logo
ಕನ್ನಡ ಸುದ್ದಿ  /  ಕರ್ನಾಟಕ  /  Mysore Dasara 2024: ಇಂದು ಮೈಸೂರಿನಲ್ಲಿ ಜಂಬೂ ಸವಾರಿ, ಈ ಬಾರಿ ಮೆರವಣಿಗೆಯಲ್ಲಿ ಏನೇನು ಇರಲಿದೆ: 10 ಅಂಶಗಳು

Mysore Dasara 2024: ಇಂದು ಮೈಸೂರಿನಲ್ಲಿ ಜಂಬೂ ಸವಾರಿ, ಈ ಬಾರಿ ಮೆರವಣಿಗೆಯಲ್ಲಿ ಏನೇನು ಇರಲಿದೆ: 10 ಅಂಶಗಳು

Umesha Bhatta P H HT Kannada

Oct 12, 2024 04:45 PM IST

google News

ಮೈಸೂರು ದಸರಾದ ಜಂಬೂ ಸವಾರಿಗೆ ಅಣಿಯಾಗಿರುವ ತಾಯಿ ಚಾಮುಂಡೇಶ್ವರಿ ಹಾಗೂ ಕ್ಯಾಪ್ಟನ್‌ ಅಭಿಮನ್ಯು

    • ಮೈಸೂರು ದಸರಾದ ಕೊನೆಯ ದಿನವಾದ ವಿಜಯದಶಮಿ ಜಂಬೂ ಸವಾರಿ ಹಾಗೂ ಪಂಜಿನ ಕವಾಯಿತಿಗೆ ಅಂತಿಮ ಸಿದ್ದತೆಗಳು ನಡೆದಿದ್ದು, ಸಾಂಸ್ಕೃತಿಕ ನಗರಿ ಮೈಸೂರು ಅಣಿಯಾಗಿದೆ. ಹೇಗಿದೆ ಕಾರ್ಯಕ್ರಮಗಳು. ಇಲ್ಲಿದೆ ವಿವರ.
ಮೈಸೂರು ದಸರಾದ ಜಂಬೂ ಸವಾರಿಗೆ ಅಣಿಯಾಗಿರುವ ತಾಯಿ ಚಾಮುಂಡೇಶ್ವರಿ ಹಾಗೂ ಕ್ಯಾಪ್ಟನ್‌ ಅಭಿಮನ್ಯು
ಮೈಸೂರು ದಸರಾದ ಜಂಬೂ ಸವಾರಿಗೆ ಅಣಿಯಾಗಿರುವ ತಾಯಿ ಚಾಮುಂಡೇಶ್ವರಿ ಹಾಗೂ ಕ್ಯಾಪ್ಟನ್‌ ಅಭಿಮನ್ಯು

ಮೈಸೂರು ದಸರಾ ಎಷ್ಟೊಂದು ಸುಂದರ ಎನ್ನುವ ಹಾಡು ಕಿವಿಗೆ ಬಿದ್ದ ತಕ್ಷಣ ಪುಳಕವಾಗುವುದು ಸಹಜ. ನಾಲ್ಕು ನೂರಕ್ಕೂ ಹೆಚ್ಚು ವರ್ಷಗಳ ಸುದೀರ್ಘ ಇತಿಹಾಸ ಇರುವ ಮೈಸೂರು ದಸರಾದಲ್ಲಿ ಜಂಬೂ ಸವಾರಿ ವಿಶೇಷ ಆಕರ್ಷಣೆ.ತಾಯಿ ಚಾಮುಂಡೇಶ್ವರಿಯನ್ನು ಹೊತ್ತ ಸಾಲಂಕೃತ ಆನೆಗಳು, ಸಂಸ್ಕೃತಿ ಬಿಂಬಿಸುವ ಕಲಾ ತಂಡಗಳು, ಸ್ಥಬ್ದಚಿತ್ರಗಳ ಮೆರವಣಿಗೆ ವಿಶೇಷ. ಸಂಜೆ ಪಂಜಿನ ಕವಾಯಿತು ದಸರಾ ಆಕರ್ಷಣೆ. ಇದಕ್ಕಾಗಿ ಲಕ್ಷಾಂತರ ಮಂದಿ ನಾನಾ ಭಾಗಗಳಿಂದ ದಸರಾ ನೋಡಲು ಆಗಮಿಸುತ್ತಾರೆ. ಧಾರ್ಮಿಕತೆ, ಪರಂಪರೆ, ಪ್ರವಾಸೋದ್ಯಮದ ಸಂಕೇತದಂತಿರುವ ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಏನೇನು ಇರಲಿದೆ ಎನ್ನುವ ಮಾಹಿತಿ ಇಲ್ಲಿದೆ.

  • ಈ ಬಾರಿಯೂ ಅಂಬಾರಿಯನ್ನು ಅಭಿಮನ್ಯುವೇ ಹೊರಲಿದ್ದಾನೆ. ಆತನಿಗೆ ಸಾಥಿಗಳಾಗಿ ಲಕ್ಷ್ಮಿ ಹಾಗೂ ಹಿರಣ್ಯ ಆನೆಗಳು ಇರಲಿವೆ. ಧನಂಜಯ ಜಂಬೂ ಸವಾರಿ ಮೆರವಣಿಗೆ ಮಾರ್ಗ ತೋರಿಸುವ ನಿಶಾನೆ ಆನೆ ಆಗಲಿದ್ದರೆ, ಗೋಪಿಗೆ ನೌಫತ್‌ ಆನೆಯ ಜವಾಬ್ದಾರಿ ನೀಡಲಾಗಿದೆ. ಉಳಿದ ನಾಲ್ಕು ಆನೆಗಳು ತಂಡದಲ್ಲಿರಲಿವೆ.
  • ಒಟ್ಟು 51 ಸ್ತಬ್ಧ ಚಿತ್ರಗಳು ಜಂಬೂ ಸವಾರಿ ಮೆರವಣಿಗೆಯಲ್ಲಿ ಇರಲಿವೆ. 31 ಜಿಲ್ಲೆಗಳ ಸಂಸ್ಕೃತಿ ಬಿಂಬಿಸುವ, ನಿಗಮ ಮಂಡಳಿಗಳು, ಭಾರತೀಯ ರೈಲ್ವೆ ಸೇರಿ ಕೇಂದ್ರ ಸರ್ಕಾರದ ಇಲಾಖೆಗಳ ಸ್ಥಬ್ದಚಿತ್ರಗಳೂ ಆಕರ್ಷಿಸಲಿವೆ.
  • ಈ ಬಾರಿಯ ದಸರಾ ಮೆರವಣಿಗೆಯಲ್ಲಿ ನೂರಕ್ಕೂ ಅಧಿಕ ಕಲಾ ತಂಡಗಳು ಭಾಗಿಯಾಗಲಿವೆ.ಅದರಲ್ಲೂ ಕರ್ನಾಟಕದ ನಾನಾ ಭಾಗದ ಸಂಸ್ಕೃತಿಯನ್ನು ಬಿಂಬಿಸುವ ಕಲಾ ತಂಡಗಳು ಹೆಜ್ಜೆ ಹಾಕಿ ಜಂಬೂ ಸವಾರಿ ಮೆರವಣಿಗೆಗೆ ಮೆರಗು ತರಲಿವೆ.
  • ಮೈಸೂರು ಅರಮನೆ ಆವರಣದಲ್ಲಿ ರಾಜವಂಶಸ್ಥ ಯದುವೀರ್‌ ಒಡೆಯರ್‌ ಅವರು ವಿಜಯದಶಮಿ ಪೂಜೆ ಸಲ್ಲಿಸುವರು. ಇದಕ್ಕೂ ಮುನ್ನ ಜಟ್ಟಿ ಕಾಳಗ ಸಹಿತ ನಾನಾ ಪರಂಪರಾಗತ ಚಟುವಟಿಕೆಗಳು ಆಕರ್ಷಣೆಯಾಗಲಿವೆ.
  • ದಸರಾದಲ್ಲಿ ಮುಖ್ಯವಾಗಿ ನಂದಿ ಧ್ವಜ ಪೂಜೆಯೊಂದಿಗೆ ಮೆರವಣಿಗೆಗೆ ಚಾಲನೆ ಸಿಗಲಿದೆ. ಕೋಟೆ ಆಂಜನೇಯ ದೇಗುಲ ಎದುರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಸಂಪುಟದ ಸದಸ್ಯರು ನಂದಿ ಧ್ವಜ ಪೂಜೆಯಲ್ಲಿ ಮಧ್ಯಾಹ್ನ1.41ರಿಂದ 2.10ರ ನಡುವೆ ಶುಭ ಮಕರ‌ ಲಗ್ನದಲ್ಲಿ ನಂದಿಧ್ವಜ ಪೂಜೆ ನೆರವೇರಲಿದೆ.
  • ಸಂಜೆ 4ರಿಂದ 4.30ರವರೆಗೆ ಅರಮನೆ ಆವರಣದಲ್ಲಿ ‘ಅಭಿಮನ್ಯು’ ಹೊರಲಿರುವ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಗೊಂಡ ಚಾಮುಂಡೇಶ್ವರಿ ದೇವಿ ಮೂರ್ತಿಗೆ ಪುಷ್ಪಾರ್ಚನೆ ಮಾಡುವುದರೊಂದಿಗೆ ಜಂಬೂ ಸವಾರಿ ಐದು ಕಿ.ಮಿ ಪಯಣ ಮುಂದುವರಿಸಲಿದೆ.
  • ಸಂಜೆ 7ಕ್ಕೆ ಪಂಜಿನ ಕವಾಯತು ನಡೆಯಲಿದ್ದು, ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಗೌರವ ವಂದನೆ ಸ್ವೀಕರಿಸುವರು. ಸಿಎಂ, ಡಿಸಿಎಂ ಸಹಿತ ಪ್ರಮುಖ ಭಾಗಿಯಾಗವರು, ಡ್ರೋನ್‌ ಶೋ ಈ ಬಾರಿಯ ಪಂಜಿನ ಕವಾಯತಿನ ವಿಶೇಷ.
  • ಮಳೆ ಹಿನ್ನೆಲೆಯಲ್ಲಿ ಜಂಬೂ ಸವಾರಿಗೆ ಬರುವ ಪ್ರವಾಸಿಗರಿಗೆ ಅರಮನೆ ಆವರಣ, ಜಂಬೂ ಸವಾರಿ ತೆರಳುವ ಮಾರ್ಗದುದ್ದಕ್ಕೂ ಶಾಮಿಯಾನ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕಿರಿಕಿರಿ ಅನುಭವಿಸದನ್ನು ತಪ್ಪಿಸಲು ಹೆಚ್ಚಿನ ವ್ಯವಸ್ಥೆ ಆಗಿದೆ
  • ಈ ಬಾರಿಯೂ ಭಾರೀ ಭದ್ರತೆಯನ್ನು ದಸರಾಕ್ಕೆ ಒದಗಿಸಲಾಗಿದೆ. ಐದು ಸಾವಿರಕ್ಕೂ ಅಧಿಕ ಪೊಲೀಸರು, ವಿವಿಧ ಭದ್ರತಾ ಪಡೆಗಳು ಅರಮನೆ ಹಾಗೂ ಬನ್ನಿಮಂಟಪದಲ್ಲಿ ಭದ್ರತೆಯನ್ನು ನೀಡಿವೆ.
  • ಈಗಾಗಲೇ ಸಿಎಂ, ಡಿಸಿಎಂ ಸಹಿತ ಪ್ರಮುಖ ಗಣ್ಯರು ಮೈಸೂರಿಗೆ ಆಗಮಿಸಿ ಬೀಡು ಬಿಟ್ಟಿದ್ದಾರೆ. ರಾಜ್ಯಪಾಲರು ಮಧ್ಯಾಹ್ನ ಆಗಮಿಸಲಿದ್ದಾರೆ.ನ್ಯಾಯಮೂರ್ತಿಗಳ ಸಹಿತ ಪ್ರಮುಖ ಗಣ್ಯರು ಭಾಗಿಯಾಗುವ ನಿರೀಕ್ಷೆ ಇದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ