logo
ಕನ್ನಡ ಸುದ್ದಿ  /  ಕರ್ನಾಟಕ  /  Kolar News: ಕೋಲಾರದಲ್ಲಿದೆ ಏಷ್ಯಾದ ಅತಿ ದೊಡ್ಡ, ಹಳೆಯ ಹಲಸಿನ ತೋಟ; ಒಂದೇ ಕಡೆ 1,600ಕ್ಕೂ ಹೆಚ್ಚು ಹಲಸಿನ ಮರ, ಬಗೆ ಬಗೆಯ ಹಣ್ಣುಗಳು

Kolar News: ಕೋಲಾರದಲ್ಲಿದೆ ಏಷ್ಯಾದ ಅತಿ ದೊಡ್ಡ, ಹಳೆಯ ಹಲಸಿನ ತೋಟ; ಒಂದೇ ಕಡೆ 1,600ಕ್ಕೂ ಹೆಚ್ಚು ಹಲಸಿನ ಮರ, ಬಗೆ ಬಗೆಯ ಹಣ್ಣುಗಳು

Raghavendra M Y HT Kannada

Jun 03, 2023 07:30 AM IST

ಕೋಲಾರ ನಗರದ ಟಮಕ ಬಳಿ 40 ಎಕರೆ ಪ್ರದೇಶದಲ್ಲಿ ಹಲಸಿನ ತೋಟವಿದ್ದು, ಇಲ್ಲಿ 1 ಸಾವಿರದ 600ಕ್ಕೂ ಹೆಚ್ಚಿನ ಬಗೆಯ ಹಲಸಿ ಮರಗಳನ್ನು ಕಾಣಬಹುದು.

  • ಏಷ್ಯಾದಲ್ಲಿಯೇ ಅತಿ ದೊಡ್ಡದಾದ ಹಾಗೂ ಹಳೆಯ ಹಲಸಿನ ತೋಟ ಇರೋದು ಚಿನ್ನದ ನಾಡು ಕೋಲಾರದಲ್ಲಿ. ಬರೋಬ್ಬರಿ 1,600ಕ್ಕೂ ಹೆಚ್ಚು ಹಲಸಿನ ಮರಗಳು ಇಲ್ಲಿದ್ದು, ವಿವಿಧ ಬಗೆಯ ಹಣ್ಣುಗಳನ್ನು ಕಾಣಬಹುದು.

ಕೋಲಾರ ನಗರದ ಟಮಕ ಬಳಿ 40 ಎಕರೆ ಪ್ರದೇಶದಲ್ಲಿ ಹಲಸಿನ ತೋಟವಿದ್ದು, ಇಲ್ಲಿ 1 ಸಾವಿರದ 600ಕ್ಕೂ ಹೆಚ್ಚಿನ ಬಗೆಯ ಹಲಸಿ ಮರಗಳನ್ನು ಕಾಣಬಹುದು.
ಕೋಲಾರ ನಗರದ ಟಮಕ ಬಳಿ 40 ಎಕರೆ ಪ್ರದೇಶದಲ್ಲಿ ಹಲಸಿನ ತೋಟವಿದ್ದು, ಇಲ್ಲಿ 1 ಸಾವಿರದ 600ಕ್ಕೂ ಹೆಚ್ಚಿನ ಬಗೆಯ ಹಲಸಿ ಮರಗಳನ್ನು ಕಾಣಬಹುದು.

ಕೋಲಾರ: ರಾಜ್ಯ ರಾಜಧಾನಿ ಬೆಂಗಳೂರಿನಿಂದ ಕೇವಲ 65 ಕಿಲೋ ಮೀಟರ್ ದೂರದಲ್ಲಿರುವ ಕೋಲಾರ ಜಿಲ್ಲೆ ಎಂದಾಕ್ಷಣ ಮೊದಲು ನೆನಪಿಗೆ ಬರುವುದು ಚಿನ್ನದ ನಾಡು. ಹಾಗೇ ಅತಿ ಹೆಚ್ಚು ತರಕಾರಿಗಳನ್ನು ಬೆಳೆಯುವ ಜಿಲ್ಲೆ ಎಂಬ ಖ್ಯಾತಿಯನ್ನು ಪಡೆದಿದೆ.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರು ಎಡಿಎ ರಂಗಮಂದಿರದಲ್ಲಿ ಕಲಾವಿದೆ ವಿದ್ಯಾಶ್ರೀ ಎಚ್‌ಎಸ್ ಅವರ ಭರತನಾಟ್ಯ ರಂಗಾರೋಹಣ ನಾಳೆ

MLC Election 2024: ಪ್ರಜ್ವಲ್ ಪ್ರಕರಣ ನಡುವೆಯೇ ವಿಧಾನ ಪರಿಷತ್ 6 ಸ್ಥಾನಗಳಿಗೆ ಜೂನ್ 3 ರಂದು ಚುನಾವಣೆ; ಜೂ 6 ಕ್ಕೆ ಫಲಿತಾಂಶ

Hassan Scandal; ಹಾಸನ ಹಗರಣದ ಸಂತ್ರಸ್ತೆ ನಾಪತ್ತೆ ಆತಂಕಕಾರಿ, ಪ್ರಜ್ವಲ್‌ ರೇವಣ್ಣ ಬಂಧನ ಯಾವಾಗ, ಫೇಸ್‌ಬುಕ್ ಪೋಸ್ಟಲ್ಲಿ ವಾಸು ಎಚ್‌ವಿ ಕಳವಳ

Bengaluru Rains: ದಾಖಲೆಯ ಬಿಸಿ ಕಂಡ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆ; ರಣ ಬಿಸಿಲಿಗೆ ಬೆಂದ ಜನ ಫುಲ್ ಖುಷ್

ಮಾವು ಬೆಳೆಯುವುದರಲ್ಲೂ ಕೋಲಾರ ಜಿಲ್ಲೆ ವಿಶ್ವ ಪ್ರಸಿದ್ಧಿಯಾಗಿದೆ. ಇವಷ್ಟೇ ಅಲ್ಲ ಹಲಸಿನ ಹಣ್ಣುಗಳನ್ನು ಸಹ ಕೋಲಾರದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಏಷ್ಯಾದಲ್ಲಿಯೇ ಅತಿ ದೊಡ್ಡದಾದ ಹಳೆಯ ಹಲಸಿನ ತೋಟವನ್ನು ಹೊಂದಿರುವ ಹೆಗ್ಗಳಿಕೆಗೂ ಕೋಲಾರ ಜಿಲ್ಲೆ ಪಾತ್ರವಾಗಿದೆ.

ಒಂದೇ ಕಡೆ 1600ಕ್ಕೂ ಹೆಚ್ಚು ಹಲಸಿನ ಮರಗಳು

ಒಂದು ತೋಟದಲ್ಲಿ ನೂರು, ಇನ್ನೂರು ಹೆಚ್ಚೆಂದರೆ ಐನೂರು ಹಲಸಿನ ಮರಗಳನ್ನು ನೋಡಿರಬಹುದು. ಆದರೆ ಕೋಲಾರ ನಗರದ ಟಮಕ ಬಳಿ 40 ಎಕರೆ ಪ್ರದೇಶದಲ್ಲಿ 1,600ಕ್ಕೂ ಹೆಚ್ಚಿನ ಹಲಸಿನ ಮರಗಳಿವೆ.

1974ರಲ್ಲಿ ಎಂಹೆಚ್ ಮರೀಗೌಡ ಎಂಬುವರು ಕೋಲಾರ ನಗರದ ಟಮಕ ಬಳಿ ಹಲಸಿನ ತೋಪನ್ನು ನಿರ್ಮಾಣ ಮಾಡಿದ್ದಾರೆ. ರಾಜ್ಯದ ವಿವಿಧೆಡೆಯಿಂದ ತಳಿಗಳನ್ನು ತಂದು ಸುಮಾರು 1600ಕ್ಕೂ ಹೆಚ್ಚು ಹಲಸಿನ ಗಿಡಗಳನ್ನು ಬೆಳೆಸಿದ್ದಾರೆ. ನಂತರ ಈ ಜಾಗದಲ್ಲಿ 2009ರಲ್ಲಿ ತೋಟಗಾರಿಕಾ ಮಹಾ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಲಾಗಿದೆ.

ಈ ಹಿಂದೆ ಇದನ್ನ ಏಷ್ಯಾದ ಅತಿ ದೊಡ್ಡದಾದ ಹಲಸಿನ ತೋಟ ಎಂದು ಕರೆಯಲಾಗುತ್ತಿತ್ತು. ಆದ್ರೆ ನಂತರದ ದಿನಗಳಲ್ಲಿ ಬೇರೆ ಭಾಗಗಳಲ್ಲಿಯೂ ಸಹ ಹಲಸನ್ನು ಹೆಚ್ಚಾಗಿ ಬೆಳೆಯಲು ಶುರು ಮಾಡಿದ್ದಾರೆ. ಹಾಗಾಗಿ ಇದನ್ನು ಏಷ್ಯಾದ ಅತಿ ದೊಡ್ಡ ಹಳೆಯದಾದ ಹಲಸಿನ ತೋಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಒಂದೇ ತೋಟದಲ್ಲಿ 42 ಜಾತಿಯ ಹಲಸು

ಕೋಲಾರದ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಸುಮಾರು 1600ಕ್ಕೂ ಹೆಚ್ಚು ಹಲಸಿನ ಮರಗಳಿದ್ದು, ಅದರಲ್ಲಿ 42 ವಿವಿಧ ಜಾತಿಯ ಹಲಸಿನ ಹಣ್ಣುಗಳು ಇವೆ. ತೋಟಗಾರಿಕಾ ಮಹಾವಿದ್ಯಾಲಯದ 40 ಎಕರೆ ಪ್ರದೇಶದಲ್ಲಿ ಸುಮಾರು 42 ವಿವಿಧ ಜಾತಿಯ ಹಲಸಿನ ಹಣ್ಣುಗಳಿವೆ. ಅದರಲ್ಲೂ ಜಾಣಗೆರೆ, ತೂಬಗೆರೆ, ಸಿಂಗಾಪುರ ಹಲಸು, ಚಂದ್ರಹಲಸು, ಅಂಟಿಲ್ಲದ ಹಲಸು, ಸಿದ್ದು ಹಲಸು, ಶಂಕರ ಹಲಸು, ಸ್ವರ್ಣ ಹಲಸು, ತಮಿಳುನಾಡಿನ ತಳಿಯಾದ ಪಾಲೂರು 1, ಪಾಲೂರು 2 ಹಾಗೂ ಮಹಾರಾಷ್ಟ್ರದ ಕೊಂಕನ್ ಪ್ರಾಲಿಫಿಕ್ ಸೇರಿದಂತೆ ವಿವಿಧ ತಳಿಗಳನ್ನು ಇಲ್ಲಿ ಬೆಳೆಯಲಾಗುತ್ತದೆ. ಇಲ್ಲಿನ ಹಲಸಿನ ಹಣ್ಣಿಗೆ ಬೇಡಿಕೆ ಹೆಚ್ಚಿದ್ದು, ಪ್ರತಿ ವರ್ಷ ಹಣ್ಣಿನ ಮಾರಾಟಕ್ಕೆ ಟೆಂಡರ್ ಕರೆಯಲಾಗುತ್ತದೆ.

ಹಲಸಿನಿಂದ ವಿವಿಧ ಖಾದ್ಯಗಳ ತಯಾರಿ

ಹಲಸಿನ ಹಣ್ಣಿನಿಂದ ಹಲಸಿನ ಹಣ್ಣಿನ ಐಸ್​ಕ್ರೀಂ, ಬರ್ಪಿ, ಫಿಂಗರ್ ಚಿಪ್ಸ್​, ಹಲಸಿನ ಜಾಮ್​, ಪಲ್ಪಿ ಜ್ಯೂಸ್​, ಹಲಸಿನ ಹಲ್ವಾ, ಬಿರಿಯಾನಿ, ಕಬಾಬ್ ಸೇರಿದಂತೆ ಹಲವು ಖಾದ್ಯಗಳನ್ನು ತಯಾರು ಮಾಡುವ ಮೂಲಕ ಹಲಸಿನ ಮಹತ್ವವನ್ನು ಹೆಚ್ಚಿಸಲಾಗಿದೆ. ಹಲಸಿನ ಸಂಸ್ಕರಣ ಘಟಕ ಸ್ಥಾಪನೆ ಮಾಡಿ, ಹಲಸಿನ ವಿವಿಧ ಖಾದ್ಯಗಳನ್ನು, ವಿವಿಧ ಉತ್ಪನ್ನಗಳನ್ನು ಇಲ್ಲೇ ತಯಾರು ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಅಲ್ಲದೆ ಈ ಹಲಸಿನ ತೋಟವನ್ನು ಉತ್ತಮ ಪ್ರವಾಸಿ ಕೇಂದ್ರವನ್ನಾಗಿ ಮಾಡುವ ಕುರಿತು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ಕೋಲಾರ ತೋಟಗಾರಿಕಾ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ನಾಗರಾಜ್ ಮಾತನಾಡಿ, ಕೋಲಾರದ ತೋಟಗಾರಿಕಾ ಇಲಾಖೆಯಿಂದ ಮೂರು ತಳಿಗಳನ್ನು ಪರಿಚಯಿಸಲಾಗಿದೆ. ಮರಿಗೌಡ ಆರೆಂಜ್, ಟಮಕಾ ಗಮ್ ಲೆಸ್, ಕೃಷ್ಣಪ್ರಭಾ ಸೂಪರ್ ಎಂಬ ಹಲಸಿನ ತಳಿಗಳನ್ನು ಪರಿಚಯಿಸಿದ್ದೇವೆ. ಈ ಹಲಸಿನ ಗಿಡಗಳಿಗೆ ತಮಿಳುನಾಡು ಮತ್ತು ಕೇರಳದಿಂದ ಭಾರಿ ಬೇಡಿಕೆ ಇದ್ದು, ಒಂದು ಸಸಿಗೆ 150 ರೂಪಾಯಿಯಂತೆ ಮಾರಾಟ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು