logo
ಕನ್ನಡ ಸುದ್ದಿ  /  ಕರ್ನಾಟಕ  /  Mysore Crime: ತವರು ಮನೆಯಿಂದ ಬಾರದ ಪತ್ನಿಯನ್ನೇ ಕೊಂದ ಪತಿ ಅರೆಸ್ಟ್‌

Mysore Crime: ತವರು ಮನೆಯಿಂದ ಬಾರದ ಪತ್ನಿಯನ್ನೇ ಕೊಂದ ಪತಿ ಅರೆಸ್ಟ್‌

HT Kannada Desk HT Kannada

Sep 22, 2023 10:05 AM IST

google News

ಮೈಸೂರು ಜಿಲ್ಲೆಯಲ್ಲಿ ಪತಿ ಪುರುಷೋತ್ತಮನಿಂದ ಕೊಲೆಯಾದ ರೂಪಾ.

    • Mysore Crime News ಪತಿಯೇ ತನ್ನ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆನಂಜನಗೂಡು ತಾಲ್ಲೂಕಿನ ದೊಡ್ಡಹೊಮ್ಮದಲ್ಲಿ ನಡೆದಿದ್ದು. ಆರೋಪಿಯನ್ನು ಮೈಸೂರು ಜಿಲ್ಲಾ ಪೊಲೀಸರು( Mysore District Police) ಬಂಧಿಸಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ಪತಿ ಪುರುಷೋತ್ತಮನಿಂದ ಕೊಲೆಯಾದ ರೂಪಾ.
ಮೈಸೂರು ಜಿಲ್ಲೆಯಲ್ಲಿ ಪತಿ ಪುರುಷೋತ್ತಮನಿಂದ ಕೊಲೆಯಾದ ರೂಪಾ.

ಮೈಸೂರು: ತವರು ಮನೆಯಲ್ಲಿಯೇ ಇದ್ದ ಪತ್ನಿಯನ್ನು ಪತಿಯೇ ಕತ್ತು ಹಿಸುಕಿ ಕೊಲೆ ಮಾಡಿ ಪೊಲೀಸರ ಅತಿಥಿಯಾದ ಪ್ರಕರಣವಿದು.

ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ ಗಂಡ ಪೊಲೀಸರ ಅತಿಥಿಯಾದ ಘಟನೆ ನಂಜನಗೂಡು ತಾಲೂಕಿನ ದೊಡ್ಡಹೊಮ್ಮ ಗ್ರಾಮದಲ್ಲಿ ನಡೆದಿದೆ. ರೂಪ(35) ಮೃತ ದುರ್ದೈವಿ.ಪತಿ ಪುರುಷೋತ್ತಮ್(40) ಪೊಲೀಸರ ಅತಿಥಿಯಾಗಿದ್ದಾನೆ.

ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದ ಪುರುಷೋತ್ತಮ್ ಎಂಬಾತನಿಗೆ ಕಳೆದ ಎಂಟು ವರ್ಷಗಳ ಹಿಂದೆ ದೊಡ್ಡಹೊಮ್ಮ ಗ್ರಾಮದ ರೂಪ ಜೊತೆ ವಿವಾಹ ಮಾಡಿಕೊಡಲಾಗಿತ್ತು.

ಆರು ವರ್ಷದ ಮಗುವಿದ್ದು, ಗಂಡ ಹೆಂಡತಿ ನಡುವೆ, ಕ್ಷುಲ್ಲಕ ವಿಚಾರಕ್ಕೆ ಆಗಾಗ ಗಲಾಟೆ ನಡೆಯುತ್ತಿತ್ತು. ಇದರಿಂದ ಬೇಸರಗೊಂಡ ರೂಪಾ ತವರುಮನೆಗೆ ಬಂದಿದ್ದಳು. ಊರಿಗೆ ಬರುವಂತೆ ಪತಿ ತಿಳಿಸಿದರೂ ಆಕೆ ಒಪ್ಪಿರಲಿಲ್ಲ.ಮನೆಯವರು ಕೂಡ ಅನುಮತಿ ಕೊಟ್ಟಿರಲಿಲ್ಲ. ಗುರುವಾರವೂ ಇದೇ ವಿಚಾರವಾಗಿ ಪತಿ ಹಾಗೂ ಪತ್ನಿ ನಡುವೆ ಜಗಳವಾಗಿ ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ.

ರೂಪಾ ಕೊಲೆಯಾಗಿದ್ದರಿಂದ ಆರು ವರ್ಷದ ಮಗು ಸೇರಿ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು.

ನನ್ನ ಮಗಳಿಗೆ ಅವಳ ಗಂಡ ಕಿರುಕುಳ ನೀಡುತ್ತಿದ್ದ. ಪದೇ ಪದೇ ಬಂದು ಜಗಳ ಆಡುತ್ತಿದ್ದ ಆತನ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ತಂದೆ ರಾಮಯ್ಯ ಕವಲಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿ ಪುರುಷೋತ್ತಮ್ ನ ಬಂಧಿಸಿದ್ದಾರೆ.

ಪತಿಯೇ ಪತ್ನಿಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಬಂದ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಬೇರೆ ಯಾರಾದರೂ ಇದ್ದಾರೆಯೇ ಎನ್ನುವ ಕುರಿತು ವಿಚಾರಣೆ ನಡೆಸಲಾಗುತ್ತದೆ ಎಂದು ದೂರು ದಾಖಲಿಸಿಕೊಂಡಿರುವ ಕವಲಂದೆ ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಮೈಸೂರು ಜಿಲ್ಲೆಯ ಅಪರ ಪೊಲೀಸ್‌ ವರಿಷ್ಟಾಧಿಕಾರಿ ಡಾ.ನಂದಿನಿ, ಡಿವೈಎಸ್ಪಿ ಗೋವಿಂದರಾಜು, ಸರ್ಕಲ್ ಇನ್ಸ್ಪೆಕ್ಟರ್ ಚಂದ್ರಶೇಖರ್, ಪಿಎಸ್ಐ ಕೃಷ್ಣಕಾಂತಕೋಳಿ, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೈತನ ಮೇಲೆ ಹುಲಿದಾಳಿ

ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಹುಲಿ ದಾಳಿ ನಡೆಸಿದ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಪಂಚವಳ್ಳಿ ಸಮೀಪದ ಮುದ್ದೇನಹಳ್ಳಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಚನ್ನೇಗೌಡರ ಮಗ ರಮೇಶ್ ಎಂಬುವರ ಮೇಲೆ ಹುಲಿ ದಾಳಿ ಮಾಡಿದೆ.

ರಮೇಶ್ ಅವರ ಕೂಗಾಟ ಚೀರಾಟ ಕೇಳಿ ಅಕ್ಕ ಪಕ್ಕದ ಹೊಲದಲ್ಲಿದ್ದ ಜನ‌ ಧಾವಿಸಿದ್ದಾರೆ. ಜನರನ್ನ ಕಂಡ ಹುಲಿ ಪರಾರಿಯಾಗಿದೆ. ರಮೇಶ್ ಅನಾಹುತದಿಂದ ತಪ್ಪಿಸಿಕೊಂಡಿದ್ದಾರೆ.

ಹುಲಿ ದಾಳಿಯಿಂದ ಗಾಯಗೊಂಡಿದ್ದ ರಮೇಶ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯಿಂದ ಗ್ರಾಮಸ್ಥರು ಆತಂಕಗೊಂಡಿದ್ದು ಹುಲಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ನಾಗರಹೊಳೆಗೆ ಹೊಂದಿಕೊಂಡಂತೆ ಇರುವ ಈ ಪ್ರದೇಶದಲ್ಲಿ ಹುಲಿ ಕಾಟ ಮೊದಲಿನಿಂದಲೂ ಇದೆ. ಆಗಾಗ ಹುಲಿ ದಾಳಿ ಮಾಡುತ್ತಲೇ ಇದೆ. ಈ ಹಿಂದೆಯೂ ಒಬ್ಬರ ಮೇಲೆ ದಾಳಿ ಮಾಡಿತ್ತು. ಅರಣ್ಯ ಇಲಾಖೆ ಹುಲಿ ಹಿಡಿಯಲು ಬೋನು ಇರಿಸಬೇಕು. ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.

ಹುಲಿ ದಾಳಿ ಮಾಡಿರುವ ಮಾಹಿತಿ ಬಂದಿದೆ. ಈ ಭಾಗ ನಾಗರಹೊಳೆ ಗಡಿಯಂಚಿನಲ್ಲಿದೆ. ಈ ಭಾಗದಲ್ಲಿ ಹುಲಿ ಸಂಚಾರ ಇರುವ ಕುರಿತು ದೂರುಗಳು ಬರುತ್ತವೆ. ಆದರೆ ಹುಲಿ ಕಾಣಿಸಿಕೊಂಡಿದ್ದು ಕಡಿಮೆ. ಹಿಂದೆಯೂ ದಾಳಿಯಾಗಿರುವ ಮಾಹಿತಿಯಿದೆ. ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಹುಲಿ ಸೆರೆ ಕಾರ್ಯಾಚರಣೆ ಕುರಿತು ಕ್ರಮ ವಹಿಸಲಾಗುತ್ತದೆ ಎನ್ನುವುದು ಅರಣ್ಯ ಇಲಾಖೆ ಸ್ಥಳೀಯ ಅಧಿಕಾರಿಗಳ ವಿವರಣೆ

( ವರದಿ: ಧಾತ್ರಿ ಭಾರದ್ವಾಜ್‌, ಮೈಸೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ