logo
ಕನ್ನಡ ಸುದ್ದಿ  /  ಕರ್ನಾಟಕ  /  Mysuru Dasara 2022: ಮೈಸೂರು ಶಾಲೆಗಳಿಗೆ ದಸರಾ ರಜೆ ಘೋಷಣೆ, ಉಳಿದ ಜಿಲ್ಲೆಗಳ ಶಾಲೆಗಳಿಗೆ ಯಾವಾಗ?

Mysuru Dasara 2022: ಮೈಸೂರು ಶಾಲೆಗಳಿಗೆ ದಸರಾ ರಜೆ ಘೋಷಣೆ, ಉಳಿದ ಜಿಲ್ಲೆಗಳ ಶಾಲೆಗಳಿಗೆ ಯಾವಾಗ?

HT Kannada Desk HT Kannada

Sep 20, 2022 08:08 AM IST

ಮೈಸೂರು ದಸರಾ

    • ಸಾರ್ವಜನಿಕ ಶಿಕ್ಷಣ ಇಲಾಖೆಯ 2022-23ನೇ ಶೈಕ್ಷಣಿಕ ಕ್ಯಾಲೆಂಡರ್‌ನಲ್ಲಿ ಅಕ್ಟೋಬರ್ 03, 2022 ರಿಂದ ಅಕ್ಟೋಬರ್‌ 16, 2022 ರವರೆಗೆ, ಒಟ್ಟು 14 ದಿನಗಳ ಕಾಲ ದಸರಾ ರಜೆ ನೀಡಿದೆ. ಮಕ್ಕಳಿಗೆ ಅರ್ಧವಾರ್ಷಿಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಅನುಕೂಲವಾಗಲಿ ಎಂದು ಈ ರಜೆ ನೀಡಲಾಗುತ್ತದೆ.
ಮೈಸೂರು ದಸರಾ
ಮೈಸೂರು ದಸರಾ

ಮೈಸೂರು: ಮಧ್ಯಾವಧಿ ರಜೆ ಹತ್ತಿರದಲ್ಲಿ ವಿದ್ಯಾರ್ಥಿಗಳು ಖುಷಿಯಲ್ಲಿದ್ದಾರೆ. ಈ ಬಾರಿ ದಸರಾ ಅಂಗವಾಗಿ ಮೈಸೂರು ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆಯಾಗಿದೆ. ಶಾಲೆಗಳಿಗೆ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 9 ರವರೆಗೆ ರಜೆ ಘೋಷಿಸಿ ಉಪನಿರ್ದೇಶಕರ ಕಚೇರಿ ಸಾರ್ವಜನಿಕ ಶಿಕ್ಷಣ ಇಲಾಖೆ ಮೈಸೂರು ಸುತ್ತೋಲೆ ಹೊರಡಿಸಿದೆ.

ಟ್ರೆಂಡಿಂಗ್​ ಸುದ್ದಿ

ಲೋಕಸಭಾ ಚುನಾವಣೆ ನಾಳೆ ಮತದಾನ, ಬೆಂಗಳೂರಲ್ಲಿ ಇಂದು ಸಂಚಾರ ದಟ್ಟಣೆ, ಸುಗಮ ಸಂಚಾರಕ್ಕೆ ಪರ್ಯಾಯ ಮಾರ್ಗ ಸಲಹೆ ನೀಡಿದ ಪೊಲೀಸರು

Mangaluru News: ಬಂಟ್ವಾಳ ಸಮೀಪ ನೇತ್ರಾವತಿ ನದಿ ಬದಿ ಆಟವಾಡುತ್ತಿದ್ದ 10 ಮತ್ತು 14 ವರ್ಷದ ಬಾಲಕಿಯರು ನೀರುಪಾಲು

ಬೆಂಗಳೂರು ಪ್ಯಾಲೇಸ್ ಗುಟ್ಟಹಳ್ಳಿಯ ಕಾವೇರಿ ಥಿಯೇಟರ್ ಬಂದ್; ಇತ್ತೀಚೆಗೆ ಸುವರ್ಣ ಸಂಭ್ರಮ ಆಚರಿಸಿದ್ದ ಚಿತ್ರಮಂದಿರ

Hassan Sex Scandal; ಹಾಸನ ಲೈಂಗಿಕ ಹಗರಣ ಕೇಸ್, ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ಬಂಧನದ ಸುತ್ತಮುತ್ತ,10 ಮುಖ್ಯ ಅಂಶಗಳು

ಮೊದಲೆಲ್ಲ ದಸರಾ ರಜೆಯೆಂದರೆ ಸುಮಾರು ಒಂದು ತಿಂಗಳವರೆಗೆ ಇರುತ್ತಿತ್ತು. ಕಾಲಕ್ರಮೇಣ ವಿದ್ಯಾರ್ಥಿಗಳ ಮಧ್ಯಾವಧಿ ರಜೆಯ ಅವಧಿ ಕಡಿತವಾಗುತ್ತ ಬಂದಿದ್ದು, ಈಗ ಕೆಲವು ಕಡೆ ಹತ್ತು ದಿನಗಳಿಗಿಂತಲೂ ಕಡಿಮೆಯಾಗಿದೆ. ಈ ರಜಾ ಅವಧಿಯಲ್ಲಿಯೂ ವಿದ್ಯಾರ್ಥಿಗಳಿಗೆ ಹಲವು ಹೋಮ್‌ವರ್ಕ್‌ಗಳನ್ನು ಕೆಲವು ಶಾಲೆಗಳು ನೀಡುತ್ತಿದ್ದು, ವಿದ್ಯಾರ್ಥಿಗಳಿಗೆ ರಜೆಯ ಮಜಾವೇ ಇಲ್ಲದಂತಾಗಿದೆ ಎಂಬ ಅಭಿಪ್ರಾಯವಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ 2022-23ನೇ ಶೈಕ್ಷಣಿಕ ಕ್ಯಾಲೆಂಡರ್‌ನಲ್ಲಿ ಅಕ್ಟೋಬರ್ 03, 2022 ರಿಂದ ಅಕ್ಟೋಬರ್‌ 16, 2022 ರವರೆಗೆ, ಒಟ್ಟು 14 ದಿನಗಳ ಕಾಲ ದಸರಾ ರಜೆ ನೀಡಿದೆ. ಮಕ್ಕಳಿಗೆ ಅರ್ಧವಾರ್ಷಿಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಅನುಕೂಲವಾಗಲಿ ಎಂದು ಈ ರಜೆ ನೀಡಲಾಗುತ್ತದೆ.

ಆದರೆ, ಮೈಸೂರಿನಲ್ಲಿ ನವರಾತ್ರಿ ಸಂಭ್ರಮ ಇದೇ ಸೆಪ್ಟೆಂಬರ್‌ 26ರಿಂದಲೇ ಆರಂಭವಾಗುತ್ತದೆ. ಮೈಸೂರಿನ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು 26-09-2022 ರಿಂದ 9-10-2022 ರಜೆ ಘೋಷಿಸಲಾಗಿದೆ. ಈ ರಜೆಯ ನಡುವೆ ಅಕ್ಟೋಬರ್‌ 2ರಂದು ಗಾಂಧಿ ಜಯಂತಿ ಮತ್ತು ಅಕ್ಟೋಬರ್‌ 9ರಂದು ವಾಲ್ಮೀಕಿ ಜಯಂತಿಯನ್ನು ಜಿಲ್ಲೆಯ ಶಾಲೆಗಳಲ್ಲಿ ಕಡ್ಡಾಯವಾಗಿ ಆಚರಿಸಬೇಕು ಎಂದು ಷರತ್ತಿನ ಮೇರೆಗೆ ಈ ರಜೆ ಘೋಷಿಸಲಾಗಿದೆ.

ಅಕ್ಟೋಬರ್ 17 ರಿಂದ ನವೆಂಬರ್ 25 ರವರೆಗೆ 4ನೇ ತರಗತಿಯಿಂದ 9ನೇ ತರಗತಿಗಳಿಗೆ ಅರ್ಧವಾರ್ಷಿಕ ಪರೀಕ್ಷೆ ನಡೆಯಲಿದೆ. ಹೀಗಾಗಿ, ವಿದ್ಯಾರ್ಥಿಗಳು ಈ ರಜಾ ಅವಧಿಯಲ್ಲಿ ಓದಲು ಸಮಯ ಮೀಸಲಿಡಬೇಕು. ಇದರೊಂದಿಗೆ ಸಮಯವಕಾಶ ಮತ್ತು ಅನುಕೂಲವಿದ್ದರೆ ತಮ್ಮ ತಮ್ಮ ಅಜ್ಜಿ ಮನೆಗೂ ಹೋಗಿ ಬರಬಹುದಾಗಿದೆ.

ಈ ಶೈಕ್ಷಣಿಕ ವರ್ಷದಲ್ಲಿ ಒಟ್ಟು 60 ಸರಕಾರಿ ರಜಾ ದಿನಗಳು ಇವೆ. 270 ಶಾಲಾ ದಿನಗಳು ಇವೆ. ಕರ್ನಾಟಕದ ಇತರೆ ಭಾಗಗಳಲ್ಲಿ ಅಕ್ಟೋಬರ್‌ ಒಂದರಿಂದ ದಸರಾ ರಜೆ ಆರಂಭವಾಗುತ್ತವೆ. ಕೆಲವೊಂದು ಶಾಲೆಗಳು ಕೆಲವೇ ದಿನಗಳ ಕಾಲ ರಜೆ ನೀಡಿ ಉಳಿದ ದಿನಗಳನ್ನು ಅಧ್ಯಯನಕ್ಕೆ ಮೀಸಲಿರಿಸಲಿವೆ.

    ಹಂಚಿಕೊಳ್ಳಲು ಲೇಖನಗಳು