logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Rains: ಕರಾವಳಿ ಭಾಗದಲ್ಲಿ ಭಾರೀ ಮಳೆ, ಮಲೆನಾಡಲ್ಲೂ ವರುಣನ ಅಬ್ಬರ; 5 ಜಿಲ್ಲೆಗಳಲ್ಲಿ ಇಂದು ಅಲರ್ಟ್‌, ಬೆಂಗಳೂರಲ್ಲಿ ಮಳೆ ಹೇಗಿದೆ

Karnataka Rains: ಕರಾವಳಿ ಭಾಗದಲ್ಲಿ ಭಾರೀ ಮಳೆ, ಮಲೆನಾಡಲ್ಲೂ ವರುಣನ ಅಬ್ಬರ; 5 ಜಿಲ್ಲೆಗಳಲ್ಲಿ ಇಂದು ಅಲರ್ಟ್‌, ಬೆಂಗಳೂರಲ್ಲಿ ಮಳೆ ಹೇಗಿದೆ

Umesha Bhatta P H HT Kannada

Sep 09, 2024 07:52 AM IST

google News

ಮಲೆನಾಡು,ಕರಾವಳ ಭಾಗದಲ್ಲೂ ಭಾರೀ ಮಳೆ ವಾತಾವರಣ ಇದೆ.

    • Karnataka Weather Updates ಕರ್ನಾಟಕದ ಕರಾವಳಿ,ಮಲೆನಾಡು ಭಾಗದಲ್ಲಿ ಸೋಮವಾರವೂ ಭಾರೀ ಮಳೆಯಾಗುವ ಮುನ್ಸೂಚನೆಗಳನ್ನು ನೀಡಲಾಗಿದೆ.
ಮಲೆನಾಡು,ಕರಾವಳ ಭಾಗದಲ್ಲೂ ಭಾರೀ ಮಳೆ ವಾತಾವರಣ ಇದೆ.
ಮಲೆನಾಡು,ಕರಾವಳ ಭಾಗದಲ್ಲೂ ಭಾರೀ ಮಳೆ ವಾತಾವರಣ ಇದೆ.

ಬೆಂಗಳೂರು: ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ( Karnataka Rains) ಭಾರೀ ಮಳೆ ವಾತಾವರಣ ಸೋಮವಾರವೂ ಮುಂದುವರಿಯಲಿದೆ. ಸೆಪ್ಟಂಬರ್‌ 9ರ ಸೋಮವಾರದಿಂದ ಮುಂದಿನ 24 ಗಂಟೆಗಳ ಅವಧಿಯಲ್ಲಿ ಕರಾವಳಿಯ ಉಡುಪಿ( Udupi Rains), ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆ( Dakshina Kannada Rains), ಮಲೆನಾಡಿನ ಶಿವಮೊಗ್ಗ ಹಾಗೂ ಚಿಕ್ಕಮಗಳೂರು( Chikkamagaluru Rains) ಜಿಲ್ಲೆಯ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ. ಈ ಐದು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್‌ ಅನ್ನು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರವು(IMD Bangalore Center) ನೀಡಿದೆ. ಬೆಂಗಳೂರಿನಲ್ಲೂ( Bangalore Weather) ಎರಡು ದಿನಗಳ ಕಾ ಹಗುರ ಮಳೆಯಾಗುವ ಸಾಧ್ಯತೆಗಳಿವೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಎಲ್ಲೆಲ್ಲಿ ಮಳೆಯಾಗಲಿದೆ

ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಭಾರೀ ಮಳೆಯಾಗುವ ಲಕ್ಷಣಗಳು ಇವೆ. ಮೂರು ಜಿಲ್ಲೆಗಳಲ್ಲಿ ಕೆಲ ದಿನದಿಂದ ಉತ್ತಮ ಮಳೆಯೇ ಆಗುತ್ತಿದ್ದು. ಇನ್ನೂ ಕೆಲವು ದಿನ ಮಳೆ ಇರಲಿದೆ.

ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯಿದೆ. ಮಲೆನಾಡು ಭಾಗದಲ್ಲೂ ಮಳೆಯ ವಾತಾವರಣ ಕೆಲ ದಿನಗಳಿಂದ ಉತ್ತಮ ವಾಗಿದೆ.

ಉತ್ತರ ಒಳನಾಡಿನ ಕೆಲವು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಲಘು ಮಳೆಯಾಗಬಹುದು.ಗಾಳಿಯ ಪ್ರಮಾಣವೂ ಈ ಭಾಗದಲ್ಲಿ ಅಧಿಕವಾಗಿ ಇರಲಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ಒಂದೆರಡು ಕಡೆಗಳಲ್ಲಿ ಲಘುವಾಗಿ ಮಳೆಯಾಗಬಹುದು.

ಬೆಂಗಳೂರು ಹವಾಮಾನ

ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸೋಮವಾರ ಹಾಗೂ ಮಂಗಳವಾರದಂದಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಕೆಲವು ಪ್ರದೇಶಗಳಲ್ಲಿ ಹಗುರವಾಗಿ ಮಳೆಯಾಗುವ ಸೂಚನೆಯೂ ಇದೆ.

ಬೆಂಗಳೂರು ನಗರದ ಗರಿಷ್ಠ ತಾಪಮಾನವು 28 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ ಉಷ್ಣಾಂಶವು 21 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ಇದಲ್ಲದೇ ಬೆಂಗಳೂರು ನಗರದಲ್ಲಿ ಮಂಗಳವಾರ ನಿರಂತರ ಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ತಲುಪುವ ಸಾಧ್ಯತೆಗಳಿವೆ.

ಉತ್ತಮ ಮಳೆ

ಕರ್ನಾಟಕದಲ್ಲಿ ಶನಿವಾರ ಸಂಜೆ ಹಾಗೂ ಭಾನುವಾರದಂದು ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಕಲಬುರಗಿ ಜಿಲ್ಲೆಯ ಸೇಡಂ ಭಾಗದಲ್ಲಿ ಅತ್ಯಧಿಕ 5 ಸೆ.ಮೀ ಮಳೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪಾ, ಕದ್ರಾ, ಕಾರವಾರ, ಶಿರಾಲಿ, ಜೋಯಿಡಾ, ಕುಮಟಾ, ಬನವಾಸಿ, ಹೊನ್ನಾವರ, ದಕ್ಷಿಣ ಕನ್ನಡ ಜಿಲ್ಲೆಯ ಮಾಣಿ, ಪುತ್ತೂರು, ಉಪ್ಪಿನಂಗಡಿ, ಬೆಳ್ತಂಗಡಿ, ಸುಳ್ಯ, ಮಂಗಳೂರು, ಪಣಂಬೂರು, ಬೀದರ್‌ ಜಿಲ್ಲೆಯ ಭಾಲ್ಕಿ, ಮಂಠಾಳ, ಯಾದಗಿರಿ ಜಿಲ್ಲೆಯ ಶಹಾಪುರ, ಕಕ್ಕೇರಿ, ಸೈದಾಪುರ, ಕಲಬುರಗಿ ಜಿಲ್ಲೆಯ ಜೇವರ್ಗಿ, ಖಜೂರಿ, ನೆಲೋಗಿ, ಕಮಲಾಪುರ, ಬೆಳಗಾವಿ ಜಿಲ್ಲೆಯ ಲೋಂಡಾ, ಉಡುಪಿ ಜಿಲ್ಲೆಯ ಸಿದ್ದಾಪುರ, ಕಾರ್ಕಳ, ಕೋಟ, ಉಡುಪಿ, ಕುಂದಾಪುರ,ಬಾಗಲಕೋಟೆ ಜಿಲ್ಲೆಯ ಬಾದಾಮಿ., ಮಂಡ್ಯ, ಚಿಕ್ಕಮಗಳೂರು ಜಿಲ್ಲೆಯ ಜಯಪುರ, ಕೊಟ್ಟಿಗೆಗಾರ, ಕೊಪ್ಪ, ತುಮಕೂರು ಜಿಲ್ಲೆಯ ವೈ.ಎನ್‌.ಹೊಸಕೋಟೆ, ಕುಣಿಗಲ್‌, ಗುಬ್ಬಿ, ರಾಯಚೂರು ಜಿಲ್ಲೆಯ ಕುರ್ಡಿ, ದೇವದುರ್ಗ, ಶಿವಮೊಗ್ಗ ಜಿಲ್ಲೆಯ ಹುಂಚದಕಟ್ಟೆ, ಲಿಂಗನಮಕ್ಕಿ, ದಾವಣಗೆರೆಯಲ್ಲಿ ಉತ್ತಮ ಮಳೆಯಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ