ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ಭ್ರಷ್ಟಾಚಾರ ನಡೆದಿತ್ತು, ಅವರು ಏಕೆ ರಾಜೀನಾಮೆ ಕೊಡಲಿಲ್ಲ? ಸಚಿವ ಪ್ರಿಯಾಂಕ್ ಖರ್ಗೆ
Oct 09, 2024 08:37 PM IST
ಕೆಲವು ದಿನಗಳಿಂದ ಮುಡಾ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಇದೇ ವಿಚಾರಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಜೊತೆ ಸೇರಿ ಕಾಂಗ್ರೆಸ್ ವಿರುದ್ದ ಸಮರ ಸಾರಿದೆ. ಈಗ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಹಗರಣಗಳ ಆರೋಪ ತನಿಖೆ ನಡೆಯುತ್ತಿದೆ. ನೈತಿಕತೆ ಬಗ್ಗೆ ಮಾತನಾಡುವಂತಿದ್ದರೆ ಬಿವೈ ವಿಜಯೇಂದ್ರ ಮೊದಲು ರಾಜೀನಾಮೆ ಕೊಡಬೇಕು, ಮುನಿರತ್ನ ಜೈಲಿನಲ್ಲಿದ್ದಾರೆ. ಇಷ್ಟೆಲ್ಲಾ ಆದರೂ ಅವರನ್ನು ಪಕ್ಷದ ಸದಸ್ಯತ್ವದಿಂದ ತೆಗೆಯುತ್ತಿಲ್ಲ. ಆರೋಪ ಮಾಡಿದಾಗ ನಾವು ಬಿಜೆಪಿಯವಂತೆ ಓಡಿ ಹೋಗುವುದಿಲ್ಲ. ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದ ಸಮಯದಲ್ಲಿ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಆಗಿತ್ತು. ಆದರೂ ಅವರು ಏಕೆ ರಾಜೀನಾಮೆ ಕೊಡಲಿಲ್ಲ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.