logo
ಕನ್ನಡ ಸುದ್ದಿ  /  ಕರ್ನಾಟಕ  /  Bjp Candidates Final List: ಬಿಜೆಪಿ ಅಭ್ಯರ್ಥಿಗಳ ಕೊನೇ ಪಟ್ಟಿ ಬಿಡುಗಡೆ; ಶಿವಮೊಗ್ಗ, ಮಾನ್ವಿ ಕುತೂಹಲಕ್ಕೆ ತೆರೆ

BJP Candidates Final List: ಬಿಜೆಪಿ ಅಭ್ಯರ್ಥಿಗಳ ಕೊನೇ ಪಟ್ಟಿ ಬಿಡುಗಡೆ; ಶಿವಮೊಗ್ಗ, ಮಾನ್ವಿ ಕುತೂಹಲಕ್ಕೆ ತೆರೆ

HT Kannada Desk HT Kannada

Apr 19, 2023 11:39 PM IST

google News

BJP usually takes a clear lead in urban centres. (HT Photo)

  • BJP Candidates Final List: ಬಿಜೆಪಿ ಅಭ್ಯರ್ಥಿಗಳ ಕೊನೇ ಪಟ್ಟಿ ಬಿಡುಗಡೆ ಆಗಿದೆ. ಇದರೊಂದಿಗೆ ಶಿವಮೊಗ್ಗ, ಮಾನ್ವಿ ಅಭ್ಯರ್ಥಿಗಳು ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಂತಾಗಿದೆ.

BJP usually takes a clear lead in urban centres. (HT Photo)
BJP usually takes a clear lead in urban centres. (HT Photo) (HT_PRINT)

ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election 2023) ಯ 224 ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದ ಬಿಜೆಪಿ (BJP) ಬುಧವಾರ ರಾತ್ರಿ ಉಳಿದೆರಡು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನೂ ಪ್ರಕಟಿಸಿದೆ. ಶಿವಮೊಗ್ಗ (Shivamogga) ಮತ್ತು ಮಾನ್ವಿ (Manvi) ಕ್ಷೇತ್ರಗಳ ಅಭ್ಯರ್ಥಿಗಳು ಯಾರೆಂಬ ಕುತೂಹಲ ತಣಿದಂತಾಗಿದೆ.

ಕೆ.ಎಸ್.ಈಶ್ವರಪ್ಪ (K S Eshwarappa) ಚುನಾವಣಾ ರಾಜಕಾರಣ (Electoral Politics) ಕ್ಕೆ ನಿವೃತ್ತಿ ಘೋಷಿಸಿದರೂ ಅವರ ಕುಟುಂಬಕ್ಕೆ ಇಲ್ಲೂ ನಿರಾಸೆ ಆಗಿದೆ. ಪುತ್ರ ಕಾಂತೇಶನಿಗೆ ಟಿಕೆಟ್‌ ನಿರೀಕ್ಷಿಸಿದ್ದ ಈಶ್ವರಪ್ಪ ಕುಟುಂಬ ಆಘಾತಕ್ಕೆ ಒಳಗಾಗಿದೆ. ಬಿಜೆಪಿ ಪ್ರಕಟಿಸಿದ ಕೊನೇ ಪಟ್ಟಿಯಲ್ಲಿ ಶಿವಮೊಗ್ಗದಿಂದ ಚನ್ನಬಸಪ್ಪ ಅವರನ್ನು ಪಕ್ಷ ಕಣಕ್ಕೆ ಇಳಿಸಿದೆ. ಎಸ್‌ಟಿ ಮೀಸಲು ಕ್ಷೇತ್ರವಾಗಿರುವ ರಾಯಚೂರಿನ ಮಾನ್ವಿಯಲ್ಲಿ ಬಿ.ವಿ.ನಾಯಕ್‌ ಅವರನ್ನು ಕಣಕ್ಕೆ ಇಳಿಸಿದೆ.

ಇದರೊಂದಿಗೆ 224 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಪ್ರಕಟಿಸಿದಂತಾಗಿದೆ.

ದಿನದ ಇತರೆ ವಿದ್ಯಮಾನಗಳು

ಕಾಂಗ್ರೆಸ್‌ ಅಭ್ಯರ್ಥಿಗಳ ಐದನೇ ಪಟ್ಟಿ ಬಿಡುಗಡೆ; ಮುಂದುವರೆದಿದೆ ಕೋಲಾರ ಅಭ್ಯರ್ಥಿ ಯಾರೆಂಬ ಸಸ್ಪೆನ್ಸ್‌

ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ಪ್ರತಿಪಕ್ಷ ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳ ಐದನೇ ಪಟ್ಟಿಯನ್ನು ಬಿಡಗಡೆ ಮಾಡಿದೆ. ಒಟ್ಟು ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಆದರೆ ಇಡೀ ರಾಜ್ಯ ಕಾತರದಿಂದ ಕಾಯುತ್ತಿರುವ ಕೋಲಾರ ವಿಧಾನಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿಯನ್ನು ಕಾಂಗ್ರೆಸ್‌ ಇನ್ನೂ ಘೋಷಿಸಿಲ್ಲ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

ಜೆಡಿಎಸ್‌ ಮೂರನೇ ಪಟ್ಟಿಯಲ್ಲಿ 59 ಕ್ಷೇತ್ರಗಳಿಗೆ ಅಭ್ಯರ್ಥಿಗಳು ಫೈನಲ್‌; ಸಿಪಿಎಂ, ಆರ್‌ಪಿಐಗೆ ಬಾಹ್ಯಬೆಂಬಲ

ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ಜಾತ್ಯಾತೀತ ಜನತಾದಳ(ಜೆಡಿಎಸ್)‌ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡಗಡೆ ಮಾಡಿದೆ. ಒಟ್ಟು 59 ಕ್ಷೇತ್ರಗಳಿಗೆ ಜೆಡಿಎಸ್‌ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಇದೇ ವೇಳೆ ಪಕ್ಷವು ಬಾಹ್ಯ ಬೆಂಬಲ ನೀಡಿರುವ ಸಿಪಿಎಂ ಮತ್ತು ಆರ್‌ಪಿಐ ಅಭ್ಯರ್ಥಿಗಳ ಪಟ್ಟಿಯನ್ನೂ ಜೆಡಿಎಸ್‌ ಬಿಡುಗಡೆ ಮಾಡಿದೆ. ಪೂರ್ಣ ವರದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

ಕಾಂಗ್ರೆಸ್‌ ಪ್ರಚಾರಕರ ಪಟ್ಟಿಯಲ್ಲಿ ರಾಹುಲ್‌, ಶೆಟ್ಟರ್‌ಗೆ ಸ್ಥಾನ; ಸಚಿನ್ ಪೈಲಟ್‌ ಅನುಮಾನ‌

ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಕಾಂಗ್ರೆಸ್ ಬುಧವಾರ ಬಿಡುಗಡೆ ಮಾಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್‌ ಪರ ಪ್ರಚಾರ ಮಾಡಲಿರುವ ಪ್ರಮುಖ ನಾಯಕರು. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

ವರುಣಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸಿದ್ದರಾಮಯ್ಯ: ನಾ ಇಲ್ಲಿನ ಮಣ್ಣಿನ‌ ಮಗ ಎಂದ ಮಾಜಿ ಸಿಎಂ

ಕರ್ನಾಟಕ ವಿಧಾನಸಭೆ ಚುನಾವಣೆಯ ಅತ್ಯಂತ ಚರ್ಚಿತ ಕ್ಷೇತ್ರಗಳಲ್ಲಿ ಒಂದಾದ ವರುಣಾ ಕ್ಷೇತ್ರದಿಂದ, ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಬೆಂಬಲಿಗರೊಂದಿಗೆ ನಂಜನಗೂಡಿನ ತಾಲೂಕು ಪಂಚಾಯಿತಿ ಕಚೇರಿಗೆ ಆಗಮಿಸಿದ ಸಿದ್ದರಾಮಯ್ಯ, ಚುನಾವಣಾಧಿಕಾರಿಗೆ ತಮ್ಮ ನಾಮಪತ್ರ ಸಲ್ಲಿಸಿದರು. ಪೂರ್ಣ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

ಎಚ್‌ಟಿ ಕನ್ನಡ ವಾಟ್ಸಾಪ್ ಕಮ್ಯುನಿಟಿ ಸೇರಿ. ಫೇಸ್‌ಬುಕ್ ಪೇಜ್ ಲೈಕ್ ಮಾಡಿ, ಟ್ವಿಟರ್‌ನಲ್ಲಿ ಫಾಲೊ ಮಾಡಿ. ಯುಟ್ಯೂಬ್ ಚಾನೆಲ್ ಸಬ್‌ಸ್ಕ್ರೈಬ್ ಮಾಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ