logo
ಕನ್ನಡ ಸುದ್ದಿ  /  ಕರ್ನಾಟಕ  /  ಕನ್ನಡ ರಾಜ್ಯೋತ್ಸವ 2024: ಕರ್ನಾಟಕದ ಪ್ರಮುಖ ಕವಿಗಳ ಹೆಸರುಗಳನ್ನು ನೀವು ಚೆನ್ನಾಗಿಯೇ ಬಲ್ಲಿರಿ, ಅವರ ಕಾವ್ಯನಾಮ ಗೊತ್ತೆ?

ಕನ್ನಡ ರಾಜ್ಯೋತ್ಸವ 2024: ಕರ್ನಾಟಕದ ಪ್ರಮುಖ ಕವಿಗಳ ಹೆಸರುಗಳನ್ನು ನೀವು ಚೆನ್ನಾಗಿಯೇ ಬಲ್ಲಿರಿ, ಅವರ ಕಾವ್ಯನಾಮ ಗೊತ್ತೆ?

Umesha Bhatta P H HT Kannada

Oct 28, 2024 08:14 PM IST

google News

ಕನ್ನಡದ ಪ್ರಮುಖ ಸಾಹಿತಿಗಳಾದ ಕುವೆಂಪು, ವೈದೇಹಿ, ದೊಡ್ಡರಂಗೇಗೌಡ, ಚಂಪಾ ಅವರ ನಿಜವಾದ ಹೆಸರು, ಕಾವ್ಯನಾಮ ಬೇರೆ ಬೇರೆಯೇ.

    • ಕನ್ನಡ ರಾಜ್ಯೋತ್ಸವ 2024 (karnataka rajyotsava 2024) ಪ್ರಯುಕ್ತ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ಕರ್ನಾಟಕದ ಪ್ರಮುಖ ಸಾಹಿತಿಗಳು ಹಾಗೂ ಅವರ ಕಾವ್ಯನಾಮದ ವಿವರವನ್ನು ಇಲ್ಲಿ ನೀಡಿದೆ. ಹಲವು ಸಾಹಿತಿಗಳು ತಮ್ಮ ಹೆಸರಿಗಿಂತ ಕಾವ್ಯನಾಮದೊಂದಿಗೆ ಬರೆದಿದ್ದೇ ಹೆಚ್ಚು.ಈಗಲೂ ತಮ್ಮಸಾಹಿತ್ಯ ಹಾಗೂ ಕಾವ್ಯನಾಮದಿಂದಲೇ ಜನರ ಮನಸಿನಲ್ಲಿ ಉಳಿದಿದ್ದಾರೆ.
ಕನ್ನಡದ ಪ್ರಮುಖ ಸಾಹಿತಿಗಳಾದ ಕುವೆಂಪು, ವೈದೇಹಿ, ದೊಡ್ಡರಂಗೇಗೌಡ, ಚಂಪಾ ಅವರ ನಿಜವಾದ ಹೆಸರು, ಕಾವ್ಯನಾಮ ಬೇರೆ ಬೇರೆಯೇ.
ಕನ್ನಡದ ಪ್ರಮುಖ ಸಾಹಿತಿಗಳಾದ ಕುವೆಂಪು, ವೈದೇಹಿ, ದೊಡ್ಡರಂಗೇಗೌಡ, ಚಂಪಾ ಅವರ ನಿಜವಾದ ಹೆಸರು, ಕಾವ್ಯನಾಮ ಬೇರೆ ಬೇರೆಯೇ.

ಕರ್ನಾಟಕದಲ್ಲಿ ಹಲವು ಕವಿಗಳು ಜನಪ್ರಿಯರು.ಅವರ ಹೆಸರು ಎಷ್ಟು ಜನಪ್ರಿಯವೋ ಅವರ ಕಾವ್ಯನಾಮವೂ ಅಷ್ಟೇ ಜನಜನಿತ. ಕೆಲವು ಕೆಲವು ಕವಿಗಳ ಹೆಸರು ಹೇಳಿದರೆ ಗೊತ್ತಾಗುವುದಿಲ್ಲ. ಕಾವ್ಯ ನಾಮ ಹೇಳಬೇಕು.ಕೆಲವರ ಕಾವ್ಯನಾಮಕ್ಕಿಂತ ಹೆಸರೇ ಪರಿಚಿತ. ಕುವೆಂಪು, ಬೇಂದ್ರೆ ಸಹಿತ ಪ್ರಮುಖ ಸಾಹಿತಿಗಳ ಎರಡೂ ಹೆಸರು ಗೊತ್ತಿದ್ದರೂ ಹಲವರ ಹೆಸರು, ಕಾವ್ಯನಾಮ ಪರಿಚಿತ ಕಡಿಮೆ. ಹೀಗೆ ತಮ್ಮ ಹೆಸರ ಜತೆಗೆ ಕಾವ್ಯ ನಾಮದೊಂದಿಗೆ ಬರೆದ ಕನ್ನಡದ ಕವಿಗಳ ದೊಡ್ಡ ಸಂಖ್ಯೆಯೇ ಇದೆ. ಅವರ ಪಟ್ಟಿ ಇಲ್ಲಿದೆ.

ಕವಿಗಳು ಹಾಗೂ ಅವರ ಕಾವ್ಯನಾಮ ಪಟ್ಟಿ

ಕೆ ವಿ ಪುಟ್ಟಪ್ಪ - ಕುವೆಂಪು

ಗದುಗಿನ ನಾರಾಯಣಪ್ಪ - ಕುಮಾರವ್ಯಾಸ

ನಂದಳಿಕೆ ಲಕ್ಷ್ಮೀನಾರಾಯಣಪ್ಪ - ಮುದ್ದಣ

ದರಾ ಬೇಂದ್ರೆ - ಅಂಬಿಕಾತನಯ ದತ್ತ

ವಿ.ಸೀತಾರಾಮಯ್ಯ -ವೀಸಿ

ಸಿದ್ದಯ್ಯ ಪುರಾಣಿಕ - ಕಾವ್ಯಾನಂದ

ಅರಕಲಗೂಡು ನರಸಿಂಹರಾವ್‌ ಕೃಷ್ಣರಾವ್‌- ಅನಕೃ

ಬೆಟಗೇರಿ ಕೃಷ್ಣಶರ್ಮ- ಆನಂದ ಕಂದ

ಎಂ.ಶಿವರಾಂ - ರಾಶಿ

ರಾಯಸಂ ಭೀಮಸೇನರಾವ್‌ - ಬೀಚಿ

ದೊಡ್ಡರಂಗೇಗೌಡ - ಮನುಜ

ದೇ ಜವರೇಗೌಡ -ದೇಜಗೌ

ಎಂ.ವಿ.ಕನಕಮ್ಮ - ಅಶ್ವಿನಿ

ಸಿದ್ದಲಿಂಗಯ್ಯ - ನಿಸರ್ಗಪ್ರಿಯ

ಚನ್ನಮಲ್ಲಪ್ಪ ಸಿದ್ದಲಿಂಗಪ್ಪ ಗಲಗಲಿ - ಮಧುರ ಚೆನ್ನ

ಎ.ಜಿ.ಭೀಮರಾವ್‌ - ವಂಶಿ

ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿ - ತಿರುಕ

ಪದ್ಮಾ ರಾಮಚಂದ್ರರಾವ್‌ - ನಿರುಪಮಾ

ಎ.ಎನ್‌. ಸ್ವಾಮಿ ವೆಂಕಟಾದ್ರಿ ಅಯ್ಯರ್‌ - ಸಂಸ

ನರಸಿಂಹರಾವ್‌ - ಪರ್ವತವಾಣಿ

ಪು.ತಿ.ನರಸಿಂಹಾಚಾರ್‌ - ಪುತಿನ

ಸಿ.ಪಿ. ಕೃಷ್ಣಕುಮಾರ್‌ - ಸಿಪಿಕೆ

ಎಚ್‌ಎಸ್‌ಕೃಷ್ಣಸ್ವಾಮಿ ಅಯ್ಯಂಗಾರ್‌ - ಎಚ್ಚೆಸ್ಕೆ

ವೆಂಕಟರಾವ್‌ - ಭಾರತೀಪ್ರಿಯ

ಅಜ್ಜಂಪುರ ಸೀತಾರಾಮ್‌ - ಆನಂದ

ರಾಮೇಗೌಡ - ಶಾಂತಕವಿ

ಜಾನಕಿ ಶ್ರೀನಿವಾಸಮೂರ್ತಿ- ವೈದೇಹಿ

ಡಿ.ವಿ.ಗುಂಡಪ್ಪ - ಡಿವಿಜಿ

ಬಿ.ಎಂ.ಶ್ರೀಕಂಠಯ್ಯ - ಬಿಎಂಶ್ರಿ

ಪಂಜೆ ಮಂಗೇಶರಾಯರು - ಕವಿ ಶಿಷ್ಯ

ಎಸ್‌ಅರ್‌ ನಾರಾಯಣರಾವ್‌ - ಭಾರತೀ ಸುತ

ಮಾಸ್ತಿ ವೆಂಕಟೇಶ ಅಯ್ಯಂಗಾರ್-‌ ಶ್ರೀನಿವಾಸ

ವೆಂಕಟೇಶ ತಿರಕೊ ಕುಲಕರ್ಣಿ- ಗಳಗನಾಥ

ಆರ್‌.ವಿ.ಕುಲಕರ್ಣಿ ರಾವ್‌ - ಬಹದ್ದೂರ್‌

ವಿನಾಯಕ ಕೃಷ್ಣ ಗೋಕಾಕ್‌ - ವಿನಾಯಕ

ಚಂದ್ರಶೇಖರ ಪಾಟೀಲ- ಚಂಪಾ

ನಾರಾಯಣ ಕೃಷ್ಣ ಕುಲಕರ್ಣಿ- ಎನ್ಕೆ

ಮುಳಕುಂದ ಶಿವರಾಯ - ನಿರಂಜನ

ರಂ ಶ್ರೀ ಮುಗಳಿ - ರಸಿಕ ರಂಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ