logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Holidays: 2025ನೇ ಸಾಲಿನ ಕರ್ನಾಟಕ ಸರ್ಕಾರಿ ರಜಾ ದಿನಗಳ ಪಟ್ಟಿ: ಕೇಂದ್ರ ಸರ್ಕಾರದ ನಂತರ ಕರ್ನಾಟಕದಿಂದಲೂ ಬಿಡುಗಡೆಯಾಯ್ತು ಆದೇಶ

Karnataka Holidays: 2025ನೇ ಸಾಲಿನ ಕರ್ನಾಟಕ ಸರ್ಕಾರಿ ರಜಾ ದಿನಗಳ ಪಟ್ಟಿ: ಕೇಂದ್ರ ಸರ್ಕಾರದ ನಂತರ ಕರ್ನಾಟಕದಿಂದಲೂ ಬಿಡುಗಡೆಯಾಯ್ತು ಆದೇಶ

Umesha Bhatta P H HT Kannada

Nov 22, 2024 04:55 PM IST

google News

ಕರ್ನಾಟಕ ರಾಜ್ಯವು 2025ನೇ ಸಾಲಿನ ಅಧಿಕೃತ ಸರ್ಕಾರಿ ರಜೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

    • ಕರ್ನಾಟಕದಲ್ಲಿ 2025ನೇ ಸಾಲಿನಲ್ಲಿ ಪಡೆಯಬಹುದಾದ ಸರ್ಕಾರಿ ರಜೆಗಳ ಕುರಿತಾದ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಯಾವ ದಿನ ಯಾವ ಹಬ್ಬ, ರಜೆ ಎನ್ನುವ ವಿವರ ಇಲ್ಲಿದೆ. 
ಕರ್ನಾಟಕ ರಾಜ್ಯವು 2025ನೇ ಸಾಲಿನ ಅಧಿಕೃತ ಸರ್ಕಾರಿ ರಜೆಗಳ ಪಟ್ಟಿಯನ್ನು  ಬಿಡುಗಡೆ ಮಾಡಿದೆ.
ಕರ್ನಾಟಕ ರಾಜ್ಯವು 2025ನೇ ಸಾಲಿನ ಅಧಿಕೃತ ಸರ್ಕಾರಿ ರಜೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಬೆಂಗಳೂರು: ಕರ್ನಾಟಕದಲ್ಲಿ 2025ನೇ ಸಾಲಿನಲ್ಲಿ ಯಾವ ದಿನ ಸರ್ಕಾರಿ ರಜೆಗಳಿವೆ. ಯಾವ ಹಬ್ಬ ಯಾವ ದಿನ ಬರುತ್ತದೆ ಎನ್ನುವ ರಜಾ ಕುರಿತ ಮಾಹಿತಿಯನ್ನು ಕರ್ನಾಟಕ ಸರ್ಕಾರವು ಬಿಡುಗಡೆ ಮಾಡಿದೆ. ಈಗಾಗಲೇ ಕೇಂದ್ರ ಸರ್ಕಾರವು 2025ನೇ ಸಾಲಿನ ರಜೆ ಪಟ್ಟಿಯನ್ನು ಸಂಪುಟದ ಅನುಮತಿ ನಂತರ ಬಿಡುಗಡೆ ಮಾಡಿತ್ತು.ಕರ್ನಾಟಕದಲ್ಲೂ ಕಳೆದ ವಾರ ನಡೆದಿದ್ದ ಸಚಿವ ಸಂಪುಟ ಸಭೆಯು ರಜೆ ದಿನಗಳ ಕುರಿತು ಅನುಮತಿ ಪಡೆದಿತ್ತು. ಇದನ್ನು ಅಧಿಕೃತವಾಗಿ ಪ್ರಕಟಣೆ ಹೊರಡಿಸಲಾಗಿದೆ. ಇದರೊಂದಿಗೆ 2025ನೇ ಸಾಲಿನಲ್ಲಿ ಸಿಗಬಹುದಾದ ರಜೆಗಳು, ಯಾವ ದಿನ ಬರಲಿವೆ ಎನ್ನುವ ಮಾಹಿತಿಯನ್ನು ಬಿಡುಗಡೆ ಮಾಡಲಾಗಿದೆ. ದಸರಾದ ನವರಾತ್ರಿ ಹಾಗೂ ದಶಮಿಗೆ ಪ್ರತ್ಯೇಕ ರಜೆ ಇರುತ್ತಿತ್ತಾದರೂ ಈ ಬಾರಿ ನವಮಿ ಹಾಗೂ ದಶಮಿ ಒಂದೇ ದಿನ ಬಂದಿರುವ ಕಾರಣದಿಂದ ಒಂದೇ ದಿನ ರಜೆ ಸಿಗಲಿದೆ. ಉಳಿದಂತೆ ಇತರೆ ರಜೆಗಳ ವಿವರವನ್ನೂ ನೀಡಲಾಗಿದೆ.

2025ನೇ ಸಾಲಿನಲ್ಲಿ ಒಟ್ಟು 19 ದಿನ ಸರ್ಕಾರಿ ರಜೆ ಇರಲಿದೆ. ಅದರಲ್ಲೂ ದಸರಾ ಹಾಗೂ ದೀಪಾವಳಿ ಈ ಬಾರಿಯೂ ಅಕ್ಟೋಬರ್‌ನಲ್ಲಿ ಬಂದಿರುವುದರಿಂದ ಆ ತಿಂಗಳು ಹೆಚ್ಚು ರಜೆ ಇರಲಿವೆ. ಏಪ್ರಿಲ್‌ನಲ್ಲೂ ಕೂಡ ಹೆಚ್ಚಿನ ರಜೆ ದಿನ ಇರಲಿವೆ.

ಈ ಬಾರಿ ಭಾನುವಾರಗಳಂದು ಹೆಚ್ಚಿನ ರಜೆಗಳು ಬಂದಿವೆ. ಅಲ್ಲದೇ ಎರಡನೇ ಶರನಿವಾರವೂ ರಜೆ ಇದೆ. ಇದರಲ್ಲಿ ಗಣರಾಜ್ಯೋತ್ಸವ(ಜ.26), ಯುಗಾದಿ(ಮಾ.30), ಮೊಹರಂ ಕಡೆ ದಿನ(ಜು.6), ಮಹಾಲಯ ಅಮಾವಾಸ್ಯೆ(ಸೆ.21) ಮತ್ತು ಎರಡನೇ ಶನಿವಾರದಂದು ಕನಕದಾಸ ಜಯಂತಿ(ನ.8) ಬರಲಿವೆ. ಹಾಗಾಗಿ, ಆ ದಿನಗಳ ರಜೆ ಬಗ್ಗೆ ಅಧಿಕೃತ ಪಟ್ಟಿಯಲ್ಲಿ ಮಾಹಿತಿಯನ್ನು ನೀಡಿಲ್ಲ.

ಇದಲ್ಲದೇ ಪರಿಮಿತ ರಜೆಗಳು ಜನವರಿ 1: ಹೊಸ ವರ್ಷಾರಂಭ, ಫೆಬ್ರವರಿ 6: ಮಧ್ವ ನವಮಿ, ಫೆಬ್ರವರಿ 14: ಶಬ್ ಎ ಬರಾತ್, ಮಾರ್ಚ್ 13 ಹೋಳಿ ಹಬ್ಬ. ಮಾರ್ಚ್ 27 ಶಬ್ ಎ ಖದರ್. ಮಾರ್ಚ್ 28 ಜುಮತ್ ಉಲ್ ವಿದಾ, ಏಪ್ರಿಲ್ 2 ದೇವರ ದಾಸಿಮಯ್ಯ ಜಯಂತಿ, ಏಪ್ರಿಲ್ 19 ಹೋಲಿ ಸ್ಯಾಟರ್ ಡೇ, ಮೇ 2 ಶಂಕರಾಚಾರ್ಯ ಮತ್ತು ರಾಮಾನುಜಾಚಾರ್ಯ ಜಯಂತಿ, ಮೇ 12 ಬುದ್ಧ ಪೂರ್ಣಿಮಾ, ಆಗಸ್ಟ್ 8 ವರಮಹಾಲಕ್ಷ್ಮಿ ವ್ರತ, ಆಗಸ್ಟ್ 16 ಶ್ರೀಕೃಷ್ಣ ಜನ್ಮಾಷ್ಟಮಿ, ಆಗಸ್ಟ್ 26 ಸ್ವರ್ಣಗೌರಿ ವ್ರತಮ ಸೆಪ್ಟೆಂಬರ್ 6 ಅನಂತಪದ್ಮನಾಭ ವ್ರತ, ಸೆಪ್ಟೆಂಬರ್ 8 ಕನ್ಯಾ ಮರಿಯಂ ಜಯಂತಿ, ಸೆಪ್ಟೆಂಬರ್ 17 ವಿಶ್ವಕರ್ಮ ಜಯಂತಿ, ಆಕ್ಟೋಬರ್ 18 ತುಲಾ ಸಂಕ್ರಮಣ, ನವೆಂಬರ್ 5 ಗುರುನಾನಕ್ ಜಯಂತಿ, ಡಿಸೆಂಬರ್ 5 ಹುತ್ತರಿ ಹಬ್ಬ, ಡಿಸೆಂಬರ್ 24 ಕ್ರಿಸ್ ಮಸ್ ಈವ್ ಇರಲಿವೆ.

2025ನೇ ಸಾಲಿನ ಸರ್ಕಾರಿ ರಜಾ ದಿನಗಳ ಪಟ್ಟಿ

14.01.2025, ಮಂಗಳವಾರ. ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ

26.02.2025, ಬುಧವಾರ. ಮಹಾಶಿವರಾತ್ರಿ

31.03.2025, ಸೋಮವಾರ. ಖುತುಬ್-ಎ-ರಂಜಾನ್

10.04.2025, ಗುರುವಾರ. ಮಹಾವೀರ ಜಯಂತಿ

14.04.2025, ಸೋಮವಾರ. ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ

18.04.2025, ಶುಕ್ರವಾರ. ಗುಡ್‌ ಫ್ರೈಡೆ

30.04.2025, ಬುಧವಾರ. ಬಸವ ಜಯಂತಿ, ಅಕ್ಷಯ ತೃತೀಯ

01.05.2025, ಗುರುವಾರ. ಕಾರ್ಮಿಕ ದಿನಾಚರಣೆ

07.06.2025, ಶನಿವಾರ. ಬಕ್ರೀದ್

15.08.2025, ಶುಕ್ರವಾರ. ಸ್ವಾತಂತ್ರ್ಯ ದಿನಾಚರಣೆ

27.08.2025, ಬುಧವಾರ. ವರಸಿದ್ಧಿ ವಿನಾಯಕ ವ್ರತ

05.09.2025, ಶುಕ್ರವಾರ. ಈದ್-ಮಿಲಾದ್

01.10.2025, ಬುಧವಾರ. ಮಹಾನವಮಿ, ಆಯುಧಪೂಜೆ, ವಿಜಯದಶಮಿ

02.10.2025, ಗುರುವಾರ. ಗಾಂಧಿ ಜಯಂತಿ

07.10.2025, ಮಂಗಳವಾರ. ವಾಲ್ಮೀಕಿ ಜಯಂತಿ

20.10.2025, ಸೋಮವಾರ. ನರಕ ಚತುದರ್ಶಿ

22.10.2025, ಬುಧವಾರ. ಬಲಿಪಾಡ್ಯಮಿ, ದೀಪಾವಳಿ

01.11.2025, ಶನಿವಾರ. ಕನ್ನಡ ರಾಜೋತ್ಸವ

25.12.2025, ಗುರುವಾರ. ಕ್ರಿಸ್‌ಮಸ್

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ