Mangaluru Crime News: ಸತತ ದಾಳಿಯಾಗುತ್ತಿದ್ದರೂ ಡ್ರಗ್ಸ್ ಮಾರುವವರಿಗೆ ಭೀತಿ ಇಲ್ಲ, ಮತ್ತೊಬ್ಬ ಸೆರೆ, 70 ಸಾವಿರ ರೂ ಸೊತ್ತು ವಶಕ್ಕೆ
Nov 11, 2023 10:55 AM IST
Mangaluru Crime News: ಸತತ ದಾಳಿಯಾಗುತ್ತಿದ್ದರೂ ಡ್ರಗ್ಸ್ ಮಾರುವವರಿಗೆ ಭೀತಿ ಇಲ್ಲ, ಮತ್ತೊಬ್ಬ ಸೆರೆ, 70 ಸಾವಿರ ರೂ ಸೊತ್ತು ವಶಕ್ಕೆ
- ಮಂಗಳೂರು ನಗರದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಒಳಪೇಟೆಯ ಭಟ್ರಗುಡ್ಡೆ ಎಂಬಲ್ಲಿ ಓರ್ವ ವ್ಯಕ್ತಿ ಅಕ್ರಮವಾಗಿ MDMA ಎಂಬ ಮಾದಕ ವಸ್ತುವನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾನೆಂದು ಬಂದ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ.
ಮಂಗಳೂರು: ಕಳೆದ ಕೆಲ ತಿಂಗಳಿಂದ ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಸತತ ದಾಳಿಗಳು ಆಗುತ್ತಿದ್ದರೂ ಡ್ರಗ್ಸ್ ಮಾರಾಟಗಾರರಿಗೆ ಹೆದರಿಕೆ ಹುಟ್ಟಿಲ್ಲ. ಇದೀಗ ಮಂಗಳೂರು ಸಿಸಿಬಿ ಪೊಲೀಸರು ಎಂ.ಡಿ.ಎಂ.ಎ. ಮಾರುತ್ತಿದ್ದ ಆರೋಪಿಯೊಬ್ಬನನ್ನು ಸೆರೆಹಿಡಿದಿದ್ದು, ಆತನಿಂದ 70 ಸಾವಿರ ರೂ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ತೊಕ್ಕೊಟ್ಟು ಪೆರ್ಮನ್ನೂರು ನಿವಾಸಿ 28 ವರ್ಷದ ಮೊಹಮ್ಮದ್ ಇರ್ಷಾದ್ ನನ್ನು ಬಂಧಿಸಲಾಗಿದೆ.
ಮಂಗಳೂರು ನಗರದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಒಳಪೇಟೆಯ ಭಟ್ರಗುಡ್ಡೆ ಎಂಬಲ್ಲಿ ಓರ್ವ ವ್ಯಕ್ತಿ ಅಕ್ರಮವಾಗಿ MDMA ಎಂಬ ಮಾದಕ ವಸ್ತುವನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾನೆಂದು ಬಂದ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಆರೋಪಿಯನ್ನು ದಸ್ತಗಿರಿ ಮಾಡಿದ್ದು, ಆರೋಪಿತನಿಂದ 70 ಸಾವಿರ ರೂ ಮೌಲ್ಯದ 12 ಗ್ರಾಂ ನಿಷೇಧಿತ MDMA ಮಾದಕ ವಸ್ತು, ಡಿಜಿಟಲ್ ತೂಕ ಮಾಪನ, ಹಾಗೂ ಮೊಬೈಲ್ ಫೋನ್ ನ್ನು ವಶಪಡಿಸಿಕೊಂಡಿರುತ್ತಾರೆ.
ಆರೋಪಿಯಿಂದ ಸ್ವಾಧೀನಪಡಿಸಿಕೊಳ್ಳಲಾದ ಸೊತ್ತುಗಳು ಇವು. 12 ಗ್ರಾಂ MDMA ಮಾದಕ ವಸ್ತು-(70,000/-), VIVO ಕಂಪನಿಯ ಮೊಬೈಲ್ ಪೋನ್1-(10,000/-), ಡಿಜಿಟಲ್ ತೂಕ ಮಾಪನ -1 ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ- 70,000/- ರೂ ಆಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ತೆ ಕಾರ್ಯವನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ಮಾರ್ಗದರ್ಶನದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಸಿದ್ದಾರ್ಥ ಗೋಯಲ್ ಮತ್ತು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ನಿರ್ದೇಶನದಂತೆ ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿ.ಎ.ಹೆಗಡೆ ನೇತೃತ್ವದಲ್ಲಿ ಈ ಆರೋಪಿಗಳ ಮತ್ತು ಸೊತ್ತು ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಅಧಿಕಾರಿ ಸಿಬ್ಬಂದಿಯವರು ಪಾಲ್ಗೊಂಡಿದ್ದರು.
ಕಾರಿನಲ್ಲಿ ಕರೆದೊಯ್ದು ಹಲ್ಲೆ ನಡೆಸಿ ಜೀವಬೆದರಿಕೆ
ತನ್ನ ಮೇಲೆ ಹಲ್ಲೆ ನಡೆಸಿ, ಜೀವಬೆದರಿಕೆ ಹಾಕಿರುವ ಕುರಿತು ಬಂಟ್ವಾಳ ಕಸ್ಬಾ ನಿವಾಸಿ ನೌಷಾದ್ (35) ಎಂಬವರು ಬಂಟ್ವಾಳ ನಗರ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ನವೆಂಬರ್ 6ರಂದು ಘಟನೆ ನಡೆದಿದ್ದು, ಬಂಟ್ವಾಳದ ತುಂಬ್ಯ ಜಂಕ್ಷನನಲ್ಲಿ ತೆರಳುತ್ತಿದ್ದಾಗ, ತನ್ನ ಹಿಂದಿನಿಂದ ಬಂದ ಕಾರನ್ನು ಅದರ ಚಾಲಕ ಸ್ಕೂಟರ್ ಗೆ ಅಡ್ಡ ನಿಲ್ಲಿಸಿ, ಅದರೊಳಗಿನಿಂದ ಜುನೈದ್ ಹಾಗೂ ಇತರರು ಬಂದು ನಿನ್ನ ಹೆಂಡತಿಯ ವಿಷಯದಲ್ಲಿ ಮಾತನಾಡಲು ಇದೆ ಕಲಾಯಿ ಮನೆಗೆ ಬರುವಂತೆ ತಿಳಿಸಿದ್ದಾರೆ. ಬಳಿಕ ಒತ್ತಾಯದಿಂದ ಕಾರಿನಲ್ಲಿ ಕುಳ್ಳಿರಿಸಿ, ಹೆಂಡತಿಯ ಅಣ್ಣ ಇದ್ದಿಮೋನು ಅವರ ಮನೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಕಲಂದರ ಹಾಗೂ ತಮೀಮ್ ತನಗೆ ಕೈಯಿಂದ ಹಲ್ಲೆ ನಡೆಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ಕಾರಿನಲ್ಲಿ ಬಲವಂತವಾಗಿ ಕೂರಿಸಿ ಅಲ್ಲಿಂದ ಅಡ್ಡೂರಿನಲ್ಲಿರುವ ಹೆಂಡತಿಯ ಅಣ್ಣ ಯಾಕೂಬ ಮನೆಗೆ ಕರೆದುಕೊಂಡು ಹೋಗಿ ಅಲ್ಲಿ ಅವರ ಮಕ್ಕಳಾದ ಜುನೈದ್, ಮನ್ಸೂರು, ಇಮ್ಮೀಯಾಜ್ ಹಾಗೂ ಸ್ನೇಹಿತರು ಮರದ ದೊಣ್ಣೆಯಿಂದ ಹಲ್ಲೆ ಮಾಡಿದ್ದಾಗಿ ಆಪಾದಿಸಲಾಗಿದೆ. ಜುನೈದ್ ಎಂಬಾತನು ತನಗೆ ಅವ್ಯಾಚವಾಗಿ ಬೈದು, ಜೀವಬೆದರಿಕೆ ಹಾಕಿ ರೂಮಿನಲ್ಲಿ ಕೂಡಿ ಹಾಕಿದ್ದು, ಬಳಿಕ ತಾನು ತಪ್ಪಿಸಿಕೊಂಡು ಬಂದಿದ್ದೇನೆ ಎಂದು ದೂರಿನಲ್ಲಿ ತಿಳಿಸಿದ್ದು, ಅದರಂತೆ ಪ್ರಕರಣ ದಾಖಲಾಗಿದೆ.
ಸ್ನೇಹಿತೆಯಿಂದಲೇ ವಂಚನೆ: ಬಂಟ್ವಾಳದ ಮಹಿಳೆ ದೂರು
ತನ್ನ ಸ್ನೇಹಿತೆಯೇ ಚಿನ್ನಾಭರಣವನ್ನು ಪಡೆದುಕೊಂಡು ಮರಳಿ ನೀಡದೆ ವಂಚಿಸಿದ್ದಾಗಿ ಬಂಟ್ವಾಳದ ಬಿ.ಮೂಡ ಗ್ರಾಮ ನಿವಾಸಿ ಸಂಧ್ಯಾ ಎಂಬವರು ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಪ್ರಕರಣ ದಾಖಲಾಗಿದೆ.
ಕಳೆದ ಏಪ್ರಿಲ್ ತಿಂಗಳಲ್ಲಿ ತಾನು ವಿದೇಶಕ್ಕೆ ತೆರಳಲು ಮಂಗಳೂರು ಏರ್ ಪೋರ್ಟ್ ನಲ್ಲಿದ್ದಾಗ ತನ್ನ ಸ್ನೇಹಿತೆ ಅಶ್ವಿನಿ ಎಂಬಾಕೆ ತನ್ನ ಮದುವೆಯಾಗುವ ಹುಡುಗ ಎಂದು ಶ್ರೀಕಾಂತ್ ಎಂಬಾನನನ್ನು ಪರಿಚಿಸಿದಿದ್ದಾಳೆ. ಬಳಿಕ ತನ್ನ ನಿಶ್ಚಿತಾರ್ಥಕ್ಕೆಂದು ಚಿನ್ನಾಭರಣ ನೀಡುವಂತೆ ವಿನಂತಿಸಿದ್ದಾಳೆ. ಈ ಸಂದರ್ಭ ತನ್ನ ತಾಯಿ ಚಿನ್ನಾಭರಣಗಳನ್ನು ಕೊಡುವಂತೆ ತಿಳಿಸಿ ವಿದೇಶಕ್ಕೆ ತಾನು ತೆರಳಿದ್ದೇನೆ. ಅದರಂತೆ ತನ್ನ ತಾಯಿ ಆರೋಪಿ ಅಶ್ಚಿನಿಗೆ ಸುಮಾರು 32.70 ಗ್ರಾಂ ತೂಕದ ಚಿನ್ನದ ನಕ್ಲೇಸ್, ಸುಮಾರು 15.100 ಗ್ರಾಂ ತೂಕದ ಚಿನ್ನದ ಕೈ ಬಳೆ, ಸುಮಾರು 2.200 ಗ್ರಾಂ ತೂಕದ ವಜ್ರದ ಕಿವಿಯೊಲೆ ಜೊತೆ ಸುಮಾರು 17.200 ಗ್ರಾಂ ತೂಕದ ಚಿನ್ನದ ಕೈ ಬಳೆ , ಸುಮಾರು 8 ಗ್ರಾಂ ತೂಕದ ಚಿನ್ನದ ಬಳೆ, ಸುಮಾರು 8 ಗ್ರಾಂ ತೂಕದ ಚಿನ್ನದ ಪೆಂಡೆಂಟ್, ಸುಮಾರು 8 ಗ್ರಾಂ ತೂಕದ ಚಿನ್ನದ ರಿಂಗ್, 19 ಗ್ರಾಂ ತೂಕದ ಚಿನ್ನದ ಸರವನ್ನು ನೀಡಿದ್ದಾರೆ. ಕೆಲ ಸಮಯದ ಬಳಿಕ, ಚಿನ್ನಾಭರಣಗಳನ್ನು ಹಿಂತಿರುಗಿಸುವಂತೆ, ಆರೋಪಿಗಳಾದ ಅಶ್ಚಿನಿ ಹಾಗೂ ಶ್ರೀಕಾಂತ್ ಎಂಬವರನ್ನು ಕೇಳಿಕೊಂಡಾಗಲೂ ಹಿಂತಿರುಗಿಸದಿದ್ದು, ಸತತ ಒತ್ತಡದ ಬಳಿಕ ಕೆಲವನ್ನು ಹಿಂದಿರುಗಿಸಿದ್ದಾರೆ. ಉಳಿದ ಚಿನ್ನಾಭರಣಗಳನ್ನು ಈವರೆಗೆ ಹಿಂತಿರುಗಿಸದೇ ವಂಚಿಸಿದ್ದಾಗಿ ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.