ಕನ್ನಡ ಸುದ್ದಿ  /  ಕ್ರಿಕೆಟ್  /  ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಐಪಿಎಲ್​ನಲ್ಲಿ ಅತ್ಯಂತ ಕೆಟ್ಟ ಪ್ರದರ್ಶನ ನೀಡಲು ಪ್ರಮುಖ ಕಾರಣಗಳು

ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಐಪಿಎಲ್​ನಲ್ಲಿ ಅತ್ಯಂತ ಕೆಟ್ಟ ಪ್ರದರ್ಶನ ನೀಡಲು ಪ್ರಮುಖ ಕಾರಣಗಳು

Mumbai Indians : 2024ರ ಐಪಿಎಲ್​ನ ಆರಂಭದಲ್ಲಿ ನಿರೀಕ್ಷೆ ಹುಟ್ಟು ಹಾಕಿದ್ದ ಮುಂಬೈ ಇಂಡಿಯನ್ಸ್, ಮೊದಲ ತಂಡವಾಗಿ ಎಲಿಮಿನೇಟ್ ಆಗಿದೆ. ಹಾಗಾದರೆ, ಪ್ರಸಕ್ತ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡ ಎಡವಿದ್ದೆಲ್ಲಿ? ಹಿನ್ನಡೆ ಅನುಭವಿಸಲು ಕಾರಣಗಳೇನು? ಇಲ್ಲಿದೆ ವಿವರ.

ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಐಪಿಎಲ್​ನಲ್ಲಿ ಅತ್ಯಂತ ಕೆಟ್ಟ ಪ್ರದರ್ಶನ ನೀಡಲು ಪ್ರಮುಖ ಕಾರಣಗಳು
ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಐಪಿಎಲ್​ನಲ್ಲಿ ಅತ್ಯಂತ ಕೆಟ್ಟ ಪ್ರದರ್ಶನ ನೀಡಲು ಪ್ರಮುಖ ಕಾರಣಗಳು

ಮುಂಬೈ ಇಂಡಿಯನ್ಸ್ (Mumbai Indians)​.. ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದು. ರೋಹಿತ್ ಶರ್ಮಾ ನಾಯಕತ್ವ ವಹಿಸಿಕೊಂಡ ಹತ್ತು ವರ್ಷಗಳಲ್ಲಿ ಮುಂಬೈ ಐದು ಟ್ರೋಫಿಯನ್ನು ಗೆದ್ದುಕೊಂಡಿತು. 2013 ರಿಂದ 2023ರ ತನಕ ಹಿಟ್​ಮ್ಯಾನ್ ಎಂಐ ಕ್ಯಾಪ್ಟನ್ ಆಗಿದ್ದರು. ಶ್ರೀಮಂತ ಲೀಗ್​​​ನಲ್ಲಿ ಅತ್ಯಧಿಕ ಟ್ರೋಫಿ ಜಯಿಸಿದ ಜಂಟಿ 2ನೇ ಸ್ಥಾನ ಪಡೆದ ಮುಂಬೈ, 17ನೇ ಆವೃತ್ತಿಯಲ್ಲಿ ನೂತನ ನಾಯಕನೊಂದಿಗೆ ಸಾಕಷ್ಟು ನಿರೀಕ್ಷೆಗಳೊಂದಿಗೆ ಕಣಕ್ಕಿಳಿಯಿತು. ಆದರೆ, ಆಗಿದ್ದೇ ಬೇರೆ.

ಟ್ರೆಂಡಿಂಗ್​ ಸುದ್ದಿ

ಗುಜರಾತ್ ಟೈಟಾನ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಹಾರ್ದಿಕ್ ಪಾಂಡ್ಯ, ಟ್ರೇಡ್ ಮೂಲಕ ಮುಂಬೈ ಸೇರಿದ್ದಲ್ಲದೆ, ರೋಹಿತ್​ ಅವರಿಂದ ನಾಯಕತ್ವ ಪಡೆದುಕೊಂಡರು. ಫ್ರಾಂಚೈಸ್ ಮಾಲೀಕರು ಸಹ ಹಾರ್ದಿಕ್​ರಿಂದ ಹೆಚ್ಚು ನಿರೀಕ್ಷೆ ಹೊಂದಿದ್ದರು. ಆದರೆ, ಆಗಿದ್ದೇ ಮಾತ್ರ ಭಾರಿ ನಿರಾಸೆ. ಘಟಾನುಘಟಿ ಆಟಗಾರರೇ ತಂಡದಲ್ಲಿದ್ದರೂ ಸತತ ಸೋಲುಗಳಿಗೆ ಕಂಗೆಟ್ಟಿತು. 12 ಪಂದ್ಯಗಳಲ್ಲಿ 8 ಸೋಲು, 4 ಜಯ ಸಾಧಿಸಿ 8 ಅಂಕ ಪಡೆದು ಎಲಿಮಿನೇಟ್ ಆದ ಮೊದಲ ತಂಡವಾಗಿದೆ.

ಅತ್ಯಂತ ಯಶಸ್ವಿ ತಂಡವು 17ನೇ ಆವೃತ್ತಿಯ ಐಪಿಎಲ್​ನಲ್ಲಿ ಹೀನಾಯ ಪ್ರದರ್ಶನ ನೀಡಲು ಕಾರಣವೇನು? ಎಲಿಮಿನೇಟ್ ಆಗಲು ಕಾರಣಗಳೇನು? ಮಾಡಿದ ತಪ್ಪುಗಳೇನು? ಇಲ್ಲಿದೆ ವಿವರ.

ರೋಹಿತ್​ ಶರ್ಮಾ ಆತ್ಮವಿಶ್ವಾಸ ಕುಸಿತ

ಹೌದು, ತಂಡದ ನಾಯಕತ್ವವನ್ನು ಏಕಾಏಕಿ ಕಿತ್ತಾಕಿ ಹಾರ್ದಿಕ್​ಗೆ ನೀಡಿದ್ದು, ರೋಹಿತ್​ ಆತ್ಮವಿಶ್ವಾಸವನ್ನು ಕುಗ್ಗಿಸಿತು. ಇದು ಆರಂಭಿಕ ಹಂತದಲ್ಲೇ ಮುಂಬೈಗೆ ಪೆಟ್ಟು ಬಿದ್ದಿತು. ಅಭಿಮಾನಿಗಳಿಂದ ಸಾಕಷ್ಟು ಸಿಕ್ಕರೂ ತನಗಾದ ಅವಮಾನದಿಂದ ಹಿಟ್​ಮ್ಯಾನ್​ ಈಗಲೂ ಚೇತರಿಸಿಕೊಂಡಿಲ್ಲ. ಹೀಗಾಗಿ ಬ್ಯಾಟಿಂಗ್​ನಲ್ಲಿ ಮ್ಯಾಜಿಕ್ ಮಾಡಲು ಸಾಧ್ಯವಾಗಲಿಲ್ಲ. ತಂಡದ ವೈಫಲ್ಯಕ್ಕೆ ಇದು ಒಂದು ಕಾರಣ.

ಪಾಂಡ್ಯಗೆ ಅತಿಯಾದ ಆತ್ಮವಿಶ್ವಾಸ, ಕಳಪೆ ಕ್ಯಾಪ್ಟನ್ಸಿ

ಹಾರ್ದಿಕ್ ಅವರ ಅತಿಯಾದ ಆತ್ಮವಿಶ್ವಾಸವೂ ಮುಂಬೈ ಮುಳುಗಲು ಕಾರಣವಾಯಿತು. ಕಳೆದ ಫ್ರಾಂಚೈಸಿ ಗುಜರಾತ್​ ಅನ್ನು ಎರಡು ಬಾರಿ ಫೈನಲ್​ಗೇರಿಸಿ ಪಾಂಡ್ಯ​ ಅದೇ ಅತಿಯಾದ ಆತ್ಮ ವಿಶ್ವಾಸ ದೊಡ್ಡ ಫ್ರಾಂಚೈಸಿಯಲ್ಲಿ ಮುಂದುವರೆಸಲು ಯತ್ನಿಸಿ ಕೈಸುಟ್ಟುಕೊಂಡರು. ನಾಯಕನಾಗಿ ಬುಮ್ರಾ ಅವರನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಕೆಲ ಪಂದ್ಯಗಳಲ್ಲಿ ಪವರ್​ಪ್ಲೇನಲ್ಲಿ ಬೌಲಿಂಗ್ ಮಾಡಿದ್ದರು. ಕಳಪೆ ನಾಯಕತ್ವದಿಂದಲೂ ಹಲವು ಪಂದ್ಯಗಳು ಸೋತವು. ಹಾರ್ದಿಕ್ ಅಭಿಮಾನಿಗಳಿಂದ ತೀವ್ರ ವಿರೋಧಕ್ಕೆ ಒಳಗಾಗಿದ್ದು ಸಹ ಹಿನ್ನಡೆಗೆ ಕಾರಣವಾಯಿತು.

ಬೇಕಾಬಿಟ್ಟಿ ತಂಡದ ಸಂಯೋಜನೆ

ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಕಟ್ಟುವಲ್ಲೂ ನಾಯಕನಾಗಿ ಹಾರ್ದಿಕ್ ವಿಫಲರಾದರು. ಬೇಕಾಬಿಟ್ಟಿ ತಂಡದ ಸಂಯೋಜನೆ ಮಾಡಿದರು. ಒಂದು ಪಂದ್ಯದಲ್ಲಿ ಒಬ್ಬ ಆಟಗಾರ ಕಳಪೆ ಪ್ರದರ್ಶನ ನೀಡಿದರೆ, ಆತನಿಗೆ ಮುಂದಿನ ಪಂದ್ಯದಲ್ಲಿ ಪ್ಲೇಯಿಂಗ್​ ಇಲೆವೆನ್​ನಲ್ಲಿ ಅವಕಾಶ ಸಿಗುತ್ತಿರಲಿಲ್ಲ. ಇದು ಆಟಗಾರರ ಆತ್ಮ ವಿಶ್ವಾಸ ಕುಗ್ಗಿಸಿತು. ಅಲ್ಲದೆ, ಇಶಾನ್ ಕಿಶನ್​ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.

ತಂಡದಲ್ಲಿ ಎರಡು ಬಣಗಳು ಸೃಷ್ಟಿ

ಫ್ರಾಂಚೈಸಿ ನಾಯಕತ್ವ ಬದಲಾವಣೆಯಾಗುತ್ತಿದ್ದಂತೆ ತಂಡದಲ್ಲಿ ಎರಡು ಬಣಗಳು ಸೃಷ್ಟಿಯಾದವು. ರೋಹಿತ್​ vs ಹಾರ್ದಿಕ್ ಬಣಗಳು ನಿರ್ಮಾಣವಾದವು. ಹಿಟ್​ಮ್ಯಾನ್ ಪರ ಸೂರ್ಯ, ಬುಮ್ರಾ, ತಿಲಕ್ ವರ್ಮಾ, ಆಕಾಶ್ ಮಧ್ವಾಲ್ ಸೇರಿದಂತೆ ಹಲವರಿದ್ದರು. ಹಾರ್ದಿಕ್ ಬಣದಲ್ಲಿ ಇಶಾನ್ ಕಿಶನ್ ಸೇರಿದಂತೆ ಪ್ರಮುಖರಿದ್ದರು. ಇದು ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರಿತು.

ಜಸ್ಪ್ರೀತ್ ಬುಮ್ರಾ ಹೊರತುಪಡಿಸಿ ಉಳಿದ ಬೌಲರ್​ಗಳ ವೈಫಲ್ಯ

ಮುಂಬೈ ಪರ ಜಸ್ಪ್ರೀತ್ ಬುಮ್ರಾ ಹೊರತುಪಡಿಸಿ ಯಾವುದೇ ಬೌಲರ್​ಗಳು ಮ್ಯಾಜಿಕ್ ನಡೆಸಲಿಲ್ಲ. ನುವಾನ್ ತುಷಾರ, ಜೆರಾಲ್ಡ್ ಕೊಯೆಟ್ಜಿ, ಹಾರ್ದಿಕ್ ಪಾಂಡ್ಯ, ಕ್ವೇನಾ ಮಫಾಕ, ಆಕಾಶ್ ಮಧ್ವಾಲ್, ಲೂಕ್​ ವುಡ್​ ಅತ್ಯಂತ ದುಬಾರಿ ಬೌಲರ್​ಗಳ ಪಟ್ಟಿಯಲ್ಲಿ ಸೇರಿದ್ದಾರೆ. ಆದರೆ ಬುಮ್ರಾ 12 ಪಂದ್ಯಗಳಲ್ಲಿ 18 ವಿಕೆಟ್ ಪಡೆದಿದ್ದಾರೆ. ಅವರ ಬೌಲಿಂಗ್ ಸರಾಸರಿ 16.50.

ಟಿಮ್ ಡೇವಿಡ್ ಫಿನಿಷರ್ ಆಗಲೇ ಇಲ್ಲ!

ಮುಂಬೈ ಇಂಡಿಯನ್ಸ್ ದೈತ್ಯ ಟಿಮ್ ಡೇವಿಡ್ ಒಂದು ಪಂದ್ಯವನ್ನೂ ಫಿನಿಷರ್ ಮಾಡಲಿಲ್ಲ. ಡೇವಿಡ್ ಅವರನ್ನು ಫಿನಿಷರ್ ಆಗಿಯೇ ಬಳಕೆ ಮಾಡುತ್ತಿದ್ದ ಎಂಐ ನಂಬಿಕೆಯನ್ನು ಅವರು ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದಾರೆ. ಇದು ಸಹ ಯಶಸ್ವಿ ಎಂಬ ಮುಂಬೈ ಹಡಗು ಮುಳುಗಲು ಕಾರಣವಾಯಿತು.

ಮತ್ತಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

IPL_Entry_Point