logo
ಕನ್ನಡ ಸುದ್ದಿ  /  ಕರ್ನಾಟಕ  /  Kcet 2024 Results: ಸಿಇಟಿ ಫಲಿತಾಂಶ ಪ್ರಕಟ; ಎಲ್ಲಿ, ಹೇಗೆ ನೋಡಬೇಕು; ಇಲ್ಲಿದೆ ನೋಡಿ ವಿವರ

KCET 2024 Results: ಸಿಇಟಿ ಫಲಿತಾಂಶ ಪ್ರಕಟ; ಎಲ್ಲಿ, ಹೇಗೆ ನೋಡಬೇಕು; ಇಲ್ಲಿದೆ ನೋಡಿ ವಿವರ

Prasanna Kumar P N HT Kannada

Jun 01, 2024 07:35 PM IST

google News

KCET 2024 Results: ಸಿಇಟಿ ಫಲಿತಾಂಶ ಪ್ರಕಟ; ಎಲ್ಲಿ, ಹೇಗೆ ನೋಡಬೇಕು; ಇಲ್ಲಿದೆ ನೋಡಿ ಸಮಗ್ರ ವಿವರ

  • KCET 2024 Results: ಕರ್ನಾಟಕ ಪರೀಕ್ಷಾ ಪ್ರಾಧಿಕಾರ-2024ರ ಇಂದು ಜೂನ್ 1 ರಂದು ಸಾಮಾನ್ಯ ಪ್ರವೇಶ ಪರೀಕ್ಷೆಯ (ಕೆಸಿಇಟಿ) ಫಲಿತಾಂಶ ಬಿಡುಗಡೆ ಮಾಡಿದೆ. ಇಲ್ಲಿದೆ ನೋಡಿ ವಿವರ.

KCET 2024 Results: ಸಿಇಟಿ ಫಲಿತಾಂಶ ಪ್ರಕಟ; ಎಲ್ಲಿ, ಹೇಗೆ ನೋಡಬೇಕು; ಇಲ್ಲಿದೆ ನೋಡಿ ಸಮಗ್ರ ವಿವರ
KCET 2024 Results: ಸಿಇಟಿ ಫಲಿತಾಂಶ ಪ್ರಕಟ; ಎಲ್ಲಿ, ಹೇಗೆ ನೋಡಬೇಕು; ಇಲ್ಲಿದೆ ನೋಡಿ ಸಮಗ್ರ ವಿವರ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ-2024ರ ಇಂದು ಜೂನ್ 1 ರಂದು ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ (ಕೆಸಿಇಟಿ) ಫಲಿತಾಂಶ ಪ್ರಕಟಿಸಿದೆ. ಏಪ್ರಿಲ್​ನಲ್ಲಿ ಜರುಗಿದ್ದ ಸಿಇಟಿ ಪರೀಕ್ಷೆಯಲ್ಲಿ 3,10,314 ಅಭ್ಯರ್ಥಿಗಳು ಹಾಜರಾಗಿದ್ದರು. ಅಭ್ಯರ್ಥಿಗಳು ತಮ್ಮ ಕೆಸಿಇಟಿ ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್ https://cetonline.karnataka.gov.in/ ನಲ್ಲಿ ಪರಿಶೀಲಿಸಬಹುದು. ಅಲ್ಲದೆ,

ಪರೀಕ್ಷೆ ಮುಕ್ತಾಯಗೊಂಡು ಒಂದೂವರೆ ತಿಂಗಳಾದರೂ ಫಲಿತಾಂಶ ಪ್ರಕಟಿಸದೇ ನಿರ್ಲಕ್ಷ್ಯ ವಹಿಸಿದ್ದ ಕೆಇಎ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಸಾಕಷ್ಟು ಗದ್ದಲ ಗೊಂದಲಗಳಾಗಿದ್ದ ಈ ಬಾರಿಯ ಸಿಇಟಿ ಫಲಿತಾಂಶವನ್ನು ಪ್ರತಿಕಾ ಪ್ರಕಟಣೆ ಮೂಲಕ ಹೊರಡಿಸಿ ಫಲಿತಾಂಶ ಘೋಷಿಸಿ ಅಚ್ಚರಿ ಮೂಡಿಸಿತ್ತು. ಹಾಗಾಗಿ, ಕೆಇಎ ನಿರ್ಲಕ್ಷ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

KCET 2024: ಮಾರ್ಕ್ ಶೀಟ್ ಅನ್ನು ಹೇಗೆ ಪರಿಶೀಲಿಸುವುದು?

ಹಂತ 1: ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ– https://cetonline.karnataka.gov.in/

ಹಂತ 2: ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಿಂಕ್ ಅನ್ನು ಕ್ಲಿಕ್ ಮಾಡಿ

ಹಂತ 3: ಅಪ್ಲಿಕೇಶನ್ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ

ಹಂತ 4: ಫಲಿತಾಂಶವನ್ನು ವೀಕ್ಷಿಸಿ ಮತ್ತು ಡೌನ್‌ಲೋಡ್ ಮಾಡಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ರಿಸಲ್ಟ್ ಘೋಷಿಸಿರುವ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಜೂನ್ 1ರ ಶನಿವಾರ ವಿವರಗಳನ್ನು ಹಂಚಿಕೊಂಡಿದೆ. ಅಭ್ಯರ್ಥಿಗಳು ವಿಷಯವಾರು ಅಂಕಗಳ ವಿವರಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. 2024-2025ರ ಸಾಲಿನ ಇಂಜಿನಿಯರ್, ಕೃಷಿ ವಿಜ್ಞಾನ, ವೆಟರ್ನರಿ, ಆರ್ಕಿಟೆಕ್ಷರ್, ಬಿ ಫಾರ್ಮ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್​​ಗಳ ಪ್ರವೇಶಾತಿಗೆ ಸಿಇಟಿ ಪರೀಕ್ಷೆ ನಡೆದಿತ್ತು.

ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟವಾಗುತ್ತದೆ ಎನ್ನಲಾಗಿತ್ತು. ಆದರೆ ಚುನಾವಣೆ ಮುಕ್ತಾಯಗೊಂಡ ಮತ್ತು ಎಕ್ಸಿಟ್ ಫೋಲ್ ದಿನವೇ ಸಿಇಟಿ ರಿಸಲ್ಟ್ ಅನೌನ್ಸ್ ಮಾಡಲಾಗಿದೆ. ಏಪ್ರಿಲ್ 18, 19ರಂದು ಕೆಇಎ ಸಿಇಟಿ ಪರೀಕ್ಷೆ ನಡೆಸಿತ್ತು.

ಕೆಇಎ ಸರ್ವಾಧಿಕಾರಿ ಧೋರಣೆ ಮುಂದವರಿಕೆ

ಸಿಇಟಿ‌ ಪರೀಕ್ಷೆಯಲ್ಲಿ ಔಟ್ ಅಫ್ ಸಿಲಬಸ್ ಪ್ರಶ್ನೆಗಳನ್ನು ಸೇರಿಸಲಾಗಿತ್ತು. ಸಿಇಟಿಯಲ್ಲಿ ನಡೆದಿದ್ದ ಅಕ್ರಮಗಳನ್ನ ಮುಚ್ಚಹಾಕಲು ಕೆಇಎ ಯತ್ನಿಸಿತ್ತು ಎಂಬ ಆರೋಪ ಇದೆ. ಇತಿಹಾಸದಲ್ಲೇ ಮೊದಲ‌ ಭಾರಿಗೆ ಸುದ್ದಿಗೋಷ್ಠಿ ಕರೆಯದೇ ಸಿಇಟಿ ಫಲಿತಾಂಶ ಪ್ರಕಟಿಸಿದೆ. ತರಾತುರಿಯಲ್ಲಿ ಸಿಇಟಿ ಫಲಿತಾಂಶವನ್ನು ಕೆಇಎ ನಿರ್ದೇಶಕ ಪ್ರಸನ್ನ ಪ್ರಕಟಿಸಿದ್ದಾರೆ. ಕೆಲ ದಿನಗಳ ಹಿಂದೆ ಕೆಇಎ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ್ದರು.

ಹರ್ಷಾ ಕಾರ್ತಿಕೇಯ ಸಿಟಿಯಲ್ಲಿ ಮೊದಲ ರ್ಯಾಂಕ್

ಪರೀಕ್ಷೆಯಲ್ಲಿ ಪಠ್ಯಕ್ರಮದ ಹೊರತಾಗಿ ಪ್ರಶ್ನೆಗಳು ಬಂದಿರುವುದಾಗಿ ದೂರು ಬಂದ ಹಿನ್ನಲೆ ಸರ್ಕಾರದ ನಿರ್ದೇಶನದಂತೆ ವಿಷಯ ಪರಿಣಿತರ ವರದಿಯನ್ನಾಧರಿಸಿ ಪ್ರಶ್ನೆಗಳನ್ನು ಕೈಬಿಟ್ಟು ಮೌಲ್ಯಮಾಪನ ಕಾರ್ಯ ಮಾಡಲಾಗಿದೆ. ಭೌತಶಾಸ್ತ್ರ 09, ರಸಾಯನಶಾಸ್ತ್ರ 15, ಗಣಿತ 15, ಜೀವಶಾಸ್ತ್ರ 11 ಪ್ರಶ್ನೆಗಳನ್ನು ಬಿಟ್ಟು ಮೌಲ್ಯಮಾಪನ ಮಾಡಿ ಫಲಿತಾಂಶ ಪ್ರಕಟ ಮಾಡಲಾಗಿದೆ.

ಗಣಿತ 1 ಹಾಗೂ ಭೌತಶಾಸ್ತ್ರ 1 ಸೇರಿ ಎರಡೂ ವಿಷಯಗಳಲ್ಲಿ ತಲಾ ಒಂದೊಂದು ಅಂಕಗಳನ್ನು ಕೃಪಾಂಕ ನೀಡಲಾಗಿದೆ. ಎಲ್ಲ ವಿಷಯಗಳಲ್ಲಿ ಪರಿಷ್ಕೃತ ಸರಿ ಉತ್ತರಗಳನ್ನು ಆಧರಿಸಿ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಪರಿಷ್ಕೃತ ಸರಿ ಉತ್ತರಗಳನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್‌ಇಎಬಿ) ನಡೆಸಿರುವ ದ್ವಿತೀಯ ಪಿಯು ವಾರ್ಷಿಕ ಮೊದಲ ಎರಡು ಪರೀಕ್ಷೆಗಳ ಪೈಕಿ ಅತಿಹೆಚ್ಚು ಅಂಕಗಳನ್ನು ಗಣನೆಗೆ ತೆಗೆದುಕೊಂಡು ಮೆರಿಟ್ ಪಟ್ಟಿ ಸಿದ್ದಪಡಿಸಲಾಗಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ