logo
ಕನ್ನಡ ಸುದ್ದಿ  /  ಕರ್ನಾಟಕ  /  Kashi Yatra Itinerary: ಕಾಶಿ ಯಾತ್ರಾ ಪ್ಯಾಕೇಜ್‌ 7 ರಾತ್ರಿ, 8 ಹಗಲು ಯಾತ್ರೆ; ರೈಲಲ್ಲಿ ಎಷ್ಟು ದಿನ? ಎಲ್ಲೆಲ್ಲಿಗೆ ಭೇಟಿ? ಇಲ್ಲಿದೆ ವಿವರ

Kashi Yatra Itinerary: ಕಾಶಿ ಯಾತ್ರಾ ಪ್ಯಾಕೇಜ್‌ 7 ರಾತ್ರಿ, 8 ಹಗಲು ಯಾತ್ರೆ; ರೈಲಲ್ಲಿ ಎಷ್ಟು ದಿನ? ಎಲ್ಲೆಲ್ಲಿಗೆ ಭೇಟಿ? ಇಲ್ಲಿದೆ ವಿವರ

HT Kannada Desk HT Kannada

Nov 03, 2022 08:09 AM IST

ಕರ್ನಾಟಕ -ಕಾಶಿ ಯಾತ್ರೆ - ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ್

    • Kashi Yatra Itinerary:  ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಕಾಶಿ ಯಾತ್ರೆಯ ಬುಕ್ಕಿಂಗ್‌ ಶುರುವಾಗಿದೆ. 5,000 ರೂಪಾಯಿ ಸಹಾಯಧನವೂ ಇರುವ ಈ ಯಾತ್ರೆಯ ಎರಡು ರೈಲುಗಳು ನವೆಂಬರ್‌ 11 ಮತ್ತು ನವೆಂಬರ್‌ 23ರಂದು ಬೆಂಗಳೂರಿಂದ ಹೊರಡಲಿವೆ. ಯಾತ್ರೆಯ ಮುಖ್ಯಾಂಶಗಳು ಇಲ್ಲಿವೆ ಗಮನಿಸಿ.
ಕರ್ನಾಟಕ -ಕಾಶಿ ಯಾತ್ರೆ -  ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ್
ಕರ್ನಾಟಕ -ಕಾಶಿ ಯಾತ್ರೆ - ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ್ (IRCTC )

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಕಾಶಿ ಯಾತ್ರೆಯ ಬುಕ್ಕಿಂಗ್‌ ಶುರುವಾಗಿದೆ. 5,000 ರೂಪಾಯಿ ಸಹಾಯಧನವೂ ಇರುವ ಈ ಯಾತ್ರೆಯ ಎರಡು ರೈಲುಗಳು ನವೆಂಬರ್‌ 11 ಮತ್ತು ನವೆಂಬರ್‌ 23 ಬೆಂಗಳೂರಿಂದ ಹೊರಡಲಿವೆ. ಯಾತ್ರೆಯ ಟಿಕೆಟ್‌ ದರ ಪ್ರತಿ ಪ್ರಯಾಣಿಕನಿಗೆ 20,000 ರೂಪಾಯಿ. ಐದು ವರ್ಷದ ಒಳಗಿನ ಮಕ್ಕಳಿಗೆ ಟಿಕೆಟ್‌ ಇಲ್ಲ. ಇದು ಏಳು ರಾತ್ರಿ ಮತ್ತು 8 ಹಗಲುಗಳ ಪ್ರಯಾಣ.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರು ಸುತ್ತ ಮುತ್ತ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ; ಅತ್ತ ಕರಾವಳಿ, ಉತ್ತರ ಕರ್ನಾಟಕದಲ್ಲಿ ಮತ್ತಷ್ಟು ಬಿಸಿಯ ಎಚ್ಚರಿಕೆ

SSLC Result 2024: ಎಸ್‌ಎಸ್‌ಎಲ್‌ಸಿ ರಿಸಲ್ಟ್ ಯಾವಾಗ? ಫಲಿತಾಂಶ ನೋಡುವುದು ಹೇಗೆ ಸಂಪೂರ್ಣ ಮಾಹಿತಿ ಇಲ್ಲಿದೆ

Mangalore News: ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ; ಏರ್ಪೋರ್ಟ್‌ಗೆ ಬಿಗಿ ಭದ್ರತೆ, ವಾರದ ಹಿಂದಿನ ಪ್ರಕರಣ ತಡವಾಗಿ ಬೆಳಕಿಗೆ

ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಕರ್ನಾಟಕದಲ್ಲಿ 3.25 ಕೋಟಿ, ಬೆಂಗಳೂರಲ್ಲಿ 2.68 ಕೋಟಿ, ದಂಡ ವಸೂಲಿಗೆ ಬಾಕಿ

ಕಾಶಿ ಯಾತ್ರಾ ಪ್ಯಾಕೇಜ್‌ನ ಮುಖ್ಯಾಂಶಗಳು

ಯಾತ್ರಾ ಹೆಸರು - ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ್

ಯಾತ್ರಾ ಅವಧಿ (ಬೆಂಗಳೂರಿನಿಂದ)- 07 ರಾತ್ರಿಗಳು/08 ದಿನಗಳು

ನಿರ್ಗಮನ ದಿನಾಂಕ - ನವೆಂಬರ್‌ 11 ಮತ್ತು 23

ಪ್ರವಾಸ ಮಾರ್ಗ- ಬೆಂಗಳೂರು - ವಾರಾಣಸಿ - ಅಯೋಧ್ಯೆ - ಪ್ರಯಾಗರಾಜ್ - ಬೆಂಗಳೂರು

ರೈಲು ಹತ್ತಲು ಮತ್ತು ಇಳಿಯಲು ಅವಕಾಶ ಎಲ್ಲೆಲ್ಲಿ?: ಬೆಂಗಳೂರು, ಬೀರೂರು, ಹಾವೇರಿ, ಹುಬ್ಬಳ್ಳಿ, ಬೆಳಗಾವಿ, ರಾಯಬಾಗ

ಸಂದರ್ಶಿಸುವ ಯಾತ್ರಾಸ್ಥಳಗಳು ಯಾವುವು?

ವಾರಾಣಸಿ: ತುಳಸಿ ಮಾನಸ ದೇವಸ್ಥಾನ, ಸಂಕಷ್ಟ ಮೋಚನ್ ಹನುಮಾನ್ ದೇವಸ್ಥಾನ, ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಗಂಗಾ ಆರತಿ.

ಅಯೋಧ್ಯೆ: ರಾಮ ಜನ್ಮಭೂಮಿ ದೇವಸ್ಥಾನ, ಹನುಮಾನ್ ಗರ್ಹಿ, ಸರಯುಘಾಟ್.

ಪ್ರಯಾಗರಾಜ್: ಗಂಗಾ-ಯಮುನಾ ಸಂಗಮ, ಹನುಮಾನ್ ದೇವಸ್ಥಾನ.

ಕಾಶಿ ಯಾತ್ರೆ ಎಷ್ಟು ದಿನ? ಹೀಗಿರಲಿದೆ ಪ್ರಯಾಣ

ದಿನ 1

ಬೆಂಗಳೂರಿನಿಂದ ಅಪರಾಹ್ನ 1 ಗಂಟೆಗೆ ರೈಲು ಹೊರಡಲಿದೆ.

ಬೀರೂರು, ಹಾವೇರಿ, ಹುಬ್ಬಳ್ಳಿ, ಬೆಳಗಾವಿ, ರಾಯಬಾಗ ನಿಲ್ದಾಣಗಳಲ್ಲಿ ಪ್ರವಾಸಿಗರಿಗೆ ರೈಲು ಏರಲು ಅವಕಾಶ.

ಸಂಜೆ ಚಹಾ, ರಾತ್ರಿ ಊಟ ರೈಲಿನಲ್ಲಿ ಕುಳಿತಲ್ಲಿಗೇ ರವಾನೆ ಮತ್ತು ರಾತ್ರಿಯ ರೈಲು ಪ್ರಯಾಣ.

ದಿನ 2

ರೈಲು ಪ್ರಯಾಣ ಮುಂದುವರಿಕೆ

ಬೆಳಗಿನ ಚಹಾ ಮತ್ತು ಉಪಹಾರ ಕುಳಿತಲ್ಲಿಗೇ ರವಾನೆ

ರೈಲಿನಲ್ಲಿ ಕುಳಿತಲ್ಲೇ ಮಧ್ಯಾಹ್ನದ ಊಟ ಮತ್ತು ಸಂಜೆಯ ಚಹಾ.

ರೈಲಿನಲ್ಲಿ ಕುಳಿತಲ್ಲೇ ರಾತ್ರಿ ಭೋಜನ ಮತ್ತು ರಾತ್ರಿಯ ರೈಲು ಪ್ರಯಾಣ.

ದಿನ 3

ವಾರಾಣಸಿ

ಬೆಳಗಿನ ಚಹಾ, ಉಪಹಾರ ಮತ್ತು ಮಧ್ಯಾಹ್ನದ ಊಟ ರೈಲಿನಲ್ಲೇ ಆಗಲಿದೆ.

ಮಧ್ಯಾಹ್ನ ವಾರಣಾಸಿ ರೈಲು ನಿಲ್ದಾಣ ಆಗಮನ.

ಹೋಟೆಲ್‌ಗೆ ವರ್ಗಾಯಿಸಿ ಮತ್ತು ಚೆಕ್-ಇನ್ ಮಾಡಿ

ವಾರಣಾಸಿಯಲ್ಲಿ ಭೋಜನ ಮತ್ತು ರಾತ್ರಿಯ ವಾಸ್ತವ್ಯ

ದಿನ 4

ವಾರಾಣಸಿ

ಹೋಟೆಲ್‌ನಲ್ಲಿ ಉಪಹಾರ ಮತ್ತು ತುಳಸಿ ಮಂದಿರ ಮತ್ತು ಸಂಕಟ್ ಮೋಚನ್ ಹನುಮಾನ್ ಮಂದಿರಕ್ಕೆ ಭೇಟಿ ನೀಡಿ.

ಊಟದ ನಂತರ ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಗಂಗಾನದಿಯ ಪವಿತ್ರ ಸ್ನಾನಕ್ಕೆ ಭೇಟಿ ನೀಡಿ

ವಾರಾಣಸಿಯಲ್ಲಿ ಭೋಜನ ಮತ್ತು ರಾತ್ರಿಯ ತಂಗುವಿಕೆ.

ದಿನ 5

ವಾರಣಾಸಿ - ಅಯೋಧ್ಯೆ

ಹೋಟೆಲ್‌ನಿಂದ ಮುಂಜಾನೆ ಚೆಕ್-ಔಟ್ ಮತ್ತು ವಾರಣಾಸಿ ರೈಲು ನಿಲ್ದಾಣಕ್ಕೆ ವಾಪಸ್‌

ವಾರಣಾಸಿಯಿಂದ ಬೆಳಗ್ಗೆ 6 ಗಂಟೆಗೆ ನಿರ್ಗಮನ.

ಉಪಹಾರ ರೈಲಿನಲ್ಲೆ ಕುಳಿತಲ್ಲಿಗೆ ರವಾನೆ.

ಅಯೋಧ್ಯೆ ರೈಲು ನಿಲ್ದಾಣಕ್ಕೆ ಮಧ್ಯಾಹ್ನ ಆಗಮನ.

ಊಟದ ನಂತರ ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿ ಮತ್ತು ಹನುಮಾನ್ ಗರ್ಹಿಗೆ ಭೇಟಿ

ಸಂಜೆ ಸರಯು ಆರತಿ.

ರಾತ್ರಿ 9.30ಕ್ಕೆ ಅಯೋಧ್ಯೆ ರೈಲು ನಿಲ್ದಾಣಕ್ಕೆ ಹಿಂತಿರುಗಬೇಕು.

ರಾತ್ರಿ ಊಟ ರೈಲಿನಲ್ಲೇ ಲಭ್ಯ ಮತ್ತು ರಾತ್ರಿ 11 ಗಂಟೆಗೆ ಪ್ರಯಾಗ್‌ರಾಜ್‌ಗೆ ನಿರ್ಗಮನ.

ದಿನ 6

ಪ್ರಯಾಗರಾಜ್‌

ಬೆಳಗಿನ ಚಹಾ ಮತ್ತು ಉಪಹಾರ ರೈಲಿನಲ್ಲಿ ಲಭ್ಯ

ಪ್ರಯಾಗರಾಜ್ ರೈಲು ನಿಲ್ದಾಣಕ್ಕೆ ಮುಂಜಾನೆ ತಲುಪಲಿದೆ.

ಹೋಟೆಲ್‌ಗೆ ಹೋಗಿ ಫ್ರೆಶ್‌ ಆಗಲು ಅವಕಾಶ

ಸಂಗಮ ಪ್ರಯಾಗದಲ್ಲಿ ತ್ರಿವೇಣಿ ಸಂಗಮ ಮತ್ತು ಹನುಮಾನ್ ದೇವಸ್ಥಾನಕ್ಕೆ ಭೇಟಿ

ಅಪರಾಹ್ನ 1 ಗಂಟೆಗೆ ಪ್ರಯಾಗರಾಜ್ ರೈಲು ನಿಲ್ದಾಣಕ್ಕೆ ಹಿಂತಿರುಗಬೇಕು.

ಅಪರಾಹ್ನ 2 ಗಂಟೆಗೆ ಬೆಂಗಳೂರಿಗೆ ವಾಪಸ್‌ ಪ್ರಯಾಣ.

ಊಟ, ಸಂಜೆ ಚಹಾ ಮತ್ತು ರಾತ್ರಿಯ ಊಟ ರೈಲಿನಲ್ಲೇ ಲಭ್ಯ

ರಾತ್ರಿಯ ರೈಲು ಪ್ರಯಾಣ.

ದಿನ 7

ರೈಲು ಪ್ರಯಾಣ

ಬೆಳಗಿನ ಚಹಾ ಮತ್ತು ಉಪಹಾರ ರೈಲಿನಲ್ಲೇ ಲಭ್ಯ

ಮಧ್ಯಾಹ್ನದ ಊಟ ಮತ್ತು ಸಂಜೆ ಚಹಾ ರೈಲಿನಲ್ಲೇ ಲಭ್ಯ.

ರಾತ್ರಿ ಭೋಜನ ಕೂಡ ರೈಲಲ್ಲೇ ಲಭ್ಯ

ರಾತ್ರಿಯ ರೈಲು ಪ್ರಯಾಣ.

ದಿನ 8

ಬೆಂಗಳೂರು

ಬೆಳಗಿನ ಚಹಾ, ಉಪಹಾರ ಮತ್ತು ಮಧ್ಯಾಹ್ನದ ಊಟ ರೈಲಿನಲ್ಲಿ

ರಾಯಬಾಗ, ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ಬೀರೂರು ನಿಲ್ದಾಣಗಳಲ್ಲಿ ಪ್ರವಾಸಿಗರು ಇಳಿಯವುದಕ್ಕೆ ಅವಕಾಶ

ಅಪರಾಹ್ನ 1.30ಕ್ಕೆ ಬೆಂಗಳೂರು ರೈಲು ನಿಲ್ದಾಣ ವಾಪಸ್.‌

    ಹಂಚಿಕೊಳ್ಳಲು ಲೇಖನಗಳು