logo
ಕನ್ನಡ ಸುದ್ದಿ  /  ಕರ್ನಾಟಕ  /  Mysore Dasara 2024: ಮೈಸೂರು ಅರಮನೆಯಲ್ಲಿ ಜಟ್ಟಿ ಕಾಳಗ, ವಿಜಯದಶಮಿ ಶಮೀ ಪೂಜೆ ಮುಗಿಸಿದ ಯದುವೀರ್‌, ಖಾಸಗಿ ದರ್ಬಾರ್‌ ಚಟುವಟಿಕೆಗೆ ತೆರೆ

Mysore Dasara 2024: ಮೈಸೂರು ಅರಮನೆಯಲ್ಲಿ ಜಟ್ಟಿ ಕಾಳಗ, ವಿಜಯದಶಮಿ ಶಮೀ ಪೂಜೆ ಮುಗಿಸಿದ ಯದುವೀರ್‌, ಖಾಸಗಿ ದರ್ಬಾರ್‌ ಚಟುವಟಿಕೆಗೆ ತೆರೆ

Umesha Bhatta P H HT Kannada

Oct 12, 2024 01:17 PM IST

google News

ಮೈಸೂರಿನ ಅರಮನೆ ಆವರಣದಲ್ಲಿ ಯದುವೀರ್‌ ಒಡೆಯರ್‌ ಅವರು ಶಮೀ ಪೂಜೆ ನೆರವೇರಿಸಿದರು.

  •  ಮೈಸೂರು ಅರಮನೆ ಆವರಣದಲ್ಲಿ ವಿಜಯದಶಮಿ ಅಂಗವಾಗಿ ವಿಜಯಯಾತ್ರೆ, ಶಮೀಪೂಜೆ, ಜಟ್ಟಿ ಕಾಳಗ ನಡೆದವು. ಈ ವೇಳೆ ಯದುವೀರ್‌ ಅವರು ಭಾಗಿಯಾಗಿ ವಿಧಿವಿಧಾನ ಪೂರೈಸಿದರು.

ಮೈಸೂರಿನ ಅರಮನೆ ಆವರಣದಲ್ಲಿ ಯದುವೀರ್‌ ಒಡೆಯರ್‌ ಅವರು ಶಮೀ ಪೂಜೆ ನೆರವೇರಿಸಿದರು.
ಮೈಸೂರಿನ ಅರಮನೆ ಆವರಣದಲ್ಲಿ ಯದುವೀರ್‌ ಒಡೆಯರ್‌ ಅವರು ಶಮೀ ಪೂಜೆ ನೆರವೇರಿಸಿದರು. (Shreyas devnoor)

ಮೈಸೂರು: ಮೈಸೂರು ಅರಮನೆ ಆವರಣದಲ್ಲಿ ವಿಜಯದಶಮಿ ಭಾಗವಾದ ನಾನಾ ಧಾರ್ಮಿಕ ಚಟುವಟಿಕೆಗಳು ನಡೆದವು. ಅದರಲ್ಲೂ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಬನ್ನಿಪೂಜೆ ನೆರವೇರಿಸಿದರು. ಬೆಳಿಗ್ಗೆ ಪೂಜೆಗಳನ್ನು ಕೈಗೊಂಡ ಯದುವೀರ್‌ ಅವರು ವಿಜಯಯಾತ್ರೆ ಹೊರಟರು. ಪಟ್ಟದ ಆನೆ, ಪಟ್ಟದ ನಿಶಾನೆ ಆನೆ, ಪಟ್ಟದ ಕುದುರೆ, ಪಟ್ಟದ ಹಸು, ಅರಮನೆಯ ಆನೆಗಳು, ಪೊಲೀಸ್ ವಾದ್ಯವೃಂದ, ನಾದಸ್ವರವಾದನ ವಿಜಯಯಾತ್ರೆಯಲ್ಲಿ ಭಾಗಿಯಾದರು,

ಆನೆ, ಆಶ್ವ, ಪಟ್ಟದ ಹಸುಗಳು, ವಾಲಗ, ಪುರೋಹಿತರೊಂದಿಗೆ ಹೊರಟ ಯದುವೀರ್‌ ಅರಮನೆ ಆವರಣದಲ್ಲಿರುವ ಶಮೀ ಮರಕ್ಕೆ ಪೂಜೆ ಸಲ್ಲಿಸಿ ಬನ್ನಿ ಮುಡಿದರು. ಅರಮನೆಯ ಉತ್ತರದ್ವಾರದಲ್ಲಿರುವ ಗಾಯತ್ರಿ ಅಮ್ಮನವರ ದೇಗುಲದ ಆವರಣದಲ್ಲಿ ಬನ್ನಿಮರಕ್ಕೆ ವಿಶೇಷ ಪೂಜೆ ಸಲ್ಲಿಕೆಗಳು ನಡೆದವು

ಈ ಬಾರಿ ನವರಾತ್ರಿ ದಿನವೇ ಮಗು ಹುಟ್ಟಿರುವುದರಿಂದ ಯದುವೀರ್‌ ಅವರು ಶಮೀಪೂಜೆ ನೆರವೇರಿಸುತ್ತರೋ ಇಲ್ಲ ಎನ್ನುವ ಚರ್ಚೆ ನಡೆದಿತ್ತು. ಆದರೆ ಕಂಕಣಧಾರಣೆ ಮಾಡಿದ್ದ ಯದುವೀರ್‌ ಯಾವುದೇ ಧಾರ್ಮಿಕ ವಿಧಿವಿಧಾನಗಳನ್ನು ನಿಲ್ಲಸದೇ ಎಲ್ಲವನ್ನೂ ಸಾಂಗವಾಗಿ ನೆರವೇರಿಸಿದರು. ಅದರಲ್ಲೂ ಕೊನೆಯ ದಿನದ ಮುಖ್ಯ ಪೂಜೆಯ ವಿಜಯಯಾತ್ರೆ ಮುಗಿಸಿದರು. ಆನಂತರ ಅವರು ಅರಮನೆಗೆ ಮರಳಿದರು.

ವಿಜಯದಶಮಿ ಶಮೀ ಪೂಜೆಯ ಚಟುವಟಿಕೆ ಪೂರ್ಣಗೊಳ್ಳುವ ಮೂಲಕ ಈ ಬಾರಿಯ ಅರಮನೆ ದಸರಾದ ಚಟುವಟಿಕೆಗೆ ತೆರೆ ಬಿದ್ದಿತು. ಖಾಸಗಿ ದರ್ಬಾರ್‌ ನ ಚಟುವಟಿಕೆಗಳಿಗೆ ಯದುವೀರ್‌ ಒಡೆಯರ್‌ ತೆರೆ ಎಳೆದರು.

ಅರಮನೆಗೆ ತೆರಳಿದ ಅವರು ಆನಂತರ ವಿಜಯದಶಮಿಯ ಪುಷ್ಪಾರ್ಚನೆಯ ಚಟುವಟಿಕೆಗಳಲ್ಲಿ ಭಾಗಿಯಾಗಲಿದ್ದಾರೆ. ಕೊನೆಯ ದಿನವೂ ಅರಮನೆ ಆವರಣದಲ್ಲಿ ವೈಭವದ ಚಟುವಟಿಕೆಗಳು, ಧಾರ್ಮಿಕ ವಿಧಿವಿಧಾನಗಳ ವೀಕ್ಷಣೆಗೆ ಕುಟುಂಬದ ಆಪ್ತರು, ರಾಜವಂಶಸ್ಥರು ಹಾಜರಿದ್ದರು.

ಜಟ್ಟಿ ಕಾಳಗ

ಮೈಸೂರು ದಸರಾದ ಪ್ರಮುಖ ಚಟುವಟಿಕೆಗಳಲ್ಲಿ ಒಂದಾದ ಜಟ್ಟಿ ಕಾಳಗವೂ ನೆರವೇರಿತು.ಅರಮನೆಯ ಸವಾರಿ ತೊಟ್ಟಿಯಲ್ಲಿ ಜಟ್ಟಿಗಳ ಕಾಳಗ. ನೆರವೇರಿತು. ಬೆಂಗಳೂರು, ಚಾಮರಾಜನಗರದಿಂದ ಆಗಮಿಸಿದ್ದ ಜಟ್ಟಿಗಳು ಕಾಳಗದಲ್ಲಿ ಭಾಗಿಯಾದರು.

ಈ ವೇಳೆ ಜಟ್ಟಿಗಳ ಕಾಳಗ ವೀಕ್ಷಣೆ ಮಾಡಿದ ಅಜ್ಜಿ ಪ್ರಮೋದಾದೇವಿ ಒಡೆಯರ್‌ ಹಾಗೂ ಮೊಮ್ಮಗ ಆದ್ಯವೀರ್‌ ಒಡೆಯರ್‌.

ಕಲ್ಯಾಣ ಮಂಟಪದಲ್ಲಿ ಆಯುಧಗಳಿಗೆ ಉತ್ತರ ಪೂಜೆ ಸಲ್ಲಿಸಿದರು ಯದುವೀರ್. ಎಲ್ಲಾ ಧಾರ್ಮಿಕ ವಿಧಾನಗಳನ್ನು ಪೂರೈಸಿದರು. ಪೂಜೆಯ ನಂತರ ಜಟ್ಟಿ ಕಾಳಗಕ್ಕೆ ಯದುವೀರ್ ಚಾಲನೆ ನೀಡಿದರು.

ಜಟ್ಟಿ ಕಾಳಗವನ್ನು ಮುಗಿಸಿದ ಬಳಿಕ ಅರಮನೆಯ ಆನೆ ಬಾಗಿಲಿನ ಮೂಲಕ ವಿಜಯಯಾತ್ರೆಗೆ ಯದುವೀರ್. ಹೊರಟರು. ಅಲ್ಲಿಂದ ಶಮೀ ಪೂಜೆ ಮುಗಿದು ವಿಜಯಯಾತ್ರೆಯೂ ಮುಗಿದು ಅರಮನೆಯ ಖಾಸಗಿ ಕಾರ್ಯಕ್ರಮಗಳಿಗೆ ತೆರೆ ಬಿದ್ದಿತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ