logo
ಕನ್ನಡ ಸುದ್ದಿ  /  ಕರ್ನಾಟಕ  /  Dingaleshwara Swamiji: ಅಬ್ಬರ ಮೂಡಿಸಿದ್ದ ದಿಂಗಾಲೇಶ್ವರ ಸ್ವಾಮೀಜಿ ಧಾರವಾಡ ಚುನಾವಣಾ ಕಣದಿಂದ ಹಿಂದೆ ಸರಿದಿದ್ದು ಏಕೆ?

Dingaleshwara Swamiji: ಅಬ್ಬರ ಮೂಡಿಸಿದ್ದ ದಿಂಗಾಲೇಶ್ವರ ಸ್ವಾಮೀಜಿ ಧಾರವಾಡ ಚುನಾವಣಾ ಕಣದಿಂದ ಹಿಂದೆ ಸರಿದಿದ್ದು ಏಕೆ?

Umesha Bhatta P H HT Kannada

Apr 23, 2024 04:42 PM IST

google News

ಗದಗ ಜಿಲ್ಲೆ ಶಿರಹಟ್ಟಿಯ ದಿಂಗಾಲೇಶ್ವರ ಸ್ವಾಮೀಜಿ

    • ಧಾರವಾಡ ಲೋಕಸಭಾ ಚುನಾವಣೆಯಿಂದ ಶಿರಹಟ್ಟಿ ಶ್ರೀದಿಂಗಾಲೇಶ್ವರ ಸ್ವಾಮೀಜಿ ಅವರು ಹಿಂದಕ್ಕೆ ಸರಿದಿರುವ ಕುರಿತು ಚರ್ಚೆಗಳು ನಡೆದಿವೆ. 
ಗದಗ ಜಿಲ್ಲೆ ಶಿರಹಟ್ಟಿಯ ದಿಂಗಾಲೇಶ್ವರ ಸ್ವಾಮೀಜಿ
ಗದಗ ಜಿಲ್ಲೆ ಶಿರಹಟ್ಟಿಯ ದಿಂಗಾಲೇಶ್ವರ ಸ್ವಾಮೀಜಿ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿರುದ್ದ ಅಸಮಾಧಾನಗೊಂಡು ಲೋಕಸಭಾ ಚುನಾವಣೆ ಕಣಕ್ಕೆ ಇಳಿದಿದ್ದ ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕು ಬಾಲೆಹೊಸೂರು ಫಕೀರೇಶ್ವರ ಮಠದ ಶ್ರೀದಿಂಗಾಲೇಶ್ವರ ಸ್ವಾಮೀಜಿ ಅವರು ನಾಮಪತ್ರ ವಾಪಾಸ್‌ ಪಡೆದಿದ್ದಾರೆ. ಈ ಮೂಲಕ ಚುನಾವಣೆ ಕಣದಿಂದ ಹಿಂದೆ ಸರಿದಿದ್ದಾರೆ. ಕೊನೆ ಕ್ಷಣದಲ್ಲಿ ಸ್ವಾಮೀಜಿ ಅವರು ಹಿಂದೆ ಸರಿಯಲು ಕಾರಣವಾದರೂ ಏನು ಎನ್ನುವ ಚರ್ಚೆಗಳು ನಡೆದಿವೆ. ಕಾಂಗ್ರೆಸ್‌ ಹಾಗೂ ಬಿಜೆಪಿನ ಪ್ರಮುಖ ನಾಯಕರು ಮನ ಒಲಿಸಲು ಯತ್ನಿಸಿದರೂ ಆಗಿರಲಿಲ್ಲ. ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ಗಟ್ಟಿ ದನಿಯಲ್ಲೇ ಹೇಳಿದ್ದ ಸ್ವಾಮೀಜಿ ಅವರು ಕೊನೆಗೂ ಅಚಲ ನಿಲುವು ಬದಲಿಸಿದ್ದರಿಂದ ಹಿಂದೆ ಇರುವ ಉದ್ದೇಶ ಏನಾದರೂ ಇದೆಯಾ ಎನ್ನುವ ಬಗ್ಗೆಯೂ ರಾಜಕೀಯ ಮಾತ್ರವಲ್ಲದೇ ಧಾರ್ಮಿಕ ಕ್ಷೇತ್ರದಲ್ಲೂ ಚರ್ಚೆಗಳಾಗುತ್ತಿವೆ.

ಸ್ವಾಮೀಜೀ ಅವರು ಧಾರವಾಡಲ್ಲಿ ಸೋಮವಾರ ನಾಮಪತ್ರ ಹಿಂದೆ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡುವಾಗ, ನನ್ನ ಹಿರಿಯ ಗುರುಗಳ ಅಣತಿಯಂತೆ ನನ್ನ ನಿರ್ಧಾರ ಬದಲಿಸಿ ಲೋಕಸಭೆ ಚುನಾವಣೆಯಿಂದ ಹಿಂದೆ ಸರಿದಿದ್ದೇನೆ. ಬೇರೆ ಯಾವ ಮುಖಂಡರ ಒತ್ತಡವೂ ಇಲ್ಲ. ಧರ್ಮ ಹೋರಾಟ ಎಂದಿಗೂ ನಿಲ್ಲುವುದಿಲ್ಲ. ಅದು ಮುಂದುವರಿಯಲಿದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದರು.

ಶಿರಹಟ್ಟಿ ಫಕೀರೇಶ್ವರ ಮಠದ ಹಿರಿಯ ಪೀಠಾಧಿಪತಿ ಶಿವಯೋಗಿ ಸಿದ್ಧರಾಮ ಮಹಾಸ್ವಾಮಿಗಳು. ನೀಡಿದ ಕಟ್ಟುನಿಟ್ಟಿನ ಸೂಚನೆ ಕಾರಣಕ್ಕೆ ದಿಂಗಾಲೇಶ್ವರರು ಹಿಂದೆ ಸರಿದರು ಎನ್ನುವದಂತೂ. ವಿಶೇಷವಾಗಿ ಬಿಜೆಪಿಯ ಕೆಲ ಹಿರಿಯ ನಾಯಕರು ಹಿರಿಯ ಸ್ವಾಮೀಜಿಗೆ ಕರೆ ಮಾಡಿ ದಿಂಗಾಲೇಶ್ವರರ ಸ್ವರ್ಧೆಯಿಂದ ಆಗಬಹುದಾದ ಅನಾಹುತಗಳು, ಸಮಾಜದಲ್ಲಿನ ಒಡಕಿನ ಸಂದೇಶ ಕುರಿತು ಮನವರಿಕೆ ಮಾಡಿಕೊಟ್ಟಿದ್ದಾರೆ. ಅವರಿಗೆ ಬೇಸರವಿದ್ದರೆ ಹೋರಾಟ ಮಾಡಲಿ. ಇದಕ್ಕೆ ಚುನಾವಣೆ ವೇದಿಕೆಯಲ್ಲ ಎನ್ನುವುದನ್ನೂ ಹೇಳಿದ್ದರು. ಈ ಕಾರಣದಿಂದ ಹಿರಿಯ ಸ್ವಾಮೀಜಿಗಳು ದಿಂಗಾಲೇಶ್ವರರಿಗೆ ನೀಡಿದ ಸೂಚನೆ ಮೇರೆಗೆ ಅವರು ಹಿಂದೆ ಸರಿಯಲು ಒಪ್ಪಿಕೊಂಡರು ಎನ್ನಲಾಗುತ್ತಿದೆ.

ಸ್ವಾಮೀಜಿ ಅವರ ಮೇಲೆ ಇನ್ನಿಲ್ಲದ ಒತ್ತಡವಂತೂ ಇತ್ತು. ಬಹಳಷ್ಟು ಮಠಾಧೀಶರು ದಿಂಗಾಲೇಶ್ವರ ಸ್ವಾಮೀಜಿ ಅವರೊಂದಿಗೆ ಮಾತುಕತೆ ಕಣದಿಂದ ಹಿಂದೆ ಸರಿಯಿರಿ. ನಿಮ್ಮ ಸ್ಪರ್ಧೆಯಿಂದ ಇದಲ್ಲದೇ ಗೊಂದಲ ಆಗುವುದು ಬೇಡ ಎಂದು ಹೇಳಿದ್ದರುಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷದ ನಾಯಕರು ಮನ ಒಲಿಸಿದ್ದರು. ವಾಪಾಸ್‌ ತೆಗೆದುಕೊಳ್ಳಿ ಎನ್ನುವ ಕುರಿತು ಉಭಯ ಪಕ್ಷಗಳ ನಾಯಕರು ಚರ್ಚಿಸಿದ್ದರು.

ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌, ಮಾಜಿ ಸಚಿವರಾದ ಮುರುಗೇಶ್‌ ನಿರಾಣಿ ಅವರು ಖುದ್ದು ಸ್ವಾಮೀಜಿ ಅವರೊಂದಿಗೆ ಮಾತುಕತೆ ನಡೆಸಿ ಕಣದಿಂದ ಹಿಂದೆ ಸರಿಯುವಂತೆ ಕೋರಿಕೊಂಡರು.

ಕಾಂಗ್ರೆಸ್‌ ನಾಯಕರು ಸ್ವಾಮೀಜಿ ಅವರೊಂದಿಗೆ ಮಾತನಾಡಿದ್ದರು. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಅವರು ಸ್ವಾಮೀಜಿ ಚುನಾವಣೆ ನಿರ್ಧಾರ ವೈಯಕ್ತಿಕವಾದದ್ದು. ಅದಕ್ಕೆ ನಮ್ಮ ಬೆಂಬಲವೇನೂ ಇಲ್ಲ ಎಂದು ಹೇಳಿದ್ದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಮೊದಲೇ ಸ್ವಾಮೀಜಿ ನಮ್ಮೊಂದಿಗೆ ಮಾತನಾಡಿದ್ದರೆ ಅವರನ್ನು ಅಧಿಕೃತ ಕಾಂಗ್ರೆಸ್‌ ಅಭ್ಯರ್ಥಿ ಎಂದು ಘೋಷಿಸಬಹುದಾಗಿತ್ತು. ಈಗಾಗಲೇ ವಿನೋದ್‌ ಅಸೂಟಿ ಅವರನ್ನು ನಮ್ಮ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ ಎಂದು ಹೇಳಿದ್ದರು.

ಅಳಂದ ಶಾಸಕ ಬಿ.ಆರ್‌.ಪಾಟೀಲ್‌ ಅವರಂತೂ, ಹಾಲಿ ಅಭ್ಯರ್ಥಿ ವಿನೋದ್‌ ಅಸೂಟಿ ಅವರಿಗೆ ಬೇರೆ ಹುದ್ದೆ ನೀಡಬಹುದು. ಅವರ ಬದಲು ಸ್ವಾಮೀಜಿ ಅವರನ್ನೇ ಅಭ್ಯರ್ಥಿಯಾಗಿಸುವುದು ಸೂಕ್ತ ಎನ್ನುವ ಸಲಹೆ ನೀಡಿದ್ದರು.

ಇವೆಲ್ಲದರ ನಡುವೆಯೂ ಸ್ವಾಮೀಜಿ ನಾಮಪತ್ರ ಸಲ್ಲಿಸಿ ಕಣದಲ್ಲಿ ಉಳಿದಿದಿದ್ದರು. ಆನಂತರ ನಡೆದ ಬೆಳವಣಿಗೆಗಳಲ್ಲಿ ಹಿಂದೆ ಸರಿದಿರುವ ಬೆಳವಣಿಗೆಗಳು ನಡೆದಿವೆ.

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

( To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ