logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Rains: ದಸರಾ ವೇಳೆ ಬೆಂಗಳೂರು, ಧಾರವಾಡ, ತುಮಕೂರು,ಬೆಳಗಾವಿ ಸಹಿತ 14 ಜಿಲ್ಲೆಗಳಲ್ಲಿ ಉತ್ತಮ ಮಳೆ;ಯಾವ ಜಿಲ್ಲೆಯಲ್ಲಿ ಕೊರತೆ

Karnataka Rains: ದಸರಾ ವೇಳೆ ಬೆಂಗಳೂರು, ಧಾರವಾಡ, ತುಮಕೂರು,ಬೆಳಗಾವಿ ಸಹಿತ 14 ಜಿಲ್ಲೆಗಳಲ್ಲಿ ಉತ್ತಮ ಮಳೆ;ಯಾವ ಜಿಲ್ಲೆಯಲ್ಲಿ ಕೊರತೆ

Umesha Bhatta P H HT Kannada

Oct 15, 2024 10:51 AM IST

google News

ಬೆಂಗಳೂರಿನಲ್ಲಿ ಸತತವಾಗಿ ಮಳೆ ಕೆಲವು ದಿನಗಳಿಂದ ಆಗುತ್ತಲೇ ಇದೆ.

    • ಈ ಬಾರಿಯ ದಸರಾ ವೇಳೆ ಆರು ಜಿಲ್ಲೆಗಳಲ್ಲಿ ಹೊರತುಪಡಿಸಿದರೆ ಕರ್ನಾಟಕದ 25 ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಈ ಕುರಿತು ಮಾಹಿತಿ ಇಲ್ಲಿದೆ. 
ಬೆಂಗಳೂರಿನಲ್ಲಿ ಸತತವಾಗಿ ಮಳೆ ಕೆಲವು ದಿನಗಳಿಂದ ಆಗುತ್ತಲೇ ಇದೆ.
ಬೆಂಗಳೂರಿನಲ್ಲಿ ಸತತವಾಗಿ ಮಳೆ ಕೆಲವು ದಿನಗಳಿಂದ ಆಗುತ್ತಲೇ ಇದೆ. (Satish DP)

ಬೆಂಗಳೂರು: ಈ ಬಾರಿ ದಸರಾ ವೇಳೆಯೂ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯೇ ಆಯಿತು. ಏಳು ಜಿಲ್ಲೆಗಳಲ್ಲಿ ಅತ್ಯಧಿಕ ಮಳೆಯಾಗಿದ್ದರೆ, ಇನ್ನು ಏಳು ಜಿಲ್ಲೆಗಳಲ್ಲಿ ಉತ್ತಮ ಮಳೆ ಸುರಿದಿದೆ. ಹನ್ನೊಂದು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದ್ದು, ಆರು ಜಿಲ್ಲೆಗಳಲ್ಲಿ ಮಾತ್ರ ಕೊರತೆ ಉಂಟಾಗಿದೆ. 2024ರ ಅಕ್ಟೋಬರ್‌ 1 ರಿಂದ 14ರವರೆಗೆ ಕರ್ನಾಟಕದ ಬೆಂಗಳೂರು, ಮೈಸೂರು ಭಾಗ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ಮಳೆ ಪ್ರಮಾಣವನ್ನು ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಘಟಕವು ಬಿಡುಗಡೆ ಮಾಡಿದೆ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಈ ಅವಧಿಯಲ್ಲಿ ಮಳೆ ಕೊರತೆಯಾಗಿದ್ದರೆ, ದಕ್ಷಿಣ ಭಾಗದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಾತ್ರ ನಿರೀಕ್ಷೆಯಷ್ಟ ಮಳೆಯಾಗಿಲ್ಲ. ಉಳಿದಂತೆ ಎಲ್ಲೆಡೆ ವಾಡಿಕೆಯಷ್ಟು ಮಳೆ ಸುರಿದಿದೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಅತ್ಯಧಿಕ ಎಲ್ಲೆಲ್ಲಿ

ಕರ್ನಾಟಕದ ಮಲೆನಾಡು, ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಎರಡು ವಾರಗಳ ಅವಧಿಯಲ್ಲಿ ಅತ್ಯಧಿಕ ಮಳೆ ಸುರಿದಿದೆ. ಬೆಳಗಾವಿ, ಧಾರವಾಡ, ಚಿಕ್ಕಮಗಳೂರು, ಶಿವಮೊಗ್ಗ ಹಾವೇರಿ ಹಾಗೂ ವಿಜಯನಗರ ಈ ಪಟ್ಟಿಯಲ್ಲಿವೆ.

ಬೆಳಗಾವಿ ಜಿಲ್ಲೆಯಲ್ಲಿ 102 ಎಂಎಂ ಮಳೆಯಾಗಿದ್ದರೆ, ಶೇ 60ರಷ್ಟು ಅತ್ಯಧಿಕ ಸುರಿದಿದೆ. ಧಾರವಾಡ ಜಿಲ್ಲೆಯಲ್ಲಿ 129 ಎಂಎಂ ಮಳೆಯಾಗಿದ್ದರೆ ಶೇ 167 ಅತ್ಯಧಿಕ ಮಳೆಯಾಗಿದೆ. ಹಾವೇರಿ ಜಿಲ್ಲೆಯಲ್ಲಿ 132 ಎಂಎಂ ಮಳೆಯಾಗಿದ್ದರೆ, ಶೇ 106 ರಷ್ಟು ಹೆಚ್ಚು ಮಳೆಯಾಗದೆ. ವಿಜಯನಗರ ಜಿಲ್ಲೆಯಲ್ಲಿ 122 ಎಂಎಂ ಮಳೆಯಾಗಿದ್ದು. ಶೇ78ರಷ್ಟು ಹೆಚ್ಚಿನ ಮಳೆಯಾಗಿದೆ ದಾವಣಗೆರೆ ಜಿಲ್ಲೆಯಲ್ಲಿ 130 ಎಂಎಂ ಮಳೆಯಾಗಿದ್ದರೆ, ಶೇ 56ರಷ್ಟು ಅತ್ಯಧಿಕ ಮಳೆಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 149 ಮಿ.ಮೀ ಮಳೆಯಾದರೆ, ಶೇ 76 ರಷ್ಟು ಅಧಿಕ ಮಳೆ ಸುರಿದಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 130 ಮಿ.ಮೀ ಮಳೆ ಸುರಿದರೆ ಮಳೆ ಅಧಿಕ ಪ್ರಮಾಣ ಶೇ. 72.

ಅಧಿಕ ಮಳೆ

ಅಧಿಕ ಮಳೆ ಜಿಲ್ಲೆಗಳು

ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಿದೆ. ಉತ್ತರ ಕನ್ನಡ, ಉಡುಪಿ, ತುಮಕೂರು ಜಿಲ್ಲೆಗಳು ಈ ಪಟ್ಟಿಯಲ್ಲಿವೆ.

ಉತ್ತರ ಕನ್ನಡ(112 ಮಿ.ಮೀ, ಅಧಿಕ ಶೇ. 31, ಉಡುಪಿ(161 ಮಿ.ಮೀ , ಅಧಿಕ ಶೇ. 41, ಚಿತ್ರದುರ್ಗ(96 ಮಿ.ಮೀ, ಅಧಿಕ ಶೇ. 53, ತುಮಕೂರು(113 ಮಿ.ಮೀ ಅಧಿಕ ಶೇ. 48, ಮಂಡ್ಯ(97 ಮಿ.ಮೀ , ಅಧಿಕ ಶೇ. 31, ರಾಮನಗರ(118 ಮಿ.ಮೀ,ಅಧಿಕ ಶೇ. 39, ಚಾಮರಾಜನಗರ (119ಮಿ.ಮೀ ಮಳೆ, ಅಧಿಕ ಶೇ. 51)

ಸಾಮಾನ್ಯ ಮಳೆ ಜಿಲ್ಲೆಗಳು

ಕರ್ನಾಟಕದ ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ,ಕೊಡಗು ಸೇರಿದಂತೆ ಹನ್ನೊಂದು ಜಿಲ್ಲೆಗಳಲ್ಲಿ ವಾಡಿಕೆಯಷ್ಟೇ ಮಳೆಯಾಗಿದೆ. ಆದರೆ ಮಳೆ ಕೊರತೆ ಈ ಜಿಲ್ಲೆಗಳಲ್ಲಿ ಕಂಡು ಬಂದಿಲ್ಲ.

ಗದಗ( 74 ಮಿ.ಮೀ ಮಳೆ, ಅಧಿಕ ಶೇ. 10,) ಕೊಪ್ಪಳ(72 ಮಿ.ಮೀ ಮಳೆ, ಅಧಿಕ ಶೇ. 2), ಬಳ್ಳಾರಿ( 83 ಮಿ.ಮೀ ಮಳೆ, ಅಧಿಕ ಶೇ. 11), ಚಿಕ್ಕಬಳ್ಳಾಪುರ(66ಮಿ.ಮೀ ಮಳೆ, ಕೊರತೆ ಶೇ. 17), ಕೋಲಾರ(80ಮಿ.ಮೀ ಮಳೆ, ಅಧಿಕ ಶೇ. 8, ಬೆಂಗಳೂರು ನಗರ(88 ಮಿ.ಮೀ ಮಳೆ, ಅಧಿಕ ಶೇ. 6), ದಕ್ಷಿಣ ಕನ್ನಡ(135 ಮಿ.ಮೀ ಮಳೆ, ಕೊರತೆ ಶೇ 5), ಹಾಸನ(92 ಅಧಿಕ ಶೇ. 15, ಮೈಸೂರು)(71 ಮಿ.ಮೀ ಮಳೆ, ಅಧಿಕ ಶೇ. 1),ಕೊಡಗು(89 ಮಿ.ಮೀ ಮಳೆ, ಕೊರತೆ ಶೇ.13),ಬೀದರ್‌( 56 ಮಿ.ಮೀ ಮಳೆ, ಕೊರತೆ ಶೇ.5.)

ಮಳೆ ಕೊರತೆ ಜಿಲ್ಲೆಗಳು

ಕರ್ನಾಟಕ ಆರು ಜಿಲ್ಲೆಗಳಲ್ಲಿ ಮಳೆ ಕೊರತೆ ಎದುರಾಗಿದೆ.ಅದರಲ್ಲೂ ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ಮಳೆ ಕೊರತೆ ಈ ಅವಧಿಯಲ್ಲಿ ಕಂಡು ಬಂದಿದೆ.

ಕಲಬುರಗಿ( 46 ಮಿ.ಮೀ ಮಳೆ, ಕೊರತೆ ಶೇ 29), ವಿಜಯಪುರ(45 ಮಿ.ಮೀ ಮಳೆ, ಕೊರತೆ ಶೇ 39), ಬಾಗಲಕೋಟೆ( 54 ಮಿ.ಮೀ ಮಳೆ, ಕೊರತೆ ಶೇ 23), ಯಾದಗಿರಿ(34 ಮಿ.ಮೀ ಮಳೆ, ಕೊರತೆ ಶೇ 48), ರಾಯಚೂರು(35 ಮಿ.ಮೀ ಮಳೆ, ಕೊರತೆ ಶೇ 54), ಬೆಂಗಳೂರು ಗ್ರಾಮಾಂತರ( 62 ಮಿ.ಮೀ ಮಳೆ, ಕೊರತೆ ಶೇ 24)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ