ನಿಮಿಷದಲ್ಲೇ ಇದು ರಿಚಾರ್ಜ್​ ಆಗುವ ಸಾಮರ್ಥ್ಯ ಹೊಂದಿದೆ. ಇದು ಗಂಟೆಗೆ ಗರಿಷ್ಠ 10 ನಾಟಿಕಲ್ ಮೈಲು ವೇಗದಲ್ಲಿ ಸಂಚರಿಸುತ್ತದೆ.

ಕೊಚ್ಚಿನ್ ನಗರದ ಜನಪ್ರಿಯ ಜಲ ಮೆಟ್ರೋ ಕುರಿತು ತಿಳಿದಿರಬೇಕಾದ 10 ಅಂಶಗಳು

ಕರ್ನಾಟಕದಲ್ಲೂ ಜಲ ಮೆಟ್ರೋ ಬರಲಿದೆ. ಅದು ಕೂಡ ದಕ್ಷಿಣ ಕನ್ನಡದ ಮಂಗಳೂರಿನ ಗುರುಪುರ ಹಾಗೂ ನೇತ್ರಾವತಿ ನದಿಗಳಲ್ಲಿ ಜಲಮೆಟ್ರೋ ಸೇವೆಗಳನ್ನು ಪರಿಚಯಿಸುವ ಕಡೆಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿರುವುದು ಕೊಚ್ಚಿ ನಗರದ ಜಲ ಮೆಟ್ರೋ ಕುರಿತ ಕುತೂಹಲವನ್ನು ಹೆಚ್ಚಿಸಿದೆ. ಇದರ ಬಗ್ಗೆ ತಿಳಿದಿರಬೇಕಾದ 10 ಅಂಶಗಳು ಹೀಗಿವೆ.

1) ಭಾರತದ ಮೊದಲ ವಾಟರ್ ಮೆಟ್ರೋ (ಜಲ ಮೆಟ್ರೋ) ಸೇವೆ ಕೇರಳದ ಕೊಚ್ಚಿನ್‌ನಲ್ಲಿ ಶುರುವಾಗಿದೆ. ಇದು 10 ದ್ವೀಪಗಳಿಗೆ ಸಂಪರ್ಕ ಒದಗಿಸುವ ಸೇವೆಯಾಗಿ ಪರಿಚಯಿಸಲ್ಪಟ್ಟಿದೆ.

2)ಕೇರಳದ ಪಶ್ಚಿಮ ದಂಡೆ ಸಂಪೂರ್ಣವಾಗಿ ಸಮುದ್ರ ತೀರದಲ್ಲೇ ಇದ್ದು, ಈ ವಾಟರ್‌ ಮೆಟ್ರೋ ನಗರ ಸಮೂಹ ಸಾರಿಗೆ ವ್ಯವಸ್ಥೆಯ ಮಾದರಿಯಲ್ಲೇ ಕಾರ್ಯನಿರ್ವಹಿಸುತ್ತಿದೆ.

3) ಕೊಚ್ಚಿ ಮೆಟ್ರೋ ರೈಲು ಕಾರ್ಪೊರೇಶನ್‌ ಮೆಟ್ರೋ ರೈಲು ಸೇವೆ ಜೊತೆಗೆ ಜಲ ಮೆಟ್ರೋ ಸೇವೆ ಹೊಂದಿರುವ ಭಾರತದ ಏಕೈಕ ಮೆಟ್ರೋ ಎಂಬ ಕೀರ್ತಿಗೆ ಭಾಜನವಾಗಿದೆ.

4) ಅದೇ ರೀತಿ ಕೊಚ್ಚಿನ್ ವಾಟರ್ ಮೆಟ್ರೋ ಏಷ್ಯಾದ ಸಮಗ್ರ ಜಲ ಸಾರಿಗೆ ವ್ಯವಸ್ಥೆ ಎಂಬ ಅಗ್ಗಳಿಕೆಯನ್ನೂ ಹೊಂದಿದೆ. 76 ಕಿ.ಮೀ. ಉದ್ದ ಜಲ ಮಾರ್ಗದಲ್ಲಿ 38 ಟರ್ಮಿನಲ್‌ ಹೊಂದಿದೆ.

5) ಕೆಎಂಆರ್‌ಎಲ್‌ ಅಧೀನದಲ್ಲಿ 80ರಷ್ಟು ಹೆಚ್ಚು ಮೆಟ್ರೋ ಬೋಟ್‌ಗಳಿವೆ. ಇದರಲ್ಲಿ 50 ರಿಂದ 100 ಆಸನಗಳಿವೆ. 50 ಆಸನ ಹೊಂದಿರುವ 55 ಬೋಟ್‌ಗಳನ್ನು ಹೊಂದುವ ಗುರಿ ಇದೆ. ಪ್ರಾಥಮಿಕ ಹಂತದಲ್ಲಿ ಕೊಚ್ಚಿನ್​ ಶಿಪ್​ಯಾರ್ಡ್​​ಗಳು ಆರು ಬೋಟ್​ಗಳನ್ನು ನಿರ್ಮಾಣ ಮಾಡಿ ಕೊಚ್ಚಿನ್ ಮೆಟ್ರೋಗೆ ಹಸ್ತಾಂತರಿಸಿದೆ.

6) ಜಲ ಮೆಟ್ರೋ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು. ಕೊಚ್ಚಿ ವಾಟರ್ ಮೆಟ್ರೋದಲ್ಲಿ ಪ್ರಯಾಣಿಸಲು 'ಕೊಚ್ಚಿ 1' ಕಾರ್ಡ್ ಬಳಸುವುದಕ್ಕೂ ಅವಕಾಶವಿದೆ.

7) ಜಲ ಮೆಟ್ರೋ ಪ್ರಯಾಣ ದರ ಕನಿಷ್ಠ 20 ರೂಪಾಯಿ, ಗರಿಷ್ಠ 40 ರೂಪಾಯಿ. ನಿತ್ಯ ಪ್ರಯಾಣಿಸುವವರು 180 ರೂಪಾಯಿಯಿಂದ 1,500 ರೂಪಾಯಿವರೆಗಿನ ಸಾಪ್ತಾಹಿಕ ಅಥವಾ ಮಾಸಿಕ ಪಾಸ್‌ಗಳನ್ನು ಪಡೆಯಬಹುದು.

8) ವಾಟರ್ ಮೆಟ್ರೋ ಮೂಲಕ ಪ್ರಯಾಣಿಕರು ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳದೆ ಹೈಕೋರ್ಟ್ ಟರ್ಮಿನಲ್‌ನಿಂದ 20 ನಿಮಿಷಗಳಲ್ಲಿ ಮತ್ತು ಕಾಕ್ಕನಾಡ್‌ನಿಂದ ವೈಪಿನ್‌ನಿಂದ 25 ನಿಮಿಷಗಳಲ್ಲಿ ವೈಪಿನ್ ಟರ್ಮಿನಲ್ ತಲುಪಬಹುದು.

9) ಜಲ ಮೆಟ್ರೋ 747 ಕೋಟಿ ರೂಪಾಯಿ ಮೌಲ್ಯದ ಈ ಯೋಜನೆ.

10) ಕೊಚ್ಚಿ ವಾಟರ್​ ಮೆಟ್ರೊ ಲಿಥಿಯಂ ಟೈಟಾನೈಟ್​ ಸ್ಪೈನೆಲ್​ ಬ್ಯಾಟರಿಯಿಂದ ಕಾರ್ಯನಿರ್ವಹಿಸುತ್ತಿದ್ದು, ಪರಿಸರ ಸ್ನೇಹಿಯಾಗಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ