logo
ಕನ್ನಡ ಸುದ್ದಿ  /  ಕರ್ನಾಟಕ  /  P Jayarama Bhat: ಕರ್ಣಾಟಕ ಬ್ಯಾಂಕ್ ನಿವೃತ್ತ ಚೇರ್ಮನ್ ಪಿ.ಜಯರಾಮ ಭಟ್ ನಿಧನ

P Jayarama Bhat: ಕರ್ಣಾಟಕ ಬ್ಯಾಂಕ್ ನಿವೃತ್ತ ಚೇರ್ಮನ್ ಪಿ.ಜಯರಾಮ ಭಟ್ ನಿಧನ

HT Kannada Desk HT Kannada

Aug 09, 2023 07:27 PM IST

google News

ಪೊಳಲಿ ಜಯರಾಮ ಭಟ್‌ (ಜನನ - 14.11.1951 ನಿಧನ - 09.08.2023)

  • P Jayarama Bhat: ಕರ್ಣಾಟಕ ಬ್ಯಾಂಕ್‌ನ ನಿವೃತ್ತ ಸಿಇಒ ಮತ್ತು ಎಂಡಿ ಪಿ.ಜಯರಾಮ ಭಟ್‌ ಇಂದು ಸಂಜೆ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು. ಅವರ ಕಿರು ಪರಿಚಯ ಹೀಗಿದೆ.

ಪೊಳಲಿ ಜಯರಾಮ ಭಟ್‌ (ಜನನ - 14.11.1951  ನಿಧನ - 09.08.2023)
ಪೊಳಲಿ ಜಯರಾಮ ಭಟ್‌ (ಜನನ - 14.11.1951 ನಿಧನ - 09.08.2023)

ಮಂಗಳೂರು: ಕರ್ಣಾಟಕ ಬ್ಯಾಂಕ್ (Karnataka Bank) ನಿವೃತ್ತ ಚೇರ್ಮನ್ ಪಿ.ಜಯರಾಮ ಭಟ್ (72) (P Jayarama Bhat) ಬುಧವಾರ ಸಂಜೆ ನಿಧನ ಹೊಂದಿದರು. ಪತ್ನಿ ಓರ್ವ ಪುತ್ರ ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಾಂದವರನ್ನು ಅಗಲಿದ್ದಾರೆ.

ಜಯರಾಮ ಭಟ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪೊಳಲಿಯಲ್ಲಿ 1951ರಂದು ಜನಿಸಿ, ಮೈಸೂರು ವಿವಿಯಲ್ಲಿ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರಥಮ ರಾಂಕ್ ನೊಂದಿಗೆ ಪಡೆದವರು. ಸಿಎಐಐಬಿ ಮಾಡಿದ ಬಳಿಕ ನಾಲ್ಕೂವರೆ ದಶಕಗಳಿಗೂ ಮಿಕ್ಕಿ ಕರ್ಣಾಟಕ ಬ್ಯಾಂಕಿನ ಅಧಿಕಾರಿಯಾಗಿ ವೃತ್ತಿ ಆರಂಭಿಸಿ ಜುಲೈ 2009ರಿಂದ ಏಪ್ರಿಲ್ 2017ರವರೆಗೆ ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಬಳಿಕ ಚೇರ್ಮನ್ ಆಗಿ ಕರ್ತವ್ಯ ಸಲ್ಲಿಸಿದ್ದಾರೆ.

ಅವರ ಅವಧಿಯಲ್ಲಿ ಇ-ಲಾಬಿ, ಮೊಬೈಲ್ ಬ್ಯಾಂಕಿಂಗ್, ಪಿಒಎಸ್, ಆನ್‌ಲೈನ್ ಟ್ರೇಡಿಂಗ್ ಅಕೌಂಟ್, ಟ್ರಾವೆಲ್ ಕಾರ್ಡ್, ಗಿಫ್ಟ್ ಕಾರ್ಡ್ ಮುಂತಾದ ಯಶಸ್ವಿ ಯೋಜನೆಗಳನ್ನು ಪರಿಚಯಿಸಿ ಗ್ರಾಹಕರಿಂದ ಭಾರೀ ಮೆಚ್ಚುಗೆ ಗಳಿಸಿದ್ದು ಮಾತ್ರವಲ್ಲದೇ ಅವರ ಆಡಳಿತ ಅವಧಿಯಲ್ಲಿ ಕರ್ಣಾಟಕ ಬ್ಯಾಂಕ್ ಸರ್ವಾಂಗೀಣ ಪ್ರಗತಿ ಕಂಡಿತ್ತು. ಜಯರಾಮ್ ಭಟ್ ಅವರಿಗೆ ಅತ್ಯುತ್ತಮ ಮ್ಯಾನೇಜರ್ ಅವಾರ್ಡ್, ಅತ್ಯುತ್ತಮ ಸಾಧಾನಾ ಪ್ರಶಸ್ತಿ, ಮಣಿಪಾಲ ವಿವಿಯಿಂದ 2015ರ ಹೊಸ ವರ್ಷದ ಪ್ರಶಸ್ತಿ ಪಡೆದುಕೊಂಡಿದ್ದರು.

ಪೊಳಲಿ ಜಯರಾಮ ಭಟ್‌ ಯಾರು

ಮೂಲತಃ ಪೊಳಲಿಯವರಾದ ಭಟ್ ಅವರು 1972 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂಎಸ್ಸಿಯನ್ನು ಪ್ರಥಮ ರ‍್ಯಾಂಕ್‌ನೊಂದಿಗೆ ಪೂರ್ಣಗೊಳಿಸಿದರು. 1986 ರಲ್ಲಿ CAIIB ಪರೀಕ್ಷೆಯಲ್ಲಿ ಯಶಸ್ವಿಯಾದ ನಂತರ, ಅವರು 1972 ರಲ್ಲಿ ಮೂರು ತಿಂಗಳ ಕಾಲ ಮುಲ್ಕಿಯ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ಬಳಿಕ 1973 ರಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಕರ್ಣಾಟಕ ಬ್ಯಾಂಕ್ ಲಿಮಿಟೆಡ್‌ಗೆ ಸೇರಿ ಬ್ಯಾಂಕಿಂಗ್‌ ಕ್ಶೇತ್ರದಲ್ಲಿ ಅವರ ವೃತ್ತಿಜೀವನ ಪ್ರಾರಂಭಿಸಿದರು

1976 ರಲ್ಲಿ ಅವರು ಶಾಖೆಯ ವ್ಯವಸ್ಥಾಪಕರಾಗಿ ಭಡ್ತಿ ಪಡೆದು ಇದಾದ ಬಳಿಕ 14 ವರ್ಷಗಳ ಕಾಲ ವಿವಿಧ ಶಾಖೆಗಳಲ್ಲಿ ಸೇವೆ ಸಲ್ಲಿಸಿದರು. ಅವರು 1993 ರಲ್ಲಿ ಬ್ಯಾಂಕಿನ ಮುಖ್ಯ ಕಛೇರಿಯಲ್ಲಿ ಮುಖ್ಯ ಅಕೌಂಟೆಂಟ್ ಆಗಿ ಬಡ್ತಿ ಪಡೆದರು. ನಂತರ ಸಹಾಯಕ ಜನರಲ್ ಮ್ಯಾನೇಜರ್ ಮತ್ತು ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿ ನೇಮಕಗೊಂಡರು ಮತ್ತು 2005 ರಲ್ಲಿ ಮುಖ್ಯ ಜನರಲ್ ಮ್ಯಾನೇಜರ್ ಹುದ್ದೆಗೆ ಏರಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ