logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Byelection 2023: ಮೂರು ವಿಧಾನ ಪರಿಷತ್‌ ಸ್ಥಾನಗಳಿಗೆ ಉಪಚುನಾವಣೆ ಜೂನ್‌ 30ಕ್ಕೆ; ಚುನಾವಣಾ ಆಯೋಗ ಘೋಷಣೆ

Karnataka ByElection 2023: ಮೂರು ವಿಧಾನ ಪರಿಷತ್‌ ಸ್ಥಾನಗಳಿಗೆ ಉಪಚುನಾವಣೆ ಜೂನ್‌ 30ಕ್ಕೆ; ಚುನಾವಣಾ ಆಯೋಗ ಘೋಷಣೆ

Umesh Kumar S HT Kannada

Jun 06, 2023 08:02 PM IST

google News

ಕರ್ನಾಟಕ ವಿಧಾನ ಸೌಧ

  • Karnataka ByElection 2023: ಕರ್ನಾಟಕ ವಿಧಾನ ಪರಿಷತ್‌ನ ಮೂರು ಸ್ಥಾನಗಳಿಗೆ ಜೂನ್‌ 30ರಂದು ಉಪಚುನಾವಣೆ ನಡೆಯಲಿದೆ. ಈ ಸಂಬಂಧ ಚುನಾವಣಾ ಆಯೋಗ ಇಂದು (ಜೂ.6) ಘೋಷಿಸಿದೆ.

ಕರ್ನಾಟಕ ವಿಧಾನ ಸೌಧ
ಕರ್ನಾಟಕ ವಿಧಾನ ಸೌಧ

ಕರ್ನಾಟಕ ವಿಧಾನ ಪರಿಷತ್‌ನ ಮೂವರು ಸದಸ್ಯರು ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಜೀನಾಮೆ ಸಲ್ಲಿಸಿದ್ದರಿಂದ ತೆರವಾದ ಮೂರು ಸ್ಥಾನಗಳಿಗೆ ಜೂನ್‌ 30ರಂದು ಚುನಾವಣೆ ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗ ಮಂಗಳವಾರ ಘೋಷಿಸಿದೆ.

ಇದರಂತೆ, ಚುನಾವಣಾ ಅಧಿಸೂಚನೆ ಜೂನ್‌ 13ರಂದು ಪ್ರಕಟವಾಗಲಿದೆ. ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಶುರುವಾಗಲಿದ್ದು, ಜೂನ್‌ 20ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೇ ದಿನವಾಗಿರಲಿದೆ. ಜೂನ್‌ 21ರಂದು ನಾಮಪತ್ರ ಪರಿಶೀಲನೆ, ಜೂನ್‌ 23ಕ್ಕೆ ನಾಮಪತ್ರ ಹಿಂಪಡೆಯಲು ಕೊನೇ ದಿನವಾಗಿರಲಿದೆ. ಜೂನ್‌ 30ಕ್ಕೆ ಮತದಾನ ನಡೆಯಲಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆ ತನಕ ಮತದಾನ ನಡೆಯಲಿದೆ. ಅದೇ ದಿನ ಸಂಜೆ 5 ಗಂಟೆಗೆ ಮತ ಎಣಿಕೆ ನಡೆದು ಫಲಿತಾಂಶ ಘೋಷಣೆ ಆಗಲಿದೆ.

ರಾಜೀನಾಮೆ ಕೊಟ್ಟ ಸದಸ್ಯರು ಇವರು

ಬಾಬುರಾವ್‌ ಚಿಂಚನ್‌ಸೂರ್‌, ಆರ್.ಶಂಕರ್‌, ಲಕ್ಷ್ಮಣ ಸವದಿ

ಬಾಬುರಾವ್‌ ಚಿಂಚನ್‌ಸೂರು ಮಾರ್ಚ್‌ 20ರಂದು ರಾಜೀನಾಮೆ ನೀಡಿದರು. ಅವರ ಸದಸ್ಯತ್ವದ ಅವಧಿ 2024ರ ಜೂನ್‌ 17ರ ತನಕ ಇತ್ತು. ಆರ್‌.ಶಂಕರ್‌ ಅವರು ಏಪ್ರಿಲ್‌ 12ರಂದು ರಾಜೀನಾಮೆ ಸಲ್ಲಿಸಿದ್ದರು. ಅವರ ಸದಸ್ಯತ್ವ ಅವಧಿ 2026ರ ಜೂನ್‌ 30ರ ತನಕ ಇತ್ತು. ಲಕ್ಷ್ಮಣ ಸವದಿ ಏಪ್ರಿಲ್‌ 14ರಂದು ರಾಜೀನಾಮೆ ನೀಡಿದ್ದು, ಅವರ ಸದಸ್ಯತ್ವದ ಅವಧಿ 2028ರ ಜೂನ್‌ 14ರ ತನಕ ಇತ್ತು.

ಶಾಸಕರೇ ಮತದಾರರು

ವಿಧಾನ ಪರಿಷತ್‌ನ ಮೂರು ಸ್ಥಾನಗಳಿಗೆ ಸದಸ್ಯರನ್ನು ಆಯ್ಕೆ ಮಾಡುವ ಈ ಮತದಾನಕ್ಕೆ ವಿಧಾನ ಸಭೆಯ ಸದಸ್ಯರೇ ಮತದಾರರು. ವಿಧಾನ ಸೌಧದಲ್ಲೇ ಮತದಾನ ನಡೆಯಲಿದ್ದು, ಜೂನ್‌ 30ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆ ತನಕ ಮತದಾನಕ್ಕೆ ಅವಕಾಶ. ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ