Kodagu News: ಕೊಡಗಿನಲ್ಲಿ ಮಳೆಗಾಗಿ ಪಾಡಿ ಇಗ್ಗುತಪ್ಪ ದೇವರ ಮೊರೆ ಹೊದ ಜನ; ಮಳೆ ಸಿಂಚನ
Aug 18, 2023 11:47 AM IST
ಕೊಡಗಿನಲ್ಲಿ ಮಳೆ ಕೊರತೆ ಎದುರಾಗಿದ್ದು, ಮಳೆಗಾಗಿ ಇಲ್ಲಿನ ಜನರು ಜಿಲ್ಲೆಯಲ್ಲಿ ಮಳೆ ಬೆಳೆ ದೇವರು ಎಂದು ಖ್ಯಾತಿ ಹೊಂದಿರುವ ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತಪ್ಪನಲ್ಲಿ ಮೊರೆ ಹೋಗಿದ್ದಾರೆ.
- Madikeri: ಕೊಡವರ ಮಾತೃ ಸಂಸ್ಥೆಯಾಗಿರುವ ಅಖಿಲ ಕೊಡವ ಸಮಾಜ ನೇತೃತ್ವದಲ್ಲಿ ವಿವಿಧ ಕೊಡವ ಸಮಾಜ ಹಾಗೂ ಸಂಘಟನೆಗಳು ಇಗ್ಗುತಪ್ಪನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪೂಜೆ ನೆರವೇರಿಸಿದ್ದರು. ಭಕ್ತಿಯ ಪರಾಕಾಷ್ಟೆ ಎಂಬಂತೆ ಅತ್ತ ಪೂಜೆಯಾಗುತ್ತಿದ್ದಂತೆ ಜಿಲ್ಲೆಯ ವಿವಿಧೆಡೆ ಮಳೆ ಹಾಗೂ ಬಹುತೇಕ ಕಡೆ ತುಂತುರು ಮಳೆಯ ಸಿಂಚನವಾಯಿತು.
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಕ್ಕಡ ಮಾಸದಲ್ಲಿ ಇದೇ ಮೊದಲು ಎಂಬಂತೆ ಮಳೆಯ ಕೊರತೆ ಎದುರಾಗಿದ್ದು, ಮಳೆಗಾಗಿ ಇಲ್ಲಿನ ಜನರು ಜಿಲ್ಲೆಯಲ್ಲಿ ಮಳೆ ಬೆಳೆ ದೇವರು ಎಂದು ಖ್ಯಾತಿ ಹೊಂದಿರುವ ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತಪ್ಪನಲ್ಲಿ ಮೊರೆ ಹೋಗಿದ್ದಾರೆ.
ಕೊಡವರ ಮಾತೃ ಸಂಸ್ಥೆಯಾಗಿರುವ ಅಖಿಲ ಕೊಡವ ಸಮಾಜ ನೇತೃತ್ವದಲ್ಲಿ ವಿವಿಧ ಕೊಡವ ಸಮಾಜ ಹಾಗೂ ಸಂಘಟನೆಗಳು ಇಗ್ಗುತಪ್ಪನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪೂಜೆ ನೆರವೇರಿಸಿದ್ದರು. ಭಕ್ತಿಯ ಪರಾಕಾಷ್ಟೆ ಎಂಬಂತೆ ಅತ್ತ ಪೂಜೆಯಾಗುತ್ತಿದ್ದಂತೆ ಜಿಲ್ಲೆಯ ವಿವಿಧೆಡೆ ಮಳೆ ಹಾಗೂ ಬಹುತೇಕ ಕಡೆ ತುಂತುರು ಮಳೆಯ ಸಿಂಚನವಾಯಿತು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಕೊಡಗಿನ ಇತಿಹಾಸದಲ್ಲಿ ಅದರಲ್ಲೂ ಕಕ್ಕಡ ಮಾಸದಲ್ಲಿ ಮಳೆಯ ಕೊರತೆ ಇದೆ ಮೊದಲಾಗಿದೆ. ಈಗಾಗಲೇ ಆಳುಕಾಳುಗಳ ಸಮಸ್ಯೆ ಹಾಗೂ ಭತ್ತಕ್ಕೆ ಸರಿಯಾದ ಬೆಂಬಲ ಬೆಲೆಯಿಲ್ಲದೆ ಭತ್ತದ ಗದ್ದೆಗಳು ಪಾಳುಬಿದ್ದಿದೆ. ಇದೀಗ ಮಳೆಯ ಕೊರತೆಯಿಂದ ಇನ್ನೂ ಒಂದಷ್ಟು ರೈತರು ನೀರಿಲ್ಲದೆ ಗದ್ದೆಯನ್ನು ಪಾಳುಬಿಡುವ ಪರಿಸ್ಥಿತಿ ಎದುರಾಗಿದೆ. ಮಳೆಯ ಕೊರತೆ ಭತ್ತದ ಗದ್ದೆಗಳು ಮಾತ್ರವಲ್ಲ ಕಾಫಿ ಕರಿಮೆಣಸು ಏಲಕ್ಕಿಗೂ ಬಿಸಿ ತಟ್ಟಿದೆ. ಕರಿಮೆಣಸಿಗೆ ಈ ಸಮಯದಲ್ಲಿ ನೀರು ಹೇರಳವಾಗಿ ಬೇಕು ಕರಿಮೆಣಸು ಕಾಯಿಕಟ್ಟುವ ಸಮಯದಲ್ಲಿ ಮಳೆ ನೀರು ಆಗಾಗ ಗೊಂಚಲಿನಲ್ಲಿ ಹರಿಯುತ್ತಿರಬೇಕು, ಇಷ್ಟು ಮಾತ್ರವಲ್ಲ ಮುಂದೆ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಲಿದ್ದು ಮಾನವ ಕುಲ ಮಾತ್ರವಲ್ಲ ಪ್ರಾಣಿಪಕ್ಷಿಗಳಿಗೂ ಕೂಡ ನೀರಿಲ್ಲದೆ ಪರಿತಪಿಸುವ ಸೂಚನೆಯನ್ನು ಮನಗಂಡು ಮಳೆ ಬೆಳೆ ದೇವರಾದ ಇಗ್ಗುತಪ್ಪನಲ್ಲಿ ಮೊರೆ ಹೋಗುತ್ತಿದ್ದಂತೆ ಶುಭ ಸೂಚನೆ ಎಂಬಂತೆ ಇತ್ತಾ ಪೂಜೆ ನೆರವೇರುತ್ತಿದ್ದಂತೆ ಜಿಲ್ಲೆಯ ವಿವಿಧೆಡೆ ಮಳೆಯ ಸಿಂಚನವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಹಿರಿಯರಾದ ಅಮ್ಮತಿಯ ಕಾಫಿ ಬೆಳೆಗಾರ ನೆಲ್ಲಮಕ್ಕಡ ಶಂಭು ಮಾತನಾಡಿದರು.
ಈ ಸಂದರ್ಭದಲ್ಲಿ ಅಖಿಲ ಕೊಡವ ಸಮಾಜ ಉಪಾಧ್ಯಕ್ಷ ಅಜ್ಜಿಕುಟ್ಟೀರ ಸುಬ್ರಮಣಿ ಮಾದಯ್ಯ, ಖಜಾಂಚಿ ಮಂಡೇಪಂಡ ಸುಗುಣ ಮುತ್ತಣ್ಣ, ಕಾರ್ಯದರ್ಶಿ ಅಮ್ಮಣಿಚಂಡ ರಾಜ ನಂಜಪ್ಪ, ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ, ಕೊಡವ ರೈಡರ್ಸ್ ಕ್ಲಬ್ ಅಧ್ಯಕ್ಷ ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ, ಯುಕೊ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಇತರ ಕೊಡವ ಸಮಾಜ ಹಾಗೂ ಸಂಘ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಪದಾಧಿಕಾರಿಗಳು ಹಾಗೂ ವಿವಿಧ ಭಕ್ತರು ಉಪಸ್ಥಿತರಿದ್ದರು.