ಕನ್ನಡ ಸುದ್ದಿ  /  ಕ್ರಿಕೆಟ್  /  ಸಿಎಸ್​​ಕೆ Vs ಜಿಟಿ ಪ್ಲೇಆಫ್​ ರೇಸ್​ನಲ್ಲಿ ಗೆಲ್ಲೋರು ಯಾರು; ಸಂಭಾವ್ಯ ಪ್ಲೇಯಿಂಗ್ Xi, ಪಿಚ್‌ ರಿಪೋರ್ಟ್, ಹವಾಮಾನ ವರದಿ

ಸಿಎಸ್​​ಕೆ vs ಜಿಟಿ ಪ್ಲೇಆಫ್​ ರೇಸ್​ನಲ್ಲಿ ಗೆಲ್ಲೋರು ಯಾರು; ಸಂಭಾವ್ಯ ಪ್ಲೇಯಿಂಗ್ XI, ಪಿಚ್‌ ರಿಪೋರ್ಟ್, ಹವಾಮಾನ ವರದಿ

Gujarat Titans vs Chennai Super Kings: 17ನೇ ಆವೃತ್ತಿಯ ಐಪಿಎಲ್​ನ 59ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ಪಂದ್ಯ ಜರುಗಲಿದೆ.

ಸಿಎಸ್​​ಕೆ vs ಜಿಟಿ ಪ್ಲೇಆಫ್​ ರೇಸ್​ನಲ್ಲಿ ಗೆಲ್ಲೋರು ಯಾರು; ಸಂಭಾವ್ಯ ಪ್ಲೇಯಿಂಗ್ XI, ಪಿಚ್‌ ರಿಪೋರ್ಟ್, ಹವಾಮಾನ ವರದಿ
ಸಿಎಸ್​​ಕೆ vs ಜಿಟಿ ಪ್ಲೇಆಫ್​ ರೇಸ್​ನಲ್ಲಿ ಗೆಲ್ಲೋರು ಯಾರು; ಸಂಭಾವ್ಯ ಪ್ಲೇಯಿಂಗ್ XI, ಪಿಚ್‌ ರಿಪೋರ್ಟ್, ಹವಾಮಾನ ವರದಿ

17ನೇ ಆವೃತ್ತಿಯ ಐಪಿಎಲ್ (IPL 2024)​ ಕೊನೆಯ ಘಟ್ಟಕ್ಕೆ ತಲುಪುತ್ತಿದ್ದಂತೆ ಕುತೂಹಲ ಹೆಚ್ಚಾಗಿದೆ. ಎರಡು ತಂಡಗಳು ಅಧಿಕೃತವಾಗಿ ಟೂರ್ನಿಯಿಂದ ಹೊರಬಿದ್ದರೂ ಉಳಿದ 8 ತಂಡಗಳಿಂದ ಪ್ಲೇಆಫ್​ ಚಿತ್ರ ಇನ್ನೂ ಅಂತಿಮಗೊಂಡಿಲ್ಲ. ಈಗ ಮತ್ತೊಂದು ಮಹತ್ವದ ಪಂದ್ಯಕ್ಕೆ ಐಪಿಎಲ್ ಸಿದ್ಧವಾಗುತ್ತಿದೆ. ಟೂರ್ನಿಯ 59ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ (Gujarat Titans vs Chennai Super Kings) ತಂಡಗಳು ಸೆಣಸಾಟ ನಡೆಸಲು ಸಜ್ಜಾಗಿವೆ.

ಟ್ರೆಂಡಿಂಗ್​ ಸುದ್ದಿ

ಪ್ಲೇಆಫ್​ ರೇಸ್​ನಲ್ಲಿ ಉಳಿಯಲು ಈ ಪಂದ್ಯದಲ್ಲಿ ಜಿಟಿ ಗೆಲುವು ಸಾಧಿಸುವುದು ಅನಿವಾರ್ಯ. ಒಂದು ವೇಳೆ ಸೋತರೆ ಅಧಿಕೃತವಾಗಿ ಪ್ಲೇಆಫ್​ ರೇಸ್​ನಿಂದ ಹೊರಬೀಳಲಿದೆ. ಮತ್ತೊಂದೆಡೆ ಸಿಎಸ್​ಕೆ ಗೆದ್ದರೆ ತನ್ನ ಪ್ಲೇಆಫ್ ಹಾದಿ ಸುಲಭವಾಗಲಿದೆ. ಆದರೆ ಪರಾಭವಗೊಂಡರೆ ದುರ್ಗಮವಾಗಲಿದೆ. ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ಅಧಿಕೃತವಾಗಿ ಪ್ಲೇಆಫ್​ ರೇಸ್​ ಪಯಣ ಕೊನೆಗೊಳಿಸಿವೆ.

ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನವು ಈ ಮಹತ್ವದ ಪಂದ್ಯಕ್ಕೆ ವೇದಿಕೆ ಒದಗಿಸಲಿದೆ. ಆದರೆ ಸಿಎಸ್​ಕೆ ತಂಡದಲ್ಲಿ ಪ್ರಮುಖ ಬೌಲರ್​​ಗಳೇ ತಂಡದಿಂದ ಹೊರಬಿದ್ದಿರುವುದು ದೊಡ್ಡ ಹೊಡೆತಕ್ಕೆ ಸಿಲುಕಿದೆ. ಮತೀಶಾ ಪತಿರಾಣ, ಮುಸ್ತಫಿಜುರ್​ ರೆಹಮಾನ್ ತಂಡದ ತಮ್ಮ ದೇಶಗಳಿಗೆ ಹೋಗಿದ್ದಾರೆ. ದೀಪಕ್ ಚಹರ್ ಇಂಜುರಿಯಾಗಿದ್ದಾರೆ. ಋತುರಾಜ್ ಹೊರತುಪಡಿಸಿ ತಂಡದ ಯಾರಿಂದಲೂ ಉತ್ತಮ ಪ್ರದರ್ಶನ ಬರುತ್ತಿಲ್ಲ. ಗುಜರಾತ್ ಟೈಟಾನ್ಸ್ ಪರ ಸಾಯಿ ಸುದರ್ಶನ್ ಬಿಟ್ಟರೆ ಉಳಿದವರು ವೈಫಲ್ಯ ಅನುಭವಿಸುತ್ತಿದ್ದಾರೆ.

ನರೇಂದ್ರ ಮೋದಿ ಮೈದಾನದ ಪಿಚ್ ರಿಪೋರ್ಟ್

ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನ ಪಿಚ್ ಬೌಲರ್‌ಗಳಿಗೆ ಸಹಕಾರಿಯಾಗಿದೆ. ಅದರಲ್ಲೂ ಮೊದಲ ಇನ್ನಿಂಗ್ಸ್‌ನಲ್ಲಿ ಹೊಸ ಚೆಂಡಿನೊಂದಿಗೆ ಅದ್ಭುತ ಬೌಲಿಂಗ್ ನಡೆಸಬಹುದು. ಹೀಗಾಗಿ ಟಾಸ್ ಪಾತ್ರವು ಇಲ್ಲಿ ಬಹಳ ಮುಖ್ಯವಾಗುತ್ತದೆ. ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟರ್ಸ್​ ಪರದಾಟ ನಡೆಸುವ ಸಾಧ್ಯತೆ ಇದೆ. ಬೌಲರ್​ಗಳು ಹಿಡಿತ ಸಾಧಿಸುತ್ತಾರೆ ಎನ್ನಲಾಗುತ್ತಿದೆ. ಆದರೆ 2ನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್​​​ಗೆ ಪಿಚ್ ನೆರವಾಗಲಿದೆ. ಹೀಗಾಗಿ ಟಾಸ್ ಗೆದ್ದ ತಂಡ ರನ್ ಬೆನ್ನಟ್ಟಲು ನಿರ್ಧರಿಸಬಹುದು.

ಅಹ್ಮದಾಬಾದ್ ಹವಾಮಾನ ವರದಿ

ದೇಶದ ಹಲವೆಡೆ ಮಳೆ ಸುರಿಯುತ್ತಿದೆ. ಹೀಗಾಗಿ ಅಹ್ಮದಾಬಾದ್​ನಲ್ಲೂ ಮಹತ್ವದ ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡಬಹುದೇ? ಇದು ಅಭಿಮಾನಿಗಳಿಗೆ ಆತಂಕ ಹುಟ್ಟಿಸಿದೆ. ಆದರೆ, ಅಭಿಮಾನಿಗಳು ಯಾವುದೇ ಆತಂಕಪಡುವ ಅಗತ್ಯ ಇಲ್ಲ. ಹವಾಮಾನ ವರದಿ ಪ್ರಕಾರ ಮಳೆಯಾಗುವ ಸಾಧ್ಯತೆ ಇಲ್ಲ. ಯಾವುದೇ ಹವಾಮಾನದ ಅಡಚಣೆ ಇಲ್ಲದೆ ಅಭಿಮಾನಿಗಳು ಪಂದ್ಯವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ತಾಪಮಾನವು 33-39 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದೆ.

ಮುಖಾಮುಖಿ ದಾಖಲೆ

ಒಟ್ಟು ಪಂದ್ಯಗಳು - 06

ಜಿಟಿ ಗೆಲುವು - 03

ಸಿಎಸ್​ಕೆ ಗೆಲುವು - 03

ಅಂಕಪಟ್ಟಿಯಲ್ಲಿ ಉಭಯ ತಂಡಗಳ ಸ್ಥಾನ

ಸಿಎಸ್​ಕೆ: 11 ಪಂದ್ಯ, 6 ಗೆಲುವು, 5 ಸೋಲು, 12 ಅಂಕ, +0.700 (ನಾಲ್ಕನೇ ಸ್ಥಾನ)

ಜಿಟಿ ತಂಡ: 11 ಪಂದ್ಯ, 7 ಗೆಲುವು, 4 ಸೋಲು, 08 ಅಂಕ, -1.320 (10ನೇ ಸ್ಥಾನ)

ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ XI

ಶುಭ್ಮನ್ ಗಿಲ್ (ನಾಯಕ), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ಶಾರುಖ್ ಖಾನ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್, ಜೋಶ್ ಲಿಟಲ್, ಸಾಯಿ ಕಿಶೋರ್.

ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ XI

ಋತುರಾಜ್ ಗಾಯಕ್ವಾಡ್ (ನಾಯಕ), ಅಜಿಂಕ್ಯ ರಹಾನೆ, ಡ್ಯಾರಿಲ್ ಮಿಚೆಲ್, ಶಿವಂ ದುಬೆ, ಮೊಯೀನ್ ಅಲಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿಕೆಟ್ ಕೀಪರ್), ಮಿಚೆಲ್ ಸ್ಯಾಂಟ್ನರ್, ಶಾರ್ದೂಲ್ ಠಾಕೂರ್, ತುಷಾರ್ ದೇಶಪಾಂಡೆ, ರಿಚರ್ಡ್ ಗ್ಲೀಸನ್.

IPL_Entry_Point