logo
ಕನ್ನಡ ಸುದ್ದಿ  /  ಕರ್ನಾಟಕ  /  Voting Awareness: ಮೇ 10ರ ಮತದಾನ – ಕಡಲಾಳ, ಮ್ಯಾಂಗ್ರೋವ್ ಮಧ್ಯೆ ಅಭಿಯಾನ; ರಾಜ್ಯದಲ್ಲೇ ಮೊದಲ ಪ್ರಯೋಗ

Voting Awareness: ಮೇ 10ರ ಮತದಾನ – ಕಡಲಾಳ, ಮ್ಯಾಂಗ್ರೋವ್ ಮಧ್ಯೆ ಅಭಿಯಾನ; ರಾಜ್ಯದಲ್ಲೇ ಮೊದಲ ಪ್ರಯೋಗ

HT Kannada Desk HT Kannada

Apr 30, 2023 05:15 PM IST

ಕಡಲಾಳ, ಮ್ಯಾಂಗ್ರೋವ್ ಮಧ್ಯೆ ಮತದಾನ ಜಾಗೃತಿ ಅಭಿಯಾನ

    • ಸರಕಾರದ ಮಟ್ಟದಲ್ಲಿ ಮತದಾನ ಜಾಗೃತಿಯ ವೈಖರಿಗಳು ಹಲವು. ದಕ್ಷಿಣ ಕನ್ನಡದಲ್ಲಿ ದೋಣಿಯಲ್ಲಿ ಫಲಕ ಹಿಡಿದು, ಯಕ್ಷಗಾನ ಮಾಡುವ ಮೂಲಕ ಗಮನ ಸೆಳೆದರೆ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಆಡಳಿತ ಯಾರೂ ತಲುಪದ ಜಾಗವನ್ನು ತಲುಪಿ, ಓಟು ಹಾಕಲು ಮರೀಬೇಡಿ ಎಂದು ಸಾರಿತು. ಉಡುಪಿಯ ಕಾಂಡ್ಲಾವನದ ಮ್ಯಾಂಗ್ರೋವ್ ಮಧ್ಯೆ ಈರೀತಿ ಮಾಡುತ್ತಿರುವುದು ರಾಜ್ಯದಲ್ಲೇ ಮೊದಲ ಪ್ರಯೋಗ.
ಕಡಲಾಳ, ಮ್ಯಾಂಗ್ರೋವ್ ಮಧ್ಯೆ ಮತದಾನ ಜಾಗೃತಿ ಅಭಿಯಾನ
ಕಡಲಾಳ, ಮ್ಯಾಂಗ್ರೋವ್ ಮಧ್ಯೆ ಮತದಾನ ಜಾಗೃತಿ ಅಭಿಯಾನ

ಉಡುಪಿ/ಉತ್ತರ ಕನ್ನಡ: ‘"ಮತದಾನ ಸಂವಿಧಾನ ದೊರಕಿಸಿಕೊಟ್ಟ ಮಹತ್ವದ ಹಕ್ಕು"- ಹೀಗೆಂದು ಇಡೀ ದೇಹವನ್ನು ಮುಚ್ಚಿಕೊಂಡು, ಆಮ್ಲಜನಕ ಬೆಂಬಲದ ದಿರಿಸುಗಳನ್ನು ಹಾಕಿಕೊಂಡು, ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳದ ನೇತ್ರಾಣಿ ನಡುಗಡ್ಡೆಯಲ್ಲಿ ಸ್ಕೂಬಾ ಡೈವಿಂಗ್ ಮಾಡಿ, ಫಲಕಗಳನ್ನು ಹಿಡಿದು ಫೊಟೋ ಕ್ಲಿಕ್ಕಿಸಿದ್ದು ಒಂದೆಡೆ. ‘’ಮೇ 10’’ ಎಂಬುದನ್ನು ಬಾನೆತ್ತರದಿಂದ ಡ್ರೋಣ್ ಕ್ಯಾಮರಾಗಳಿಗೆ ಕಾಣುವಂತೆ ದೋಣಿಗಳನ್ನು ನಿಲ್ಲಿಸಿ, ಉಡುಪಿ (Udupi) ಜಿಲ್ಲೆಯ ಸುಂದರ ಕಾಂಡ್ಲಾವನದ ಮಧ್ಯೆ ಇರುವ ಸೀತಾನದಿ ಹಿನ್ನೀರಿನ ಮ್ಯಾಂಗ್ರೋವ್ (Mangrove) ಮಧ್ಯದಲ್ಲಿ ಮತದಾನದ ಮಹತ್ವ, ಓಟು ಹಾಕುವುದು ನಮ್ಮ ಜವಾಬ್ದಾರಿ ಎಂದು ಸಾರುವ ದೃಶ್ಯ ಇನ್ನೊಂದೆಡೆ.

ಟ್ರೆಂಡಿಂಗ್​ ಸುದ್ದಿ

Hassan Scandal: ರೇವಣ್ಣಗೆ ಎರಡನೇ ಪ್ರಕರಣದಲ್ಲೂ ಜಾಮೀನು, ನ್ಯಾಯಾಧೀಶರ ಸೂಚನೆ ಏನು

ಕರ್ನಾಟಕದಲ್ಲಿ ಪೂರ್ವ ಮುಂಗಾರು; 18 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ, ಇತ್ತೀಚಿನ 10 ಸುದ್ದಿ ಮುಖ್ಯಾಂಶ

ಬೆಳ್ತಂಗಡಿ ಅಕ್ರಮ ಕಲ್ಲುಗಣಿಗಾರಿಕೆ ಕೇಸ್; ಆರೋಪಿಗಳ ಬಂಧನ, ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್‌ಐಆರ್‌, 10 ವಿದ್ಯಮಾನಗಳಿವು

ಸೈಬರ್ ವಂಚಕರಿಗೆ ಸಿಮ್ ಕಾರ್ಡ್‌ ಪೂರೈಸುತ್ತಿದ್ದ ನಾರಾ ಶ್ರೀನಿವಾಸ್ ರಾವ್ ಬಂಧನ; ಗೋವಾ ಮಹಿಳೆಯ ಬ್ಲಾಕ್ ಮೇಲ್, ಬೆಂಗಳೂರಿನ ವ್ಯಕ್ತಿ ಸೆರೆ

ದಕ್ಷಿಣ ಕನ್ನಡದ ಸರಕಾರಿ ಶಾಲೆಗಳಲ್ಲಿ ಮತದಾನದ ಮಹತ್ವ ಸಾರುವ ವರ್ಲಿ ಸಹಿತ ವಿವಿಧ ಚಿತ್ರಗಳು, ಯಕ್ಷಗಾನ ಪ್ರದರ್ಶನ, ಕವಿಗೋಷ್ಠಿ, ಬೀದಿ ನಾಟಕಗಳನ್ನು ಪ್ರದರ್ಶಿಸುವುದು ಹಾಗೂ ಫಲಕಗಳನ್ನು ಸಾರ್ವಜನಿಕವಾಗಿ ಪ್ರದರ್ಶನ, ಕಡಲತಡಿಯ ಕರ್ನಾಟಕದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮತದಾನ ಜಾಗೃತಿಗೆ ಆಡಳಿತ ಅನುಸರಿಸಿರುವ ವಿಧಾನಗಳು ಇವು.

ಭಟ್ಕಳದಲ್ಲಿ ಸ್ಕೂಬಾ ಡೈವಿಂಗ್ ಮೂಲಕ ನೀರಿನೊಳಗೆ ಫಲಕ ಹಿಡಿದರೆ ನೋಡುವವರು ಯಾರು ಎಂಬುದನ್ನು ಹೊರತುಪಡಿಸಿದರೆ, ಉಡುಪಿ ಜಿಲ್ಲೆಯ ಕಾಂಡ್ಲಾವನದಲ್ಲಿ ಬಾನೆತ್ತರದ ನೋಟ ಆಕರ್ಷಣೀಯವಾಗಿದ್ದರೆ, ದಕ್ಷಿಣ ಕನ್ನಡದಲ್ಲಿ ಜನರನ್ನು ಗಮನದಲ್ಲಿಟ್ಟುಕೊಂಡೇ ಜಾಗೃತಿ ಮಾಡಲಾಗುತ್ತಿದೆ. ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ನೇತ್ರಾಣಿ ಕಡಳಾಲದಲ್ಲಿ ಮತದಾನ ಜಾಗೃತಿ ಮಾಡಲು ನೇತ್ರಾಣಿ ಅಡ್ವಂಚರ್ ಹಾಗೂ ಕಾರವಾರದ ಜಿಪಂ, ಭಟ್ಕಳ ತಾಪಂ ಸಾಥ್ ನೀಡಿ, ಸ್ಕೂಬಾ ಡೈವಿಂಗ್ ಮಾಡಿ ಜಾಗೃತಿ ಮೂಡಿಸಿದ್ದಾರೆ.

ಉಡುಪಿಯದ್ದು ರಾಜ್ಯದಲ್ಲೇ ಮೊದಲು:

ಉಡುಪಿ ಜಿಲ್ಲೆಯಲ್ಲಿ ಯುವ ಮತದಾರರನ್ನು ಸೆಳೆಯಲು ಈ ರೀತಿ ಮಾಡಲಾಗಿದೆ ಎನ್ನುತ್ತಾರೆ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್. ರಾಜ್ಯದಲ್ಲೇ ಇದೇ ಮೊದಲ ಬಾರಿಗೆ ಹಿನ್ನೀರಿನಲ್ಲಿ ಮಾಂಗ್ರೋವ್ ವನದ ನಡುವೆ ಕಯಾಕ್ ಗಳ ಮೂಲಕ ವಿಶಿಷ್ಠ ಮತ್ತು ವಿನೂತನ ಮಾದರಿಯಲ್ಲಿ ಮತದಾನ ಜಾಗೃತಿ ಮೂಡಿಸಲಾಗಿದೆ. ಪ್ರವಾಸಿ ತಾಣಗಳು ಹಾಗೂ ಸಾಹಸ ಚಟುವಟಿಕೆಗಳು ನಡೆಯುವ ಸ್ಥಳಗಳು ಯುವ ಜನತೆಯನ್ನು ಹೆಚ್ಚು ಆಕರ್ಷಿಸಲಿದ್ದು, ಇಲ್ಲಿ ನಡೆಸುವ ಮತದಾನ ಜಾಗೃತಿ ಕಾರ್ಯಕ್ರಮಗಳ ಮೂಲಕ ಯುವ ಜನತೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಕೇಂದ್ರಗಳಿಗೆ ಸೆಳೆಯಲು ಸಹಕಾರಿಯಾಗಲಿದೆ ಎಂದು ಉಡುಪಿ. ಜಿಲ್ಲಾಧಿಕಾರಿ ಕೂರ್ಮಾರಾವ್ ಹೇಳಿದರು.

ಎಲ್ಲಿದೆ ಕಾಂಡ್ಲಾವನ:

ಉಡುಪಿ ಜಿಲ್ಲೆಯ ಸಾಲಿಗ್ರಾಮ ಸಮೀಪ ಸೀತಾನದಿ ಹರಿಯುತ್ತದೆ. ಅದರ ಹಿನ್ನೀರಿನ ನಡುವೆ ಹಚ್ಚಹಸಿರಿನ ದಟ್ಟ ಕಾಂಡ್ಲಾವನ. ಇಲ್ಲಿ ಕಯಾಕಿಂಗ್ ಮೂಲಕ ತೆರಳಿ ಮೇ 10ರ ಮತದಾನ ದಿನ ನೆನಪಿಸುವ ಕಾರ್ಯವನ್ನು ಉಡುಪಿ ಜಿಲ್ಲಾಡಳಿತ ಮಾಡಿದೆ.

ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಕುರಿತಂತೆ ಸ್ವೀಪ್ ವತಿಯಿಂದ ವಿವಿಧ ರೀತಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಭಾಗವಾಗಿ ಈ ಕಾರ್ಯ.

ಸಾಲಿಗ್ರಾಮ ಬಳಿಯ ಕಯಾಕಿಂಗ್ ಪಾಯಿಂಟ್ ಬಳಿಗೆ ತೆರಳಿದ ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಕೂರ್ಮರಾವ್ ಎಂ , ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ ಹಾಕೆ , ಕಯಾಕಿಂಗ್ ಪ್ರಾರಂಭದ ಸ್ಥಳದಲ್ಲಿ ತುಳುನಾಡಿನ ಸಾಂಪ್ರದಾಯಿಕ ಅಡಿಕೆ ಮುಟ್ಟಾಳೆ ಧರಿಸಿ, ಸ್ಥಳದಲ್ಲಿ ಅಳವಡಿಸಲಾಗಿದ್ದ ನೈತಿಕ ಮತದಾನ ಪ್ರತಿಜ್ಞೆ ಕುರಿತ ಫಲಕದಲ್ಲಿ ಸಹಿ ಮಾಡಿ, ಸಂಪೂರ್ಣ ಸುರಕ್ಷತಾ ಉಪಕರಣಗಳನ್ನು ಧರಿಸಿ ಕಯಾಕಿಂಗ್ (ಕಯಾಕ್ ದೋಣಿಯ ಪ್ರಯಾಣ) ಆರಂಭಿಸಿದರು. ಸುಮಾರು 30 ನಿಮಿಷಗಳ ಕಯಾಕಿಂಗ್ ನಂತರ ಮಾಂಗ್ರೋವ್ ಕಾಡುಗಳ ಮಧ್ಯೆ ಇರುವ ಪ್ರದೇಶದಲ್ಲಿ ಸುಮಾರು 40 ಕ್ಕೂ ಹೆಚ್ಚು ಕಯಾಕ್ ದೋಣಿಗಳನ್ನು ನಿಲ್ಲಿಸಲಾಯಿತು. ಮತದಾನ ದಿನವಾದ, ಮೇ 10ದಿನಾಂಕದ ಚಿತ್ರಣ ರೂಪಿಸಿ ಮತ್ತು ಮತದಾನ ಜಾಗೃತಿಯ ಫಲಕವನ್ನು ನೀರಿನ ಮೇಲೆ ಪ್ರದರ್ಶಿಸಿ ಆಕರ್ಷಕ ರೀತಿಯಲ್ಲಿ ಮತದಾನ ಜಾಗೃತಿ ಮೂಡಿಸಲಾಯಿತು.

ಕಯಾಕಿಂಗ್ ನ ಆರಂಭದ ಸ್ಥಳದಿಂದ ನದಿ ಮಧ್ಯದ ಕಾರ್ಯಕ್ರಮ ನಡೆಯವ ಸ್ಥಳದ ವರೆಗೂ ನದಿಯಲ್ಲಿ ಮತದಾನ ಜಾಗೃತಿ ಸಾರುವ ಯಕ್ಷಗಾನ ಮುಕುಟದ ಮಾದರಿಯ ಆಕೃತಿಗಳು ಗಮನ ಸೆಳೆದವು.

ಇದೇ ಸಂದರ್ಭದಲ್ಲಿ, ಕಯಾಕಿಂಗ್ ಮೂಲಕ ಆ ಪ್ರದೇಶಕ್ಕೆ ಆಗಮಿಸಿದ್ದ ಮಣೂರು ಪಡುಕೆರೆ ಕಾಲೇಜಿನ ವಿದ್ಯಾರ್ಥಿಗಳಿಗೆ ಮತದಾರರ ಪ್ರತಿಜ್ಞಾ ವಿಧಿ ಭೋಧಿಸಿ, ಮತದಾನ ದಿನಾಂಕವನ್ನು ಒಳಗೊಂಡ ಬಲೂನ್ಗಳನ್ನು ಹಾರಿಬಿಡುವ ಮೂಲಕ ಜಾಗೃತಿ ಮೂಡಿಸಲಾಯಿತು.

ದೋಣಿಯಲ್ಲಿ ಜಾಗೃತಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಡಲ ಕಿನಾರೆಯಲ್ಲಿ ದೋಣಿಯ ಮೂಲಕ ಫಲಕಗಳನ್ನು ಹಿಡಿಯುವುದು, ಯಕ್ಷಗಾನ ವೇಷ ಧರಿಸಿ, ಅಭಿನಯಿಸಿ ಆಟೊ ಸ್ಟ್ಯಾಂಡ್ ಗಳಲ್ಲಿ ಮತದಾನದ ಮಹತ್ವ ತಿಳಿಸುವುದು ಹೀಗೆ ಹಲವು ರೂಪಗಳಲ್ಲಿ ಮತದಾನದ ಜಾಗೃತಿ ಸಂದೇಶಗಳನ್ನು ನೀಡಲಾಯಿತು.

ಹರೀಶ ಮಾಂಬಾಡಿ, ಮಂಗಳೂರು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ