logo
ಕನ್ನಡ ಸುದ್ದಿ  /  ಕರ್ನಾಟಕ  /  Mandya News: ಲಾಂಗ್ ಹಿಡಿದು ಕಾಲೇಜಿಗೆ ಬಂದ ವಿದ್ಯಾರ್ಥಿಯಿಂದ ಉಪನ್ಯಾಸಕನಿಗೆ ಧಮಕಿ -Video

Mandya News: ಲಾಂಗ್ ಹಿಡಿದು ಕಾಲೇಜಿಗೆ ಬಂದ ವಿದ್ಯಾರ್ಥಿಯಿಂದ ಉಪನ್ಯಾಸಕನಿಗೆ ಧಮಕಿ -Video

HT Kannada Desk HT Kannada

Aug 25, 2023 10:14 PM IST

google News

ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಲಾಂಗ್ ಹಿಡಿದು ಕಾಲೇಜಿಗೆ ಬಂದ ವಿದ್ಯಾರ್ಥಿ

    • Nagamangala Crime: ಪೊಲೀಸರ ಗಮನಕ್ಕೆ ವಿಷಯ ತಂದ ನಂತರ ಪೋಷಕರೊಂದಿಗೆ ಉಪನ್ಯಾಸಕರನ್ನು ಭೇಟಿಯಾದ ವಿದ್ಯಾರ್ಥಿ ಉದಯ್ ಗೌಡ ಕ್ಷಮೆ ಯಾಚಿಸಿದ್ದಾನೆ.
ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಲಾಂಗ್ ಹಿಡಿದು ಕಾಲೇಜಿಗೆ ಬಂದ ವಿದ್ಯಾರ್ಥಿ
ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಲಾಂಗ್ ಹಿಡಿದು ಕಾಲೇಜಿಗೆ ಬಂದ ವಿದ್ಯಾರ್ಥಿ

ಮಂಡ್ಯ: ಲಾಂಗ್ ಹಿಡಿದು ಕಾಲೇಜಿಗೆ ಬಂದ ವಿದ್ಯಾರ್ಥಿಯೊಬ್ಬ ಉಪನ್ಯಾಸಕನಿಗೆ 'ಆವಾಜ್' ಹಾಕಿದ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬಿ.ಜಿ.ನಗರದ ಡಿಪ್ಲೊಮೋ ಕಾಲೇಜಿನಲ್ಲಿ ನಡೆದಿದೆ. ತರಗತಿಗೆ ಬರುತ್ತಿಲ್ಲವೆಂದು ಪೋಷಕರಿಗೆ ದೂರು ನೀಡಿದ್ದ ಉಪನ್ಯಾಸಕನಿಗೆ ಲಾಂಗ್ ತೋರಿಸಿ ವಿದ್ಯಾರ್ಥಿ ಧಮಕಿ ಹಾಕಿರುವ ವಿಡಿಯೊ ಇದೀಗ ವೈರಲ್ ಆಗಿದೆ. ವಿದ್ಯಾರ್ಥಿಯನ್ನು ಕುಣಿಗಲ್ ತಾಲೂಕಿನ ಅವರೇಗೆರೆ ಗ್ರಾಮದ ಉದಯ್ ಗೌಡ (18) ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಉಪನ್ಯಾಸಕ ಚಂದನ್ ಪೊಲೀಸರಿಗೆ ದೂರು ನೀಡಿದ್ದರು.

ವಿದ್ಯಾರ್ಥಿಯೊಬ್ಬ ಲಾಂಗ್ ಹಿಡಿದು ಕಾಲೇಜಿಗೆ ಬಂದ ವಿಡಿಯೊವನ್ನು ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಪೊಲೀಸರ ಗಮನಕ್ಕೆ ವಿಷಯ ತಂದ ನಂತರ ಪೋಷಕರೊಂದಿಗೆ ಉಪನ್ಯಾಸಕರನ್ನು ಭೇಟಿಯಾದ ವಿದ್ಯಾರ್ಥಿ ಉದಯ್ ಗೌಡ ಕ್ಷಮೆ ಯಾಚಿಸಿದ್ದಾನೆ. ಈ ಘಟನೆ ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಂಡ್ಯ ನಗರಸಭೆಗೆ ಲೋಕಾಯುಕ್ತ ಅಧಿಕಾರಿಗಳ ಭೇಟಿ

ಮಂಡ್ಯ ನಗರಸಭೆ ಸಿಬ್ಬಂದಿ ಕೆಲಸ ಮಾಡುವ ರೀತಿಯ ಬಗ್ಗೆ ಸಾರ್ವಜನಿಕರು ದೂರು ಸಲ್ಲಿಸಿದ್ದ ಕಾರಣ ಲೋಕಾಯುಕ್ತ ಅಧಿಕಾರಿಗಳ ತಂಡ ಇತ್ತೀಚೆಗೆ ನಗರಸಭೆ ಕಚೇರಿಗೆ ದಿಢೀರ್‌ ಭೇಟಿ ನೀಡಿ ರಾತ್ರಿಯವರೆಗೂ ಪರಿಶೀಲನೆ ನಡೆಸಿತು. ಲೋಕಾಯುಕ್ತ ಎಸ್‌ಪಿ ವಿ.ಜೆ.ವಿಜೀತ್‌ ಹಾಗೂ ಅಧಿಕಾರಿಗಳ ತಂಡ ಗುರುವಾರ (ಆ 25) ಮಧ್ಯಾಹ್ನ 3 ಗಂಟೆಗೆ ಕಚೇರಿಗೆ ಭೇಟಿ ನೀಡಿತು. ಕಚೇರಿ ಸಿಬ್ಬಂದಿಯ ಹಾಜರಾತಿ, ರಜೆಯಲ್ಲಿದ್ದ ಸಿಬ್ಬಂದಿ, ಕಡತಗಳ ಮಾಹಿತಿ, ಬಾಕಿ ಉಳಿದಿದ್ದ ಕಡತಗಳು ಸೇರಿದಂತೆ ಹಲವು ವಿಷಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು.

‘ಪರಿಶೀಲನಾ ವರದಿಯನ್ನು ರಾಜ್ಯ ಕಚೇರಿಗೆ ಸಲ್ಲಿಸಲಾಗುವುದು. ಸಾರ್ವಜನಿಕರಿಂದ ದೂರು ಬಂದಿದ್ದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ಸರ್ಕಾರಿ ಕಚೇರಿಗಳಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸುವುದು ನಿತ್ಯದ ಕಾರ್ಯ ಚಟುವಟಿಕೆಯ ಭಾಗವಷ್ಟೇ’ ಎಂದು ಎಸ್ಪಿ ವಿಜೀತ್‌ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ