logo
ಕನ್ನಡ ಸುದ್ದಿ  /  ಕರ್ನಾಟಕ  /  Kashi Yatra Do's And Don't: ಕರ್ನಾಟಕ-ಕಾಶಿ ಯಾತ್ರೆ ಯಾತ್ರಿಕರು ಏನು ಮಾಡಬಹುದು ಏನು ಮಾಡಬಾರದು? ಇಲ್ಲಿದೆ ವಿವರ

Kashi yatra do's and don't: ಕರ್ನಾಟಕ-ಕಾಶಿ ಯಾತ್ರೆ ಯಾತ್ರಿಕರು ಏನು ಮಾಡಬಹುದು ಏನು ಮಾಡಬಾರದು? ಇಲ್ಲಿದೆ ವಿವರ

HT Kannada Desk HT Kannada

Nov 03, 2022 09:21 AM IST

ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ್ ಯಾತ್ರೆ ಸಂದರ್ಭದಲ್ಲಿ ಯಾತ್ರಿಕರು ಪಾಲಿಸಬೇಕಾದ ನಿಯಮಗಳ ವಿವರವನ್ನು ಐಆರ್‌ಸಿಟಿಸಿ ನೀಡಿದೆ.

    • Kashi yatra do's and don't: ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ್ ಯಾತ್ರೆ ಸಂದರ್ಭದಲ್ಲಿ ಯಾತ್ರಿಕರು ಪಾಲಿಸಬೇಕಾದ ನಿಯಮಗಳ ವಿವರವನ್ನು ಐಆರ್‌ಸಿಟಿಸಿ ನೀಡಿದೆ. ಕರ್ನಾಟಕ ಕಾಶಿ ದರ್ಶನ ರೈಲಿನಲ್ಲಿ ಯಾತ್ರೆ ಕೈಗೊಳ್ಳುವವರು ಈ ನಿಯಮಗಳ ಕಡೆಗೆ ಗಮನಹರಿಸಬೇಕಾದ್ದು ಅವಶ್ಯ. ನಿಯಮಗಳ ವಿವರ ಇಲ್ಲಿದೆ. 
ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ್ ಯಾತ್ರೆ ಸಂದರ್ಭದಲ್ಲಿ ಯಾತ್ರಿಕರು ಪಾಲಿಸಬೇಕಾದ ನಿಯಮಗಳ ವಿವರವನ್ನು ಐಆರ್‌ಸಿಟಿಸಿ ನೀಡಿದೆ.
ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ್ ಯಾತ್ರೆ ಸಂದರ್ಭದಲ್ಲಿ ಯಾತ್ರಿಕರು ಪಾಲಿಸಬೇಕಾದ ನಿಯಮಗಳ ವಿವರವನ್ನು ಐಆರ್‌ಸಿಟಿಸಿ ನೀಡಿದೆ.

ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ್ ಯಾತ್ರೆ ಸಂದರ್ಭದಲ್ಲಿ ಯಾತ್ರಿಕರು ಪಾಲಿಸಬೇಕಾದ ನಿಯಮಗಳ ವಿವರವನ್ನು ಐಆರ್‌ಸಿಟಿಸಿ ನೀಡಿದೆ. ಕರ್ನಾಟಕ ಕಾಶಿ ದರ್ಶನ ರೈಲಿನಲ್ಲಿ ಯಾತ್ರೆ ಕೈಗೊಳ್ಳುವವರು ಈ ನಿಯಮಗಳ ಕಡೆಗೆ ಗಮನಹರಿಸಬೇಕಾದ್ದು ಅವಶ್ಯ. ನಿಯಮಗಳ ವಿವರ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರು ಸಂಚಾರ ಸಲಹೆ; ನಾಗವಾರ ಮೇಲ್ಸೇತುವೆ ಬಳಿ ಇಂದಿನಿಂದ ಸರ್ವೀಸ್‌ ರಸ್ತೆ ಬಂದ್‌, ಟೈಮಿಂಗ್ಸ್ ಮತ್ತು ಇತರೆ ವಿವರ

ಮಂಗಳೂರು ಖಾಸಗಿ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣಕ್ಕೆ ಯತ್ನ; ಆರೋಪಿ ಬಂಧನ

ಬೆಂಗಳೂರಿನಲ್ಲಿ ಸತತ ಎರಡನೇ ದಿನವೂ ಮಳೆ, ತೊಂದರೆ ಅನುಭವಿಸಿದರೂ ಮಳೆಯಾಗಿದ್ದಕ್ಕೆ ಖುಷಿಪಟ್ಟ ನಾಗರಿಕರು

ಕರ್ನಾಟಕ ಹವಾಮಾನ ಮೇ 10; ಮೈಸೂರು, ಬೆಂಗಳೂರು ಸೇರಿ 25 ಜಿಲ್ಲೆಗಳಲ್ಲಿ ಸಾಧಾರಣ ಮಳೆ, ತುಮಕೂರು ಸೇರಿ 6 ಜಿಲ್ಲೆಗಳಲ್ಲಿ ಒಣಹವೆ

ಕಾಶಿ ಯಾತ್ರೆ ಯಾತ್ರಿಕರು ಏನು ಮಾಡಬಹುದು ಏನು ಮಾಡಬಾರದು?

ಕಾಶಿ ಯಾತ್ರಾ ಪ್ಯಾಕೇಜ್‌ನಲ್ಲಿ ಪ್ರಯಾಣಿಸುವವರು ನಿಮ್ಮ ಪ್ರಯಾಣವನ್ನು ಉತ್ತಮ ಮತ್ತು ಆರಾಮದಾಯಕವಾಗಿಸಲು ದಯವಿಟ್ಟು ಈ ಕೆಳಗಿನ ಅಂಶಗಳನ್ನು ಅನುಸರಿಸಬೇಕು ಎಂದು ಐಆರ್‌ಸಿಟಿಸಿ ಹೇಳಿದೆ.

1. ಆರೋಗ್ಯ ಸೇತು ಅಪ್ಲಿಕೇಶನ್‌ನ ಇನ್‌ಸ್ಟಾಲ್‌ ಮಾಡಿಕೊಳ್ಳಿ ಮತ್ತು ಅದನ್ನು ಬಳಸಿ. ಇದು ರೈಲ್ವೆ ಸಿಬ್ಬಂದಿ ಮತ್ತು ಪ್ರವಾಸಿಗರು ಎಲ್ಲರೂ ಕಡ್ಡಾಯ ಮಾಡಬೇಕು.

2. ಪ್ರವಾಸಿಗರು ಫೇಸ್ ಮಾಸ್ಕ್ ಮತ್ತು ಕೈಗವಸುಗಳನ್ನು ಧರಿಸಬೇಕು.

3. ಕೈಗಳು ಗೋಚರವಾಗುವಂತೆ ಕೊಳಕು ಇಲ್ಲದಿದ್ದರೂ ಸಹ (ಕನಿಷ್ಠ 40 - 60 ಸೆಕೆಂಡುಗಳ ಕಾಲ) ಸಾಬೂನಿನಿಂದ ಆಗಾಗ್ಗೆ ಕೈ ತೊಳೆಯುವುದನ್ನು ಅಭ್ಯಾಸ ಮಾಡಿ

4. ಲಗೇಜ್ ಅನ್ನು ಸ್ವಾಗತ / ಬೋರ್ಡಿಂಗ್ ಪಾಯಿಂಟ್‌ನಲ್ಲಿ ಸೋಂಕುರಹಿತಗೊಳಿಸಬೇಕು.

5. ಪ್ರವಾಸಿಗರು ತಮ್ಮ ಕೈಗಳಿಂದ ತಮ್ಮ ಕಣ್ಣು, ಮೂಗು ಮತ್ತು ಬಾಯಿಯನ್ನು ಮುಟ್ಟುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕೆಂಬ ಸಲಹೆ ಇದೆ.

6. ಎಲ್ಲ ಪ್ರವಾಸಿಗರು ಅವರು ಭೇಟಿ ನೀಡುವ ರಾಜ್ಯಗಳು / ಸ್ಥಳೀಯ ಆಡಳಿತದಿಂದ ನೀಡಲಾದ ಕಡ್ಡಾಯ ಆರೋಗ್ಯ ಸಲಹೆಗಳನ್ನು ಪಾಲಿಸಲು ಬದ್ಧರಾಗಿರುತ್ತಾರೆ.

7. ಪ್ರವಾಸಿಗರು ಇತರ ಪ್ರವಾಸಿಗರ ಫೋನ್, ನೀರಿನ ಬಾಟಲಿ, ಛತ್ರಿ ಇತ್ಯಾದಿಗಳನ್ನು ಬಳಸುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು.

8. ರೈಲಿನ ಬೋರ್ಡಿಂಗ್ / ಡಿಬೋರ್ಡಿಂಗ್ ಸಮಯದಲ್ಲಿ ಅನುಸರಿಸಬೇಕಾದ ಸಾಮಾಜಿಕ ಅಂತರ (ವೈಯಕ್ತಿಕ ಅಂತರ)ವನ್ನು / ಯಾವುದೇ ಇತರ ಸಾರಿಗೆ, ಸ್ಮಾರಕಗಳು ಮತ್ತು ಯಾತ್ರಿ ಸ್ಥಳಗಳಿಗೆ ಭೇಟಿ ನೀಡುವುದು, ಗುಂಪು ಊಟಗಳು / ರಾತ್ರಿಯ ಊಟಗಳು ಇತ್ಯಾದಿ ಸಂದರ್ಭದಲ್ಲಿ ಪಾಲಿಸಬೇಕು.

9. ರೈಲು ಕಾರಿಡಾರ್‌ಗಳು, ಗೇಟ್‌ಗಳು, ಕ್ಯಾಬಿನ್‌ಗಳು, ಹೋಟೆಲ್‌ಗಳು ಇತ್ಯಾದಿಗಳಲ್ಲಿ ಅಡ್ಡಾದಿಡ್ಡಿ ಮತ್ತು ಜನಸಂದಣಿ ಹೋಗದೆ ಯಾತ್ರಿಕರ ಗುಂಪಿನ ಕಣ್ಣಳತೆಯಲ್ಲೇ ಇರಬೇಕು.

10. ರೈಲು, ಪ್ರವಾಸಿ ಸ್ಥಳಗಳು, ಬಸ್ಸುಗಳು, ಹೋಟೆಲ್‌ಗಳಲ್ಲಿ ಸಿಕ್ಕ ಸಿಕ್ಕಲ್ಲಿ ಉಗುಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇದನ್ನು ಪಾಲಿಸಬೇಕು.

11. ಧಾರ್ಮಿಕ / ಪ್ರವಾಸಿ ಸ್ಥಳಗಳಲ್ಲಿ ಪ್ರತಿಮೆಗಳು / ವಿಗ್ರಹಗಳು / ಪವಿತ್ರ ಪುಸ್ತಕಗಳು ಇತ್ಯಾದಿಗಳನ್ನು ಸ್ಪರ್ಶಿಸಲು ಅನುಮತಿಸಲಾಗುವುದಿಲ್ಲ.

12. ಧಾರ್ಮಿಕ ಸ್ಥಳದ ಒಳಗೆ ಪ್ರಸಾದ / ವಿತರಣೆ ಅಥವಾ ಪವಿತ್ರ ನೀರನ್ನು ಚಿಮುಕಿಸುವುದು ಮುಂತಾದ ಯಾವುದೇ ಭೌತಿಕ ಕೊಡುಗೆಗಳು.

13. ದೇವಸ್ಥಾನ ದರ್ಶನ ಮತ್ತು ಸ್ಮಾರಕಗಳ ವೀಕ್ಷಣೆಗೆ COVID-19 ಸಂಪೂರ್ಣ ಲಸಿಕೆ ಪ್ರಮಾಣಪತ್ರ ಕಡ್ಡಾಯವಾಗಿದೆ. ಪ್ರವಾಸದ ಅವಧಿಯಲ್ಲಿ ಎಲ್ಲಾ ಪ್ರಯಾಣಿಕರು ಲಸಿಕೆ ಪ್ರಮಾಣಪತ್ರವನ್ನು ಹಾರ್ಡ್ ಕಾಪಿಯಲ್ಲಿ ಅಥವಾ ಫೋನ್‌ನಲ್ಲಿ ಕೊಂಡೊಯ್ಯಬೇಕು.

14. ಪರಸ್ಪರ ಶುಭಾಶಯ ಹೇಳುವಾಗ ದೈಹಿಕ ಸಂಪರ್ಕವನ್ನು ತಪ್ಪಿಸಿ.

ಕಾಶಿ ಯಾತ್ರೆ ಸಂದರ್ಭದಲ್ಲಿ ಮಾರ್ಗದರ್ಶಕ ಯಾರು?

ಪ್ರವಾಸ ವ್ಯವಸ್ಥಾಪಕ - ಟೂರ್ ಮ್ಯಾನೇಜರ್ ಅಥವಾ ಪ್ರವಾಸ ವ್ಯವಸ್ಥಾಪಕನೇ ಪ್ರವಾಸಿಗರ ಮಾಹಿತಿಯ ಮೂಲ. ಎಲ್ಲ ಸಮಯದಲ್ಲೂ ಪ್ರವಾಸ ನಿರ್ವಾಹಕರು ನೀಡುವ ಮಾರ್ಗಸೂಚಿಗಳನ್ನು ಅನುಸರಿಸಿ.

ರೈಲು ಪ್ರಯಾಣದ ಸಮಯದಲ್ಲಿ

  • ರೈಲಿನಲ್ಲಿ ಪ್ರಯಾಣಿಸುವಾಗ ಸರಪಳಿ ಎಳೆಯಬೇಡಿ ಏಕೆಂದರೆ ಸರಿಯಾದ ಕಾರಣವಿಲ್ಲದೆ ಮಾಡಿದರೆ ಅದು ಶಿಕ್ಷಾರ್ಹ ಅಪರಾಧವಾಗಿದೆ.
  • ರೈಲಿನಲ್ಲಿ ಅನಗತ್ಯವಾಗಿ ನೀರನ್ನು ಪೋಲು ಮಾಡಬೇಡಿ.
  • ರೈಲ್ವೆ ಹಳಿಗಳನ್ನು ದಾಟಬೇಡಿ. ಸೇತುವೆಗಳ ಮೇಲೆ ನಡೆದು ಹೋಗಿ.

ಉಡುಗೆ ತೊಡುಗೆ ಕಡೆಗೆ ಇರಲಿ ಗಮನ

ನೀವು ಭೇಟಿ ನೀಡುವ ಸ್ಥಳಗಳಲ್ಲಿ ಸ್ಥಳೀಯರು/ಸಂದರ್ಶಕರಿಗೆ ನಿಮ್ಮ ಉಡುಗೆ ತೊಡುಗೆ ಮುಜುಗರ, ಕಿರಿಕಿರಿ ಉಂಟುಮಾಡುವುದಿಲ್ಲ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ. ಪವಿತ್ರ ದೇವಾಲಯಗಳಲ್ಲಿ, ನಿಮ್ಮ ಬೂಟುಗಳನ್ನು, ಪಾದರಕ್ಷೆಗಳನ್ನು ಕಳಚಿಯೇ ಹೋಗಬೇಕು. ಅಲ್ಲಿನ ನಿಯಮಗಳನ್ನು ಪಾಲಿಸಬೇಕಾಗಬಹುದು.

ವರ್ತನೆ ಭಾಷಾ ಸಭ್ಯತೆ ಮರೆಯಬೇಡಿ

  • ರೈಲಿನಲ್ಲಿ ನಿಮ್ಮ ಸಹ ಪ್ರಯಾಣಿಕರಿಗೆ ಮತ್ತು ನೀವು ಭೇಟಿ ನೀಡುವ ದೇಗುಲಗಳಲ್ಲಿ/ಸ್ಥಳಗಳಲ್ಲಿ ಇತರರ ಜತೆಗೆ ವ್ಯವಹರಿಸುವಾಗ ದಯವಿಟ್ಟು ಭಾಷೆಯ ಸಭ್ಯತೆಯನ್ನು ಕಾಪಾಡಿಕೊಳ್ಳಿ.
  • ಸ್ಥಳೀಯರೊಂದಿಗೆ ಸಂವಹನ ನಡೆಸುವಾಗ ಅಸಭ್ಯವಾಗಿ ವರ್ತಿಸಬೇಡಿ ಮತ್ತು ಯಾವುದೇ ವಾದಗಳಲ್ಲಿ ಪಾಲ್ಗೊಳ್ಳಬೇಡಿ. ಯಾವುದೇ ವಿಷಯದಲ್ಲಿ ಯಾವುದೇ ಸಂದೇಹಗಳಿದ್ದಲ್ಲಿ, ದಯವಿಟ್ಟು ಪ್ರವಾಸ ವ್ಯವಸ್ಥಾಪಕರೊಂದಿಗೆ ಮಾತನಾಡಿ.
  • ಯಾತ್ರಿಕರ ಗುಂಪುಗಳಲ್ಲಿ ಇರಬೇಕು ಮತ್ತು ಪ್ರವಾಸ ವ್ಯವಸ್ಥಾಪಕರ ಸೂಚನೆಗಳ ಪ್ರಕಾರ ನೀವು ಭೇಟಿ ನೀಡುವ ಸ್ಥಳಗಳಲ್ಲಿ ಸಮಯ ಪಾಲನೆ ಮಾಡಬೇಕು.
  • ಕೆಲವು ಸ್ಥಳಗಳಲ್ಲಿ ಛಾಯಾಗ್ರಹಣವನ್ನು ನಿರ್ಬಂಧಿಸಬಹುದು. ಸ್ಥಳೀಯ ನಿಯಮಗಳನ್ನು ಉಲ್ಲಂಘಿಸಬೇಡಿ.
  • ಯಾತ್ರಾ ಸಂದರ್ಭದಲ್ಲಿ ಸುಗಮ ಯಾತ್ರೆಗೆ ಅಡ್ಡಿ ಉಂಟುಮಾಡುವ ಕೆಲಸ ಮಾಡಿದರೆ ಅಂತಹ ಯಾತ್ರಿಕರ ಪ್ರಯಾಣ ಅರ್ಧದಲ್ಲೇ ರದ್ದುಗೊಳಿಸುವ ಹಕ್ಕುನ್ನು ಐಆರ್‌ಸಿಟಿಸಿ ಕಾಯ್ದಿರಿಸಿಕೊಂಡಿದೆ.

ಸೈಟ್‌ ಸೀಯಿಂಗ್‌ ಹೋದಾಗ..

  • ಅನಿವಾರ್ಯ ಸನ್ನಿವೇಶಗಳ ಕಾರಣ ನಿಮಗೆ ಒದಗಿಸಲಾದ ಪ್ರಯಾಣದ ವಿವರ ಬದಲಾಗಬಹುದು. ಅಂತಹ ಸಂದರ್ಭದಲ್ಲಿ ಕೂಡ ಸುಗಮ ಯಾತ್ರೆಗಾಗಿ ದಯವಿಟ್ಟು ಪ್ರವಾಸ ವ್ಯವಸ್ಥಾಪಕರ ಸೂಚನೆಗಳನ್ನು ಅನುಸರಿಸಬೇಕು.
  • ನಿರ್ಲಕ್ಷ್ಯ, ಸೂಚನೆಗಳ ಅನುಸರಣೆ ಮಾಡದೇ ಉಂಟಾಗುವ ಯಾವುದೇ ಅನಾಹುತಗಳಿಗೆ ಐಆರ್‌ಸಿಟಿಸಿ ಹೊಣೆಗಾರನಲ್ಲ.

ಸುರಕ್ಷತೆ ಮತ್ತು ಭದ್ರತೆ

  • ಪ್ರವಾಸದ ಸಮಯದಲ್ಲಿ ದಯವಿಟ್ಟು ಪ್ರವಾಸಿಗರ ವಸ್ತುಗಳ ಸಂಪೂರ್ಣ ಹೊಣೆಗಾರಿಕೆ ಆಯಾ ಪ್ರವಾಸಿಗರದ್ದೇ ಆಗಿರುತ್ತದೆ.
  • ಭದ್ರತಾ ಕಾರಣಗಳಿಗಾಗಿ ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್ ಇತ್ಯಾದಿಗಳಂತಹ ಫೋಟೋ ಗುರುತಿನ ಚೀಟಿಯನ್ನು ತೆಗೆದುಕೊಂಡು ಹೋಗಬೇಕು.
  • ಯಾವುದೇ ತುರ್ತು ಸಂದರ್ಭದಲ್ಲಿ ಸಂಪರ್ಕಿಸಲು ದಯವಿಟ್ಟು ವ್ಯಕ್ತಿ(ಗಳ) ಸಂಪರ್ಕ ವಿವರಗಳನ್ನು ಪ್ರವಾಸ ನಿರ್ವಾಹಕರಿಗೆ ಕೊಟ್ಟಿರಿ.

    ಹಂಚಿಕೊಳ್ಳಲು ಲೇಖನಗಳು