Vijayapura News: ಆಧಾರ್ ಕಾರ್ಡ್ ಮಾಡಿಸಲು ಹೆಚ್ಚು ಹಣ ವಸೂಲಿ: ವಿಜಯಪುರ ಜಿಲ್ಲೆಯ ಕೋಲ್ಹಾರ ಆಧಾರ್ ಕೇಂದ್ರಕ್ಕೆ ಬೀಗ
Aug 03, 2023 11:19 AM IST
ವಿಜಯಪುರ ಜಿಲ್ಲೆ ಕೊಲ್ಹಾರ ಪಟ್ಟಣದ ಆಧಾರ್ ನೋಂದಣಿ ಕೇಂದ್ರಕ್ಕೆ ತಹಸಿಲ್ದಾರ್ ರೇಣುಕಾ ಭೇಟಿ ನೀಡಿ ಸಿಬ್ಬಂದಿಯಿಂದ ಮಾಹಿತಿ ಕಲೆ ಹಾಕಿದರು.
- ವಿಜಯಪುರದಲ್ಲಿ ಹಲವಾರು ಆಧಾರ್ ಕೇಂದ್ರಗಳಲ್ಲಿ ಸರ್ಕಾರ ನಿಗದಿಪಡಿಸಿದ ದರಕ್ಕಿಂತಲು ಹೆಚ್ಚಿನ ದರ ವಸೂಲಿ ಮಾಡುವ ಆರೋಪಗಳು ಆಗಾಗ ಕೇಳಿಬರುತ್ತಲೆ ಇರುತ್ತವೆ. ವಿಜಯಪುರ ಜಿಲ್ಲೆಯ ಕೋಲ್ಹಾರ ಪಟ್ಟಣದಲ್ಲಿರುವ ಆಧಾರ್ ಕೇಂದ್ರದಲ್ಲಿ ಸರ್ಕಾರ ನಿಗದಿಪಡಿಸಿದ ದರಕ್ಕಿಂತಲು ಮೂರುಪಟ್ಟು ಹೆಚ್ಚಿನ ದರ ವಸೂಲಿ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ವಿಜಯಪುರ: ಆಧಾರ್ ಕಾರ್ಡ್ ನೊಂದಣಿ, ಆಧಾರ್ ಕಾರ್ಡ್ ತಿದ್ದುಪಡಿ ಹೀಗೆ ಯಾವುದೇ ಸಣ್ಣತಿದ್ದುಪಡಿ ಇದ್ದರು ಜನಸೇವಾ ಸಿಬ್ಬಂದಿಗೆ ಹೆಚ್ದಿನ ಹಣ ನೀಡುವ ಅನಿವಾರ್ಯತೆ ಸೃಷ್ಠಿಯಾಗಿದೆ.
ಸರ್ಕಾರದ ಯಾವುದೇ ಯೋಜನೆ ಪಡೆಯಬೇಕಾದರೆ ಆಧಾರ ಕಡ್ಡಾಯವಾಗಿದೆ. ಬ್ಯಾಂಕ್ ಖಾತೆ, ಲೈಸೆನ್ಸ್ ಮಾಡಿಸಲು ಹೀಗೆ ಎಲ್ಲದಕ್ಕೂ ಆಧಾರ್ ಕಾರ್ಡ್ ಕಡ್ಡಾಯವಾಗಿದೆ.ಇಷ್ಟೆಅಲ್ಲ ಅದರಲ್ಲಿ ವಿಳಾಸ, ಇನಿಷಿಯಲ್ ಕೂಡ ಸರಿಯಾಗಿರಬೇಕು. ಹೀಗಾಗಿ ದಿನನಿತ್ಯ ಆಧಾರ್ ಕೇಂದ್ರಗಳಿಗೆ ಸಾರ್ವಜನಿಕರು ಭೇಟಿ ನೀಡುವುದು ಸರ್ವೆ ಸಾಮಾನ್ಯ. ಆದರೆ ಇದೇ ಆಧಾರ್ ಕೇಂದ್ರಗಳು ಈಗ ಜನರ ಸುಲಿಗೆ ಕೇಂದ್ರಗಳಾಗಿ ಮಾರ್ಪಟ್ಟಿವೆ.
ವಿಜಯಪುರದಲ್ಲಿ ಹಲವಾರು ಆಧಾರ್ ಕೇಂದ್ರಗಳಲ್ಲಿ ಸರ್ಕಾರ ನಿಗದಿಪಡಿಸಿದ ದರಕ್ಕಿಂತಲು ಹೆಚ್ಚಿನ ದರ ವಸೂಲಿ ಮಾಡುವ ಆರೋಪಗಳು ಆಗಾಗ ಕೇಳಿಬರುತ್ತಲೆ ಇರುತ್ತವೆ. ವಿಜಯಪುರ ಜಿಲ್ಲೆಯ ಕೋಲ್ಹಾರ ಪಟ್ಟಣದಲ್ಲಿರುವ ಆಧಾರ್ ಕೇಂದ್ರದಲ್ಲಿ ಸರ್ಕಾರ ನಿಗದಿಪಡಿಸಿದ ದರಕ್ಕಿಂತಲು ಮೂರುಪಟ್ಟು ಹೆಚ್ಚಿನ ದರ ವಸೂಲಿ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಜಪ್ತಿ ಮಾಡಿಸಿದ ತಹಸಿಲ್ದಾರ್
ಕೊಲ್ಹಾರ ಪಟ್ಟಣದ ಬಿ.ಎಸ್.ಎನ್.ಎಲ್ ಟಾವರ್ ಹತ್ತಿರ ಇರುವ ಆಧಾರ ಕೇಂದ್ರದಲ್ಲಿ ಹೆಚ್ಚಿನ ಹಣ ಪಡೆಯಲಾಗುತ್ತಿದೆ ಎಂದು ತಹಶೀಲ್ದಾರ್ ರೇಣುಕಾ ಅವರಿಗೆ ಸಾರ್ವಜನಿಕರ ದೂರು ನೀಡಿದ ಹಿನ್ನಲೆಯಲ್ಲಿ ತಹಶೀಲ್ದಾರ್ ರೇಣುಕಾ ಹಾಗೂ ಅವರ ತಂಡ ಆಧಾರ ಕೇಂದ್ರಕ್ಕೆ ಧಿಡೀರ ಭೇಟಿ ನೀಡಿ ಆಧಾರ ಕೇಂದ್ರವನ್ನು ಜಪ್ತಿ ಮಾಡಿದ್ದಾರೆ.
ನಂತರ ಹಿಂದುಸ್ತಾನ್ ಟೈಮ್ಸ್ ನೊಂದಿಗೆ ಮಾತನಾಡಿದ ಅವರು, ಆಧಾರ ಕೇಂದ್ರದವರು ಅಕ್ರಮವಾಗಿ ಹೆಚ್ಚಿನ ಹಣ ಪಡೆಯುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಅವರ ಐಡಿ ಬ್ಲಾಕ್ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಸಲ್ಲಿಸಲಾಗುವುದು ಎಂದರು.
ಐದು ವರ್ಷದ ಮೇಲ್ಪಟ್ಟ ಮಕ್ಕಳಿಗೆ ಥಂಬ್, ಹೊಸ ಆಧಾರ ಕಾರ್ಡ ಹೀಗೆ ಅನೇಕ ಕಾರ್ಯಗಳಿಗೆ ಸರ್ಕಾರ ಶುಲ್ಕ ವಿನಾಯಿತಿ ನೀಡಿದೆ. ಇನ್ನುಳಿದಂತೆ ಆಧಾರ ಕಾರ್ಡನಲ್ಲಿ ವಿಳಾಸ ಬದಲು, ಹೆಸರು ತಿದ್ದುಪಡಿಯಂತಹ ಕಾರ್ಯಗಳಿಗೆ 50 ರೂ. ಗಳನ್ನು ನಿಗಧಿತ ಶುಲ್ಕ ಇರಿಸಿದೆ. ಆದರೆ ಈ ಕೇಂದ್ರದ ಸಿಬ್ಬಂಧಿ ಸರ್ಕಾರ ನಿಗಧಿ ಪಡಿಸಿದ ದರಕ್ಕಿಂತ ಹೆಚ್ಚಾಗಿ ಅಂದರೆ ಒಂದು ಆಧಾರ ಕಾರ್ಡಗೆ ಸರಿಸುಮಾರು 150 ರಿಂದ 200 ರೂ. ವರೆಗೆ ತೆಗೆದುಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ.
ತಹಸಿಲ್ದಾರ್‌ಗೆ ಉಡಾಫೆ ಉತ್ತರ
ಈ ಆಧಾರ್ ಕೇಂದ್ರದಲ್ಲಿ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಮೂರುಪಟ್ಟು ಹೆಚ್ಚಿನ ದರ ಪಡೆಯಲಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಇನ್ನು ತಹಶೀಲ್ದಾರ್ ಭೇಟಿ ವೇಳೆ ಆಧಾರ ಕೇಂದ್ರ ನಡೆಸುವ ಪರವಾನಿಗೆ ಪಡೆದ ಗುತ್ತಿಗೆದಾರರು ಇಲ್ಲದಿದ್ದನ್ನು ಗಮನಿಸಿ ಆಪರೇಟರ್ ಗೆ ಮಾಹಿತಿ ಕೇಳಿದ್ದಾರೆ .ಆಗ ಆಪರೇಟರ್ ಮೇಡಂ ಇದ್ದಾರೆ .ಅವರೆ ಮಾತನಾಡುತ್ತಾರೆ ಎಂದು ಉಡಾಫೆಯಾಗಿ ಉತ್ತರಿಸಿದ್ದಾನೆ. ಆದರೆ ಆ ಆಧಾರ ಸೆಂಟರ್ ಗುತ್ತಿಗೆ ಪಡೆದವರ ಹೆಸರು ಮಾತ್ರ ಹೇಳಿಲ್ಲ ಎಂದು ತಹಶೀಲ್ದಾರ್ ರೇಣುಕಾ ಅವರು ಮಾಹಿತಿ ನೀಡಿದ್ದಾರೆ.
ಕ್ರಮಕ್ಕೆ ಆಗ್ರಹ
ಇನ್ನು ಇದು ಕೇವಲ ಒಂದು ಆಧಾರ ಸೆಂಟರ್ ನ ಸಮಸ್ಯೆಯಲ್ಲ ಜಿಲ್ಲೆಯ ಬಹುತೇಕ ಕೇಂದ್ರಗಳಲ್ಲಿ ಇದೇ ರೀತಿಯಾಗಿ ಸರ್ಕಾರ ನಿಗಧಿಪಡಿಸಿದ ದರಕ್ಕಿಂತಲೂ ಹೆಚ್ಚಿಗೆ ಹಣ ಸುಲಿಗೆ ಮಾಡಲಾಗುತ್ತಿದೆ ಎಂದು ಹೆಸರು ಹೇಳಲಿಚ್ಚಿಸದ ವ್ಯಕ್ತಿಯೊಬ್ಬರು ಪ್ರತಿಕ್ರಿಯೆ ನೀಡಿದರು.
ಜಿಲ್ಲೆಯಲ್ಲಿರುವ ಸಿ.ಎಸ್.ಸಿ ಸೆಂಟರ್, ಕರ್ನಾಟಕ ಒನ್, ತಹಶೀಲ್ದಾರ್ ಕಚೇರಿ, ಬ್ಯಾಂಕ್ ಗಳಲ್ಲಿರುವ ಆಧಾರ ಆಪರೇಟರ್ ಗಳು ಜನರಿಂದ ಸರ್ಕಾರ ನಿಗಧಿ ಮಾಡಿದ ದರಕ್ಕಿಂತಲು ಹೆಚ್ಚಿನ ಹಣ ಸುಲಿಗೆ ಮಾಡುತ್ತಿದ್ದಾರೆ ಅಧಿಕಾರಿಗಳು ಇವರ ಮೇಲೆ ಕಟ್ಟುನಿಟ್ಟಿನ ಕ್ರಮಜರುಗಿಸಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.
ಜಿಲ್ಲೆಯಲ್ಲಿರುವ ಆಧಾರ್ ಕೇಂದ್ರಗಳೆಷ್ಟು?:
ತಹಶೀಲ್ದಾರ್ ಕಚೇರಿ – 22, ಸ್ಪಂದನಾ ಕೇಂದ್ರ – 1, ಕರ್ನಾಟಕ ಒನ್ – 1, ಸಿ.ಎಸ್.ಸಿ ಕೇಂದ್ರ – 17, ಸೇರಿದಂತೆ ಬ್ಯಾಂಕ್, ಪೋಸ್ಟ್ ಆಫೀಸ್, ಬಿ.ಎಸ್.ಎನ್.ಎಲ್ ಕಚೇರಿಗಳಲ್ಲೂ ಆಧಾರ ಕೇಂದ್ರಗಳಿವೆ.
ವರದಿ: ಸಮೀವುಲ್ಲಾ ಉಸ್ತಾದ
ವಿಭಾಗ