logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆಳ್ವಾಸ್ ವಿರಾಸತ್ 2023: ಉದ್ಘಾಟನಾ ಕಾರ್ಯಕ್ರಮದಲ್ಲಿ ಗಮನ ಸೆಳೆದ ಸಾಂಸ್ಕೃತಿಕ ರಥೋತ್ಸವ, ಇಲ್ಲಿವೆ ಆಕರ್ಷಕ ಫೋಟೋಸ್

ಆಳ್ವಾಸ್ ವಿರಾಸತ್ 2023: ಉದ್ಘಾಟನಾ ಕಾರ್ಯಕ್ರಮದಲ್ಲಿ ಗಮನ ಸೆಳೆದ ಸಾಂಸ್ಕೃತಿಕ ರಥೋತ್ಸವ, ಇಲ್ಲಿವೆ ಆಕರ್ಷಕ ಫೋಟೋಸ್

Dec 15, 2023 08:04 AM IST

ಆಳ್ವಾಸ್‌ ವಿರಾಸತ್ 2023 ಕಾರ್ಯಕ್ರಮ ಶುರುವಾಗಿದ್ದು, ಉದ್ಘಾಟನಾ ಸಮಾರಂಭದಲ್ಲಿ ರಥೋತ್ಸವ ಮತ್ತು ಗಂಗಾರತಿ ನೆನಪಿಸುವ ಆರತಿ  ಕಾರ್ಯಕ್ರಮ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದವು. ಈ ಕಾರ್ಯಕ್ರಮದ ಸಂಭ್ರಮ ಸಡಗರ ಫೋಟೋಗಳಲ್ಲಿ ಸೆರೆಯಾಗಿದ್ದು, ಆಯ್ದ ಆಕರ್ಷಕ ಫೋಟೋಗಳು ಇಲ್ಲಿವೆ ನೋಡಿ. ಚಿತ್ರ ವರದಿ- ಹರೀಶ್ ಮಾಂಬಾಡಿ, ಮಂಗಳೂರು.

ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಆಳ್ವಾಸ್ ವಿರಾಸತ್ 2023ಕ್ಕೆ ಚಾಲನೆ ಸಿಕ್ಕಿದ್ದು, ರಾಜ್ಯಪಾಲ ಥಾವರ್ ಚಂದ್  ಗೆಹ್ಲೋತ್ ಉದ್ಘಾಟಿಸಿ ಶುಭ ಹಾರೈಸಿದ್ದಾರೆ. ಈ ಸಂದರ್ಭ ಸಾಂಸ್ಕೃತಿಕ ಲೋಕ ಅನಾವರಣವೇ ಉದ್ಘಾಟನಾ ಸಮಾರಂಭದಲ್ಲಿ ನಡೆಯಿತು. ಆಳ್ವಾಸ್ ಕನ್ನಡ ಮಾಧ್ಯಮ ಶಾಲಾ  ಶಿಕ್ಷಣವನ್ನು  ರಾಜ್ಯಪಾಲರು ಶ್ಲಾಘಿಸಿ, ಮಾತೃಭಾಷೆ ಅಭಿವೃದ್ಧಿಗೆ ಕೊಡುಗೆ ನೀಡಲಿ ಎಂದು ಶುಭ ಹಾರೈಸಿದರು.ಸಮಾರಂಭದ ಅಧ್ಯಕ್ಷತೆಯನ್ನು ಧರ್ಮಸ್ಥಳ ಧರ್ಮಾಧಿಕಾರಿ  ಡಿ. ವೀರೇಂದ್ರ ಹೆಗ್ಗಡೆ ವಹಿಸಿದ್ದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ  ಡಾ.ಎಂ.ಮೋಹನ ಆಳ್ವ , ಹುತಾತ್ಮ ಯೋಧ ಪ್ರಾಂಜಲ್ ಹಾಗೂ ಆಳ್ವಾಸ್ ಸಂಸ್ಥೆಯ ಸಂಬಂಧವನ್ನು ಸ್ಮರಿಸಿ ಭಾವುಕರಾದರು. ಈ ಉದ್ಘಾಟನಾ ಸಮಾರಂಭದಲ್ಲಿ ಆಕರ್ಷಕ ಸಾಂಸ್ಕೃತಿಕ ರಥೋತ್ಸವ ಮತ್ತು ಆರತಿ ಗಮನಸೆಳೆಯಿತು.
(1 / 7)
ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಆಳ್ವಾಸ್ ವಿರಾಸತ್ 2023ಕ್ಕೆ ಚಾಲನೆ ಸಿಕ್ಕಿದ್ದು, ರಾಜ್ಯಪಾಲ ಥಾವರ್ ಚಂದ್  ಗೆಹ್ಲೋತ್ ಉದ್ಘಾಟಿಸಿ ಶುಭ ಹಾರೈಸಿದ್ದಾರೆ. ಈ ಸಂದರ್ಭ ಸಾಂಸ್ಕೃತಿಕ ಲೋಕ ಅನಾವರಣವೇ ಉದ್ಘಾಟನಾ ಸಮಾರಂಭದಲ್ಲಿ ನಡೆಯಿತು. ಆಳ್ವಾಸ್ ಕನ್ನಡ ಮಾಧ್ಯಮ ಶಾಲಾ  ಶಿಕ್ಷಣವನ್ನು  ರಾಜ್ಯಪಾಲರು ಶ್ಲಾಘಿಸಿ, ಮಾತೃಭಾಷೆ ಅಭಿವೃದ್ಧಿಗೆ ಕೊಡುಗೆ ನೀಡಲಿ ಎಂದು ಶುಭ ಹಾರೈಸಿದರು.ಸಮಾರಂಭದ ಅಧ್ಯಕ್ಷತೆಯನ್ನು ಧರ್ಮಸ್ಥಳ ಧರ್ಮಾಧಿಕಾರಿ  ಡಿ. ವೀರೇಂದ್ರ ಹೆಗ್ಗಡೆ ವಹಿಸಿದ್ದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ  ಡಾ.ಎಂ.ಮೋಹನ ಆಳ್ವ , ಹುತಾತ್ಮ ಯೋಧ ಪ್ರಾಂಜಲ್ ಹಾಗೂ ಆಳ್ವಾಸ್ ಸಂಸ್ಥೆಯ ಸಂಬಂಧವನ್ನು ಸ್ಮರಿಸಿ ಭಾವುಕರಾದರು. ಈ ಉದ್ಘಾಟನಾ ಸಮಾರಂಭದಲ್ಲಿ ಆಕರ್ಷಕ ಸಾಂಸ್ಕೃತಿಕ ರಥೋತ್ಸವ ಮತ್ತು ಆರತಿ ಗಮನಸೆಳೆಯಿತು.(HSM/HTKannada )
ಗಂಗಾರತಿಯನ್ನು ನೆನಪಿಸಿದ ರಥೋತ್ಸವ- ಆರತಿಯ ದೃಶ್ಯ. ವಿರಾಸತ್‌ನ ವಿಶೇಷವಾಗಿ ಸಾಂಸ್ಕೃತಿಕ ರಥವು ವೇದಘೋಷಗಳ ನಿನಾದ, ಭಜನೆಗಳು,  ಪಲ್ಲಕ್ಕಿಗಳು, ಪ್ರೇಕ್ಷಕರ ಜಯ ಘೋಷ ಹಾಗೂ ಮಂಗಳವಾದ್ಯಗಳೊಂದಿಗೆ ನಡೆಯಿತು.ಲೋಕ ಮಾರ್ಗದರ್ಶಕರಾದ ರಾಮ-ಕೃಷ್ಣರ ಮೂರ್ತಿ ಪ್ರತಿಷ್ಠಾಪಿಸಿದ ಸಾಂಸ್ಕೃತಿಕ ರಥವನ್ನು ಮುಖ್ಯ ವೇದಿಕೆಯ ಮುಂಭಾಗದಲ್ಲಿ  ಬಲದಿಂದ ಎಡಕ್ಕೆ  ಎಳೆಯಲಾಯಿತು. 15 ಅರ್ಚಕರು ಮಂತ್ರ ಘೋಷ ಮಾಡಿದರು. ಕೊಂಬು, ಕಹಳೆ ನಾದ ಮೊಳಗಿದವು. ಛತ್ರಿ, ಚಾಮರಗಳೊಂದಿಗೆ ದೊಂದಿಗಳು ಬೆಳಗಿದವು. ಮಂಗಳ ವಾದ್ಯ ನಿನಾದ ಮೂಡಿಸಿತು.ಹರಿದ್ವಾರದಿಂದ ಬಂದ ವಿಪುಲ್ ಶರ್ಮಾ ನೇತೃತ್ವದ ಗಂಗಾರತಿ  ತಂಡವು ಮಂತ್ರ ಘೋ?ಗಳೊಂದಿಗೆ ಆರತಿ ಬೆಳಗಿದಾಗ ಶ್ರದ್ಧೆ ಭಕ್ತಿಯ ಪ್ರಜ್ವಲನವಾಯಿತು.
(2 / 7)

ರಥೋತ್ಸವದಲ್ಲಿ ಭಾಗಿಯಾದ ಕಲಾ ತಂಡಗಳ ಒಂದು ನೋಟ. ರಥೋತ್ಸವಕ್ಕೆ ಮೊದಲು ಪಲ್ಲಕ್ಕಿಯಲ್ಲಿ ಶಕ್ತಿ ಮತ್ತು ಭಕ್ತಿಯ ಪ್ರತೀಕವಾಗಿ ಹನುಮಂತ, ಸಂಪತ್ತಿನ ಧ್ಯೋತಕವಾದ ಮಹಾಲಕ್ಷ್ಮಿ ಹಾಗೂ ವಿದ್ಯಾಮಾತೆ ಮಹಾ ಸರಸ್ವತಿ ಮೂರ್ತಿಗಳನ್ನು ಕರೆ ತರಲಾಯಿತು.ರಥಯಾತ್ರೆಯ ಮುಂಭಾಗದಲ್ಲಿ ಮೈಸೂರು, ಪಂಡರಾಪುರ ಹಾಗೂ ಮಂಗಳೂರು ಹರೇಕೃಷ್ಣ ಪಂಥದ ಭಜನಾ ತಂಡಗಳ ಭಜನೆ ಹಾಡಿನ ಮೂಲಕ  ಭಕ್ತಿ ಪ್ರಭಾವಳಿ ಮೂಡಿಸಿದರು
(3 / 7)

ರಥೋತ್ಸವದಲ್ಲಿ ವಿವಿಧ ವೇಷಧಾರಿಗಳು ಕೂಡ ಆಕರ್ಷಣೆಯ ಭಾಗವಾಗಿದ್ದರು.
(4 / 7)
ರಥೋತ್ಸವದಲ್ಲಿ ವಿವಿಧ ವೇಷಧಾರಿಗಳು ಕೂಡ ಆಕರ್ಷಣೆಯ ಭಾಗವಾಗಿದ್ದರು.
ನಂದಿ ಧ್ವಜ, ವೀರಗಾಸೆ ಸೇರಿ ಹಲವು ಕಲಾವಿದರ ತಂಡಗಳು ವಿರಾಸತ್‌ ಉದ್ಘಾಟನಾ ಮೆರವಣಿಗೆಯಲ್ಲಿ ಭಾಗವಹಿಸಿದವು.
(5 / 7)

ಕಲಾವಿದರು ಸಾಗಿ ಬಂದ ಒಂದು ನೋಟ. 
(6 / 7)
ಕಲಾವಿದರು ಸಾಗಿ ಬಂದ ಒಂದು ನೋಟ. 
ಆಳ್ವಾಸ್ ವಿರಾಸರ್ 2023 ಕಾರ್ಯಕ್ರಮ ಸ್ಥಳದ ವಿಹಂಗಮ ನೋಟ. ಉದ್ಘಾಟನಾ ಕಾರ್ಯಕ್ರಮದಲ್ಲಿ ಮೂಲ್ಕಿ-ಮೂಡುಬಿದಿರೆಯ ವಿಧಾನಸಭಾ ಕ್ಷೇತ್ರ ಶಾಸಕ ಉಮಾನಾಥ ಎ. ಕೋಟ್ಯಾನ್,  ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಎಂ.ಪಿ, ಮಾಜಿ ಸಚಿವ  ಕೆ. ಅಭಯಚಂದ್ರ ಜೈನ್, ಭಾರತ್ ಸ್ಕೌಟ್ಸ್ ಗೈಡ್ಸ್ ಕರ್ನಾಟಕ  ರಾಜ್ಯ ಆಯುಕ್ತ, ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯ, ಉಡುಪಿಯ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ಜಿ. ಶಂಕರ್,  ಆದಾನಿ ಗ್ರೂಪ್ ಕಾರ್ಯನಿರ್ವಾಹಕ ನಿರ್ದೇಶಕ  ಕಿಶೋರ್ ಆಳ್ವ, ಬರೋಡಾದ ಉದ್ಯಮಿಗಳಾದ ಬರೋಡಾದ ಶಶಿಧರ ಶೆಟ್ಟಿ, ಬೆಂಗಳೂರಿನ  ಪ್ರಸನ್ನ ಶೆಟ್ಟಿ, ಮಂಗಳೂರಿನ ರವೀಂದ್ರನಾಥ ಆಳ್ವ, ಬಂಟ್ವಾಳದ ರವಿಶಂಕರ್ ಶೆಟ್ಟಿ, ಮೂಡುಬಿದಿರೆಯ ಕೆ.ಶ್ರೀಪತಿ ಭಟ್, ಮುಸ್ತಫಾ ಎಸ್.ಎಂ, ಪ್ರವೀಣ್ ಕುಮಾರ್, ಪ್ರಮುಖರಾದ ಮೂಡುಬಿದಿರೆಯ  ಜಯಶ್ರೀ ಅಮರನಾಥ ಶೆಟ್ಟಿ, ಶ್ರದ್ಧಾ ಹೆಗ್ಗಡೆ, ಸುರೇಂದ್ರ ಹೆಗ್ಗಡೆ, ಮೋಹನ್ ದೇವ ಆಳ್ವ, ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಇಸ್ಕಾನ್ ನ ನಾಮ ಭಕ್ತಿದಾಸ್ ಮತ್ತು ಪ್ರೇಮ ಭಕ್ತಿ ದಾಸ್, ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್ ಇದ್ದರು.
(7 / 7)

    ಹಂಚಿಕೊಳ್ಳಲು ಲೇಖನಗಳು