logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Cabinet Expansion: ಶನಿವಾರ ಸಿದ್ದರಾಮಯ್ಯ ಸಂಪುಟ ವಿಸ್ತರಣೆ; ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿರುವವರು ಇವರೇ ನೋಡಿ

Karnataka cabinet expansion: ಶನಿವಾರ ಸಿದ್ದರಾಮಯ್ಯ ಸಂಪುಟ ವಿಸ್ತರಣೆ; ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿರುವವರು ಇವರೇ ನೋಡಿ

Meghana B HT Kannada

May 26, 2023 10:39 PM IST

google News

ಡಿಸಿಎಂ ಡಿ ಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ

    • Karnataka cabinet expansion: ಕರ್ನಾಟಕ ಸಂಪುಟದ ನೂತನ ಸಚಿವರ ಹೆಸರನ್ನು ಕಾಂಗ್ರೆಸ್ ಅಂತಿಮಗೊಳಿಸಿದೆ. ಮೇ 27, ಶನಿವಾರ ಬೆಳಗ್ಗೆ 24 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 
ಡಿಸಿಎಂ ಡಿ ಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ
ಡಿಸಿಎಂ ಡಿ ಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಎರಡು ದಿನಗಳ ತೀವ್ರ ಚರ್ಚೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸಂಪುಟದ ನೂತನ ಸಚಿವರ ಹೆಸರನ್ನು ಕಾಂಗ್ರೆಸ್ ಅಂತಿಮಗೊಳಿಸಿದೆ. ಮೇ 27, ಶನಿವಾರ ಬೆಳಗ್ಗೆ 24 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಮತ್ತು ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಸೇರಿದಂತೆ ಕೇಂದ್ರದ ಪ್ರಮುಖ ನಾಯಕರೊಂದಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಮಾತುಕತೆ ನಡೆಸಿದ ಬಳಿಕ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.

ಇದಕ್ಕೂ ಮುನ್ನ ರಾಜ್ಯದಲ್ಲಿ ಜಾತಿ ಮತ್ತು ಪ್ರದೇಶಗಳ ಮಾನದಂಡ ಹಿಡಿದು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬುಧವಾರ ( ಮೇ 25) ದೆಹಲಿಗೆ ತೆರಳಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ನಾಯಕ ರಾಹುಲ್​ ಗಾಂಧಿ ಅವರನ್ನು ಭೇಟಿ ಮಾಡಿ ಸಚಿವ ಸಂಪುಟ ಬಗ್ಗೆ ಚರ್ಚಿಸಿದ್ದರು.

ಶನಿವಾರ ಪ್ರಮಾಣವಚನ ಸ್ವೀಕರಿಸಲಿರುವ ಸಂಭಾವ್ಯ ಸಚಿವರು ಇವರೇ ನೋಡಿ

1. ಹೆಚ್.ಕೆ.ಪಾಟೀಲ್

2. ಕೃಷ್ಣ ಭೈರೇಗೌಡ

3. ಎನ್​. ಚಲುವರಾಯಸ್ವಾಮಿ

4. ಕೆ.ವೆಂಕಟೇಶ್​

5. ಡಾ.ಹೆಚ್.ಸಿ.ಮಹದೇವಪ್ಪ

6. ಈಶ್ವರ ಖಂಡ್ರೆ

7. ಕೆ.ಎನ್.ರಾಜಣ್ಣ

8. ದಿನೇಶ್ ಗುಂಡೂರಾವ್

9. ಶರಣಬಸಪ್ಪ ದರ್ಶನಾಪುರ್​

10. ಶಿವಾನಂದ ಪಾಟೀಲ್

11. ಆರ್.ಬಿ.ತಿಮ್ಮಾಪುರ

12. ಎಸ್.ಎಸ್.ಮಲ್ಲಿಕಾರ್ಜುನ

13. ಶಿವರಾಜ ತಂಗಡಗಿ

14. ಡಾ.ಶರಣ ಪ್ರಕಾಶ್ ರುದ್ರಪ್ಪ ಪಾಟೀಲ್

15. ಮಂಕಾಳು ವೈದ್ಯ

16. ಸಂತೋಷ್ ಲಾಡ್​

17. ಎನ್​ ಎಸ್​ ಬೋಸೆರಾಜು

18. ಬೈರತಿ ಸುರೇಶ್

19. ಮಧು ಬಂಗಾರಪ್ಪ

20. ಎಂ.ಸಿ.ಸುಧಾಕರ್

21. ಬಿ.ನಾಗೇಂದ್ರ

22. ಲಕ್ಷ್ಮೀ ಹೆಬ್ಬಾಳ್ಕರ್​

23. ರಹೀಂ ಖಾನ್

24. ಡಾ. ಸುಧಾಕರ್​

ಜಾತಿ ಆಧಾರಿತ ಲೆಕ್ಕಾಚಾರ

ವಿಸ್ತೃತ ಸಂಪುಟದಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ನಾಲ್ವರು ಹೊಸ ಸಚಿವರು ಮತ್ತು ಒಕ್ಕಲಿಗ ಸಮುದಾಯದಿಂದ ನಾಲ್ವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದಿಂದ ತಲಾ ಇಬ್ಬರು, ಮುಸ್ಲಿಂ ಸಮುದಾಯದಿಂದ ಒಬ್ಬರು, ಬ್ರಾಹ್ಮಣ ಮತ್ತು ಮಹಿಳೆ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಆಪ್ತರು

ಮೂಲಗಳ ಪ್ರಕಾರ, ಶನಿವಾರ ಪ್ರಮಾಣ ವಚನ ಸ್ವೀಕರಿಸುವ ಸಂಭಾವ್ಯ ಸಚಿವರ ಪಟ್ಟಿಯಲ್ಲಿರುವ ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಈಶ್ವರ್ ಖಂಡ್ರೆ, ರಹೀಂ ಖಾನ್, ಸಂತೋಷ್ ಲಾಡ್, ಕೆ ಎನ್ ರಾಜಣ್ಣ, ಪಿರಿಯಾಪಟ್ಟಣ ವೆಂಕಟೇಶ್, ಎಚ್ ಸಿ ಮಹದೇವಪ್ಪ, ಬೈರತಿ ಸುರೇಶ್, ಸಿ ಪುಟ್ಟರಂಗಶೆಟ್ಟಿ, ಶಿವರಾಜ್ ತಂಗಡಗಿ, ಆರ್ ಬಿ ತಿಮ್ಮಾಪುರ, ಬಿ ನಾಗೇಂದ್ರ ಇವರೆಲ್ಲ ಸಿದ್ದರಾಮಯ್ಯ ಅವರ ಆಪ್ತರು.

ಡಿಕೆಶಿ ಆಪ್ತರು

ಲಕ್ಷ್ಮಿ ಹೆಬ್ಬಾಳ್ಕರ್, ಮಧು ಬಂಗಾರಪ್ಪ, ಡಿ ಸುಧಾಕರ್, ಚೆಲುವರಾಯ ಸ್ವಾಮಿ, ಮಂಕಾಳು ವೈದ್ಯ ಮತ್ತು ಎಂಸಿ ಸುಧಾಕರ್ - ಇವರೆಲ್ಲ ಡಿಕೆ ಶಿವಕುಮಾರ್ ಅವರ ಆಪ್ತರು.

ಮೇ 20 ರಂದು ಮುಖ್ಯಮಂತ್ರಿ ಮತ್ತು ಅವರ ಉಪ ಮುಖ್ಯಮಂತ್ರಿ ಜೊತೆ ಇತರ ಎಂಟು ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದರು. ಜಿ ಪರಮೇಶ್ವರ್, ಎಚ್ ಮುನಿಯಪ್ಪ, ಕೆ.ಜೆ ಜಾರ್ಜ್, ಎಂಬಿ ಪಾಟೀಲ್, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ರಾಮಲಿಂಗಾ ರೆಡ್ಡಿ ಹಾಗೂ ಜಮೀರ್ ಖಾನ್ ಅಂದು ಸಂಪುಟ ಸೇರಿದ್ದರು. ಕರ್ನಾಟಕ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಸೇರಿದಂತೆ ಒಟ್ಟು 34 ಮಂದಿ ಸಚಿವರಾಗಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ