logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Cabinet Expansion: ನವೆಂಬರ್‌ ಮೊದಲ ವಾರ ಸಚಿವ ಸಂಪುಟ ವಿಸ್ತರಣೆ?; ರೇಸ್‌ನಲ್ಲಿ ಯಾರಿದ್ದಾರೆ?

Karnataka Cabinet Expansion: ನವೆಂಬರ್‌ ಮೊದಲ ವಾರ ಸಚಿವ ಸಂಪುಟ ವಿಸ್ತರಣೆ?; ರೇಸ್‌ನಲ್ಲಿ ಯಾರಿದ್ದಾರೆ?

HT Kannada Desk HT Kannada

Oct 24, 2022 09:57 PM IST

google News

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (PTI)

    • Karnataka Cabinet Expansion: ಸಚಿವ ಸಂಪುಟದ ಖಾಲಿ ಸ್ಥಾನ ತುಂಬಲು ಪಕ್ಷದ ವರಿಷ್ಠರು ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ. ಬಸವರಾಜ ಬೊಮ್ಮಾಯಿ (CM Basavaraj Bommai) ಸಚಿವ ಸಂಪುಟದ ಆರು ಸ್ಥಾನಗಳ ಭರ್ತಿ ನವೆಂಬರ್‌ ಮೊದಲ ವಾರ ನಡೆಯುವ ನಿರೀಕ್ಷೆ ಇದೆ. ರೇಸ್‌ನಲ್ಲಿ ಯಾರಿದ್ದಾರೆ? ಇಲ್ಲಿದೆ ವಿವರ.. 
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (PTI)
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (PTI) (HT_PRINT)

ಬೆಂಗಳೂರು: ರಾಜ್ಯದಲ್ಲೀಗ ಚುನಾವಣಾ ವರ್ಷದ ಕಾವು ಹೆಚ್ಚಿದೆ. ಇದೇ ವೇಳೆ, ಸಚಿವ ಸಂಪುಟದಲ್ಲಿ ಖಾಲಿ ಸ್ಥಾನ ಭರ್ತಿ ಮಾಡಲು ಪಕ್ಷದ ವರಿಷ್ಠರು ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ. ಹೀಗಾಗಿ ಸಂಪುಟ ವಿಸ್ತರಣೆ (Karnataka Cabinet Expansion )ಬದಲು, ಖಾಲಿ ಇರುವ ಆರು ಸ್ಥಾನ ತುಂಬುವುದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನವೆಂಬರ್‌ ಮೊದಲ ವಾರದಲ್ಲಿ ಸಚಿವ ಸಂಪುಟದ ಖಾಲಿ ಸ್ಥಾನ ಭರ್ತಿ ಆಗುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಸಚಿವ ಸ್ಥಾನಕ್ಕಾಗಿ ಲಾಬಿ ಜೋರಾಗಿದೆ. ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಿದೆ.

ದಿವಂಗತ ಉಮೇಶ್ ಕತ್ತಿ ಸ್ಥಾನ ಸೇರಿ 6 ಮಂತ್ರಿ ಸ್ಥಾನ ಖಾಲಿ ಇವೆ. ಸಿಡಿ ಪ್ರಕರಣದಲ್ಲಿ ಮಂತ್ರಿ ಸ್ಥಾನ ಕಳೆದುಕೊಂಡ ರಮೇಶ್ ಜಾರಕಿಹೊಳಿ, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್​ನಲ್ಲಿ ಸ್ಥಾನ ಕಳೆದುಕೊಂಡ ಕೆ.ಎಸ್.ಈಶ್ವರಪ್ಪ ಮತ್ತೆ ಸಂಪುಟ ಸೇರುವ ತವಕದಲ್ಲಿದ್ದಾರೆ.

ಬಹಿರಂಗವಾಗಿ ಹೇಳಿಕೊಂಡಿರುವ ಈಶ್ವರಪ್ಪ

ಆರೋಪ ಮುಕ್ತರಾದ ಬಳಿಕ ಸಚಿವ ಸ್ಥಾನಕ್ಕಾಗಿ ಕೆ.ಎಸ್ ಈಶ್ವರಪ್ಪ ಆಗ್ರಹ ಹೆಚ್ಚಾಗಿದೆ. ಮತ್ತೆ ಸಚಿವ ಸ್ಥಾನ ಸಿಗದೇ ಹೋದರೆ, ಕಾಂಗ್ರೆಸ್ ಹಾಗೂ ರಾಜ್ಯದ ಜನತೆ ಪಾಲಿಗೆ ನಾನು ಪರ್ಮನೆಂಟ್ ತಪ್ಪಿತಸ್ಥ ಎಂಬ ಸಂದೇಶ ರವಾನೆಯಾಗುತ್ತದೆ. ಕಾಂಗ್ರೆಸ್ ಕಾಲದಲ್ಲಿ ಕೆ ಜೆ ಜಾರ್ಜ್ ನಿರಪರಾಧಿ ಎಂದ ಕೂಡಲೇ ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. 2023ಕ್ಕೆ ನನ್ನ ಚುನಾವಣಾ ರಾಜಕೀಯ ಅಂತ್ಯವಾಗಲಿದ್ದು, ಪಕ್ಷಕ್ಕಾಗಿ ದುಡಿದಿದ್ದೇನೆ ಎಂದು ಈಶ್ವರಪ್ಪ ಹೇಳಿಕೊಂಡಿದ್ದಾರೆ.

ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಹೈಕಮಾಂಡ್, ಸಂಘದ ನಾಯಕರು ಹಾಗೂ ಸಿಎಂಗೆ ಮನವರಿಕೆ ಮಾಡಿಕೊಟ್ಟಿರೋ ಕೆ ಎಸ್ ಈಶ್ವರಪ್ಪ ಅವರನ್ನು ಸಂಪುಟಕ್ಕೆ ಸೇರಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ರೇಸ್​ನಲ್ಲಿರುವವರು ಮತ್ತು ಯಾವ ಕೋಟಾ

ಸಿ ಪಿ ಯೋಗೇಶ್ವರ್- ಹಳೇ ಮೈಸೂರು- ಒಕ್ಕಲಿಗ ಕೋಟಾ

ಕೆ .ಎಸ್ ಈಶ್ವರಪ್ಪ - ಕುರುಬ ಕೋಟಾ

ಎಂಪಿ ರೇಣುಕಾಚಾರ್ಯ - ಮಧ್ಯ ಕರ್ನಾಟಕ: ಲಿಂಗಾಯತ ಕೋಟಾ ( ಬಿಎಸ್‌ವೈ ಆಪ್ತ)

ರಮೇಶ್ ಜಾರಕಿಹೊಳಿ- ವಲಸಿಗ ಹಾಗೂ ಎಸ್ ಟಿ ಕೋಟಾ

ಪೂರ್ಣಿಮಾ ಶ್ರೀನಿವಾಸ್- ಮಹಿಳೆ/ ಯಾದವ ಕೋಟಾ

ನರಸಿಂಹ ನಾಯಕ ರಾಜೂಗೌಡ- ಕಲ್ಯಾಣ ಕರ್ನಾ ಟಕ ಹಾಗೂ ಎಸ್ ಟಿ ಕೋಟಾ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ